ಭಾರತದಲ್ಲಿ 5G ಪ್ಲಾನ್‌ಗಳ ಬೆಲೆ ಹೇಗಿರಲಿದೆ? 5G ಗಾಗಿ 4G ಸಿಮ್‌ ಬದಲಾಯಿಸಬೇಕಾ?

|

ಭಾರತದಲ್ಲಿ 5G ಪ್ರಾರಂಭ ಈ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಇನ್ನೇನು ಆಗಸ್ಟ್‌ ತಿಂಗಳ ಅಂತ್ಯದಲ್ಲಿ ಭಾರತದಲ್ಲಿ 5G ನೆಟ್‌ವರ್ಕ್ ರೋಲ್‌ಔಟ್‌ ಆಗಲಿದೆ ಎಂದು ಹೇಳಲಾಗ್ತಿದೆ. ಈಗಾಗಲೇ ಏರ್‌ಟೆಲ್‌ ಟೆಲಿಕಾಂ ಇದೇ ತಿಂಗಳು 5G ರೂಲ್‌ಔಟ್‌ ಅನ್ನು ಮಾಡುವುವುದಾಗಿ ಘೋಷಿಸಿದೆಕೊಂಡಿದೆ. ಕೇಂದ್ರ ಸರ್ಕಾರ ಕೂಡ ಕೆಲವು ಪ್ರಮುಖ ನಗರಗಳಲ್ಲಿ ಶೀಘ್ರದಲ್ಲೇ 5G ನಟ್‌ವರ್ಕ್‌ ಲಭ್ಯವಾಗಲಿದೆ ಎಂದು ಹೇಳಿದೆ. ಇದೀಗ ಭಾರತದಲ್ಲಿ 5G ನೆಟ್‌ವರ್ಕ್‌ ಪ್ರಾರಂಭವಾದರೇ 5G ಸೇವೆಗಳ ಬೆಲೆ ಹೇಗಿರಲಿದೆ ಎನ್ನುವ ಪ್ರಶ್ನೆ ಶುರುವಾಗಿದೆ.

5G

ಹೌದು, ಭಾರತದಲ್ಲಿ 5G ಸೇವೆಗಳ ಬೆಲೆ ಹೇಗಿರಲಿದೆ, ಟೆಲಿಕಾಂ ಕಂಪೆನಿಗಳು 5G ಸೇವೆಗಳ ಬೆಲೆಯಲ್ಲಿ ಹೆಚ್ಚಳವನ್ನು ಮಾಡಲಿವೆಯಾ? ಎನ್ನುವ ಪ್ರಶ್ನೆಗಳು ಇದೀಗ ಎಲ್ಲೆಡೆ ಹರಿದಾಡ್ತಿದೆ. ಏಕೆಂದರೆ 5G ಸೇವೆಗಳು 4Gಗಿಂತ ವೇಗವಾಗಿರಲಿದೆ. ಇದಲ್ಲದೆ ಟೆಲಿಕಾಂ ಕಂಪೆನಿಗಳು ಕೂಡ 5G ಸ್ಪೆಕ್ಟ್ರಂ ಅನ್ನು ಹೆಚ್ಚಿನ ಹಣ ನೀಡಿ ಹರಾಜಿನಲ್ಲಿ ಬಿಡ್‌ ಮಾಡಿವೆ. ಆದರಿಂದ ಇದರ ಬೆಲೆಯಲ್ಲಿ ಏನಾದರೂ ಬದಲಾಗಲಿದೆಯಾ ಎನ್ನುವ ಅನೇಕ ಪ್ರಶ್ನೆಗಳು ಎದ್ದಿವೆ. ಹಾಗಾದ್ರೆ ಭಾರತದಲ್ಲಿ 5G ಸೇವೆಯ ಬೆಲೆ ಹೆಚ್ಚಾಗಲಿದೆಯಾ ಅನ್ನೊದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

