ವಾಟ್ಸ್ಆಪ್ ಹೊಸ ಆಪ್ ಡೇಟ್: ಮಿಸ್ ಮಾಡಲೇ ಬೇಡಿ…!

|
WhatsApp group voice and video calling is now live - KANNADA GIZBOT

ವಾಟ್ಸ್ ಆಪ್ ಬಳಕೆದಾರರು ಬಹಳ ದಿನಗಳಿಂದ ಕಾಯುತ್ತಿದ್ದ ಆಪ್ ಡೇಟ್ ವೊಂದು ಲಭ್ಯವಾಗಿದ್ದು, ಬಳಕೆದಾರರಿಗೂ ಸಾಕಷ್ಟು ಹೊಸ ಆಯ್ಕೆಯನ್ನು ನೀಡುರುವ ಫೇಸ್ ಬುಕ್ ಒಡೆತನದ ವಾಟ್ಸ್ ಆಪ್, ಗ್ರೂಪ್ ವಿಡಿಯೋ ಕಾಲ್ ಆಯ್ಕೆಯನ್ನು ತನ್ನ ಬಳಕೆದಾರರಿಗೆ ನೀಡಿದೆ. ಇದರಿಂದಾಗಿ ವಾಟ್ಸ್ಆಪ್ ಬಳಕೆಯೂ ಸಾಕಷ್ಟು ಸುಲಭವಾಗಿರುವುದಲ್ಲದೇ, ಇನ್ನುಷ್ಟು ಹೊಸ ಮಂದಿಯನ್ನು ವಾಟ್ಸ್ ಆಪ್ ಸೆಳೆಯುವಲ್ಲಿ ಯಶಸ್ವಿಯೂ ಆಗಲಿದೆ.

ವಾಟ್ಸ್ಆಪ್ ಹೊಸ ಆಪ್ ಡೇಟ್: ಮಿಸ್ ಮಾಡಲೇ ಬೇಡಿ…!

ಈಗಾಗಲೇ ವಾಟ್ಸ್ಆಪ್ ಬಳಕೆದಾರರ ಸಂಖ್ಯೆಯೂ ಬಿಲಿಯನ್ ಸಂಖ್ಯೆಯನ್ನು ತಲುಪಿದ್ದು, ಭಾರತದಲ್ಲಿಯೇ 200 ಮಿಲಿಯನ್ ಗೂ ಅಧಿಕ ಮಂದಿ ವಾಟ್ಸ್ಆಪ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ವಾಟ್ಸ್ ಆಪ್ ತನ್ನ ಬಳಕೆದಾರರು ಬಹು ದಿನಗಳಿಂದ ಬೇಡಿಕೆಯಲ್ಲಿ ಇಟ್ಟಿದ್ದ ಗ್ರೂಪ್ ವಿಡಿಯೋ ಕಾಲ್ ಆಯ್ಕೆಯನ್ನು ಕೊನೆಗೂ ನೀಡಿದೆ. ಇದರಿಂದಾಗಿ ವಿಡಿಯೋ ಕಾಲ್ ಗಾಗಿಯೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಹಲವು ಆಪ್ ಗಳು ಹೊಡೆತ ತಿನ್ನುವ ಸಾಧ್ಯತೆ ಇದೆ.

ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ

ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ

ವಾಟ್ಸ್ಆಪ್ ಹೊಸದಾಗಿ ನೀಡಲು ಮುಂದಾಗಿರುವ ಗ್ರೂಪ್ ವಿಡಿಯೋ ಕಾಲ್ ಮಾಡುವ ಅವಕಾಶವೂ ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ದೊರೆಯುತ್ತಿದೆ ಎನ್ನಲಾಗಿದೆ. ಇದು ವಾಯ್ಸ್ ಕರೆ ಮತ್ತು ವಿಡಿಯೋ ಕರೆಗಳಿಗೆ ಸಹಾಯ ಮಾಡಲಿದ್ದು, ಎರಡರಲ್ಲಿಯೂ ಗ್ರೂಪ್ ಕಾಲಿಂಗ್ ಮಾಡಬಹುದಾಗಿದೆ.

