ಕ್ಷಣ ಮಾತ್ರದಲ್ಲಿ ಸಾಲಬೇಕೆ? ಆ್ಯಪ್‌ ಡೌನ್‌ಲೋಡ್‌ ಮಾಡುವ ಮುನ್ನ ಎಚ್ಚರ!

|

ಯಾವುದೇ ಡಾಕ್ಯುಮೆಂಟ್‌ ಇಲ್ಲದೆ ಸುಲಭವಾಗಿ ಸಾಲ ನೀಡಲಾಗುತ್ತದೆ. ಈಗಲೇ ಡೌನ್‌ಲೋಡ್‌ ಮಾಡಿ, ಹತ್ತು ನಿಮಿಷಗಳಲ್ಲಿ ಹಣ ಪಡೆಯಿರಿ. ಹೀಗೆ ಹತ್ತು ಹಲವು ಆಮಿಷಗಳನ್ನು ನೀಡುವ ಮೂಲಕ ಆನ್‌ಲೈನ್‌ ಲೋನ್‌ ಅಪ್ಲಿಕೇಶನ್‌ಗಳು ಸಾಮಾನ್ಯ ಜನರನ್ನು ಸೆಳೆಯುವುದು ಸಾಮಾನ್ಯವಾಗಿದೆ. ಆದರೆ ಲೋನ್‌ ಆಪ್‌ಗಳಲ್ಲಿ ಸಾಲ ಪಡೆದು ನಂತರ ಸಾಕಷ್ಟು ಕಿರುಕುಳ ಅನುಭವಿಸುತ್ತಿರುವ ಘಟನೆಗಳು ನಡೆಯುತ್ತಲೆ ಇವೆ. ಇದರ ನಡುವೆ ಲೋನ್‌ ಆ್ಯಪ್‌ಗಳಲ್ಲಿರುವ ಗ್ರಾಹಕರ ಡೇಟಾ ಸೈಬರ್‌ ಕ್ರಿಮಿನಲ್‌ಗಳ ಕೈಗೆ ಸೇರುತ್ತಿದೆ ಎಂಬ ಅಘಾತಕಾರಿ ವರದಿ ಹೊರಬಿದ್ದಿದೆ.

ಗೂಗಲ್

ಹೌದು, ಲೋನ್‌ ಆ್ಯಪ್‌ಗಳಲ್ಲಿರುವ ಬಳಕೆದಾರರ ಡೆಟಾವನ್ನು ಸೈಬರ್‌ ಕ್ರಿಮಿನಲ್‌ಗಳ ಕೈ ಸೇರುತ್ತಿದೆ ಎನ್ನಲಾಗಿದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಸುಮಾರು 300ಕ್ಕೂ ಹೆಚ್ಚು ಲೋನ್‌ ಅಪ್ಲಿಕೇಶನ್‌ಗಳು ಕಂಡುಬಂದಿವೆ. ಈ ಅಪ್ಲಿಕೇಶನ್‌ಗಳನ್ನು ಸೈಬರ್‌ ಕ್ರಿಮಿನಲ್‌ಗಳು ಬಳಕೆದಾರರ ಡೇಟಾ ಕದಿಯಲು ಬಳಸುತ್ತಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಸಾಲಗಾರರಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಲೋನ್‌ ಅಪ್ಲಿಕೇಶನ್‌ಗಳ ಮೂಲಕ ಸೈಬರ್‌ ಕ್ರಿಮಿನಲ್‌ಗಳು ಹೇಗೆಲ್ಲಾ ವಂಚಿಸುತ್ತಿದ್ದಾರೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲೋನ್‌

ಸೈಬರ್ ವಂಚಕರು ಲೋನ್‌ ಅಪ್ಲಿಕೇಶನ್‌ಗಳಲ್ಲಿರುವ ಬಳಕೆದಾರರ ಮಾಹಿತಿಯನ್ನು ತೆಗೆದುಕೊಂಡು ವಂಚಿಸುತ್ತಿದ್ದಾರೆ. ಅಲ್ಲದೆ ಬಳಕೆದಾರರ ಡೇಟಾದ ಮೂಲಕ ಸಾಲ ಮರುಪಾವತಿ ಮಾಡುವಂತೆ ಹಾಗೂ ಅವರಿಗೆ ಮಾನಸಿಕ ಕಿರುಕುಳ ನೀಡಲು ಬಳಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಸೈಬರ್‌ ಸೆಕ್ಯುರಿಟಿ ಕಂಪನಿ ಲುಕ್‌ಔಟ್ ಥ್ರೆಟ್ ಲ್ಯಾಬ್‌ ವರದಿ ಮಾಡಿರುವಂತೆ ಈ ರೀತಿಯ ಲೋನ್‌ ಆ್ಯಪ್‌ಗಳು ಭಾರತ, ಕೊಲಂಬಿಯಾ ಮತ್ತು ಮೆಕ್ಸಿಕೊ ಸೇರಿದಂತೆ ಆಗ್ನೇಯ ಏಷ್ಯಾ ಮತ್ತು ಆಫ್ರಿಕನ್ ದೇಶಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಕಂಡುಬಂದಿವೆ.

ಲೋನ್‌ ಅಪ್ಲಿಕೇಶನ್‌ಗಳ ಮೂಲಕ ಸ್ಕ್ಯಾಮ್‌ ಹೇಗೆ ನಡೆಯುತ್ತಿದೆ?

ಲೋನ್‌ ಅಪ್ಲಿಕೇಶನ್‌ಗಳ ಮೂಲಕ ಸ್ಕ್ಯಾಮ್‌ ಹೇಗೆ ನಡೆಯುತ್ತಿದೆ?

ಆನ್‌ಲೈನ್‌ನಲ್ಲಿ ಕ್ಷಣ ಮಾತ್ರದಲ್ಲಿ ಲೋನ್‌ ನೀಡುವುದಾಗಿ ಹೇಳುವ ಲೋನ್‌ ಆ್ಯಪ್‌ಗಳು ಬಳಕೆದಾರರಿಗೆ ಮಾಹಿತಿಯನ್ನು ಸಂಗ್ರಹಿಸುತ್ತವೆ. ಅಲ್ಲದೆ ದೃಡೀಕರಣಕ್ಕಾಗಿ ಅವರಿಂದ ಸೆಲ್ಫಿ ವೀಡಿಯೋ ಹಾಗೂ ಸೆಲ್ಫಿ ಫೋಟೋ ಮಾಗತ್ರವಲ್ಲದೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ಹೇಳುತ್ತವೆ. ತುರ್ತು ಸಂದರ್ಭದಲ್ಲಿ ಹಣ ಪಡೆಯುವುದಕ್ಕಾಗಿ ಗ್ರಾಹಕರುಯ ಕೂಡ ಈ ಜಾಲದಲ್ಲಿ ಸಿಲುಕಿಕೊಳ್ಳುತ್ತಾರೆ. ಇದರಿಂದ ಸಾಲ ಒಪ್ಪಂದಗಳಿಗೆ ಒಪ್ಪಿಕೊಂಡು ಸಂಪರ್ಕಗಳು ಮತ್ತು SMS ಸಂದೇಶಗಳಂತಹ ಸೂಕ್ಷ್ಮ ಮಾಹಿತಿಗೆ ಪ್ರವೇಶವನ್ನು ನೀಡಿಬಿಡುತ್ತಾರೆ.

ಸಂಪರ್ಕಗಳು

ಹೀಗೆ ಬಳಕೆದಾರರಿಗೆ ಸಂಪರ್ಕಗಳು ಮತ್ತು ಎಸ್‌ಎಂಎಸ್‌ ಸೇವೆಗೆ ಪ್ರವೇಶ ಪಡೆಯುವ ಲೋನ್‌ ಆ್ಯಪ್‌ಗಳು ನಂತರದ ದಿನಗಳಲ್ಲಿ ಕಿರುಕುಳ ನೀಡುತ್ತವೆ. ಮೊದಲಿಗೆ ಅರ್ಜಿದಾರರ ಹೆಸರು, ವಿಳಾಸ, ಉದ್ಯೋಗ ಇತಿಹಾಸ, ಶಿಕ್ಷಣ ಮತ್ತು ಬ್ಯಾಂಕಿಂಗ್ ಮಾಹಿತಿಯನ್ನು ಕೋರಿ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಹೇಳುತ್ತಾರೆ. ನಂತರ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸಿ ಅವರಿಗೆ ಇಮೇಲ್‌ಗಳು, ಎಸ್‌ಎಂಎಸ್ ಅಥವಾ ಕರೆಗಳನ್ನು ಮಾಡುತ್ತಾರೆ. ಅದಕ್ಕೆ ಪ್ರತಿಕ್ರಿಯಿಸದಿದ್ದಾಗ, ಅವರ ಸಂಪರ್ಕ ಸಂಖ್ಯೆಗಳಿಗೆಲ್ಲಾ ಸಂದೇಶ ಕಳುಹಿಸುವ ಮೂಲಕ ಕಿರುಕುಳ ನೀಡುತ್ತಾರೆ.

ಸ್ಕ್ಯಾಮ್‌ ಅಪ್ಲಿಕೇಶನ್‌ಗಳ ದಾಖಲೆಯ ಡೌನ್‌ಲೋಡ್‌

ಸ್ಕ್ಯಾಮ್‌ ಅಪ್ಲಿಕೇಶನ್‌ಗಳ ದಾಖಲೆಯ ಡೌನ್‌ಲೋಡ್‌

ಜನರಿಗೆ ಸಾಲದ ಹೆಸರಿನಲ್ಲಿ ಮೋಸ ಮಾಡುತ್ತಿರುವ ಲೋನ್‌ ಆ್ಯಪ್‌ಗಳು ಪ್ಲೇ ಸ್ಟೋರ್‌ನಲ್ಲಿ 15 ಮಿಲಿಯನ್ ಡೌನ್‌ಲೋಡ್‌ ಪಡೆದುಕೊಂಡಿವೆ ಎನ್ನಲಾಗಿದೆ. ಈ ಆ್ಯಪ್‌ಗಳು ಅಭಿವೃದ್ಧಿ ಶೀಲ ರಾಷ್ಟ್ರಗಳಾದ ಭಾರತ, ಕೊಲಂಬಿಯಾ, ಇಂಡೋನೇಷಿಯಾ, ಕೀನ್ಯಾ, ಮೆಕ್ಸಿಕೋ, ನೈಜೀರಿಯಾ, ಫಿಲಿಪೈನ್ಸ್, ಥೈಲ್ಯಾಂಡ್ ಮತ್ತು ಉಗಾಂಡಾದಲ್ಲಿ ಹೆಚ್ಚು ಡೌನ್‌ಲೋಡ್‌ ಪಡೆದಿವೆ ಎಂದು ವರದಿಯಾಗಿದೆ. ಆದರೆ ಲೋನ್‌ ಆ್ಯಪ್‌ ಹೆಸರಿನಲ್ಲಿ ಸ್ಕ್ಯಾಮ್‌ ಮಾಡುತ್ತಿರುವ ಆಪರೇಟರ್‌ಗಳು ಎಲ್ಲಿ ವಾಸಿಸುತ್ತಿದ್ದಾರೆ ಎಂಬುದು ಇನ್ನು ಬಹಿರಂಗವಾಗಿಲ್ಲ.

Best Mobiles in India

Read more about:
English summary
How Scammers are using loan apps to steal your data?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X