ಆಧಾರ್ ಕಾರ್ಡ್‌ನಲ್ಲಿ ಎಷ್ಟು ಬಾರಿ ಹೆಸರನ್ನು ತಿದ್ದುಪಡಿ ಮಾಡಬಹುದು ಗೊತ್ತಾ?

|

ಆಧಾರ್ ಕಾರ್ಡ್‌ ಭಾರತದ ಪ್ರಜೆಗಳಿಗೆ UIDAI ನೀಡಿದ ಪ್ರಮುಖ ಗುರುತಿಸಿನ ಪುರಾವೆಯಾಗಿದೆ. ಆಧಾರ್ ಕಾರ್ಡ್ 12 ಅಂಕಿಯ ಗುರುತಿನ ಸಂಖ್ಯೆಯಾಗಿದ್ದು, ಸರ್ಕಾರದ ಸವಲತ್ತುಗಳನ್ನು ಪಡೆಯಲು ಅಗತ್ಯವಾಗಿದೆ. ಇನ್ನು ಆಧಾರ್‌ ಕಾರ್ಡ್‌ನಲ್ಲಿರುವ ಸಂಖ್ಯೆಯನ್ನು ಬದಲಾಯಿಸಲು ಸಾಧ್ಯವಿಲ್ಲ, ಅದಾಗ್ಯೂ, ಜನರು ಹೆಸರು, ಮೊಬೈಲ್‌ ಸಂಖ್ಯೆ, ವಿಳಾಸಗಳಂತಹ ಮಾಹಿತಿ ತಪ್ಪಾಗಿದ್ದರೆ, ಸರಿ ಮಾಡಿಕೊಳ್ಳಲು ಅವಕಾಶ ಇದೆ. ಆದ್ರೆ ಹೀಗೆ ಎಷ್ಟು ಸಲ ಆಧಾರ್ ಕಾರ್ಡ್‌ ಅಪ್‌ಡೇಟ್‌ ಮಾಡಲು ಸಾಧ್ಯ ಎಂಬುದು ನಿಮಗೆ ಗೊತ್ತಾ?

ಆಧಾರ್ ಕಾರ್ಡ್‌

ಹೌದು, ಆಧಾರ್ ಕಾರ್ಡ್‌ (aadhar card) ಪ್ರಮುಖ ಗುರುತಿನ ಪುರಾವೆ ಆಗಿದ್ದು, ತಪ್ಪಾದ ಮಾಹಿತಿ ಅಪ್‌ಡೇಟ್‌ ಮಾಡಲು ಸಹ ಆಯ್ಕೆ ನೀಡಲಾಗಿದೆ. ಆದರೆ ಆಧಾರ್ ಕಾರ್ಡ್‌ನಲ್ಲಿ ಹೆಸರನ್ನು, ಮೊಬೈಲ್‌ ನಂಬರ್‌ ಅನ್ನು, ವಿಳಾಸವನ್ನು ಹೀಗೆ ಎಷ್ಟು ಬಾರಿ ಅಪ್‌ಡೇಟ್‌ ಮಾಡಬಹುದು ಎನ್ನುವ ಬಗ್ಗೆ ನಿಮಗೆ ಕುತೂಹಲವಿದೆಯಾ? ಹಾಗಾದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನ ಓದಿರಿ.

ಮೊಬೈಲ್ ಸಂಖ್ಯೆ

ಆಧಾರ್ ಆನ್‌ಲೈನ್ ಸೇವೆಗಳನ್ನು ಪ್ರವೇಶಿಸಲು, ನೋಂದಾಯಿತ ಮೊಬೈಲ್ ಸಂಖ್ಯೆಯ ಅಗತ್ಯವಿದೆ. ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಅಪ್‌ಡೇಟ್‌ ಮಾಡಲಾಗುವುದಿಲ್ಲ. ಒಂದು ವೇಳೆ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್‌ ಮಾಡಲು, ಹತ್ತಿರದ ಆಧಾರ್ ಸೇವಾ ಕೇಂದ್ರ (ASK) ಅಥವಾ ಆಧಾರ್ ನೋಂದಣಿ ನವೀಕರಣ ಕೇಂದ್ರಕ್ಕೆ ಭೇಟಿ ನೀಡಬೇಕಿದೆ.

ಆಧಾರ್‌ ಕಾರ್ಡ್‌ನಲ್ಲಿ ಎಷ್ಟು ಬಾರಿ ಹೆಸರು ತಿದ್ದುಪಡಿ ಮಾಡಬಹುದು

ಆಧಾರ್‌ ಕಾರ್ಡ್‌ನಲ್ಲಿ ಎಷ್ಟು ಬಾರಿ ಹೆಸರು ತಿದ್ದುಪಡಿ ಮಾಡಬಹುದು

UIDAI ಕಚೇರಿಯ ಮೆಮೊ ಪ್ರಕಾರ ಆಧಾರ್ ಕಾರ್ಡ್ ಹೊಂದಿರುವವರು ಈಗ ಎರಡು ಬಾರಿ ಮಾತ್ರ ಆಧಾರ್ ಕಾರ್ಡ್‌ನಲ್ಲಿ ತನ್ನ ಹೆಸರನ್ನು ಬದಲಾಯಿಸಬಹುದು.