ಸದ್ಯಕ್ಕೆ ನಾಲ್ಕು ಜನ

ಸದ್ಯಕ್ಕೆ ನಾಲ್ಕು ಜನ

ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ನೀಡಿರುವ ಗ್ರೂಪ್ ವಿಡಿಯೋ ಕಾಲ್ ಮಾಡುವ ಆಯ್ಕೆಯಲ್ಲಿ ಸದ್ಯ ನಾಲ್ಕು ಮಂದಿ ಮಾತ್ರವೇ ಒಟ್ಟಾಗಿ ಕರೆಯನ್ನು ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯೂ ಅಧಿಕವಾಗುವ ಸಾಧ್ಯತೆ ಇದೆ. ಇದರಿಂದಾಗಿ ಬಳಕೆದಾರಿಗೆ ಹೊಸ ಅವಕಾಶ ಬಳಸಿಕೊಳ್ಳಲು ಹೆಚ್ಚಿನ ಸ್ವಾತಂತ್ರವು ದೊರೆಯಲಿದೆ.

ಮಾಡುವುದು ಹೇಗೆ..? ಮೊದಲಿಗೆ ಆಪ್ ಡೇಟ್ ಮಾಡಿ

ಮಾಡುವುದು ಹೇಗೆ..? ಮೊದಲಿಗೆ ಆಪ್ ಡೇಟ್ ಮಾಡಿ

ನೀವು ಈಗಲೇ ಗ್ರೂಪ್ ವಿಡಿಯೋ ಕಾಲ್ ಮಾಡುವ ಅವಕಾವನ್ನು ಪಡೆಯುವ ಸಲುವಾಗಿ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ವಾಟ್ಸ್ ಆಪ್ ಬಿಟಾ ಆವೃತ್ತಿಯಲ್ಲಿ ಆಪ್ ಡೇಟ್ ಮಾಡಿಕೊಳ್ಳಬೇಕಾಗಿದೆ. ಆಪ್ ಡೇಟ್ ಮಾಡಿಕೊಂಡರೆ ಮಾತ್ರವೇ ನಿಮಗೆ ಗ್ರೂಪ್ ಕರೆ ಮಾಡುವ ಅವಕಾಶವು ದೊರೆಯಲಿದೆ.

ನಾಲ್ಕು ಮಂದಿ

ನಾಲ್ಕು ಮಂದಿ

ಇದಲ್ಲದೇ ವಿಡಿಯೋ ಕಾಲಿಂಗ್ ನಲ್ಲಿ ಮೊದಲಿಗೆ ಇಬ್ಬರು ಶುರು ಮಾಡಿ ನಂತರದಲ್ಲಿ ಒದೊಂದಾಗಿ ನಾಲ್ಕು ಮಂದಿಯನ್ನು ಆಡ್ ಮಾಡಿಕೊಂಡು ವಿಡಿಯೋ ಕಾಲ್ ನಲ್ಲಿ ಭಾಗಿಯಾಗಬಹುದಾಗಿದೆ. ಒಟ್ಟಾಗಿ ಸಂಭಾಷಣೆಯನ್ನು ನಡೆಸಬಹುದಾಗಿದೆ.

ಇನ್ನಷ್ಟು ಸುಂದರ

ಇನ್ನಷ್ಟು ಸುಂದರ

ಈ ಹೊಸ ಆಯ್ಕೆಯನ್ನು ನೀಡಿರುವುದರಿಂದ ವಾಟ್ಸ್ಆಪ್ ಬಳಕೆಯೂ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಲಿದೆ. ಈಗಾಗಲೇ ವಾಟ್ಸ್ಆಪ್ ವಿಡಿಯೋ ಕಾಲಿಂಗ್ ಆಯ್ಕೆಯೂ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದೆ. ಇನ್ನು ಗ್ರೂಪ್ ಕಾಲಿಂಗ್ ನಿಂದ ವಿಡಿಯೋ ಕಾಲಿಂಗ್ ಬಳಕೆ ಮಾಡುವವರ ಸಂಖ್ಯೆಯೂ ಅಧಿಕವಾಗಲಿದೆ.

Best Mobiles in India

English summary
How to make group video calls on whatsapp? To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X