ಫೇಸ್‌ಬುಕ್ ವಿಡಿಯೋಗಳನ್ನು ಜಾಸ್ತಿ ನೋಡ್ತೀರಾ?..ಈ ಶಾಕಿಂಗ್ ಸ್ಟೋರಿ ನೋಡಿ!!

Written By:

ಡೇಟಾ ಸಾಲುತ್ತಿಲ್ಲಾ ಎನ್ನುವ ಬದಲು ಫೇಸ್‌ಬುಕ್‌ನಲ್ಲಿ ಆಟೊರನ್ ವಿಡಿಯೋಗಳನ್ನು ತಡೆಯುವುದು ಒಳ್ಳೆಯದು! ಹೌದು, ಫೇಸ್‌ಬುಕ್ ನಿಮ್ಮೆಲ್ಲಾ ಡೇಟಾವನ್ನು ನಿಮಗೆ ಗೊತ್ತಿಲ್ಲದ ರೀತಿಯಲ್ಲಿಯೇ ಖಾಲಿ ಮಾಡುತ್ತಿದೆ. ಆದರೆ, ಉಚಿತವಾಗಿ ಮತ್ತು ಕಡಿಮೆಬೆಲೆಗೆ ಡೇಟಾ ಸಿಕ್ಕಿರುವುದರಿಂದ ನಿಮಗಿದು ತಿಳಿಯುತಿಲ್ಲ.!!

ಫೇಸ್‌ಬುಕ್‌ನಲ್ಲಿ ವಿಡಿಯೋಗಳು ಆಟೊ ರನ್ ಆಗುತ್ತಿರುವುದರಿಂದ ಬಳಕೆದಾರರಿಗೆ ಗೊತ್ತಿಲ್ಲದಂತೆಯೇ ಸಾಕಷ್ಟು ಡೇಟಾ ಬಳಕೆದಾರರಿಂದ ಕೈಜಾರುತ್ತಿದೆ. ಜೊತೆಗೆ ಫೇಸ್‌ಬುಕ್ ಸಹ ಕೆಲವು ವಿಡಿಯೋ ನೋಡಲು ಪ್ರೇರೇಪಿಸುವುದು ಸಹ ಬಳಕೆದಾರರ ಡೇಟಾ ಖಾಲಿಯಾಗುವುದಕ್ಕೆ ಕಾರಣವಾಗಿದೆ.!!

ಹಾಗಾಗಿ, ಫೇಸ್‌ಬುಕ್‌ ನಿಂದ ಮೊಬೈಲ್ ಡೇಟಾವನ್ನು ಉಳಿಸಿಕೊಳ್ಳುವುದು ಹೇಗೆ? ಆಟೊ ರನ್ ವಿಡಿಯೋಗಳನ್ನು ಹೇಗೆ ತಡೆಯುವುದು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.!! ಮತ್ತು ನಿಮ್ಮ ಡೇಟಾ ಉಳಿಸಿಕೊಳ್ಳಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸರಾಸರಿ 100MB ಡೇಟಾ ಫೆಸ್‌ಬುಕ್ ತೆಕ್ಕೆಗೆ!!

ಸರಾಸರಿ 100MB ಡೇಟಾ ಫೆಸ್‌ಬುಕ್ ತೆಕ್ಕೆಗೆ!!

ಡೇಟಾ ಬಳಕೆ ಹೆಚ್ಚಾದ ನಂತರ ಪ್ರತಿಯೋರ್ವ ವ್ಯಕ್ತಿಯಿಂದ ಸರಾಸರಿ 100MB ಡೇಟಾವನ್ನು ಫೇಸ್‌ಬುಕ್ ಪಡೆದುಕೊಳ್ಳುತ್ತದೆ. ವಿಡಿಯೋ ನೋಡುತ್ತಾ ಮತ್ತು ಫೇಸ್‌ಬುಕ್ ಬಳಕೆ ಮಾಡುತ್ತಾ ಎಷ್ಟು ಡೇಟಾ ಹೊರಹೋಗುತ್ತದೆ ಎಂದು ನೀವು ತಿಳಿಯಬಹುದು.!!

