10.1 ಇಂಚಿನ ಡಿಸ್‌ಪ್ಲೇಯ 'ಹಾನರ್‌ ಪ್ಯಾಡ್‌ X8' ಟ್ಯಾಬ್ಲೆಟ್ ಬಿಡುಗಡೆ: ಫೀಚರ್ಸ್‌ ಏನು?

|

ಹಾನರ್‌ ಕಂಪೆನಿಯು ಭಿನ್ನ ಸ್ಮಾರ್ಟ್‌ಫೋನ್‌ಗಳ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಇದೀಗ ಹಾನರ್‌ ಕಂಪೆನಿ ಹೊಸದಾಗಿ ಹಾನರ್‌ ಪ್ಯಾಡ್‌ X8 ಟ್ಯಾಬ್ಲೆಟ್ ಅನ್ನು ಚೀನಾ ಮಾರುಕಟ್ಟೆಯಲ್ಲಿ ಅನಾವರಣ ಮಾಡಿದೆ. ಈ ಟ್ಯಾಬ್ಲೆಟ್‌ ಮೀಡಿಯಾ ಟೆಕ್‌ ಹಿಲಿಯೋ G80 SoC ಪ್ರೊಸೆಸರ್‌ ಒಳಗೊಂಡಿದ್ದು, 4GB RAM + 128GB ಆಂತರಿಕ ಸ್ಟೋರೇಜ್ ಹಾಗೂ 6GB RAM + 128GB ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ.

ಹಾನರ್‌

ಹಾನರ್‌ ಕಂಪೆನಿಯು ನೂತನವಾಗಿ ಬಿಡುಗಡೆ ಮಾಡಿರುವ ಈ ಟ್ಯಾಬ್ಲೆಟ್‌ 10.1 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು 5,100mAh ಬ್ಯಾಟರಿ ಸಾಮರ್ಥ್ಯ ಪಡೆದಿದ್ದು, ಪೂರ್ಣ ಚಾರ್ಜ್‌ ಮಾಡಲು ಮೂರು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಹಿಂಬದಿಯಲ್ಲಿ 5 ಮೆಗಾಪಿಕ್ಸೆಲ್‌ ಕ್ಯಾಮೆರಾ ಸೆನ್ಸಾರ್‌ ಪಡೆದಿದ್ದು, 2 ಮೆಗಾಪಿಕ್ಸೆಲ್ ಸೆಲ್ಪಿ ಕ್ಯಾಮೆರಾ ಇದೆ.

ಟ್ಯಾಬ್ಲೆಟ್

ಹಾನರ್‌ ಪ್ಯಾಡ್‌ X8 ಟ್ಯಾಬ್ಲೆಟ್ ಡಾನ್‌ ಬ್ಲೂ ಮತ್ತು ಮಿಂಟ್ ಬಣ್ಣದ ಆಯ್ಕೆಗಳಲ್ಲಿ ಕಾಣಿಸಿಕೊಂಡಿದೆ. ಇದು ಹಾನರ್ ಹಿಸ್ಟನ್ ಸೌಂಡ್ ಎಫೆಕ್ಟ್‌ ಸೌಲಭ್ಯವನ್ನು ಪಡೆದುಕೊಂಡಿದೆ. ಇದರ ಡಿಸ್‌ಪ್ಲೇಯು 1,920 x 1,200 ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಹಾಗಾದರೆ ಇದರ ಹೆಚ್ಚಿನ ಫೀಚರ್ಸ್‌ಗಳನ್ನು ಈ ಲೇಖನದಲ್ಲಿ ಗಮನಿಸೋಣ.

ಹಾನರ್‌ ಪ್ಯಾಡ್‌ ಪ್ಯಾಡ್‌ ಡಿಸ್‌ಪ್ಲೇ ರಚನೆ

ಹಾನರ್‌ ಪ್ಯಾಡ್‌ ಪ್ಯಾಡ್‌ ಡಿಸ್‌ಪ್ಲೇ ರಚನೆ

ಹಾನರ್‌ ಪ್ಯಾಡ್‌ X8 10.1 ಇಂಚಿನ ಪೂರ್ಣ ಹೆಚ್‌ಡಿ IPS ಡಿಸ್‌ಪ್ಲೇ ಜೊತೆಗೆ 1,920 x 1,200 ಹಾಗೂ 224PPI ರೆಸಲ್ಯೂಶನ್ ಹೊಂದಿದೆ. ಹಾಗೆಯೇ 16:10 ಆಕಾರ ಅನುಪಾತ, 224PPI ಪಿಕ್ಸೆಲ್ ಸಾಂದ್ರತೆ ಮತ್ತು 80.6% ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಬರುತ್ತದೆ. ಏಕಕಾಲದಲ್ಲಿ 10 ಟಚ್‌ಗಳ ಸಾಮರ್ಥ್ಯ ಹೊದಿರುವ ಇದು 240.2 × 159 × 7.55mm ಇದ್ದು, 460g ತೂಗುತ್ತದೆ.

