ಭಾರತದಲ್ಲಿ ನೆಲಕಚ್ಚಿದ ಆಪಲ್ 'ಐಫೋನ್' ಮಾರುಕಟ್ಟೆ!..ಕಾರಣವೇನು ಗೊತ್ತಾ?

|

ಭಾರತದಂತಹ ವಿಶ್ವದ ಈ ಅತಿದೊಡ್ಡ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ವಿಶ್ವ ಮೊಬೈಲ್ ದಿಗ್ಗಜ 'ಆಪಲ್' ಕಂಪೆನಿ ಐಫೋನುಗಳ ಮಾರುಕಟ್ಟೆಯ ಪಾಲು ಹಾಗೂ ಬೇಡಿಕೆ ಕ್ರಮೇಣ ವಾಗಿ ಇಳಿಮುಖವಾಗಿದೆ ಎನ್ನುತ್ತಿವೆ ವರದಿಗಳು. ತನ್ನ ಬ್ರ್ಯಾಂಡ್​ ವ್ಯಾಲ್ಯೂ, ಡಿಸೈನ್ ಹಾಗೂ ಫೀಚರ್ಸ್ ಮೂಲಕ ಒಂದು ಕಾಲದಲ್ಲಿ ವಿಶ್ವ ಮಾರ್ಕೆಟ್ ಆಳಿದ್ದ ಈಗಲೂ ಆಳುತ್ತಿರುವ ಆಪಲ್ ಸದ್ಯ ಭಾರತದಲ್ಲಿ ತನ್ನ ಹಿಡಿತ ಕಳೆದುಕೊಂಡಿದೆ ಎಂದು ವರದಿಗಳು ಹೇಳಿವೆ.

ಕಳೆದ ವರ್ಷ ಮೂವತ್ತು ಲಕ್ಷ ಐಫೋನ್​ಗಳು ಭಾರತದಲ್ಲಿ ಮಾರಾಟವಾಗಿದ್ದವು. ಆದರೆ ಈ ಬಾರಿ ಆ ಸಂಖ್ಯೆ ಇಪ್ಪತ್ತು ಲಕ್ಷಕ್ಕೆ ಇಳಿಕೆಯಾಗಿದೆ.ಈಗ ಭಾರತೀಯರ ಪ್ರೀಮಿಯಮ್ ಫೋನ್ ಎಂದರೆ ಅದು ಒನ್‌ಪ್ಲಸ್ ಮಾತ್ರ ಎಂದು ಹೇಳಬಹುದಾಗಿದೆ. ಸರಿಸುಮಾರು 38,000ರೂ.ಗೆ ಲಭ್ಯವಿರುವ ಒನ್‌ಪ್ಲಸ್ ಫೀಚರುಗಳು, ಸರಿಸುಮಾರು ಆಪಲ್ ಫೋನುಗಳಂತೆಯೇ ಇರುವುದರಿಂದ, ಸ್ವಲ್ಪ ಹಣ ಉಳಿಸುವ ಆಸೆ ಇರುವವರು ಒನ್‌ಪ್ಲಸ್ ಫೋನ್‌ನತ್ತ ಮೊರೆ ಹೋಗುತ್ತಿದ್ದಾರೆ.

ಭಾರತದಲ್ಲಿ ನೆಲಕಚ್ಚಿದ ಆಪಲ್ 'ಐಫೋನ್' ಮಾರುಕಟ್ಟೆ!..ಕಾರಣವೇನು ಗೊತ್ತಾ?
ದುಬಾರಿ ಐಫೋನ್​ಗಿಂತ ಹೆಚ್ಚಿನ ಫೀಚರ್​​ಗಳು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ದೊರೆಯುತ್ತಿರುವುದು ಐಪೋನ್​ ಬೇಡಿಕೆಯನ್ನು ಕುಸಿಯುವಂತೆ ಮಾಡಿದೆ. ಇದಕ್ಕೆ ಕಾರಣ ಚೀನಾ ಕಂಪೆನಿಗಳು ಒಂದೆಡೆಯಾದರೆ, ಮೇಕ್ ಇಂಡಿಯಾ ನೀತಿ ಮತ್ತೊಂದು ಬಲವಾದ ಪೆಟ್ಟನ್ನು ನೀಡಿದೆ.! ಹಾಗಾಗಿ, ಇಂದಿನ ಲೇಖನದಲ್ಲಿ ಭಾರತದಲ್ಲಿ ಆಪಲ್ ಪೋನ್‌ಗಳ ಕೊನೆಗಾಲ ಶುರುವಾಗಿದೆಯೇ?, ಭಾರತದಲ್ಲಿ ಆಪಲ್ ಕಂಪೆನಿಯ ಭವಿಷ್ಯವೇನು? ಎಂಬುದರ ಬಗ್ಗೆ ತಿಳಿಸುವ ಪ್ರಯತ್ನ ನಮ್ಮದು.

