ನಿಮ್ಮ ಬಗ್ಗೆ ನಿಮಗಿಂತ ಹೆಚ್ಚಾಗಿ ಗೂಗಲ್‌ಗೆ ಗೊತ್ತು ಎಂದರೆ ಆಶ್ಚರ್ಯವೇ?!

|

ನಮಗೆ ತಿಳಿಯದಂತೆ ನಮ್ಮ ಡೇಟಾವನ್ನು ಫೇಸ್‌ಬುಕ್ ಮೂಲಕ ಸಂಗ್ರಹಿಸಿ ದುರ್ಬಳಕೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದ ನಂತರ ಇದೀಗ ಗೂಗಲ್ ಕಂಪೆನಿಯತ್ತ ಜನರ ದೃಷ್ಟಿ ಬಿದ್ದಿದೆ.! ನಮ್ಮ ಜೀವನವು ನೈಜ ಪ್ರಪಂಚಕ್ಕಿಂತ ಗೂಗಲ್ ಮೂಲಕ ಇತರರ ವ್ಯಾಪಾರದ ಪಾಲಾಗುತ್ತಿದೆಯೇ ಎಂಬ ಅನುಮಾನ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಕಾಡುತ್ತಿದೆ.!

ಹೊಸದಾಗಿ ಏನಾದರೂ ಖರೀದಿಯಾಗಲು, ಟಿಕೆಟ್ ಬುಕ್ಕಿಂಗ್ ಆಗಲಿ, ನಮ್ಮ ವೈಯಕ್ತಿಕ ಭೇಟಿಗಳು, ವೃತ್ತಿಪರ ಭೇಟಿಗಳು ಮತ್ತು ಸಿನಿಮಾ ಸಮಯಗಳೆಲ್ಲವೂ ಸೇರಿದಂತೆ ಪ್ರತಿಯೋರ್ವನ ಇಂಟರ್‌ನೆಟ್ ಚಟುವಟಿಕೆಗಳೆಲ್ಲವೂ ಬೇಹುಗಾರಿಕೆಯ ಪಾಲಾಗುತ್ತಿದೆ. ಇಂಟರ್‌ನೆಟ್‌ನಲ್ಲಿ ಯಾರೊಬ್ಬರೂ ನಮ್ಮ ವೈಯಕ್ತಿಕ ವಿವರಗಳನ್ನು ಹೊಂದಿದ್ದಾರೆ ಎಂಬ ಅನುಭವವಾಗುತ್ತಿದೆ.!

ನಿಮ್ಮ ಬಗ್ಗೆ ನಿಮಗಿಂತ ಹೆಚ್ಚಾಗಿ ಗೂಗಲ್‌ಗೆ ಗೊತ್ತು ಎಂದರೆ ಆಶ್ಚರ್ಯವೇ?!

ಪ್ರತಿಯೋರ್ವ ಇಂಟರ್‌ನೆಟ್ ಬಳಕೆದಾರ ಬಳಸುತ್ತಿರುವ ಟೆಕ್ ದೈತ್ಯ ಗೂಗಲ್ ಕಂಪೆನಿ ಕೂಡ ಪ್ರತಿಯೋರ್ವ ಇಂಟರ್‌ನೆಟ್ ಬಳಕೆದಾರನ ಡೇಟಾವನ್ನು ಶೇಖರಿಸುತ್ತಿರುವುದು ಭವಿಷ್ಯದಲ್ಲಿ ಆತಂಕಕ್ಕೆ ಕಾರಣವಾಗಬಹುದು. ಹಾಗಾಗಿ, ಗೂಗಲ್ ಕಂಪೆನಿ ನಮ್ಮೆಲ್ಲಾ ಡೇಟಾವನ್ನು ಹೇಗೆ ಕಲೆಹಾಕುತ್ತಿದೆ ಎಂಬ ಶಾಕಿಂಗ್ ವಿಷಯವನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!

ನೀವಿರುವ ಎಲ್ಲಾ ಸ್ಥಳವನ್ನು ಗೂಗಲ್ ಸಂಗ್ರಹಿಸುತ್ತದೆ!!

ನೀವಿರುವ ಎಲ್ಲಾ ಸ್ಥಳವನ್ನು ಗೂಗಲ್ ಸಂಗ್ರಹಿಸುತ್ತದೆ!!

ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದಲ್ಲಿ ಗೂಗಲ್ ಕಂಪೆನಿ ನಿಮ್ಮ ಸ್ಥಳವನ್ನು ಟ್ಯಾಪ್ ಮಾಡುತ್ತದೆ. ನೀವು ಸ್ಮಾಟ್‌ಫೋನ್ ಬಳಸಲು ಶುರು ಮಾಡಿದ ದಿನದಿಂದ ನೀವು ಸ್ಮಾರ್ಟ್‌ಫೋನ್ ಬಳಕೆಯನ್ನು ನಿಲ್ಲಿಸುವವರೆಗೂ ನಮ್ಮ ಎಲ್ಲಾ ಸ್ಥಳಗಳ ಟೈಮ್ಲೈನ್ ​​ಅನ್ನು ಗೂಗಲ್ ರಚಿಸಿಕೊಳ್ಳುತ್ತದೆ ಎಂದರೆ ಆಶ್ಚರ್ಯವಾಗದೇ ಇರುವುದಿಲ್ಲ.!

ಗೂಗಲ್ ನಮ್ಮ ಎಲ್ಲಾ ಹುಡುಕಾಟಗಳನ್ನು ಸಂಗ್ರಹಿಸುತ್ತದೆ!

ಗೂಗಲ್ ನಮ್ಮ ಎಲ್ಲಾ ಹುಡುಕಾಟಗಳನ್ನು ಸಂಗ್ರಹಿಸುತ್ತದೆ!