ಆಟೊರನ್ ವಿಡಿಯೋಗಳನ್ನು ನಿಲ್ಲಿಸುವುದು ಹೇಗೆ!!

ಆಟೊರನ್ ವಿಡಿಯೋಗಳನ್ನು ನಿಲ್ಲಿಸುವುದು ಹೇಗೆ!!

ಸೆಟಿಂಗ್ಸ್ ಕ್ಲಿಕ್ ಮಾಡಿ. ನಿಮ್ಮ ಎಡಭಾಗದಲ್ಲಿ ಕಾಣುವ ಹಲವು ಆಯ್ಕೆಗಳಲ್ಲಿ ಕೊನೆಯ ಆಯ್ಕೆಯಾದ ವಿಡಿಯೋಸ್ ಒತ್ತಿರಿ. ನಂತರ ಆಟೋಪ್ಲೇ ವಿಡಿಯೋಸ್' ಆಯ್ಕೆ ಮಾಡಿ. ಯೆಸ್, ಆಫ್ , ಡೀಫಾಲ್ಟ್ ಎನ್ನುವ ಮೂರು ಆಯ್ಕೆಗಳು ಇರುತ್ತವೆ.'ಆಫ್' ಆಯ್ಕೆ ಕ್ಲಿಕ್ ಮಾಡಿ. ವಿಡಿಯೋಗಳು ಸ್ವಯಂಚಾಲಿತವಾಗಿ ಚಾಲೂ ಆಗುವುದನ್ನು ತಪ್ಪಿಸಿರಿ.

ವಿಡಿಯೋಗಳನ್ನು ನೋಡುತ್ತಾ ಮೈ ಮರೆಯಬೇಡಿ.!!

ವಿಡಿಯೋಗಳನ್ನು ನೋಡುತ್ತಾ ಮೈ ಮರೆಯಬೇಡಿ.!!

ಫೇಸ್‌ಬುಕ್ ಯಾವಾಗಲೂ ನೀವು ವಿಡಿಯೋಗಳನ್ನು ನೋಡುವಂತೆ ಪ್ರೇರೇಪಿಸುತ್ತದೆ. ಒಂದು ವಿಡಿಯೋ ನೋಡಿದ ನಂತರ ತಕ್ಷಣವೇ ಮತ್ತೊಂದು ವಿಡಿಯೋ ನೋಡಲು ಫೇಸ್‌ಬುಕ್ ಹೇಳುತ್ತದೆ. ಆದರೆ, ವಿಡಿಯೋ ನೋಡುವಾಗ ಡೇಟಾದ ಬಗ್ಗೆ ಯೂ ನಿಮ್ಮ ಗಮನವಿರುವುದು ಒಳ್ಳೆಯದು.

ಫೇಸ್‌ಬುಕ್ ಆಪ್ ಬ್ಯಾಕ್‌ರನ್ ಬೇಡ.!!

ಫೇಸ್‌ಬುಕ್ ಆಪ್ ಬ್ಯಾಕ್‌ರನ್ ಬೇಡ.!!

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯಾವಾಗಲೂ ಫೇಸ್‌ಬುಕ್ ಆಪ್ ಆನ್‌ ಆಗಿಯೇ ಇರುತ್ತದೆ. ಆದರೆ, ಬೇರೆ ಆಪ್‌ಗಳನ್ನು ಬಳಸುವಾಗಲಾದರೂ ಫೇಸ್‌ಬುಕ್ ಆಪ್ ಬ್ಯಾಕ್‌ರನ್ ಆಗದಂತೆ ನೋಡಿಕೊಳ್ಳಿ. ಇಲ್ಲಾವಾದರೆ, ನೀರಿನಂತೆ ನಿಮ್ಮ ಡೇಟಾ ಫೆಸ್‌ಬುಕ್ ಪಾಲಾಗುತ್ತದೆ.!!

ಓದಿರಿ:ಇಮೇಲ್‌ ಐಡಿಯನ್ನೇ ಯೂಸರ್‌ ನೇಮ್‌ ಆಗಿ ಬಳಸುತ್ತೀರಾ? ಇದಕ್ಕಿಂತ ತಪ್ಪು ಇನ್ನೇನಿದೆ?!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
I'm considering to block only video from facebook in my network.. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot