'ಗೂಗಲ್ ಮ್ಯಾಪ್ಸ್'ನಲ್ಲಿ ನೀವು ಹಣ ಗಳಿಸಬಹುದು ಎಂಬುದು ನಿಮಗೆ ಗೊತ್ತಾ?!

|

ಗೂಗಲ್ ಮ್ಯಾಪ್ಸ್ ಬಳಸದೇ ಒಂದು ದಾರಿ ಅಥವಾ ವಿಳಾಸವನ್ನು ಕಂಡುಕೊಳ್ಳುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಎಲ್ಲೆಡೆ ಇದೆ. ಹಾಗಾಗಿಯೇ, ಪ್ರತಿಯೋರ್ವ ಸ್ಮಾರ್ಟ್‌ಫೋನ್ ಬಳಕೆದಾರನ ಅಚ್ಚುಮೆಚ್ಚಿನ ದಾರಿಹೋಕನಾಗಿ ಗೂಗಲ್ ಮ್ಯಾಪ್ಸ್ ಬಳಕೆಯಾಗುತ್ತಿದೆ. ಆದರೆ, ಈ ವರೆಗೂ ಎಲ್ಲರಿಗೂ ಗೂಗಲ್ ಮ್ಯಾಪ್ಸ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿಲ್ಲ.

ಹೌದು, ನಿಮಗೆ ಗೊತ್ತಾ? ಗೂಗಲ್ ಮ್ಯಾಪ್ಸ್ ಮತ್ತಷ್ಟು ವೈವಿಧ್ಯಮಯ ಫೀಚರ್‌ಗಳನ್ನು ತನ್ನಲ್ಲಿ ಇರಿಸಿಕೊಂಡಿದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ದಿಕ್ಕನ್ನು ತೋರಿಸುವ ಗೂಗಲ್ ಮ್ಯಾಪ್ಸ್ ಕೇವಲ ದಾರಿ ತೋರಿಸುವುದಲ್ಲದೇ, ಹಲವು ಕೆಲಸಗಳನ್ನು ಮಾಡುತ್ತಿದೆ. ಇಂತಹ ಅತ್ಯುನ್ನತ ಫೀಚರ್‌ಗಳು ನಿಜಕ್ಕೂ ನಿಮ್ಮನ್ನು ಆಶ್ಚರ್ಯ ಚಕಿತಗೊಳಿಸಲಿವೆ.

'ಗೂಗಲ್ ಮ್ಯಾಪ್ಸ್'ನಲ್ಲಿ ನೀವು ಹಣ ಗಳಿಸಬಹುದು ಎಂಬುದು ನಿಮಗೆ ಗೊತ್ತಾ?!

ಗೂಗಲ್ ತನ್ನ ಆಪ್‌ನಲ್ಲಿ ದಿನಕ್ಕೊಂದು ಅಪ್‌ಡೇಟ್ ಮಾಡುತ್ತಾ ಇದ್ದರೂ, ಹೆಚ್ಚಿನ ಮಾಹಿತಿಯ ಕೊರತೆಯಿಂದ ಹೊಸ ಫೀಚರ್ಸ್‌ಗಳನ್ನು ನಾವೆಲ್ಲಾ ಬಳಕೆ ಮಾಡೋದೆ ಇಲ್ಲ. ಅಂತಹ ನಿಮ್ಮ ಜೀವನವನ್ನು ಮತ್ತಷ್ಟು ಸರಳಗೊಳಿಸುವ ಫೀಚರ್ಸ್‌ಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಅವು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