5G

ಭಾರತದಲ್ಲಿ 5G ಪ್ರಾರಂಭವಾಗುವುದಕ್ಕೆ ದಿನಗಣನೆ ಶುರುವಾಗಿದೆ. ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವದ ನಂತರ ಇದರ ಬಗೆಗಿನ ನಿರೀಕ್ಷೆಗಳು ಇಮ್ಮಡಿಯಾಗಿವೆ. ಇದರಲ್ಲಿ ಜಿಯೋ ಮತ್ತು ಏರ್‌ಟೆಲ್ ತಮ್ಮ 5G ಸೇವೆಗಳನ್ನು ಮೊದಲ ಹಂತದಲ್ಲಿ ಈ ತಿಂಗಳ ಕೊನೆಯಲ್ಲಿ ಪ್ರಾರಂಭಿಸುತ್ತಿವೆ. ಇದರಲ್ಲಿ ವಿ ಟೆಲಿಕಾಂ ತನ್ನ 5G ಸೇವೆಗಳಿಗೆ 4G ಸೇವೆಗಳಿಗಿಂತ ಬೆಲೆ ಹೆಚ್ಚಳ ಮಾಡುವ ಸೂಚನೆ ನೀಡಿದೆ. ಆದರೆ ಜಿಯೋ ಮತ್ತು ಏರ್‌ಟೆಲ್‌ ವಿಚಾರದಲ್ಲಿ ಇದು ಇನ್ನು ಅಧಿಕೃತವಾಗಿಲ್ಲ.

ಏರ್‌ಟೆಲ್

ಆದರೆ ಏರ್‌ಟೆಲ್ ಸಿಇಒ ಗೋಪಾಲ್ ವಿಟ್ಟಲ್ ಭಾರತದಲ್ಲಿ ಏರ್‌ಟೆಲ್‌ನ 5G ಬೆಲೆಗಳು 4G ಯೋಜನೆಗಳಿಗೆ ಸಮನಾಗಿರುತ್ತದೆ ಎಂದು ಹೇಳಿದ್ದಾರೆ. ಆದರೂ ಕೂಡ 5G ರೂಲ್‌ಔಟ್‌ ನಂತರ ನಾವು ಅಂತಿಮ ವೆಚ್ಚವನ್ನು ತಿಳಿಯುವ ಸಾದ್ಯತೆ ಯಿದೆ ಎನ್ನುವ ಮಾತು ಕೂಡ ಕೇಳಿಬಂದಿದೆ. ಆಪರೇಟರ್‌ಗಳು ಈಗಾಗಲೇ 5G ಅನ್ನು ರೂಲ್‌ಔಟ್‌ ಮಾಡುವುದಕ್ಕೆ ಪ್ರಯತ್ನಿಸುತ್ತಿರುವುದನ್ನು ಗಮನಿಸಿದರೆ ಮಾರುಕಟ್ಟೆಯಲ್ಲಿ 5G ಸೇವೆಯ ಬೆಲೆ 4G ಗಿಂತ ಹೆಚ್ಚಾಗುವ ಸಾಧ್ಯತೆ ಕಡಿಮೆ ಇದೆ.

5G

ಇನ್ನು ಭಾರತದಲ್ಲಿ 5G ಸೇವೆ ಶುರುವಾದ ನಂತರ ಜಿಯೋ ಮತ್ತು ವಿ 5G ಬೆಲೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ Jio ಮತ್ತು Vi ನಿಂದ 5G ಯೋಜನೆಗಳು ಏರ್‌ಟೆಲ್‌ನೊಂದಿಗೆ ಸ್ಪರ್ಧಾತ್ಮಕವಾಗಿರುತ್ತವೆ ಎಂದು ಹೇಳಬಹುದು. ಸದ್ಯದ ಮಾಹಿತಿಯ ಪ್ರಕಾರ ಭಾರತದಲ್ಲಿ 5G ಪ್ಲಾನ್‌ಗಳ ಬೆಲೆ 4G ಪ್ಲಾನ್‌ಗಳಿಗಿಂತ ದುಬಾರಿಯಾಗುವ ಸಾದ್ಯತೆ ಕಡಿಮೆಯಿದೆ. ಬದಲಿಗೆ 5G ಸೇವೆಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.