ಭಾರತದಲ್ಲಿ ಆಪಲ್ ಬೆಲೆಗಳು ಜಾಸ್ತಿ!

ಭಾರತದಲ್ಲಿ ಆಪಲ್ ಬೆಲೆಗಳು ಜಾಸ್ತಿ!

ಅಮೆರಿಕಾದಲ್ಲಿ ಆಪಲ್ ಐ ಫೋನ್ ಎಕ್ಸ್ ಆರ್ ಬೆಲೆ ರೂ.54,000 ರೂ.! ಇದನ್ನು ಭಾರತಕ್ಕೆ ಆಮದು ಮಾಡಿಕೊಂಡಾಗ ಸುಮಾರು 15% ರಿಂದ 20% ತೆರಿಗೆ ಆದ್ದರಿಂದ ಈಗ ಭಾರತದಲ್ಲಿ ಐಫೋನ್ ಎಕ್ಸ್ ಆರ್ ಸ್ಮಾರ್ಟ್‌ಫೋನ್ ಖರೀದಿಸಲು ಸುಮಾರು ರು.80,000/- ತೆರಬೇಕು. ಇದು ಭಾರತೀಯರಿಗೆ ಹೆಚ್ಚು ಹೊರೆಯಾಗುತ್ತಿದೆ. ಇದರಿಂದ ಭಾರತದಲ್ಲಿ ಐಪೋನ್‌ಗಳ ಮಾರಾಟ ಮತ್ತು ಬೇಡಿಕೆ ಇಳಿಕೆಯಾಗುತ್ತಿದೆ.

ಚೀನಾ ಸಂಸ್ಥೆಗಳ ಪೈಪೋಟಿ!

ಚೀನಾ ಸಂಸ್ಥೆಗಳ ಪೈಪೋಟಿ!

ಮೊದಲು ಚೀನಾ ಕಂಪೆನಿಯ ಮೊಬೈಲ್‌ಗಳು ಎಂದರೆ ಕಳಪೆ ಎನ್ನುವ ಮಾತಿತ್ತು. ಆದರೆ, ಚೀನಾ ಕಂಪೆನಿಗಳು ಭಾರತದ ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿವೆ. 40,000 ರೂ. ಬೆಲೆಯ ಐಫೋನ್ ನೀಡುವ ಫೀಚರ್ಸ್ ಅನ್ನು 10 ಸಾವಿರ ಬೆಲೆಯ ಚೀನಾ ಫೋನ್‌ಗಳಲ್ಲಿ ಕಾಣಬಹುದಾಗಿದೆ. ಪ್ರೀಮಿಯಮ್ ಎಂಬ ಮಾತು ಬಂದಾಗ, ಪ್ರೀಮಿಯಂ ವಲಯದಲ್ಲಿ ಆಪಲ್‌ಗಿಂತ ಒನ್‌ಪ್ಲಸ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳ ಭರ್ಜರಿ ದರ ಸಮರ ಆಪಲ್‌ಗೆ ತೊಡಕಾಗಿದೆ.

ಮೇಕ್ ಇಂಡಿಯಾ ನೀತಿ

ಮೇಕ್ ಇಂಡಿಯಾ ನೀತಿ

‘ಮೇಕ್ ಇನ್ ಇಂಡಿಯಾ' ಪಾಲಿಸಿಯ ಪ್ರಕಾರ, ಸಾಕಷ್ಟು ಬಂಡವಾಳವನ್ನು ಭಾರತದಲ್ಲಿ ಹೂಡಿರುವ ವಿಶ್ವದ ಸ್ಮಾರ್ಟ್‌ಫೋನ್ ದಿಗ್ಗಜರು ಅದರ ಲಾಭ ಪಡೆಯುತ್ತಿದ್ದಾರೆ. ಮೊಬೈಲ್‌ಗಳನ್ನು ಇಲ್ಲಿಯೇ ಉತ್ಪಾದನೆ ಮಾಡುತ್ತಿರುವುದರಿಂದ ಅವುಗಳು ತೆರಿಗೆ ಹೊರೆಯಿಂದ ತಪ್ಪಿಸಿಕೊಳ್ಳುತ್ತಿವೆ. ಆದರೆ, ಆಪಲ್ ಸಂಸ್ಥೆ ಭಾರತದಲ್ಲಿ ಮರುಜೋಡಿಸುವ ಕಾರ್ಯ ಹೊಂದಿದೆಯಾದರೂ, ಫೋನ್ ತಯಾರಿಕೆ ಮಾಡುತ್ತಿಲ್ಲ. ಇದರಿಂದ ಆಪಲ್‌ ಕಂಪೆನಿ ಮೇಲೆ ಹೆಚ್ಚು ವೆಚ್ಚ ಬೀಳುತ್ತಿದೆ.