ಹುಟ್ಟಿದ ದಿನಾಂಕ ಅಪ್‌ಡೇಟ್‌

ಹುಟ್ಟಿದ ದಿನಾಂಕ ಅಪ್‌ಡೇಟ್‌

ನಿಮ್ಮ ಆಧಾರ್‌ನಲ್ಲಿ ನೀವು ಜನ್ಮ ದಿನಾಂಕವನ್ನು (DOB) ಒಮ್ಮೆ ಮಾತ್ರ ನವೀಕರಿಸಬಹುದು. ಮಿತಿಯನ್ನು ಮೀರಿ, ಇದನ್ನು ಅಸಾಧಾರಣ ಪ್ರಕರಣವಾಗಿ ತೆಗೆದುಕೊಳ್ಳಲಾಗುತ್ತದೆ.

ನವೀಕರಣ

UIDAI ಪ್ರಕಾರ, 'ಮಿತಿಗಿಂತ ಹೆಚ್ಚಿನ ಪ್ರಕರಣಗಳನ್ನು ವಿನಾಯಿತಿ ಪ್ರಕರಣವೆಂದು ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ನಿವಾಸಿಯು ಆಧಾರ್ ಕೇಂದ್ರದಲ್ಲಿ ನವೀಕರಣ ವಿನಂತಿಯನ್ನು ಹಾಕಬಹುದು ಮತ್ತು ನಂತರ ವಿನಾಯಿತಿಯ ಅಡಿಯಲ್ಲಿ ನವೀಕರಣದ ಅನುಮೋದನೆಗಾಗಿ UIDAI ನ ಸಂಬಂಧಪಟ್ಟ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಬಹುದು. ಅಧಿಕೃತ ಅಧಿಕಾರಿಗಳ ಸರಿಯಾದ ಪರಿಶ್ರಮದ ನಂತರ ವಿನಂತಿಯನ್ನು ಅನುಮೋದಿಸಲಾಗುತ್ತದೆ/ ತಿರಸ್ಕರಿಸಲಾಗುತ್ತದೆ. ನಿಮ್ಮ ಹೆಸರನ್ನು ಹೊಂದಿರುವ ಮಾನ್ಯವಾದ ಜನ್ಮ ದಿನಾಂಕ (DoB) ಪುರಾವೆಯೊಂದಿಗೆ ನಿಮ್ಮ ಆಧಾರ್‌ನಲ್ಲಿ ನೀವು ಜನ್ಮ ದಿನಾಂಕವನ್ನು (DoB) ನವೀಕರಿಸಬಹುದು'.

ನಿಮ್ಮ ಆಧಾರ್ ಕಾರ್ಡ್‌ ಸಂಖ್ಯೆ ದುರ್ಬಳಕೆ ಆಗದಂತೆ ತಡೆಯಲು ಈ ಕ್ರಮ ಅನುಸರಿಸುವುದು ಸೂಕ್ತ!

ನಿಮ್ಮ ಆಧಾರ್ ಕಾರ್ಡ್‌ ಸಂಖ್ಯೆ ದುರ್ಬಳಕೆ ಆಗದಂತೆ ತಡೆಯಲು ಈ ಕ್ರಮ ಅನುಸರಿಸುವುದು ಸೂಕ್ತ!

ಮಾಸ್ಕ್ಡ್ ಆಧಾರ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ:
* ಅಧಿಕೃತ UIDAI ವೆಬ್‌ಸೈಟ್‌ಗೆ ಹೋಗಿ (myaadhaar.uidai.gov.in)
* ನೀವು ಟ್ಯಾಬ್‌ಗಳಲ್ಲಿ 'ನನ್ನ ಆಧಾರ್' ಆಯ್ಕೆಯನ್ನು ಕಾಣಬಹುದು
* ಡ್ರಾಪ್-ಡೌನ್ ಮೆನುವಿನಿಂದ, 'ಡೌನ್‌ಲೋಡ್ ಆಧಾರ್' ಆಯ್ಕೆಯನ್ನು ಆರಿಸಿ
* ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆ ಅಥವಾ ವರ್ಚುವಲ್ ಐಡಿ ಅಥವಾ ದಾಖಲಾತಿ ಸಂಖ್ಯೆಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ

ನೋಂದಾಯಿತ

* ಅದರ ನಂತರ ನೀವು ಕೇವಲ 'ಮಾಸ್ಕ್ಡ್ ಆಧಾರ್' ಆಯ್ಕೆಯನ್ನು ಆರಿಸಬೇಕಾಗುತ್ತದೆ.
* ಮುಂದಿನ ಹಂತದಲ್ಲಿ, ನೀವು ಕ್ಯಾಪ್ಚಾ ಕೋಡ್ ಅನ್ನು ಪರಿಶೀಲಿಸಬೇಕಾಗುತ್ತದೆ
* ಬಳಕೆದಾರನು ನಂತರ ಡ್ರಾಪ್-ಡೌನ್ ಮೆನುವಿನಿಂದ 'ಸೆಂಡ್ OTP' ಆಯ್ಕೆಯನ್ನು ಒತ್ತಿರಿ.
* ನೀವು ನೋಂದಾಯಿತ ಫೋನ್‌ನಿಂದ OTP ಅನ್ನು ನಮೂದಿಸಿದ ನಂತರ, ನೀವು ಮಾಸ್ಕ್ಡ್ ಆಧಾರ್ ಅನ್ನು ಡೌನ್‌ಲೋಡ್ ಮಾಡಬಹುದು

Best Mobiles in India

English summary
How many times you can update Name on Aadhar Card: Here's Details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X