1. ಪಾರ್ಕಿಂಗ್ ಸ್ಥಳವನ್ನು ಉಳಿಸಿ

1. ಪಾರ್ಕಿಂಗ್ ಸ್ಥಳವನ್ನು ಉಳಿಸಿ

ನಿಮಗೆ ಪಾರ್ಕಿಂಗ್ ಸ್ಥಲ ಮರೆಯುವ ಅಭ್ಯಾಸ ಇದ್ದರೆ ಇನ್ಮುಂದೆ ಚಿಂತಿಸುವ ಅಗತ್ಯವಿಲ್ಲ. ಯಾಕೆಂದರೆ ಗೂಗಲ್ ಮ್ಯಾಪ್ ಬಳಸಿಕೊಂಡು ನಿಮ್ಮ ಪಾರ್ಕಿಂಗ್ ಸ್ಥಳವನ್ನು ಪಿನ್ ಮಾಡಿದರೆ ಸಾಕು. ಗೂಗಲ್ ಮ್ಯಾಪ್ ಲೋಕೆಷನ್ ಸೆಟ್ಟಿಂಗ್ಸ್‌ ಆಧಾರದಲ್ಲಿ ಪಾರ್ಕಿಂಗ್ ಲೋಕೆಷನ್‌ನ್ನು ಗುರುತಿಸುತ್ತದೆ. ವಾಹನವನ್ನು ನಿಲ್ಲಿಸಿದ ನಂತರ ನೀಲಿ ಚುಕ್ಕೆಯ ಮೇಲೆ ಟ್ಯಾಪ್ ಮಾಡಿ ಸೇವ್ ಯುವರ್ ಪಾರ್ಕಿಂಗ್ ಆಯ್ಕೆಯನ್ನು ಆಯ್ದುಕೊಳ್ಳಿ. ಅದಲ್ಲದೇ ಗೂಗಲ್ ಅಸಿಸ್ಟಂಟ್‌ಗೂ ಪಾರ್ಕಿಂಗ್ ಲೋಕೆಷನ್ ಉಳಿಸಲು ಹೇಳುವ ಆಯ್ಕೆ ನೀಡಲಾಗಿದೆ.

2. ಅನೇಕ ಸ್ಥಳಗಳಿಗೆ ಹೋಗುವ ಆಯ್ಕೆ ಪಡೆಯಿರಿ

2. ಅನೇಕ ಸ್ಥಳಗಳಿಗೆ ಹೋಗುವ ಆಯ್ಕೆ ಪಡೆಯಿರಿ

ನೀವು ಆಫೀಸ್‌ಗೆ ಹೋಗುವಾಗ ನಿಮ್ಮ ಮಗುವನ್ನು ಶಾಲೆಗೆ ಡ್ರಾಪ್ ಮಾಡಬೇಕಾಗಿರುತ್ತದೆ. ಆಗ ನೀವು ಅನೇಕ ಸ್ಥಳಗಳನ್ನು ಸೇರಿಸಿ ಪ್ರಯಾಣವನ್ನು ಒಂದೇ ಬಾರಿಗೆ ಆರಂಭಿಸಬಹುದಾಗಿದೆ. ಈ ಫೀಚರ್ ಬಳಸಲು ಎ ಯಿಂದ ಬಿ ವರೆಗೆ ಡೈರೆಕ್ಷನ್ ನಿಗದಿಪಡಿಸಿ, ನಂತರ ಬಲ ಭಾಗದಲ್ಲಿ ಮೇಲೆ ಇರುವ 3 ಚುಕ್ಕೆಯ ಚಿಹ್ನೆಯನ್ನು ಆಯ್ಕೆ ಮಾಡಿಕೊಂಡು ಅನೇಕ ಸ್ಥಳಗಳನ್ನು ಸೇರಿಸಬಹುದು.