ಭಾರತೀಯರನ್ನು ಮುಟ್ಟುತ್ತಿಲ್ಲ!

ಭಾರತೀಯರನ್ನು ಮುಟ್ಟುತ್ತಿಲ್ಲ!

ಐಫೋನುಗಳು ದುಬಾರಿ ಎನಿಸಿದರೂ ಸಹ ಆಪಲ್ಕಂಪೆನಿ ಇಂದಿಗೂ ವಿಶ್ವದ ನಂ.1 ಬ್ರ್ಯಾಂಡ್ ಆಗಿ ಮುಂದುವರಿಯುತ್ತಿದೆ. ಆದರೆ, ಭಾರತೀಯರನ್ನು ಹತ್ತರಕ್ಕೆ ಸೆಳೆದುಕೊಳ್ಳುವಲ್ಲಿ ವಿಫಲವಾಗುತ್ತಿದೆ. ಜನಪ್ರಿಯ ವ್ಯಕ್ತಿಗಳು ಮಾತ್ರ ಈಗ ಆಪಲ್ ಹಿಂದೆ ಬಿದ್ದಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಆಪಲ್ ಸಾಮಾನ್ಯ ಭಾರತೀಯರನ್ನು ಮುಟ್ಟುತ್ತಿಲ್ಲ. ಆದರೆ, ಇದೇ ವೇಳೆಯಲ್ಲಿ ಒನ್‌ಪ್ಲಸ್ ಮತ್ತು ಸ್ಯಾಮ್‌ಸಂಗ್ ಮಧ್ಯಮ ವರ್ಗದ ಭಾರತೀಯರಿಗೆ ಹತ್ತಿರವಾಗಿವೆ.

ಆಪಲ್ ಕಂಪೆನಿಯ ಭವಿಷ್ಯವೇನು?

ಆಪಲ್ ಕಂಪೆನಿಯ ಭವಿಷ್ಯವೇನು?

ಈ ವರ್ಷದ ಮೂರನೆಯ ತ್ರೈಮಾಸಿಕದಲ್ಲಿ, ಪ್ರೀಮಿಯಂ ವಲಯದಲ್ಲಿ ಆಪಲ್‌ಗಿಂತ ಒನ್‌ಪ್ಲಸ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳು ಮುಂದಿವೆ. ಆದರೆ, ಹೆಸರು, ಜನಪ್ರಿಯತೆ, ವೈಶಿಷ್ಟ್ಯ ಮತ್ತು ಕಾರ್ಯಕ್ಷಮತೆಯ ವಿಚಾರಕ್ಕೆ ಬಂದರೆ, ಆ್ಯಪಲ್ ಉತ್ಪನ್ನಗಳನ್ನು ಮೀರಿಸುವವರು ಸದ್ಯದಲ್ಲಿ ಯಾರು ಇಲ್ಲ ಎಂಬುದು ಕೂಡ ನಿಜ. ಒಂದು ವೇಳೆ ಆಪಲ್ ಮಧ್ಯಮ ವರ್ಗದ ಭಾರತೀಯರನ್ನು ತಲುಪಲು ಸಾಧ್ಯವಿಲ್ಲದಿದ್ದರೆ, ಭವಿಷ್ಯದಲ್ಲಿ ಒಂದು ಅತ್ಯುತ್ತಮ ಮಾರುಕಟ್ಟೆಯನ್ನು ಕಳೆದುಕೊಳ್ಳುವುದು ಮಾತ್ರ ಸತ್ಯ.

Best Mobiles in India

English summary
OnePlus' India head Vikas Agarwal told Reuters this week that 10-15 percent of new customers in recent months have been defectors from Apple, suggesting even some loyalists are opting out of upgrading their handsets. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X