5G ಸೇವೆಗಳನ್ನು ಬಳಸಲು ನಿಮಗೆ 5G ಸಿಮ್ ಕಾರ್ಡ್ ಅಗತ್ಯವಿದೆಯೇ?

5G ಸೇವೆಗಳನ್ನು ಬಳಸಲು ನಿಮಗೆ 5G ಸಿಮ್ ಕಾರ್ಡ್ ಅಗತ್ಯವಿದೆಯೇ?

ಇನ್ನು ಭಾರತದಲ್ಲಿ 5G ಸೇವೆಗಳನ್ನು ಬಳಸಲು ನಿಮಗೆ 5G ಕಾರ್ಡ್ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಕೂಡ ಸಾಮಾನ್ಯವಾಗಿದೆ. ಆದರೆ ಭಾರತೀಯ ಟೆಲಿಕಾಂ ಆಪರೇಟರ್ ಎಲ್ಲಿಯವರೆಗೆ NSA 5G ತಂತ್ರಜ್ಞಾನವನ್ನು ಬಳಸುವುದೋ ಅಲ್ಲಿಯವರೆಗೆ ನಿಮಗೆ 5G ಸಿಮ್‌ ಅಗತ್ಯವಿಲ್ಲ ಎನ್ನಲಾಗಿದೆ. ಇದರಿಂದ ವೇಗದ ಇಂಟರ್ನೆಟ್ ಡೌನ್‌ಲೋಡ್ ವೇಗ, ತತ್‌ಕ್ಷಣದ ವೀಡಿಯೊ ಬಫರಿಂಗ್ ಮತ್ತು ಆನ್-ದಿ-ಗೋ ಕ್ಲೌಡ್ ಅಪ್ಲಿಕೇಶನ್‌ಗಳನ್ನು ಬಳಸಬಹುದಾಗಿದೆ. ಈ ಟೆಕ್ನಾಲಜಿಯು ಈಗಾಗಲೇ ಅಸ್ತಿತ್ವದಲ್ಲಿರುವ 4G ಸಿಮ್‌ಗಳನ್ನು 5G ಯೊಂದಿಗೆ ಫಾರ್ವರ್ಡ್ ಆಗುವಂತೆ ಮಾಡಲಿದೆ.

5G

NSA 5G ತಂತ್ರಜ್ಞಾನವನ್ನು ಬಳಸುವುದರಿಂದ ದೂರಸಂಪರ್ಕಗಳಿಗೆ 5G ಅನ್ನು ಹೆಚ್ಚು ವ್ಯಾಪಕವಾಗಿ ನಿಯೋಜಿಸಲು ಸಾಧ್ಯವಾಗಲಿದೆ. ಇದರಿಂದ ದೇಶಾದ್ಯಂತ ವೇಗವಾಗಿ 5G ಅನ್ನು ಬಳಸುವುದಕ್ಕೆ ಸಾಧ್ಯವಾಗಲಿದೆ. ಆದರೆ SA ತಂತ್ರಜ್ಞಾನವು 4G ಯೊಂದಿಗೆ ಹೊಂದಿಕೆಯಾಗುವುದಿಲ್ಲ. ಈ ಟೆಕ್ನಾಲಜಿಯನ್ನು ಬಳಸಿದರೆ 5Gಗಾಗಿ ಹೊಸ ಸಿಮ್‌ ಅಗತ್ಯವಾಗಲಿದೆ. NSA ತಂತ್ರಜ್ಞಾನವು SA ಗಿಂತ ಉತ್ತಮವಾಗಿದ್ದರೂ, ಕಡಿಮೆ ಲೇಟೆನ್ಸಿ ನೆಟ್‌ವರ್ಕ್ ಹೊಂದಿರಲಿದೆ ಎನ್ನಲಾಗಿದೆ.

Best Mobiles in India

Read more about:
English summary
While the 5G network may launch in India this month, the services may not be available to use until September-October.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X