3. ನಿಮ್ಮದೇ ಆದ ಗೂಗಲ್ ಮ್ಯಾಪ್ ತಯಾರಿಸಿ

3. ನಿಮ್ಮದೇ ಆದ ಗೂಗಲ್ ಮ್ಯಾಪ್ ತಯಾರಿಸಿ

ನಿಮ್ಮ ಪ್ರಯಾಣದ ಪ್ಲಾನ್‌ನ್ನು ಸ್ನೇಹಿತರಿಗೆ ಮತ್ತು ಕುಟುಂಬಕ್ಕೆ ಹಂಚಿಕೊಳ್ಳುವಾಗ ಈ ಫೀಚರ್ ಬಹಳಷ್ಟು ಉಪಯುಕ್ತವಾಗುತ್ತದೆ. ನಿಮ್ಮದೇ ಆದ ಮ್ಯಾಪ್ ಸಿದ್ಧಪಡಿಸಿಕೊಂಡು ಅದರಲ್ಲಿ ಬೇಕಾಗುವ ಮಾಹಿತಿ, ಆಸಕ್ತಿ, ಡೈರೆಕ್ಷನ್, ಮಾರ್ಗಗಳನ್ನು ಸೇರಿಸಬಹುದಾಗಿದೆ. ನಿಮ್ಮದೇ ಆದ ಗೂಗಲ್ ಮ್ಯಾಪ್ ತಯಾರಿಸಿಕೊಳ್ಳಲು ಗೂಗಲ್ ಅಕೌಂಟ್‌ಗೆ ಸೈನ್ ಇನ್ ಆಗಬೇಕು. ಅಲ್ಲೊಂದು ಟ್ಯುಟೋರಿಯಲ್ ಬರುತ್ತದೆ. ಅದನ್ನು ನೋಡಿಕೊಂಡು ನಿಮ್ಮದೇ ಮ್ಯಾಪ್ ತಯಾರಿಸಿಕೊಳ್ಳಿ.

4. ಚಾಲನೆ ಮಾಡುವಾಗ ವಾಯ್ಸ್‌ ಕಮಾಂಡ್ ಬಳಸಿ

4. ಚಾಲನೆ ಮಾಡುವಾಗ ವಾಯ್ಸ್‌ ಕಮಾಂಡ್ ಬಳಸಿ

ಚಾಲನೆ ಮಾಡುವಾಗ ವಾಯ್ಸ್‌ ಕಮಾಂಡ್ ಬಳಸುವ ಆಯ್ಕೆ ನಿಮಗೆ ಭದ್ರತೆಯನ್ನು ನೀಡುತ್ತದೆ. ಇಲ್ಲಿ ಬಹಳಷ್ಟು ವಾಯ್ಸ್‌ ಕಮಾಂಡ್ ಆಯ್ಕೆಯೊಂದಿಗೆ ಗೂಗಲ್ ಮ್ಯಾಪ್ಸ್‌ ಬಳಸಬಹುದಾಗಿದೆ. ನೀವು ಸುಲಭವಾಗಿ ಮೈಕ್ರೊಪೋನ್ ಐಕಾನ್ ಮೇಲೆ ಕ್ಲಿಕ್ ಮಾಡಿ ಕಮಾಂಡ್ ಹೇಳಬಹುದು.

5. ನಿಮ್ಮ ಇಷ್ಟದ ಸ್ಥಳಗಳನ್ನು ಗುರುತಿಸಿ

5. ನಿಮ್ಮ ಇಷ್ಟದ ಸ್ಥಳಗಳನ್ನು ಗುರುತಿಸಿ

ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸ್ಥಳಗಳನ್ನು ಗುರುತಿಸಿಟ್ಟುಕೊಳ್ಳಬಹುದು. ನಿಮ್ಮ ಫ್ರೇಂಡ್ ಹೋಮ್, ರೆಸ್ಟೋರೆಂಟ್ ಮುಂತಾದ ಸ್ಥಳಗಳನ್ನು ಗೂಗಲ್ ಮ್ಯಾಪ್‌ನಲ್ಲಿ ಲೇಬಲ್ ಮಾಡಿ ಇಟ್ಟುಕೊಳ್ಳಬಹುದು. ಇದು ಪ್ರತಿ ಬಾರಿ ವಿವರವಾದ ವಿಳಾಸವನ್ನು ಟೈಪ್ ಮಾಡುವುದನ್ನು ತಪ್ಪಿಸುತ್ತದೆ. ಲೋಕೆಷನ್ ಸರ್ಚ್‌ನಲ್ಲಿ ಅಡ್ರೆಸ್ ಹಾಕುವ ಮೂಲಕ ಅಥವಾ ಸ್ಕ್ರೀನ್ ಮೇಲೆ ಲಾಂಗ್ ಪ್ರೆಸ್ ಮಾಡುವ ಮೂಲಕ ಮ್ಯಾಪ್‌ನಲ್ಲಿ ಪಿನ್ ಮಾಡಬಹುದಾಗಿದೆ.

