Subscribe to Gizbot

ವಿಂಡೋಸ್‌ ಮೀಡಿಯಾ ಪ್ಲೇಯರ್‌ನಲ್ಲಿ ಸಬ್‌ಟೈಟಲ್ ಆಡ್‌ ಮಾಡುವುದು ಹೇಗೆ?

Written By:

ಟೈಮ್‌ ಪಾಸ್‌ಗಾಗಿ ಹೆಚ್ಚು ಜನರು ಏನ್‌ ಮಾಡ್ತಾರೇ? ಸಿನಿಮಾ ನೋಡುತ್ತಾರೆ. ಹೌದು, ಬೇಜಾರು ಕಳೆಯಲು, ಟೈಪ್‌ ಪಾಸಿಗಾಗಿ ಜನರು ಮೊದಲ ಆಧ್ಯತೆ ನೀಡುವುದು ಸಿನಿಮಾಗೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕಾಣಬಹುದಾದ ಒಂದು ವಿಶೇಷತೆ ಎಂದರೆ ಇಂಟರ್ನೆಟ್ ಬಳಕೆ ಹೆಚ್ಚಿದಂತೆಲ್ಲಾ ಎಲ್ಲರೂ ಸಹ ಎಲ್ಲ ಭಾಷೆಯ ಉತ್ತಮ ಸಿನಿಮಾಗಳನ್ನು ನೋಡುತ್ತಿರುವುದು.

ಕೆಲವರು ಮಾತ್ರ ತಮ್ಮ ಮಾತೃ ಭಾಷೆ ಹೊರತು ಪಡಿಸಿ ಇತರೆ ಭಾಷೆ ಸಿನಿಮಾಗಳನ್ನು ನೋಡಲು ಸಬ್‌ಟೈಟಲ್ ಬೇಡಿಕೆ ಇಡುತ್ತಾರೆ. ಅಂದಹಾಗೆ ಈ ಹಿಂದಿನ ಗಿಜ್‌ಬಾಟ್‌ ಲೇಖನದಲ್ಲಿ ಸಿನಿಮಾಗಳಿಗೆ ವಿಎಲ್‌ಸಿ ಮೀಡಿಯಾ ಪ್ಲೇಯರ್‌ಗೆ ಸಬ್‌ಟೈಟಲ್‌ ಪಡೆಯುವುದು ಹೇಗೆ ಎಂದು ತಿಳಿಸಿದ್ದೆವು. ಆದರೆ ಇಂದಿನ ಲೇಖನದಲ್ಲಿ ವಿಂಡೋಸ್ ಮೀಡಿಯಾ ಪ್ಲೇಯರ್‌'ಗೆ ಸಬ್‌ಟೈಟಲ್ ಆಡ್‌ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಈ ಕೆಳಗಿನ ಸಿಂಪಲ್‌ ಟೂಲ್‌ಗಳನ್ನು ನಾವು ಹೇಳುವ ವಿಧಾನದಲ್ಲಿ ಬಳಸಿ.

ಯಾವುದೇ ಸಿನಿಮಾಗಳಿಗೆ VLC ಮೀಡಿಯಾ ಪ್ಲೇಯರ್‌ನಲ್ಲಿ ಸಬ್‌ಟೈಟಲ್‌ ಪಡೆಯುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

-ಡೌನ್‌ಲೋಡ್‌ ಮಾಡಲಾದ ವೀಡಿಯೊ ಮತ್ತು ಸಬ್‌ಟೈಟಲ್ ಫೈಲ್‌ ಎರಡು ಸಹ ಒಂದೇ ಹೆಸರಿನಲ್ಲಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳಿ.

-ವಿಂಡೋಸ್ ಮೀಡಿಯಾ ಪ್ಲೇಯರ್ ಓಪನ್ ಮಾಡಿ, ಲೈಬ್ರರಿ ಮೋಡ್‌ನಲ್ಲಿ Play->Lyrics, captions, ಮತ್ತು subtitles ಎಂಬಲ್ಲಿ ಕ್ಲಿಕ್‌ ಮಾಡಿ.

ಹಂತ 2

ಹಂತ 2

- DirectVobSub (VSFilter) codec ಟೂಲ್‌ ಅನ್ನು ಡೌನ್‌ಲೋಡ್ ಮಾಡಿ, ಓಎಸ್‌ ಬಿಟ್ಸ್‌ ಆಧಾರಿವಾಗಿ ಇನ್‌ಸ್ಟಾಲ್‌ ಮಾಡಿ.

- ಕೆಲವೊಮ್ಮೆ ಮೇಲಿನ ಹಂತಗಳ ನಂತರವೇ ಸಬ್‌ಟೈಟಲ್ ವರ್ಕ್‌ ಆರಂಭವಾಗುತ್ತದೆ. ಸಬ್‌ಟೈಟಲ್ ಮೇಲಿನ ಹಂತಗಳಿಗೆ ವರ್ಕ್‌ ಆಗದಿದ್ದಲ್ಲಿ, Shark007's Advanced codec ಟೂಲ್ ಡೌನ್‌ಲೋಡ್ ಮಾಡಿ ನಿಮ್ಮ ವಿಂಡೋಸ್ ಓಎಸ್‌ಗೆ ಇನ್‌ಸ್ಟಾಲ್‌ ಮಾಡಿ

- ಈ ಟೂಲ್ ಐಕಾನ್‌ ಮೇಲೆ ಬಲಭಾಗ ಬಟನ್‌ ಕ್ಲಿಕ್ ಮಾಡಿ, 'Run as Administrator' ಕ್ಲಿಕ್ ಮಾಡಿ.

ಹಂತ 3

ಹಂತ 3

- ನಂತರ ಎಲ್ಲಾ ಟ್ಯಾಬ್‌ಗಳ ಪ್ರದರ್ಶನವಾಗುತ್ತದೆ. ಅಲ್ಲಿ ಎಲ್ಲಾ ಫಾರ್ಮ್ಯಾಟ್‌ಗಳಿಗೆ 'Disable Media Foundation' ಎಂಬುದನ್ನು ಟಿಕ್ ಮಾಡಿ.

ಹಂತ 4

ಹಂತ 4

- ನಂತರ ಸಬ್‌ಟೈಟಲ್ ಓಪನ್‌ ಆಗದ ವೀಡಿಯೊ ಓಪನ್‌ ಮಾಡಿ, ಸಬ್‌ಟೈಟಲ್ ವರ್ಕ್‌ ಆಗುತ್ತಿರುತ್ತದೆ.
- ಯಶಸ್ವಿಯಾಗಿ ಸಬ್‌ಟೈಟಲ್‌ ವಿಂಡೋಸ್ ಮೀಡಿಯಾ ಪ್ಲೇಯರ್‌ಗೆ ಆಡ್‌ ಆಗಿರುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How to Add Subtitles in Windows Media Player. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot