ದಿವಾಳಿಯಾಗಿರುವ ಏರ್‌ಸೆಲ್‌: ಗ್ರಾಹಕರು ತಮ್ಮ ನಂಬರ್ ಉಳಿಸಿಕೊಳ್ಳಲು ಮಾಡಬೇಕದ್ದೇನು..?

|

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಆರಂಭದ ನಂತರದಲ್ಲಿ ನಷ್ಟದ ಹಾದಿ ಹಿಡದಿರುವ ಇತರೆ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿರುವ ಏರ್‌ಸೆಲ್ ಮುಚ್ಚುವ ಹಂತಕ್ಕೆ ತಲುಪಿದ್ದು, ಈಗಾಗಲೇ ಹಲವು ಕಡೆಗಳಲ್ಲಿ ಏರ್‌ಸೆಲ್ ಸೇವೆ ಸ್ಥಗಿತಗೊಂಡಿದೆ. ಈ ಹಿನ್ನಲೆಯಲ್ಲಿ ಏರ್‌ಸೆಲ್ ಬಳಕೆದಾರರು ಬೇರೆ ನೆಟ್‌ವರ್ಕ್‌ಗಳ ಕಡೆಗೆ ವಲಸೆ ಹೋಗುತ್ತಾರೆ. ಈ ಹಿನ್ನಲೆಯಲ್ಲಿ ಪೋರ್ಟ್ ಹೇಗೆ ಮಾಡಿಕೊಳ್ಳುವುದು ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ದಿವಾಳಿಯಾಗಿರುವ ಏರ್‌ಸೆಲ್‌: ಗ್ರಾಹಕರು ತಮ್ಮ ನಂಬರ್ ಉಳಿಸಿಕೊಳ್ಳಲು ಮಾಡಬೇಕದ್ದೇನು

ಈಗಾಗಲೇ ಹಲವು ಬಳಕೆದಾರರಿಗೆ ಏರ್‌ಸೆಲ್ ತನ್ನ ಕಾರ್ಯಚರಣೆಯನ್ನು ನಿಲ್ಲಿಸಿದ್ದು, ಬೇರೆ ಟೆಲಿಕಾಂ ನೆಟ್‌ವರ್ಕ್‌ಗಳಿಗೆ ವಲಸೆ ಹೊಗುವಂತೆ ಮನವಿಯನ್ನು ಮಾಡಿಕೊಂಡಿದೆ. ಈ ಮೂಲಕ ತನ್ನ ಬಳಕೆದಾರರಿಗೆ ಸೇವೆಯಲ್ಲಿ ತೊಂದರೆಯಾಗದಂತೆ ನೋಡಕೊಳ್ಳುತ್ತಿದೆ. ನೀವು ಏರ್‌ಸೆಲ್ ಬಳಕೆದಾರರಾಗಿದ್ದರೇ ಶೀಘ್ರವೇ ಫೋರ್ಟ್ ಆಗುವುದು ಉತ್ತಮ ಆಯ್ಕೆಯಾಗಲಿದೆ.

ಪೋರ್ಟ್ ಮಾಡಿಕೊಳ್ಳಲು ಕೊನೆ ದಿನಾಂಕ:

ಪೋರ್ಟ್ ಮಾಡಿಕೊಳ್ಳಲು ಕೊನೆ ದಿನಾಂಕ:

ಏರ್‌ಸೆಲ್‌ನಿಂದ ಪೋರ್ಟ್ ಆಗುವವರಿಗೆ ಟ್ರಾಯ್ ಡೈಡ್ ಲೈನ್ ಅನ್ನು ನೀಡಿದ್ದು, 2018ರ ಏಪ್ರೀಲ್ 15ರ ಒಳಗೆ ಪೋರ್ಟ್ ಆಗಬೇಕಾಗಿದೆ. ಅವಧಿಯನ್ನು ಮೀರಿದರೆ ನಿಮ್ಮ ಮೊಬೈಲ್ ನಂಬರ್ ಸ್ಥಗಿತಗೊಳ್ಳಲಿದೆ.

ಪೋರ್ಟ್ ಮಾಡಿಕೊಳ್ಳುವುದು:

ಪೋರ್ಟ್ ಮಾಡಿಕೊಳ್ಳುವುದು:

ಏರ್‌ಸೆಲ್ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಮೊದಲು PORT ಎಂದು ಟೈಪ್ ಮಾಡಿ ನಂತರ 10 ಅಂಕೆಗಳ ಮೊಬೈಲ್ ನಂಬರ್ ಟೈಪ್ ಮಾಡಿ 1900ಕ್ಕೆ SMS ಕಳುಹಿಸಬೇಕಾಗಿದೆ. ಇದಾದ ನಂತರದಲ್ಲಿ ಏರ್‌ಸೆಲ್‌ನಿಂದ ಪೋರ್ಟ್ ಕೋಡ್ ದೊರೆಯಲಿದ್ದು, ಇದನ್ನು ಬೇರೆ ಟೆಲಿಕಾಂ ಆಪರೇಟರ್‌ಗೆ ನೀಡಿ ಬದಲಾವಣೆಯನ್ನು ಮಾಡಿಕೊಳ್ಳಬಹುದಾಗಿದೆ.

ಇನ್ನೊಂದು ಮಾದರಿ:

ಇನ್ನೊಂದು ಮಾದರಿ:

ಇದಲ್ಲದೇ ಇನ್ನೊಂದು ಮಾದರಿಯಲ್ಲಿಯೂ ನೀವು ಪೋರ್ಟ್ ಸಂಖ್ಯೆಯನ್ನು ಪಡೆಯಬಹುದಾಗಿದೆ. ಬಳಕೆದಾರರು ಕಸ್ಟಮರ್ ಕೇರ್‌ಗೆ ಕರೆ ಮಾಡುವ ಮೂಲಕವೂ ಈ ಪೋರ್ಟ್ ಕೋಡ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಬೇರೆ ಟೆಲಿಕಾಂ:

ಬೇರೆ ಟೆಲಿಕಾಂ:

ಈ ಪೋರ್ಟ್ ಕೋಡ್ ನೊಂದಿಗೆ ನಿಮ್ಮ ಆಧಾರ್ ಕಾರ್ಡ್ ಪ್ರತಿಯನ್ನು ತೆಗೆದುಕೊಂಡು ನೀವು ಪೋರ್ಟ್ ಆಗಬಯಸುವ ಟೆಲಿಕಾಂ ಆಪರೇಟರ್ ಶಾಪ್‌ಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಪೋರ್ಟ್ ಕೋಡ್ ನೀಡಿ, ಆಧಾರ್ ಮಾಹಿತಿಯನ್ನು ಹಂಚಿಕೊಂಡು ಹೊಸ ನೆಟ್‌ವರ್ಕಿನ ಸಿಮ್ ಪಡೆದುಕೊಳ್ಳಬಹುದಾಗಿದೆ.

How to Download e-Aadhaar Card! ಸ್ಮಾರ್ಟ್‌ಫೋನ್‌ನಲ್ಲಿ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..?

ಓದಿರಿ: ಸ್ಮಾರ್ಟ್‌TV ನಂತರ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ ಸೈಕಲ್ ಮತ್ತು ಸ್ಕೂಟರ್ ಬಿಡಲಿದೆ ಶಿಯೋಮಿ..!

Best Mobiles in India

English summary
how to port your number out of Aircel network to another telecom operator. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X