6. ಆಫ್‌ಲೈನ್ ಮ್ಯಾಪ್ಸ್‌

6. ಆಫ್‌ಲೈನ್ ಮ್ಯಾಪ್ಸ್‌

ಗೂಗಲ್ ಮ್ಯಾಪ್‌ನಿಂದ ಮತ್ತೊಂದು ಉಪಯೋಗವೆನೆಂದರೆ ನೀವು ಮ್ಯಾಪ್‌ನ ಒಂದು ಭಾಗವನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಇದರ ಮೂಲಕ ನಿಮ್ಮ ಹಳೆಯ ಸ್ಮಾರ್ಟ್‌ಪೋನ್ ಅನ್ನು ಜಿಪಿಎಸ್‌ ಡಿವೈಸ್ ಆಗಿ ಬೈಕ್ ಮತ್ತು ಕಾರ್‌ಗಳಲ್ಲಿ ಬಳಸಬಹುದು. ಆಫ್‌ಲೈನ್ ಮ್ಯಾಪ್ಸ್‌ ಆಯ್ಕೆಯಲ್ಲಿ ಆಪ್ ಹಾರಿಜಂಟಲ್ ಸೆಲೆಕ್ಷನ್ ಟೂಲ್ ನೀಡುತ್ತದೆ ಮತ್ತು ಎಷ್ಟು ಸ್ಥಳಾವಕಾಶ ಬೇಕು ಎಂಬುದನ್ನು ಕೇಳುತ್ತದೆ. ವೈ-ಫೈ ಸಂಪರ್ಕವಾದಾಗ ಸ್ವಯಂಚಾಲಿತವಾಗಿ ಡೌನ್‌ಲೋಡ್ ಮಾಡಿರುವ ಮ್ಯಾಪ್ ಅಪ್‌ಡೇಟ್‌ ಆಗುತ್ತದೆ.

7. ನಿಮ್ಮ ಡಿಫಾಲ್ಟ್‌ ವಿಳಾಸ ಉಳಿಸಿ

7. ನಿಮ್ಮ ಡಿಫಾಲ್ಟ್‌ ವಿಳಾಸ ಉಳಿಸಿ

ನೀವು ಆಫ್‌ಲೈನ್ ಮ್ಯಾಪ್ ಡೌನ್‌ಲೋಡ್ ಮಾಡಿದ ನಂತರ ನಿಮ್ಮ ಮನೆ ಮತ್ತು ಕಚೇರಿ ವಿಳಾಸವನ್ನು ಡಿಫಾಲ್ಟ್‌ ಆಗಿ ಸೇರಿಸಿ ಉಪಯೋಗ ಮಾಡಬಹುದು. ಇದರಿಂದ ನ್ಯಾವೆಗೇಷನ್ ಬೇಗ ಆರಂಭವಾಗುತ್ತದೆ. ಮತ್ತು ನೀವು ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ ನೀವು ಹೋಗುವ ಮಾರ್ಗದ ಟ್ರಾಫಿಕ್ ಸೂಚನೆಯನ್ನು ತಿಳಿಸುತ್ತದೆ.

8. ನಿಮ್ಮ ಲೋಕೆಷನ್ ಹಂಚಿಕೊಳ್ಳಿ

8. ನಿಮ್ಮ ಲೋಕೆಷನ್ ಹಂಚಿಕೊಳ್ಳಿ

ನಿಮ್ಮ ಸ್ನೇಹಿತರು ನಿಮ್ಮ ಸ್ಥಳವನ್ನು ಹುಡುಕುವುದಕ್ಕೆ ಬಹಳಷ್ಟು ಸಲ ಪ್ರಯಾಸ ಪಡುತ್ತಾರೆ. ಅದಕ್ಕೋಸ್ಕರ ಗೂಗಲ್ ಲೋಕೆಷನ್ ಶೇರಿಂಗ್ ಫೀಚರ್ ಪರಿಚಯಿಸಿದ್ದು, ಇದು ರಿಯಲ್ ಟೈಮ್ ಲೋಕೆಷನ್‌ನ್ನು ನಿಗದಿತ ಅವಧಿಯಲ್ಲಿ ಗೂಗಲ್ ಮ್ಯಾಪ್ ಮೂಲಕ ಶೇರ್ ಮಾಡಬಹುದಾಗಿದೆ. ಈ ಫೀಚರ್ ಸ್ನೇಹಿತರಿಗೆ ನಾನಿಲ್ಲೇ ಇದ್ದಿನಿ ಎಂದು ಹೇಳುವುದಕ್ಕೆ ಬಹಳಷ್ಟು ಉಪಯುಕ್ತವಾಗುತ್ತದೆ.

