ಹಾನರ್ 9 ಲೈಟ್ ಇನ್ನು ಮುಂದೆ ಭಾರತದಲ್ಲಿಯೇ ಉತ್ಪಾದನೆಯಾಗಲಿದೆ..

By GizBot Bureau
|

ಹುವಾಯಿಯ ಸಬ್ ಬ್ರಾಂಡ್ ಆಗಿರುವ ಹಾನರ್ ಹಾನರ್ 9 ಲೈಟ್ ನ್ನು ಇನ್ನು ಮುಂದೆ ಭಾರತದಲ್ಲಿಯೇ ಉತ್ಪಾದನೆ ಮಾಡಲಾಗುವುದು ಎಂದು ಬುಧವಾರ ಪ್ರಕಟಿಸಿದೆ. ಸ್ಮಾರ್ಟ್ ಪೋನ್ ಉತ್ಪಾದಕರು ಹೇಳಿಕ ನೀಡಿರುವಂತೆ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿರುವ ಫ್ಲೆಕ್ಸ್ ಪ್ಲಾಂಟ್ ನಲ್ಲಿ ಇನ್ನು ಮುಂದೆ ಹಾನರ್ ಫೋನ್ ಗಳು ಉತ್ಪಾದನೆಗೊಳ್ಳಲಿವೆ. ಹಾನರ್ ಈ ಕಾರ್ಯಕ್ರಮವನ್ನು ಮಾಡಲು ಪ್ರಮುಖ ಕಾರಣ ನರೇಂದ್ರ ಮೋದಿಯವರೊಂದಿಗೆ ಮೇಕ್ ಇನ್ ಇಂಡಿಯಾ ಯೋಜನೆಯೊಂದಿಗೆ ಕಮಿಟ್ ಆಗಿರುವುದೇ ಆಗಿದೆ,

ಹಾನರ್ 9 ಲೈಟ್ ಇನ್ನು ಮುಂದೆ ಭಾರತದಲ್ಲಿಯೇ ಉತ್ಪಾದನೆಯಾಗಲಿದೆ..

ಹಾನರ್ 9 ಲೈಟ್ ನ ಉತ್ಪಾದನಾ ಕಾರ್ಯಚಟುವಟಿಕೆಯನ್ನು ಎಂದಿನಿಂದ ಇಲ್ಲಿ ಪ್ರಾರಂಭಿಸಲಾಗುತ್ತೆ ಎಂಬ ಬಗ್ಗೆ ಹಾನರ್ ಸಂಸ್ಥೆ ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಹಾನರ್ ಹೊರತು ಪಡಿಸಿ, ಇತರೆ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳಾದ ಶಿಯೋಮಿ, ಆಪಲ್ ಕೂಡ ರೆಡ್ಮಿ 5ಎ ದೇಶ್ ಕಾ ಸ್ಮಾರ್ಟ್ ಫೋನ್ ಮತ್ತು ಐಫೋನ್ ಎಸ್ ಇ ಯನ್ನು ಸ್ಥಳೀಯವಾಗಿ ಉತ್ಪಾದಿಸಲು ಮುಂದಾಗಿವೆ.

Honor 9 Lite with four cameras (KANNADA)

