ಹಾನರ್‌ನಿಂದ ಹೊಸ ತಲೆಮಾರಿನ ಲ್ಯಾಪ್‌ಟಾಪ್‌ ಅನಾವರಣ! ಬೆಲೆ ಎಷ್ಟು?

|

ಹಾನರ್‌ ಮ್ಯಾಜಿಕ್‌ ಬುಕ್‌ ಲ್ಯಾಪ್‌ಟಾಪ್‌ಗಳಿಗೆ ಭಾರತದಲ್ಲಿ ದೊಡ್ಡ ಮಾರುಕಟ್ಟೆಯಿದೆ. ತನ್ನ ಆಕರ್ಷಕ ಡಿಸೈನ್‌ ಹಾಗೂ ವಿನ್ಯಾಸದ ಕಾರಣಕ್ಕೆ ಈ ಲ್ಯಾಪ್‌ಟಾಪ್‌ಗಳು ಸಾಕಷ್ಟು ಸದ್ದು ಮಾಡಿವೆ. ಇದೀಗ ಹಾನರ್‌ ಕಂಪೆನಿ ತನ್ನ ಮತ್ತೊಂದು ಹೊಸ ಹಾನರ್‌ ಮ್ಯಾಜಿಕ್‌ಬುಕ್‌ X14 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ 11 ನೇ ತಲೆಮಾರಿನ ಇಂಟೆಲ್‌ ಕೋರ್‌ i5 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 65W ಟೈಪ್-ಸಿ ವೇಗದ ಚಾರ್ಜಿಂಗ್ ಅನ್ನು ಒಳಗೊಂಡಿದೆ.

ಹಾನರ್‌ನಿಂದ ಹೊಸ ತಲೆಮಾರಿನ ಲ್ಯಾಪ್‌ಟಾಪ್‌ ಅನಾವರಣ! ಬೆಲೆ ಎಷ್ಟು?

ಹೌದು, ಹಾನರ್‌ ಕಂಪೆನಿ ಹೊಸ ಹಾನರ್‌ ಮ್ಯಾಜಿಕ್‌ಬುಕ್‌ X14 ಅನ್ನು ಪರಿಚಯಿಸಿದೆ. ಈ ಲ್ಯಾಪ್‌ಟಾಪ್‌ ಸ್ಲಿಮ್ ಅಲ್ಯೂಮಿನಿಯಂ ಬಾಡಿಯನ್ನು ಹೊಂದಿದೆ. ಇದು 2-ಇನ್-1 ಫಿಂಗರ್‌ಪ್ರಿಂಟ್ ಪವರ್ ಬಟನ್ ಅನ್ನು ಒಳಗೊಂಡಿದ್ದು, ಪಾಪ್-ಅಪ್ ವೆಬ್‌ಕ್ಯಾಮ್ ಅನ್ನು ಪಡೆದುಕೊಂಡಿದೆ. ಇದಲ್ಲದೆ TUV ರೈನ್‌ಲ್ಯಾಂಡ್ ಲೋ ಬ್ಲೂ ಲೈಟ್ ಪ್ರಮಾಣೀಕರಣವನ್ನು ಹೊಂದಿದೆ. ಇನ್ನುಳಿದಂತೆ ಈ ಹೊಸ ಲ್ಯಾಪ್‌ಟಾಪ್‌ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಹಾನರ್‌ ಮ್ಯಾಜಿಕ್‌ಬುಕ್‌ X14 ಲ್ಯಾಪ್‌ಟಾಪ್‌ 14 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಮೂರು ಬದಿಗಳಲ್ಲಿ 4.8mm ಅಲ್ಟ್ರಾ-ಸ್ಲಿಮ್ ಬೆಜೆಲ್‌ಗಳನ್ನು ಹೊಂದಿದ್ದು, 84% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ 11 ನೇ ತಲೆಮಾರಿನ ಇಂಟೆಲ್‌ ಕೋರ್‌ i5-1135G7 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಗರಿಷ್ಠ 4.2GHz ಟರ್ಬೊ ಫ್ರಿಕ್ವೆನ್ಸಿಯೊಂದಿಗೆ ಅಪ್ಡೇಟೆಡ್‌ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಹಾನರ್‌ನಿಂದ ಹೊಸ ತಲೆಮಾರಿನ ಲ್ಯಾಪ್‌ಟಾಪ್‌ ಅನಾವರಣ! ಬೆಲೆ ಎಷ್ಟು?