9. ನಿಮಗೆ ಹತ್ತಿರವಾದ ಸ್ಥಳ ಮತ್ತು ವ್ಯಾಪಾರ

9. ನಿಮಗೆ ಹತ್ತಿರವಾದ ಸ್ಥಳ ಮತ್ತು ವ್ಯಾಪಾರ

ನಿಮ್ಮ ಮನೆ ಅಡುಗೆ ಮನೆಯಲ್ಲಿ ಸಾಮಗ್ರಿ ಇರುವುದಿಲ್ಲ. ಆಗ ಮನೆಗ್ಯಾರೋ ಹತ್ತಿರದ ಸಂಬಂಧಿ ಬರುತ್ತೇನೆ ಎಂದು ತಿಳಿಸುತ್ತಾರೆ. ಆಗ ನೀವೇನಾದ್ರೂ ತರಲು ಹೊರಹೋಗುತ್ತಿರಿ, ನಿಮ್ಮ ಬೈಕ್‌ನಲ್ಲಿ ಪೆಟ್ರೋಲ್ ಖಾಲಿಯಾಗಿ ದಾರಿ ಮಧ್ಯದಲ್ಲಿ ನಿಲ್ಲುತ್ತದೆ. ಆಗ ನಿಮ್ಮತ್ರ ಗೂಗಲ್ ಮ್ಯಾಪ್ ಇದ್ರೇ ನಿಮ್ಮ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಗುತ್ತದೆ. ಹತ್ತಿರದಲ್ಲಿ ಸಿಗುವ ಪ್ರಮುಖ ಸ್ಥಳ ಮತ್ತು ವ್ಯಾಪಾರಗಳನ್ನು ಗೂಗಲ್ ಮ್ಯಾಪ್ ತಿಳಿಸುತ್ತದೆ.

10. ಒಂದೇ ಕೈಯಲ್ಲಿ ಜೂಮ್ ಮಾಡಬಹುದು

10. ಒಂದೇ ಕೈಯಲ್ಲಿ ಜೂಮ್ ಮಾಡಬಹುದು

ನ್ಯಾವಿಗೇಟ್ ಆಗುತ್ತಿರುವಾಗ ಮ್ಯಾಪ್‌ನಲ್ಲಿ ಜೂಮ್ ಮಾಡುವುಸು ಪ್ರಯಾಸದ ಕೆಲಸವಾಗಿತ್ತು. ಡಬಲ್ ಟ್ಯಾಪ್ ಮಾಡಿ ಜೂಮ್ ಮಾಡಬೇಕಾಗಿತ್ತು. ಮತ್ತು ನಿಮ್ಮ ಬೆರಳುಗಳು ಸ್ಕ್ರೀನ್ ಮೇಲೆ ಇರುವಂತೆ ಜಾಗೃತಿವಹಿಸಬೇಕಾಗಿತ್ತು. ಆದರೆ, ಈಗ ಮ್ಯಾನುವಲ್ ಆಗಿ ಜೂಮ್ ಇನ್ ಮತ್ತು ಜೂಮ್ ಔಟ್ ಮಾಡಬಹುದು.

11. ಬಸ್ ಮತ್ತು ರೈಲ್ವೇ ಸಮಯ ನೋಡಿ

11. ಬಸ್ ಮತ್ತು ರೈಲ್ವೇ ಸಮಯ ನೋಡಿ

ಭಾರತದಲ್ಲಿ ಗೂಗಲ್ ಮ್ಯಾಪ್ಸ್‌ ನಿಮ್ಮ ನಗರದಲ್ಲಿ ಕಾರ್ಯನಿರ್ವಹಿಸುವ ಬಸ್ ಮತ್ತು ರೈಲ್ವೇ ಸಮಯಗಳನ್ನು ತಿಳಿಸುತ್ತದೆ. ನೀವು ಹೋಗುವ ಮಾರ್ಗದಲ್ಲಿ ಸಾರ್ವಜನಿಕ ಸಾರಿಗೆಯನ್ನು ತೋರಿಸುವ ಆಯ್ಕೆ ನೀಡಿದರೆ ಸಾಕು. ಬಸ್ ಮಾರ್ಗದಲ್ಲಿ ಯಾವ ನಂಬರ್ ಬಸ್ ಎಲ್ಲಿಗೋಗುತ್ತೇ, ಎಷ್ಟು ನಿಲುಗಡೆ ಇವೆ ಎಂಬುದನ್ನು ತಿಳಿಸುತ್ತದೆ.

