ಗೊರಿಲ್ಲಾ ಗ್ಲಾಸ್ ಇದ್ರೆ ನಿಮ್ಮ ಫೋನ್‌ ಡಿಸ್‌ಪ್ಲೇ ಸೇಫ್‌ ಆಗಿರುತ್ತಾ?

|

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ ತಯಾರಕರು ಸ್ಮಾರ್ಟ್‌ಫೋನ್‌ ಸ್ಕ್ರೀನ್‌ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌ ಪ್ರೊಟೆಕ್ಷನ್‌ ಅಳವಡಿಸುತ್ತಿವೆ. ಗೊರಿಲ್ಲಾ ಗ್ಲಾಸ್‌ ಅಳವಡಿಸುವುದರಿಂದ ಸ್ಮಾರ್ಟ್‌ಫೋನ್‌ ಕೆಳಗೆ ಬಿದ್ದರೂ ಸ್ಕ್ರೀನ್‌ಗೆ ಯಾವುದೇ ತೊಂದರೆಯಾಗದಂತೆ ತಡೆಯಲಿದೆ. ಅಷ್ಟಕ್ಕೂ ಗೊರಿಲ್ಲಾ ಗ್ಲಾಸ್‌ ಸ್ಮಾರ್ಟ್‌ಫೋನ್‌ ಅನ್ನು ಹೇಗೆ ರಕ್ಷಿಸಲಿದೆ? ಇದು ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದು ಕೆಲವರಿಗೆ ತಿಳಿದಿಲ್ಲ.

ಗೊರಿಲ್ಲಾ

ಹೌದು, ಗೊರಿಲ್ಲಾ ಗ್ಲಾಸ್‌ ಅಳವಡಿಸುವುದರಿಂದ ಸ್ಮಾರ್ಟ್‌ಫೋನ್‌ಗೆ ಹೇಗೆ ರಕ್ಷಣೆ ಸಿಗಲಿದೆ ಅನ್ನೊದು ಕೆಲವರಿಗೆ ತಿಳಿದಿಲ್ಲ. ಗೊರಿಲ್ಲಾ ಗ್ಲಾಸ್‌ನ ಕಾರ್ಯಕ್ಷಮತೆಯ ಬಗೆಯಂತೂ ತಿಳಿದವರು ಕಡಿಮೆ. ಅಲ್ಲದೆ ಗೊರಿಲ್ಲಾ ಗ್ಲಾಸ್‌ನ ವಿವಿಧ ಆವೃತ್ತಿಗಳು ಹೇಗೆ? ಅವುಗಳ ಕಾರ್ಯವೈಖರಿ ಏನಿದೆ ಇದೆಲ್ಲದರ ಬಗ್ಗೆ ತಿಳಿದಿರುವವರ ಸಂಖ್ಯೆ ಕಡಿಮೆಯಿದೆ. ಹಾಗಾದ್ರೆ ನಾವು ಈ ಲೇಖನದಲ್ಲಿ ಗೊರಿಲ್ಲಾ ಗ್ಲಾಸ್‌ ಎಂದರೇನು? ಇದರಿಂದ ಸ್ಮಾರ್ಟ್‌ಫೋನ್‌ ರಕ್ಷಣೆ ಹೇಗೆ ಸಾಧ್ಯ ಅನ್ನೊದನ್ನ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಗೊರಿಲ್ಲಾ ಗ್ಲಾಸ್‌ ಉಪಯೋಗ ಏನು?

ಗೊರಿಲ್ಲಾ ಗ್ಲಾಸ್‌ ಉಪಯೋಗ ಏನು?

ನೀವು ಸ್ಮಾರ್ಟ್‌ಫೋನ್‌ ಅನ್ನು ಕೆಳಗಡೆ ಬಿಳಿಸಿದಾಗ ನಿಮ್ಮ ಫೋನ್‌ನ ಸ್ಕ್ರೀನ್‌ ಮೇಲೆ ಯಾವುದೇ ಗೀರು ಬೀಳದಂತೆ ರಕ್ಷಿಸುವ ಕಾರ್ಯವನ್ನು ಗೊರಿಲ್ಲಾ ಗ್ಲಾಸ್‌ ಮಾಡಲಿದೆ. ಅಲ್ಲದೆ ನಿಮ್ಮ ಮೊಬೈಲ್‌ ನೀರಿನಿಂದ ರಕ್ಷಣೆ ಮಾಡುವುದಕ್ಕೆ ಕೂಡ ಗೊರಿಲ್ಲಾ ಗ್ಲಾಸ್‌ನ ಕೊಡುಗೆ ಮಹತ್ವದಾಗಿದೆ. ಇದೇ ಕಾರಣಕ್ಕೆ ಸ್ಮಾರ್ಟ್‌ಫೋನ್‌ ತಯಾರಕರು ತಮ್ಮ ಫೋನ್‌ಗಳ ಸ್ಕ್ರೀನ್‌ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌ ಪ್ರೊಟೆಕ್ಷನ್‌ ಅಳವಡಿಸುತ್ತಿದ್ದಾರೆ.

ಗೊರಿಲ್ಲಾ ಗ್ಲಾಸ್ ಎಂದರೇನು?

ಗೊರಿಲ್ಲಾ ಗ್ಲಾಸ್ ಎಂದರೇನು?

ಇಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಗೊರಿಲ್ಲಾ ಗ್ಲಾಸ್‌ ಬಳಕೆ ಸಾಮಾನ್ಯವಾಗಿದೆ. ಗೊರಿಲ್ಲಾ ಗ್ಲಾಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಸ್ಕ್ರೀನ್‌ ಯಾವುದೇ ಗೀರುಗಳನ್ನು ಹೊಂದಿರುವುದಿಲ್ಲ. ಇದರ ಗಾಜಿನ ಪದರವು ಉತ್ತಮ ಬ್ರೈಟ್‌ನೆಸ್‌ ಮತ್ತು ಮೃದುವಾದ ಸ್ಪರ್ಶದ ಅನುಭವವನ್ನು ನೀಡಲಿದೆ. ಗೊರಿಲ್ಲಾ ಗ್ಲಾಸ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಕಾರ್ಯಗಳಿಗೆ ಪ್ರಾಥಮಿಕ ಇನ್‌ಪುಟ್ ಮತ್ತು ಔಟ್‌ಪುಟ್ ಘಟಕವಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಇದನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್‌ ಸ್ಕ್ರೀನ್‌ ಹಾನಿ-ಮುಕ್ತವಾಗಿ ಉಳಿಯುವುದಕ್ಕೆ ಸಹಾಯಮಾಡಲಿದೆ.

ಗೊರಿಲ್ಲಾ ಗ್ಲಾಸ್‌ ಅನ್ನು ಹೇಗೆ ತಯಾರಿಸುತ್ತಾರೆ?

ಗೊರಿಲ್ಲಾ ಗ್ಲಾಸ್‌ ಅನ್ನು ಹೇಗೆ ತಯಾರಿಸುತ್ತಾರೆ?

ಟಫನ್ಡ್ ಗ್ಲಾಸ್ ಎಂಬುದು ಒಂದು ರೀತಿಯ ಗಾಜಿನಾಗಿದ್ದು, ಇದು ಗಟ್ಟಿಯಾದ ಗಾಜು ಆಗಿರುತ್ತದೆ. ಇದನ್ನು ಐಯಾನ್ ಎಕ್ಸ್‌ಚೇಂಜ್ ಎಂಬ ಪ್ರಕ್ರಿಯೆಯನ್ನು ಬಳಸಿ, ಸೋಡಿಯಂ ಅಯಾನುಗಳನ್ನು ಒಳಗೊಂಡಿರುವ ಗಾಜನ್ನು ದ್ರವ ಪೊಟ್ಯಾಸಿಯಮ್ ಉಪ್ಪಿನ ಬಾತ್‌ನಲ್ಲಿ ಮುಳುಗಿಸಲಾಗುತ್ತದೆ. ಸುಮಾರು 400 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಬಿಸಿ ಮಾಡಿದಾಗ ಪೊಟ್ಯಾಸಿಯಮ್ ಅಯಾನುಗಳು ಸೋಡಿಯಂ ಅಯಾನುಗಳನ್ನು ಸ್ಥಳಾಂತರಿಸುತ್ತವೆ. ಇದು ಗಾಜನ್ನು ಮೊದಲಿಗಿಂತ ಹೆಚ್ಚು ಗಟ್ಟಿಯಾಗಿಸುತ್ತದೆ.