ನಾವು ಇಂಟರ್‌ನೆಟ್ ಮೂಲಕ ಹುಡುಕುವ ಪ್ರತಿಯೊಂದು ವಿಷಯವನ್ನು ಕೂಡ ಗೂಗಲ್ ತನ್ನ ಸಾಧನಗಳಲ್ಲಿ ಸಂಗ್ರಹಿಸುತ್ತಿದೆ. ಈ ಡೇಟಾವೆಲ್ಲ ಗೂಗಲ್ ಕಂಪೆನಿಯ ಪ್ರತ್ಯೇಕ ಡೇಟಾಬೇಸ್‌ನಲ್ಲಿ ಸಂಗ್ರಹಿಸಲಾಗುತ್ತದೆ ಎನ್ನಲಾಗಿದೆ. ಇದರಿಂದಾಗಿ, ನಮ್ಮ ಫೋನ್ ಇತಿಹಾಸವನ್ನು ನಾವು ತೆರವುಗೊಳಿಸಲು ಸಾಧ್ಯವಿಲ್ಲ.!!

ಪ್ರತಿ ಆಪ್ ಮಾಹಿತಿ ಸಂಗ್ರಹಿಸುತ್ತದೆ!!

ಪ್ರತಿ ಆಪ್ ಮಾಹಿತಿ ಸಂಗ್ರಹಿಸುತ್ತದೆ!!

ನಾವು ನಮ್ಮ ಸ್ಮಾರ್ಟ್‌ಫೋನಿನಲ್ಲಿ ಬಳಸುವ ಪ್ರತಿಯೊಂದು ಆಪ್ ಮಾಹಿತಿಯನ್ನು ಗೂಗಲ್ ಸಂಗ್ರಹಿಸುತ್ತದೆ ಎನ್ನಲಾಗಿದೆ. ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಯಾವ ಆಪ್‌ಗಳನ್ನು ಎಷ್ಟು ಬಾರಿ ಬಳಸುತ್ತೇವೆ, ನಾವು ಯಾವಾಗ ಆ ಆಪ್‌ಅನ್ನು ಬಳಸುತ್ತೇವೆ, ನಾವು ಯಾವ ಜಾಗದಲ್ಲಿ ಆ ಆಪ್‌ ಅನ್ನು ಬಳಸುತ್ತೇವೆ ಎಂಬ ಮಾಹಿತಿಗಳನ್ನು ಗೂಗಲ್ ಸಂಗ್ರಹಿಸುತ್ತದೆ.!!

ಯೂಟ್ಯೂಬ್ ಹುಡುಕಾಟ ಸಂಗ್ರಹ!!

ಯೂಟ್ಯೂಬ್ ಹುಡುಕಾಟ ಸಂಗ್ರಹ!!

ಇಂಟರ್‌ನೆಟ್ ಬಳಸುಗ ಶೇ 80 ರಷ್ಟು ಜನರು ಯೂಟ್ಯೂಬ್ ವಿಡಿಯೋ ತಾಣವನ್ನು ಬಳಸುತ್ತಾರೆ ಎಂದು ಹೇಳಲಾಗಿದೆ. ನಿಮಗೆ ಗೊತ್ತಾ? ನಮ್ಮ ಎಲ್ಲಾ ಯೂಟ್ಯೂಬ್ ಹುಡುಕಾಟದ ಇತಿಹಾಸವನ್ನು ಗೂಗಲ್ ಸಂಗ್ರಹಿಸಿ ವಿಶ್ಲೇಷಿಸುತ್ತದೆ. ನಮ್ಮ ರಾಜಕೀಯ ಆದ್ಯತೆಗಳು, ಧಾರ್ಮಿಕ ನಂಬಿಕೆಗಳು, ನಮ್ಮ ವ್ಯಕ್ತಿತ್ವ ಪ್ರಕಾರ ವಿಡಿಯೋಗಳನ್ನು ತೋರಿಸುತ್ತದೆ.!!

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?
ಗೂಗಲ್ ಟೇಕ್ಔಟ್ ಡಾಕ್ಯುಮೆಂಟ್!!

ಗೂಗಲ್ ಟೇಕ್ಔಟ್ ಡಾಕ್ಯುಮೆಂಟ್!!

ಫೇಸ್‌ಬುಕ್‌ನಂತೆಯೇ ಗೂಗಲ್ ಕೂಡ ನಮ್ಮಲ್ಲಿ ಸಂಗ್ರಹಿಸಿದ ಎಲ್ಲ ಡೇಟಾವನ್ನು ಡೌನ್ಲೋಡ್ ಮಾಡಲು ಒಂದು ಆಯ್ಕೆಯನ್ನು ಒದಗಿಸುತ್ತದೆ. ಈ ಟೇಕ್ಔಟ್ ಡಾಕ್ಯುಮೆಂಟ್ ಎಲ್ಲಾ ನಮ್ಮ ಇಮೇಲ್‌ಗಳು ಬುಕ್ಮಾರ್ಕ್ಗಳು, ಸಂಪರ್ಕಗಳು, ಗೂಗಲ್ ಡ್ರೈವ್ ಫೈಲ್ಗಳು, ಗೂಗಲ್ನಿಂದ ನೀವು ತಂದ ಉತ್ಪನ್ನಗಳನ್ನು, ನೀವು ಡೌನ್ಲೋಡ್ ಮಾಡಿದ ಎಲ್ಲಾ ಚಿತ್ರಗಳನ್ನು ಹೊಂದಿರುತ್ತದೆ.

Best Mobiles in India

English summary
Basically all the things you do on the internet is being tracked by Google including your emails, location, search history, history and much more.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X