ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ವಿಡಿಯೊ ಡೌನ್‌ಲೋಡ್‌ ಮಾಡುವುದು ಹೇಗೆ?

|

ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಲ್ಲಿ ಹಲವಾರು ರೀತಿಯ ವಿಡಿಯೊಗಳನ್ನು ನೋಡುತ್ತಿರುತ್ತೇವೆ. ಆ ವಿಡಿಯೊಗಳು ನಮಗೆ ಬಹಳಷ್ಟು ಇಷ್ಟ ಆಗುತ್ತವೆ. ಆದರೆ, ಆ ವಿಡಿಯೋಗಳನ್ನು ಶೇರ್ ಮಾಡುವ ಬದಲು ಡೌನ್‌ಲೋಡ್ ಮಾಡುವುದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಇನ್ನು ಕೆಲವೊಂದು ವಿಡಿಯೊಗಳನ್ನು ನಾವು ಡೌನ್‌ಲೋಡ್‌ ಮಾಡಿಕೊಳ್ಳುವ ಅಗತ್ಯವೂ ಇರುತ್ತದೆ.

ಈಗೆಲ್ಲಾ ಫೇಸ್‌ಬುಕ್‌ , ಇನ್‌ಸ್ಟಾಗ್ರಾಂ ವಿಡಿಯೋಗಳನ್ನು ಡೌನ್‌ಲೋಡ್ ಮಾಡುವ ಅಗತ್ಯವಿಲ್ಲದಿದ್ದರೂ, ಆ ವಿಡಿಯೊ ತುಂಬಾ ಇಷ್ಟವಾಗಿದ್ದರೆ ವಾಟ್ಸ್ಆಪ್ ಸ್ಟೇಟಸ್ ಆಗಿ ಅದನ್ನು ಬಳಸಿಕೊಳ್ಳಲು ಹಲವರು ಅಂತಹ ವಿಡಿಯೋಗಳನ್ನು ಡೌನ್‌ಲೋಡ್ ಮಾಡುತ್ತಾರೆ. ಹಾಗಾಗಿ, ನೀವು ಕೂಡ ಇಂತಹ ಇಷ್ಟವಾದ ವಿಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು.

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ವಿಡಿಯೊ ಡೌನ್‌ಲೋಡ್‌ ಮಾಡುವುದು ಹೇಗೆ?

ಫೇಸ್‌ಬುಕ್‌ , ಇನ್‌ಸ್ಟಾಗ್ರಾಂ ವಿಡಿಯೊಗಳನ್ನು ಡೌನ್‌ಲೋಡ್ ಮಾಡಲು ಹಲವು ದಾರಿಗಳಿವೆ. ಅವುಗಳಲ್ಲಿ ಅತಿಸುಲಭ ದಾರಿಗಳನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಮೊಬೈಲ್ ಮತ್ತು ಡೆಸ್ಕ್‌ಟಾಪ್‌ನಲ್ಲಿ ಅತ್ಯಂತ ಸುಲಭವಾಗಿ ಫೇಸ್‌ಬುಕ್‌ , ಇನ್‌ಸ್ಟಾಗ್ರಾಂ ವಿಡಿಯೊಗಳನ್ನು ಸುಲಭವಾಗಿ ಡೌನ್‌ಲೋಡ್‌ ಮಾಡುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ನೋಡೋಣ.

ಫೇಸ್‌ಬುಕ್‌ ವಿಡಿಯೋ ಡೌನ್‌ಲೋಡ್..ಸ್ಟೆಪ್ 1

ಫೇಸ್‌ಬುಕ್‌ ವಿಡಿಯೋ ಡೌನ್‌ಲೋಡ್..ಸ್ಟೆಪ್ 1

ಫೇಸ್‌ಬುಕ್‌ಗೆ ಲಾಗಿನ್ ಆಗಿ. ನೀವು ಡೌನ್‌ಲೋಡ್‌ ಮಾಡಬಯಸುವ ವಿಡಿಯೊ ಪಬ್ಲಿಕ್ ಆಗಿದೆಯೇ ಎಂದು ನೋಡಿ. ವಿಡಿಯೊ ಪೋಸ್ಟ್ ಮಾಡಿರುವ ವ್ಯಕ್ತಿ ಆ ವಿಡಿಯೊವನ್ನು ಪಬ್ಲಿಕ್ ಮಾಡದೇ ಇದ್ದರೆ ವಿಡಿಯೊ ಡೌನ್‌ಲೋಡ್‌ ಸಾಧ್ಯವಿಲ್ಲ. ಡೌನ್‌ಲೋಡ್‌ ಮಾಡಬಯಸುವ ವಿಡಿಯೊ ಪಬ್ಲಿಕ್ ಆಗಿದ್ದರೆ ವಿಡಿಯೊ ಮೇಲೆ ರೈಟ್ ಕ್ಲಿಕ್ ಮಾಡಿ

ಫೇಸ್‌ಬುಕ್‌ ವಿಡಿಯೋ ಡೌನ್‌ಲೋಡ್.. ಸ್ಟೆಪ್ 2

ಫೇಸ್‌ಬುಕ್‌ ವಿಡಿಯೋ ಡೌನ್‌ಲೋಡ್.. ಸ್ಟೆಪ್ 2

ಡ್ರಾಪ್ ಡೌನ್ ಮೆನುವಿನಲ್ಲಿ Show video URL ಎಂದು ಕಾಣಿಸುತ್ತದೆ. ಅದನ್ನು ಕಾಪಿ ಮಾಡಿಕೊಳ್ಳಿ. ನಂತರ https://en.savefrom.net/ ಎಂಬ ಲಿಂಕ್ ಓಪನ್ ಮಾಡಿ ಅಲ್ಲಿ ಫೇಸ್‌ಬುಕ್‌ನಲ್ಲಿ ಡೌನ್‌ಲೋಡ್‌ ಮಾಡಲು ಬಯಸಿರುವ ವಿಡಿಯೊ ಲಿಂಕ್ ಪೇಸ್ಟ್ ಮಾಡಿ. ನಂತರ ನೀವು ಸೆಲೆಕ್ಟ್ ಮಾಡಿರುವ ವಿಡಿಯೋ ಡೌನ್‌ಲೋಡ್ ಹಂತಕ್ಕೆ ಹೋಗುತ್ತದೆ.

ಫೇಸ್‌ಬುಕ್‌ ವಿಡಿಯೋ ಡೌನ್‌ಲೋಡ್.. ಸ್ಟೆಪ್ 3

ಫೇಸ್‌ಬುಕ್‌ ವಿಡಿಯೋ ಡೌನ್‌ಲೋಡ್.. ಸ್ಟೆಪ್ 3

ವಿಡಿಯೋ ಡೌನ್‌ಲೋಡ್ ಹಂತಕ್ಕೆ ಹೋದ ನಂತರ. ಅಲ್ಲಿ ಕೆಳಗೆ ಕಾಣಿಸಲು ಡೌನ್‌ಲೋಡ್‌ ಬಟನ್ ಅನ್ನು ಕ್ಲಿಕ್ ಮಾಡಿ. ಡೌನ್‌ಲೋಡ್‌ ಮಾಡಲಿರುವ ವಿಡಿಯೊದ ಕ್ವಾಲಿಟಿಯನ್ನು ಕೂಡಾ ಆಯ್ಕೆ ಮಾಡಬಹುದಾಗಿದ್ದು, MP4 HD ಗುಣಮಟ್ಟದಲ್ಲಿಯೂ ನಿಮ್ಮ ಮೊಬೈಲ್‌ನ ಡೌನ್‌ಲೋಡ್‌ ಫೋಲ್ಡರ್‌ನಲ್ಲಿ ವಿಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇನ್‌ಸ್ಟಾಗ್ರಾಂ ವಿಡಿಯೊ ಡೌನ್‌ಲೋಡ್‌! ಸ್ಟೆಪ್ 1

ಇನ್‌ಸ್ಟಾಗ್ರಾಂ ವಿಡಿಯೊ ಡೌನ್‌ಲೋಡ್‌! ಸ್ಟೆಪ್ 1

ನೀವು ಆಂಡ್ರಾಯ್ಡ್ ಫೋನ್ ಬಳಕೆದಾರರಾಗಿದ್ದರೆ ಪ್ಲೇ ಸ್ಟೋರ್‌ನಲ್ಲಿ Video downloader For instagram ಎಂಬ App ಡೌನ್‌ಲೋಡ್‌ ಮಾಡಿ.ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಆಗಿರುವ ವಿಡಿಯೊದ ಮೇಲೆ ಬಲಭಾಗದಲ್ಲಿ ಕ್ಲಿಕ್ ಮಾಡಿದರೆ ವಿಡಿಯೊ Copy Share URL ಸಿಗುತ್ತದೆ. ಅದನ್ನು ಕಾಪಿ ಮಾಡಿ.

ಇನ್‌ಸ್ಟಾಗ್ರಾಂ ವಿಡಿಯೊ ಡೌನ್‌ಲೋಡ್‌! ಸ್ಟೆಪ್ 2

ಇನ್‌ಸ್ಟಾಗ್ರಾಂ ವಿಡಿಯೊ ಡೌನ್‌ಲೋಡ್‌! ಸ್ಟೆಪ್ 2

ನಂತರ Video downloader For instagram App ಓಪನ್ ಮಾಡಿ ಡೌನ್‌ಲೋಡ್‌ ಮಾಡಲಿರುವ ವಿಡಿಯೊದ URL ಪೇಸ್ಟ್ ಮಾಡಿ. ಡೌನ್‌ಲೋಡ್‌ ಆಪ್ಶನ್ ಕ್ಲಿಕ್ ಮಾಡಿ.ವಿಡಿಯೊ ಡೌನ್‌ಲೋಡ್‌ ಆಗಿ ನಿಮ್ಮ ಫೋನ್‌ನಲ್ಲಿ ಸೇವ್ ಆಗುತ್ತದೆ. ನಂತರ ಈ ವಿಡಿಯೋವನ್ನು ನಿಮ್ಮಿಷ್ಟದಂತೆ ಬಳಸಿಕೊಳ್ಳಿ.

Best Mobiles in India

English summary
Next, open the Facebook app and start playing the video you want to download. From there, tap the "Share" button in the bottom-right corner. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X