ಹಾನರ್ 9 ಲೈಟ್ ನ್ನು ಸ್ಥಳೀಯವಾಗಿ ಉತ್ಪಾದನೆ ಮಾಡುವ ಕಾರ್ಯಕ್ರಮಕ್ಕೆ ಕಮಿಟ್ ಆಗಿರುವ ನಿರ್ಧಾರದ ಬಗ್ಗೆ ಹುವಾಯಿ ಕನ್ಸ್ಯೂಮರ್ ಗ್ರೂಪ್ ನ ಉಪಾಧ್ಯಕ್ಷರಾಗಿರುವ ಸಂಜೀವ್ ಪಿ ಅವರು ಹೇಳುವಂತೆ,” ನಾವು ಸೆಪ್ಟೆಂಬರ್ 2016 ರಲ್ಲಿ ಹಾನರ್ ಹೋಲಿ 3 ಯನ್ನು ಉತ್ಪಾದಿಸಲು ಪ್ರಾರಂಭಿಸಿದಾಗ , ಅದು ನಮ್ಮ ಮೊದಲ ಹೆಜ್ಜೆಯಾಗಿತ್ತು, ಆ ಮೂಲಕ ಭಾರತೀಯ ಅಭಿಮಾನಿ ಬಳಗಕ್ಕೆ ನಾವು ಹತ್ತಿರವಾದೆವು. ಇಂದು ನಮ್ಮ ಕಂಪೆನಿಯ ಪ್ರಸಿದ್ಧ ಹಾನರ್ ಲೈಟ್ 9 ಸ್ಮಾರ್ಟ್ ಫೋನನ್ನು ಸ್ಥಳೀಯವಾಗಿ ಉತ್ಪಾದಿಸುವ ಕಾರ್ಯಕ್ರಮದ ಮೂಲಕ 16 ವರ್ಷದ ನಮ್ಮ ಭಾರತೀಯ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಗುತ್ತಿದ್ದೇವೆ. ಮೇಕ್ ಇನ್ ಇಂಡಿಯಾದಲ್ಲಿ ನಾವೂ ಒಂದು ಭಾಗವಾಗಿರುವುದು ನಮಗೆ ಸಿಕ್ಕಿರುವ ಒಂದು ಅಧ್ಬುತ ಅವಕಾಶವಾಗಿದ್ದು, ಟೆಕ್ನಾಲಜಿ ಮತ್ತು ಉತ್ಪಾದನಾ ಕ್ಷೇತ್ರದ್ಲಿ ಭಾರತದ ಏಳಿಗೆಗೆ ನಮ್ಮದೂ ಒಂದು ಸಣ್ಣ ಕೊಡುಗೆ “ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಹಾನರ್ ಸಂಸ್ಥೆಯು ಈ ವರ್ಷದ ಆರಂಭದಲ್ಲಿ ಹಾನರ್ 9 ಲೈಟ್ ನ್ನು ಬಿಡುಗಡೆಗೊಳಿಸಿದ್ದು ಅದರ ಬೆಲೆ 10,999 ರುಪಾಯಿಗಳಾಗಿದೆ. ಸ್ಥಳೀಯವಾಗಿ ಹಾನರ್ 9 ಫೋನಿನ ಉತ್ಪಾದನೆ ಭಾರತದಲ್ಲಿ ಆರಂಭವಾದ ನಂತರ ಅದರ ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಭಾರತದಲ್ಲಿ ಹಾನರ್ 9 ಲೈಟ್ ತಮ್ಮ ಕಂಪೆನಿಯ ಹೆಚ್ಚು ಪ್ರಸಿದ್ಧಿ ಪಡೆದ ಸ್ಮಾರ್ಟ್ ಫೋನ್ ಗಳಲ್ಲಿ ಒಂದಾಗಿದ್ದು 1 ಮಿಲಿಯನ್ ನಷ್ಟು ಫೋನ್ ಗಳು ಮಾರಾಟವಾಗಿದೆಯಂತೆ

ಹಾನರ್ 9 ಲೈಟ್ ಎರಡು ವೇರಿಯಂಟ್ ನಲ್ಲಿ ಲಭ್ಯವಿದೆ. ಒಂದು 32ಜಿಬಿಗೆ ರೂಪಾಯಿ 10,999 ಮತ್ತು 64 ಜಿಬಿಯ ಫೋನಿಗೆ 14,999 ರುಪಾಯಿಗಳಾಗಿದೆ. ಎರಡೂ ಸ್ಮಾರ್ಟ್ ಫೋನ್ ಗಳು ಫ್ಲಿಫ್ ಕಾರ್ಟ್ ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಅಷ್ಟೇ ಅಲ್ಲ ಹಾನರ್ ನ ಸ್ವಂತ ಇ-ಸ್ಟೋರ್ HiHonor.com/in ನಲ್ಲೂ ಕೂಡ ಲಭ್ಯವಿದೆ.