ಗೊರಿಲ್ಲಾ ಗ್ಲಾಸ್‌ ವಿಕ್ಟಸ್‌ 2 ವಿಶೇಷತೆ ಏನು?

ಗೊರಿಲ್ಲಾ ಗ್ಲಾಸ್‌ ವಿಕ್ಟಸ್‌ 2 ವಿಶೇಷತೆ ಏನು?

ಗೊರಿಲ್ಲಾ ಗ್ಲಾಸ್‌ನ ಮೂಲ ಆವೃತ್ತಿಗಿಂತ ವಿಕ್ಟಸ್ 2 ಹೆಚ್ಚು ಸ್ಟ್ಯಾಂಡರ್ಡ್‌ ಆಗಿದೆ. ಕಾರ್ನಿಂಗ್ ಗ್ಲಾಸ್‌ ಅನ್ನು ಬಲಪಡಿಸಲು ಹೊಸ ಅಪ್ಡೇಟ್‌ ವಿಧಾನಗಳನ್ನು ಬಳಸಲಾಗಿದೆ. ಆದರಿಂದ ಈ ಗ್ಲಾಸ್‌ ಹೆಚ್ಚಿನ ಭಾರ ಒತ್ತಡ ಬಿದ್ದರೂ ಕೂಡ ಸ್ಕ್ರೀನ್‌ಗೆ ಏನು ಆಗದಂತೆ ತಡೆಯಲಿದೆ.

ಗೊರಿಲ್ಲಾ

ಇನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್‌ ಅನ್ನು ಕಾಣಬಹುದು. ಅದೇ ರೀತಿ ಆಪಲ್‌ ವಾಚ್‌ನಲ್ಲಿ ಡ್ರ್ಯಾಗನ್‌ಟೈಲ್ ಗ್ಲಾಸ್ ಅಥವಾ ಸಪೈರ್‌ ಗ್ಲಾಸ್‌ ಅನ್ನು ಕಾಣಬಹುದು. Sapphire ಗ್ಲಾಸ್ ತ್ರಿಕೋನದಲ್ಲಿ ಇರಿಸಲಾದ ಅಲ್ಯೂಮಿನಿಯಂ ಆಕ್ಸೈಡ್ ಅಣುಗಳನ್ನು ತಯಾರಿಸಲು ವಿಭಿನ್ನ ರಾಸಾಯನಿಕ ಪ್ರಕ್ರಿಯೆಯನ್ನು ಬಳಸುತ್ತದೆ. ಗೊರಿಲ್ಲಾ ಗ್ಲಾಸ್‌ಗೆ ಹೋಲಿಸಿದರೆ ಇದು ಗೀರುಗಳ ವಿರುದ್ಧ ಬಲವಾಗಿರುತ್ತದೆ. ಆದರೆ ಇದು ಗೊರಿಲ್ಲಾ ಗ್ಲಾಸ್‌ಗಿಂತ ಹೆಚ್ಚು ದುಬಾರಿಯಾಗಿದೆ. ಅದರಲ್ಲೂ ಗೊರಿಲ್ಲಾ ಗ್ಲಾಸ್‌ಗಿಂತ Sapphire ಗ್ಲಾಸ್‌ ಉತ್ಪಾದನೆಗೆ ಹತ್ತು ಪಟ್ಟು ಹೆಚ್ಚು ದುಬಾರಿಯಾಗಿರುತ್ತದೆ ಎಂದು ಹೇಳಲಾಗಿದೆ.

Best Mobiles in India

English summary
How does it work Gorilla Glass? your smartphone display safe?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X