ಹಾನರ್‌ ಪ್ಯಾಡ್ X8 ಪ್ರೊಸೆಸರ್‌

ಹಾನರ್‌ ಪ್ಯಾಡ್ X8 ಪ್ರೊಸೆಸರ್‌

ಇದು ಆಕ್ಟಾ ಕೋರ್ ಮಿಡಿಯಾಟೆಕ್‌ ಹಿಲಿಯೋ G80 ನಿಂದ ಚಾಲಿತವಾಗಿದೆ. ಹಾಗೆ ಮ್ಯಾಜಿಕ್ UI 4.0 ನೊಂದಿಗೆ ಆಂಡ್ರಾಯ್ಡ್10 ಆಧಾರಿತ ಮ್ಯಾಜಿಕ್ UI 4.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಪ್ಯಾಡ್ 4GB RAM ಮತ್ತು 128GB ಆಂತರಿಕ ಸ್ಟೋರೇಜ್ ಹಾಗೂ 6GB RAM ಮತ್ತು 128GB ಸಾಮರ್ಥ್ಯದ ಎರಡು ವೇರಿಯಂಟ್‌ನಲ್ಲಿ ಲಭ್ಯ ಇದೆ. ಜೊತೆಗೆ ಆಂತರಿಕ ಸಂಗ್ರಹವನ್ನು ಎಸ್‌ಡಿ ಕಾರ್ಡ್‌ ಮೂಲಕ 500+ GB ವರೆಗೂ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.

ಕ್ಯಾಮೆರಾ ವಿಶೇಷತೆ:

ಕ್ಯಾಮೆರಾ ವಿಶೇಷತೆ:

ಪ್ಯಾಡ್ X8 f/2.2 ಇರುವ 5 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ ಸೆಲ್ಫಿಗಳಿಗಾಗಿ f/2.2 ನ 2 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಹೊಂದಿದ್ದು, ಹಾನರ್‌ನ ಈ ಟ್ಯಾಬ್ಲೆಟ್ 5,100mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಬರುತ್ತದೆ ಹಾಗೆ ಈ ಪ್ಯಾಡ್ ಎರಡು ಬಣ್ಣದ ಆಯ್ಕೆಗಳಲ್ಲಿ ಮಾರಾಟಕ್ಕೆ ಲಭ್ಯವಾಗಿದೆ.

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ಹಾನರ್‌ ಪ್ಯಾಡ್ X8 ಒಳ್ಳೆಯ ಬ್ಯಾಟರಿ ಸಾಮರ್ಥ್ಯ ಪಡೆದಿದೆ. 5,100mAh ಬ್ಯಾಟರಿ ಸಾಮರ್ಥ್ಯ ಇದರಲ್ಲಿದ್ದು, ಈ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್‌ ಮಾಡಲು ಬರೋಬ್ಬರಿ ಮೂರು ಗಂಟೆಗಳ ಸಮಯ ಮೀಸಲಿಡಬೇಕಿದೆ. ಈ ಪ್ಯಾಡ್‌ 1620 ಡ್ಯುಯಲ್ ದೊಡ್ಡ ಆಂಪ್ಲಿಟ್ಯೂಡ್ ಸ್ಪೀಕರ್‌ಗಳು, 2.2cc ಸೌಂಡ್ ಕ್ಯಾವಿಟಿ ಮತ್ತು ಹಾನರ್ ಹಿಸ್ಟನ್ ಸೌಂಡ್ ಎಫೆಕ್ಟ್‌ಗಳನ್ನು ಒಳಗೊಂಡಿದೆ. ಟ್ಯಾಬ್ಲೆಟ್‌ನಲ್ಲಿ ಬ್ಲೂಟೂತ್ 5.1, ವೈಫೈ 802.11 a/b/g/n/ac ವೈಶಿಷ್ಟ್ಯ ಇದ್ದು ಇದರಲ್ಲಿ ಹೆಡ್‌ಫೋನ್ ಜ್ಯಾಕ್ ಇಲ್ಲ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಹಾನರ್‌ ಪ್ಯಾಡ್‌ X8 4GB RAM ಹಾಗೂ 128GB ಆಂತರಿಕ ಸ್ಟೋರೇಜ್ ವೇರಿಯಂಟ್‌ಗೆ ಸುಮಾರು CNY 1,199 ( ಭಾರತದಲ್ಲಿ ಅಂದಾಜು 13,700 ರೂ.ಗಳು) ಜೊತೆಗೆ 6GB RAM ಹಾಗೂ 128GB ಆಂತರಿಕ ಸ್ಟೋರೇಜ್ ವೇರಿಯಂಟ್‌ ಬೆಲೆ CNY 1,299 (ಭಾರತದಲ್ಲಿ ಅಂದಾಜು14,300 ರೂ. ಗಳು.) ಈ ಪ್ಯಾಡ್‌ X8 ಖರೀದಿಗೆ ಮುಂಗಡ ಆರ್ಡರ್‌ ಸೌಲಭ್ಯ ನೀಡಲಾಗಿದ್ದು, ಇವು ಚೀನಾದಲ್ಲಿ ಸೆಪ್ಟೆಂಬರ್ 22ರಿಂದ ಮಾರಾಟವಾಗಲಿದೆ. ಭಾರತದಲ್ಲಿ ಇದರ ಲಭ್ಯತೆ ಹಾಗೂ ಮಾರಾಟದ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

Best Mobiles in India

English summary
Honor Pad X8 Tablet has released along with Honor company's smartphones. This pad has 10.1a inch display.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X