ಹಾನರ್ 9 ಲೈಟ್ ನ ವೈಶಿಷ್ಟ್ಯತೆಗಳ ಬಗ್ಗೆ ಮಾತನಾಡುವುದಾದರೆ, ಇದು 5.65-ಇಂಚಿನ ಫುಲ್ ವ್ಯೂ FHD+ ಡಿಸ್ಪ್ಲೇಯನ್ನು 18:9 ಅನುಪಾತದಲ್ಲಿ ಹೊಂದಿದೆ .ಅಕ್ಟಾ –ಕೋರ್- ಕಿರಣ್ - 659 ಚಿಪ್ ಸೆಟ್ಟನ್ನು ಇದು ಹೊಂದಿದೆ. ಸಾಫ್ಟ್ ವೇರ್ ವಿಚಾರಕ್ಕೆ ಬಂದರೆ ಈ ಸ್ಮಾರ್ಟ್ ಫೋನ್ EMUI 8.0 ಬೇಸಿನ ಆಂಡ್ರಾಯ್ಡ್ 8.0 Oreo out-of-the-box ನಿಂದ ರನ್ ಆಗುತ್ತೆ. .ಸದ್ಯಕ್ಕೆ ಆಂಡ್ರಾಯ್ಡ್ ಪಿ ಅಪ್ ಡೇಟನ್ನು ಹಾನರ್ ಮಾಡುತ್ತಾ ಅಥವಾ ಇಲ್ಲವಾ ಎಂಬ ಬಗ್ಗೆ ಮಾಹಿತಿ ಇಲ್ಲ.

ಎರಡು RAM ವೇರಿಯಂಟ್ ನಲ್ಲಿ ಹಾನರ್ ಪಿ ಲಭ್ಯವಿದೆ . 3ಜಿಬಿ ಮತ್ತು4ಜಿಬಿ. ಎರಡು ರೀತಿಯ. ಸ್ಟೋರೇಜ್ ಅವಕಾಶವೂ ಇದೆ. 32ಜಿಬಿ ಮತ್ತು 64ಜಿಬಿ. ಇದನ್ನು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮತ್ತಷ್ಟು ಹಿಗ್ಗಿಸಿಕೊಳ್ಳಬಹುದಾಗಿದೆ. ಆಪ್ಟಿಕ್ಸ್ ವಿಚಾರವನ್ನು ಹೇಳುವುದಾದರೆ ಈ ಸ್ಮಾರ್ಟ್ ಫೋನ್ ಡುಯಲ್ ಕ್ಯಾಮರಾ ಹೊಂದಿದ್ದು ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ ಎರಡೂ ಕಡೆ ಇದೆ.. 3MP + 2MP ಸೆನ್ಸರ್ ಇದ್ದು ಮುಂಭಾಗ ಮತ್ತು ಹಿಂಭಾಗ ಎರಡೂ ಕಡೆ ಹಲವಾರು ಕ್ಯಾಮರಾ ಮೋಡ್ ಗಳು ಲಭ್ಯವಿದೆ ಉದಾಹರಣೆಗೆ ಪನೋರಮಾ, ಬೊಕೆಷ್ ಇತ್ಯಾದಿ. ಈ ಸ್ಮಾರ್ಟ್ ಫೋನ್ 3000mAhಬ್ಯಾಟರಿ ಹೊಂದಿದ್ದು 24 ಗಂಟೆ ಸ್ಟ್ಯಾಂಡ್ ಬೈ ಟೈಮ್ ಮತ್ತು 20 ಗಂಟೆ ಟಾಕ್ ಟೈಮ್ ಸಾಮರ್ಥ್ಯವಿದೆ ಎಂದು ಕಂಪೆನಿ ತಿಳಿಸುತ್ತೆ.

Best Mobiles in India

Read more about:
English summary
Honor 9 Lite is now made in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X