12. ನಿಮ್ಮ ಚಲನೆಯನ್ನು ಟ್ರಾಕ್ ಮಾಡಿ

12. ನಿಮ್ಮ ಚಲನೆಯನ್ನು ಟ್ರಾಕ್ ಮಾಡಿ

ಹಿಂದೆ ನೀವ್ಯಾವುದೋ ಸ್ಥಳಕ್ಕೆ ಭೇಟಿ ನೀಡಿರುತ್ತಿರಿ. ಆದರೆ, ಆ ಸ್ಥಳದ ನೆನಪು ನಿಮಗೆ ಇರುವುದಿಲ್ಲ.ಚಿಂತೆ ಮಾಡಬೇಡಿ ಗೂಗಲ್ ಮ್ಯಾಪ್ ನಿಮ್ಮ ಪ್ರತಿದಿನದ ಚಲನೆಯನ್ನು ಹಿಸ್ಟರಿಯಲ್ಲಿ ಟ್ರಾಕ್ ಮಾಡಿಟ್ಟಿರುತ್ತೇ. ನೀವು ಟೈಮ್ ಲೈನ್ ಆಯ್ಕೆಯನ್ನು ಹೊಂದಿದ್ದು, ಅದರಲ್ಲಿ ನೀವು ಹೋದ ಮಾರ್ಗ, ನೀವು ಭೇಟಿ ನೀಡಿದ ಸ್ಥಳಗಳ ಬಗ್ಗೆ ಮಾಹಿತಿ ಹೊಂದಿರುತ್ತೆ.

13. ಸ್ಥಳೀಯ ಮಾರ್ಗದರ್ಶಕನಾಗಿ ಹಣ ಗಳಿಸಿ

13. ಸ್ಥಳೀಯ ಮಾರ್ಗದರ್ಶಕನಾಗಿ ಹಣ ಗಳಿಸಿ

ಗೂಗಲ್ ಮ್ಯಾಪ್‌ನಲ್ಲಿ ಗೂಗಲ್ ರಿವಾರ್ಡ್ಸ್ ಎಂಬ ಆಯ್ಕೆ ನೀಡಿದ್ದು, ಬಿಡುವಿಲ್ಲದ ಸಮಯದಲ್ಲಿಯೂ ಸರ್ವೇಗಳಿಗೆ ಪ್ರತಿಕ್ರಿಯೆ ನೀಡುತ್ತಾರೋ ಅವರಿಗೆ ಗೂಗಲ್ ಪಾವತಿಸುತ್ತದೆ. ಇದನ್ನೇ ಗೂಗಲ್ ಲೋಕಲ್ ಗೈಡ್ಸ್‌ ಎಂದು ಕರೆಯುತ್ತದೆ. ಈ ರಿವಾರ್ಡ್ ಪ್ರೋಗ್ರಾಂಗೆ ಸೈನ್ ಅಪ್ ಆಗಿ ನೀವಿರುವ ಸ್ಥಳದ ಕುರಿತು ಮಾಹಿತಿ ಸೇರಿಸಬೇಕು. ಅಂಗಡಿಗಳು, ರೆಸ್ಟೋರೆಂಟ್‌ಗಳು, ವ್ಯಾಪಾರದ ಬಗ್ಗೆ ಮಾಹಿತಿ ಮತ್ತು ಚಿತ್ರಗಳನ್ನು ಹಂಚಿಕೊಂಡು ಹಣ ಗಳಿಸಬಹುದು.

Best Mobiles in India

English summary
Google acquired Waze five years ago but the majority of features weren't implemented into Google Maps like interactions between drivers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X