ಇನ್ನು ಈ ಲ್ಯಾಪ್‌ಟಾಪ್‌ 8GB ಡ್ಯುಯಲ್-ಚಾನೆಲ್ RAM ಮತ್ತು PCIe NVMe SSD ಇನ್‌ಬಿಲ್ಟ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದು ಇಂಟೆಲ್‌ ಐರಿಸ್‌ Xe ಗ್ರಾಫಿಕ್ಸ್ ಅನ್ನು ಪಡೆದಿದೆ. ಇದಲ್ಲದೆ ಬಳಕೆದಾರರು ಮಲ್ಟಿಮೀಡಿಯಾ ಫೈಲ್‌ಗಳನ್ನು ಪ್ರಕ್ರಿಯೆಗೊಳಿಸುವಾಗ ಹೆಚ್ಚಿನ ವೇಗವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇದು ಸೂಪರ್‌ಸೈಸ್ಡ್ ಕೂಲಿಂಗ್ ಫ್ಯಾನ್‌ ಹೊಂದಿದ್ದು, ಲ್ಯಾಪ್‌ಟಾಪ್‌ ಬಿಸಿಯಾಗದಂತೆ ತಡೆಯಲಿದೆ.

ಈ ಲ್ಯಾಪ್‌ಟಾಪ್‌ 56Wh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು 65W ಫಾಸ್ಟ್ ಚಾರ್ಜರ್ ಅನ್ನು ಬೆಂಬಲಿಸಲಿದೆ. ಇದರಿಂದ ಈ ಲ್ಯಾಪ್‌ಟಾಪ್‌ ಅನ್ನು ಕೇವಲ 60 ನಿಮಿಷಗಳಲ್ಲಿ 68% ವರೆಗೆ ಚಾರ್ಜ್‌ ಮಾಡಬಹುದು. ಜೊತೆಗೆ, ಈ ಲ್ಯಾಪ್‌ಟಾಪ್ 9.9 ಗಂಟೆಗಳ ಲೋಕಲ್‌ 1080p ವೀಡಿಯೊ ಪ್ಲೇಬ್ಯಾಕ್ ಅನ್ನು ಸಹ ನೀಡಲಿದೆ.

ಹಾನರ್‌ನಿಂದ ಹೊಸ ತಲೆಮಾರಿನ ಲ್ಯಾಪ್‌ಟಾಪ್‌ ಅನಾವರಣ! ಬೆಲೆ ಎಷ್ಟು?

ಸದ್ಯ ಈ ಲ್ಯಾಪ್‌ಟಾಪ್‌ 46,990 ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಲಾಂಚ್‌ ಆಫರ್‌ನಲ್ಲಿ ವಿಶೇಷ ರಿಯಾಯಿತಿ ಕೂಡ ದೊರೆಯಲಿದ್ದು, ಇದು ಅಮೆಜಾನ್‌ನಲ್ಲಿ ಜನವರಿ 20, 2023 ರವರೆಗೆ ಮಾತ್ರ ಸೀಮಿತವಾಗಿರಲಿದೆ.

ಇದಲ್ಲದೆ ಹಾನರ್‌ ಕಂಪೆನಿ ಇತ್ತೀಚಿಗೆ ಹಾನರ್‌ ಪ್ಲೇ 30M ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್ 6.5 ಇಂಚಿನ ಎಲ್‌ಸಿಡಿ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480G ಪ್ಲಸ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಹಾನರ್‌ ಪ್ಲೇ 30M ಸ್ಮಾರ್ಟ್‌ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ ಸೆನ್ಸರ್ ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಹಾಗೆಯೇ ಎಲ್ಇಡಿ ಫ್ಲ್ಯಾಶ್, ಹೆಚ್‌ಡಿಆರ್, ಪನೋರಮಾ ಫೀಚರ್ಸ್‌ ನೀಡಲಾಗಿದೆ. ಜೊತೆಗೆ 10W ವೇಗದ ಚಾರ್ಜಿಂಗ್‌ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ.

Best Mobiles in India

English summary
Honor MagicBook X14 laptop launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X