Subscribe to Gizbot

ಹಾನರ್ V 10 ಸ್ಮಾರ್ಟ್ ಫೋನ್ ಲಾಂಚ್ ಶೀಘ್ರವೇ ಲಾಂಚ್: ಅಮೆಜಾನ್ ನಲ್ಲಿ ಮಾತ್ರ..!

Written By: Lekhaka

ಹುವಾವೆ ಮಾಲೀಕತ್ವದ ಹಾನರ್ ಈಗಾಗಲೇ ಹಾನರ್ 7X ಮತ್ತು ಹಾನರ್ V 10 ಸ್ಮಾರ್ಟ್ ಫೋನ್ ಗಳನ್ನು ಲಂಡನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ್ದು, ಇದರಲ್ಲಿ ಹಾನರ್ 7X ಸ್ಮಾರ್ಟ್ ಪೋನ್ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿದ್ದು, ರೂ. 12,999ಕ್ಕೆ ಮಾರಾಟವಾಗುತ್ತಿದೆ. ಇದು ಅಮೆಜಾನ್ ನಲ್ಲಿ ಮಾತ್ರವೇ ಸೇಲ್ ಗೆ ಲಭ್ಯವಿದೆ ಎನ್ನಲಾಗಿದೆ.

ಹಾನರ್ V 10 ಸ್ಮಾರ್ಟ್ ಫೋನ್ ಲಾಂಚ್ ಶೀಘ್ರವೇ ಲಾಂಚ್: ಅಮೆಜಾನ್ ನಲ್ಲಿ ಮಾತ್ರ..!

ಇದೇ ಮಾದರಿಯಲ್ಲಿ ಜನವರಿ 8 ರಿಂದ ಭಾರತದಲ್ಲಿ ಹಾನರ್ V 10 ಸ್ಮಾರ್ಟ್ ಫೋನ್ ಲಾಂಚ್ ಆಗಲಿದ್ದು, ಈಗಾಗಲೇ ಅಮೆಜಾನ್ ನಲ್ಲಿ ಹಾನರ್ V 10 ಸ್ಮಾರ್ಟ್ ಫೋನ್ ಗಾಗಿ ರಿಜಿಸ್ಟ್ರೆಷನ್ ಅನ್ನು ಆರಂಭಿಸಿದೆ ಎನ್ನಲಾಗಿದೆ. ಈ ಪೋನ್ ಖರೀದಿಸಲು ಆಸಕ್ತ ಅಭಿಮಾನಿಗಳು ಅಮೆಜಾನ್ ನಲ್ಲಿ ರಿಜಿಸ್ಟರ್ ಆಗಬಹುದಾಗಿದೆ.

ಈ ಸ್ಮಾರ್ಟ್ ಫೋನ್ ಲಾಂಚ್ ಆಗಿದ್ದು, ರೂ. 38,000ಕ್ಕೆ ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಫೋನ್ ಬೆಲೆ ಇನ್ನು ಕಡಿಮೆಯಾಗಲಿದೆ ಎನ್ನಲಾಗಿದೆ. ಭಾರತ ಸೇರಿದಂತೆ ಈ ಸ್ಮಾರ್ಟ್ ಫೋನ್ ರಷ್ಯಾ, ಸ್ಪೇನ್, ಇಟಲಿ, ಯೂಕೆ, ಜರ್ಮನಿ, ಯುಎಸ್, ಫ್ರಾನ್ ನಲ್ಲಿ ದೊರೆಯಲಿದೆ ಎನ್ನಲಾಗಿದೆ.

How to Sharing a Mobile Data Connection with Your PC (KANNADA)
ಈ ಬೆಲೆಯಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಒನ್ ಪ್ಲಸ್ 5ಟಿ, ನೋಕಿಯಾ 8, ಶಿಯೋಮಿ ಮಿ ಮಿಕ್ಸ್ 2, ಸೇರಿದಂತೆ ಹಲವು ಸ್ಮಾರ್ಟ್ ಫೋನ್ ಗಳು ದೊರೆಯಲಿದೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 8.0 ದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದರೊಂದಿಗೆ EMUI 8.0 ವನ್ನು ಕಾಣಬಹುದಾಗಿದೆ.

ಫೇಸ್‌ಬುಕ್ ಖಾತೆಗೆ ಆಧಾರ್ ಲಿಂಕ್!!?..ಇದಕ್ಕೆ ಫೇಸ್‌ಬುಕ್ ಹೇಳಿದ್ದೇನು ಗೊತ್ತಾ?

ಈ ಸ್ಮಾರ್ಟ್ ಫೋನಿನಲ್ಲಿ 5.99 ಇಂಚಿನ FHD ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಇದು 18:9 ಅನುಪಾತದ ಡಿಸ್ ಪ್ಲೇಯಾಗಿದ್ದು, ಈ ಫೋನ್ ಹಿಂಭಾಗದಲ್ಲಿ 16 MP + 20 MP ಡ್ಯುಯಲ್ ಲೈನ್ಸ್ ಕ್ಯಾಮೆರಾ ವನ್ನು ಕಾಣಬಹುದಾಗಿದೆ. ಇದಲ್ಲದೇ ಮುಂಭಾಗದಲ್ಲಿ 16 MP ಸೆಲ್ಪಿ ಕ್ಯಾಮೆರಾ ನೀಡಲಾಗಿದೆ. ಅಲ್ಲದೇ ಇದರಲ್ಲಿ 6GB RAM ಕಾಣಬಹುದಾಗಿದೆ.

128GB ಇಂಟರ್ನಲ್ ಮೆಮೊರಿ ಇದ್ದು, 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಮಾಡಿಕೊಡಲಾಗಿದ್ದು, 3750 mAh ಬ್ಯಾಟರಿಯನ್ನು ಈ ಫೋನಿನಲ್ಲಿ ಕಾಣಬಹುದಾಗಿದೆ. ಇದಲ್ಲದೇ ಈ ಫೋನಿನಲ್ಲಿ ಕೃತಕ ಬುದ್ದಿ ಮತ್ತೆಯನ್ನು ವಿವಿಧ ಕಾರ್ಯಗಳಿಗಾಗಿ ಬಳಕೆ ಮಾಡಿಕೊಳ್ಳಲಾಗಿದೆ.,

English summary
Honor V10 that was launched alongside the Honor 7X at an event in London earlier this month is expected to be launched in India on January 8, 2018. While there is enough time for the launch to happen, the registrations for the same are open on Amazon India for the interested buyers.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot