ಹ್ಯಾಕರ್‌ನಿಂದ ಬ್ಯಾಂಕ್‌ಖಾತೆ, ವೈಯಕ್ತಿಕ ಮಾಹಿತಿಗಳ ಸುರಕ್ಷತೆ ಹೇಗೆ ?

Written By:

ಇತ್ತೀಚೆಗೆ ತಾನೆ ಟಾಕ್‌ಟಾಕ್‌ ವೆಬ್‌ಸೈಟ್‌ ಹ್ಯಾಕ್‌, ವೊಡಾಫೋನ್‌ ಹ್ಯಾಕ್‌, ಇಬೇ, ಸೋನಿ ಕಂಪನಿಗಳು ಆನ್‌ಲೈನ್‌ನಲ್ಲಿ ಹ್ಯಾಕಿಂಗ್‌ ಆಗಿದ್ದವು. ಅಲ್ಲದೇ ದೆಹಲಿ ಹಾಗೂ ಮುಂಬೈ ಮೂಲದ ವ್ಯಕ್ತಿಗಳ ಬ್ಯಾಂಕ್‌ ಖಾತೆಯನ್ನು ಹ್ಯಾಕ್‌ ಮಾಡಿ ಹ್ಯಾಕರ್‌ಗಳು 10 ಲಕ್ಷ ಹಣವನ್ನು ಸಹ ವಂಚಿಸಿದ್ದರು. ಅಲ್ಲದೇ ವೈಯಕ್ತಿಕ ಮಾಹಿತಿಯನ್ನು ಕದ್ದಾಲಿಕೆ , ಇಂತಹ ಇನ್ನು ಹಲವು ಮಾಹಿತಿಗಳನ್ನು ಸುದ್ದಿ ಮಾಧ್ಯಮಗಳಲ್ಲಿ ಅಥವಾ ಗಿಜ್‌ಬಾಟ್‌ನಲ್ಲಿ ಓದಿರುತ್ತೀರಿ. ಈ ವಿಷಯ ತಿಳಿದ ನೀವು ನಿಮ್ಮ ಬ್ಯಾಂಕ್‌ ಖಾತೆ, ಸಾಮಾಜಿಕ ಜಾಲತಾಣಗಳ ಹಾಗೂ ಹಲವು ಮೊಬೈಲ್‌ ಆಪ್‌ಗಳ ಮೂಲಕವು ಹ್ಯಾಕಿಂಗ್‌ಗೆ ಗುರಿಯಾಗುವಂತಹ ಸನ್ನಿವೇಶಗಳಿಂದ ಎಚ್ಚರಗೊಳ್ಳಲೇಬೇಕು.

ಓದಿರಿ: ಫೇಕ್ ವೆಬ್‌ಸೈಟ್‌ನಿಂದ ಬ್ಯಾಂಕ್‌ ಖಾತೆಯ ಹಣ ಉಳಿಸಿ

ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೋ ಕದಿಯುತ್ತಿದ್ದಾರೆ ಏನಿಸಬಹುದು. ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರು ಸಾಮಾಜಿಕ ಜಾಲತಾಣ, ಮೊಬೈಲ್‌ ಆಪ್‌ಗಳ ಮೂಲಕವು ಹ್ಯಾಕಿಂಗ್‌ಗೆ ಒಳಗಾಗುವ ಸನ್ನಿವೇಶಗಳನ್ನು ತಪ್ಪಿಸಲು ಕೆಲವು ಅತ್ಯುತ್ತಮ ಟಿಪ್ಸ್‌ಗಳನ್ನು ನೀಡುತ್ತಿದೆ. ಆನ್‌ಲೈನ್‌ ಬಳಕೆ ಮಾಡುವ ಎಲ್ಲರೂ ಸಹ ಈ ಮಾಹಿತಿಯನ್ನು ಓದಿ ವಂಚನೆಯಿಂದ ಪಾರಾಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆನ್‌ಲೈನ್‌ ಖಾತೆಗಳು

ಆನ್‌ಲೈನ್‌ ಖಾತೆಗಳು

ಪಾಸ್‌ವರ್ಡ್‌ ಬದಲಿಸಿ

ನೀವು ಆನ್‌ಲೈನ್ ಬ್ಯಾಂಕ್‌ ಬಳಸುತ್ತಿದ್ದಲ್ಲಿ ಅಥವಾ ಕೆಲವೊಮ್ಮೆ ಫೇಸ್‌ಬುಕ್‌ ತಾಣಗಳಿಂದ, ಇಂಟರ್ನೆಟ್‌ ಮೂಲಕ ಹ್ಯಾಕಿಂಗ್‌ಗೆ ಗುರಿಯಾಗುವ ಸನ್ನಿವೇಶಗಳಿರುತ್ತವೆ. ನಿಮಗೆ ಸಂಶಯ ಬಂದಲ್ಲಿ ಅಂತಹ ಸಂದರ್ಭದಲ್ಲಿ ನಿಮ್ಮ ಬ್ಯಾಕ್‌ ಖಾತೆ ಮತ್ತು ಫೇಸ್‌ಬುಕ್‌ ಖಾತೆಗಳ ಪಾಸ್‌ವರ್ಡ್‌ ಅನ್ನು ಬದಲಿಸಿ. ಹೀಗೆ ಮಾಡುವುದರಿಂದ ಹ್ಯಾಕರ್‌ಗಳು ನಿಮ್ಮ ಖಾತೆಯ ಆಕ್ಸೆಸ್‌ ಅನ್ನು ಕಡಿತಗೊಳಿಸಲು ಸಹಾಯಕವಾಗುತ್ತದೆ.

ಹ್ಯಾಕಿಂಗ್‌ ಸಂಶಯ : ಬ್ಯಾಂಕ್‌ ಖಾತೆಯಲ್ಲಿ ಹಣ ಕಡಿಮೆ

ಹ್ಯಾಕಿಂಗ್‌ ಸಂಶಯ : ಬ್ಯಾಂಕ್‌ ಖಾತೆಯಲ್ಲಿ ಹಣ ಕಡಿಮೆ

ಬ್ಯಾಂಕ್‌ ಖಾತೆಗಳ ಮೇಲ್ವಿಚಾರಣೆ

ಕೆಲವೊಮ್ಮೆ ನಿಮ್ಮ ಬ್ಯಾಂಕ್‌ ಖಾತೆಯ ಹಣದಲ್ಲಿ ಏರು ಪೇರು ಕಂಡಾಗ ಖಂಡಿತ ಹ್ಯಾಕರ್‌ಗಳು ಬೆನ್ನು ಬಿದ್ದಿರುವಲ್ಲಿ ಸಂಶಯವೇ ಇಲ್ಲ. ನಿಮ್ಮ ಬ್ಯಾಂಕ್‌ ಖಾತೆಯ ಹಣವನ್ನು ಪರಿಶೀಲಿಸಿ. ಸ್ವಲ್ಪ ಹಣ ವ್ಯತ್ಯಾಸ ಬಂದರು ಸಹ ಬ್ಯಾಂಕ್‌ನಲ್ಲಿ ವಿಚಾರಿಸಿ ಖಚಿತ ಪಡಿಸಿಕೊಳ್ಳಿ.

ಹ್ಯಾಕರ್‌ಗಳ ಬಗ್ಗೆ ಮಾಹಿತಿ ತಿಳಿಯಿರಿ

ಹ್ಯಾಕರ್‌ಗಳ ಬಗ್ಗೆ ಮಾಹಿತಿ ತಿಳಿಯಿರಿ

ವಂಚನೆಗಳ ಕುರಿತು ತಿಳಿಯಿರಿ

ಒಮ್ಮೆ ಹ್ಯಾಕ್‌ ಬಗ್ಗೆ ಸಾರ್ವಜನಿಕವಾಗಿ ಸುದ್ದಿಯಾದಲ್ಲಿ ಟೆಕ್‌ ಬುದ್ಧಿಶಾಲಿಗಳು ಸಹ ಒಮ್ಮೆ ವಯಕ್ತಿಕ ಮಾಹಿತಿಯನ್ನು ಕದ್ದಾಲಿಕೆ ಮಾಡಲು ಪ್ರಯತ್ನಿಸುತ್ತಾರೆ. ಆದ್ದರಿಂದ ಎಚ್ಚರಿಕೆ ವಹಿಸಿ.

ಆನ್‌ಲೈನ್‌ ಬ್ಯಾಂಕಿಂಗ್‌

ಆನ್‌ಲೈನ್‌ ಬ್ಯಾಂಕಿಂಗ್‌

ಇಮೇಲ್‌ ಮತ್ತು ಫೋನ್‌

ಹ್ಯಾಕರ್‌ಗಳು ಇಮೇಲ್‌ ಮತ್ತು ಫೋನ್‌ ಮಾಡಿ ಸಹ ಕಂಪನಿಯವರು ಎಂದು ಹೇಳಿ ನಿಮ್ಮ ಬ್ಯಾಂಕ್‌ ಖಾತೆ ಬಗ್ಗೆ ಮಾಹಿತಿ ಕೇಳಬಹುದು. ಕಾರಣ ಇತ್ತೀಚಿನ ದಿನಗಳಲ್ಲಿ ಕೆಲವು ಕಂಪನಿಗಳು ಬ್ಯಾಂಕ್‌ ಮಾಹಿತಿ ಕೇಳುವುದರಿಂದ ಇಂತಹ ತಂತ್ರವನ್ನು ಹ್ಯಾಕರ್‌ಗಳು ಬಳಸುತ್ತಾರೆ. ಆದ್ದರಿಂದ ಎಚ್ಚರ ವಹಿಸಿ.

ಹ್ಯಾಕರ್‌ಗಳ ಅತ್ಯುನ್ನತ ತಂತ್ರ

ಹ್ಯಾಕರ್‌ಗಳ ಅತ್ಯುನ್ನತ ತಂತ್ರ

ಇಮೇಲ್‌ ಲಿಂಕ್‌

ಇತ್ತೀಚೆಗೆ ಹ್ಯಾಕರ್‌ಗಳು ಇಮೇಲ್‌ ಮೂಲಕ ಸುಲಭವಾಗಿ ನಿಮ್ಮ ಮಾಹಿತಿಗಳನ್ನು ಹ್ಯಾಕ್‌ ಮಾಡುತ್ತಾರೆ. ಕೆಲವೊಮ್ಮೆ ನಿಮ್ಮ ಇಮೇಲ್‌ಗಳಲ್ಲಿಯೇ ಕೆಲವೊಂದು ಲಿಂಕ್‌ಗಳ ಮೇಲೆ ಕ್ಲಿಕ್‌ ಮಾಡಿ ಎಂಬ ಮಾಹಿತಿ ನೋಡಿ ಕ್ಲಿಕ್‌ ಮಾಡುತ್ತೀರಿ. ನಂತರದಲ್ಲಿ ಫೇಕ್‌ ವೆಬ್‌ಸೈಟ್‌ಗಳು ಉಚಿತ ಯಾವುದಾದರೂ ಆಫರ್‌ ತೋರಿಸಿ ಲಾಗಿನ್‌ ಆಗಲು ಮಾಹಿತಿ ಕೇಳುತ್ತವೆ. ಇಂತಹ ಸಂದರ್ಭದಲ್ಲಿ ಲಾಗಿನ್‌ ಆಗದಿರಿ. ಕೇವಲ ನೀವು ಲಾಗಿನ್‌ ಮಾಹಿತಿ ನೀಡಿದ ತಕ್ಷಣ ಹ್ಯಾಕರ್‌ಗಳು ನಿಮ್ಮ ಖಾತೆಯನ್ನು ಹ್ಯಾಕ್‌ ಮಾಡಲು ಸಹಾಯಕವಾಗುತ್ತದೆ.

ಹ್ಯಾಕರ್‌ಗಳಿಂದ ಎಚ್ಚರ ವಹಿಸಿ

ಹ್ಯಾಕರ್‌ಗಳಿಂದ ಎಚ್ಚರ ವಹಿಸಿ

ಫೇಕ್‌ ವೆಬ್‌ಸೈಟ್‌ ಕಂಡುಹಿಡಿಯುವುದು ಹೇಗೆ ?

ಸಂಶಯ ಬಂದ ವೆಬ್‌ಸೈಟ್‌ಗಳ ಲಿಂಕ್‌ ಮೇಲೆ ಕ್ಲಿಕ್‌ ಮಾಡುವ ಬದಲು ಅಡ್ರೆಸ್‌ಬಾರ್‌ನಲ್ಲಿ ಆ ವೆಬ್‌ಸೈಟ್‌ ಅಡ್ರೆಸ್‌ ಮೊದಲಿಗೆ https://- ಎಂದು ಟೈಪ್‌ ಮಾಡಿ. ನಂತರದಲ್ಲಿ ಆ ವೆಟ್‌ಸೈಟ್‌ ಎರರ್‌ ಬಂದಲ್ಲಿ ಅಥವಾ ಲಾಗಿನ್‌ ಕೇಳದಿದಲ್ಲಿ ಅದು ಫೇಕ್‌ ವೆಬ್‌ಸೈಟ್‌ ಎಂದು ಖಚಿತವಾಗುತ್ತದೆ.

ಅಮೇರಿಕ

ಅಮೇರಿಕ

ಹ್ಯಾಕಿಂಗ್‌ ಯೋಜನೆಯಲ್ಲಿ ತೊಡಗಿದ್ದವರ ಬಂಧನ

60 ದಶಲಕ್ಷ ಜನರನ್ನು ಹ್ಯಾಕ್‌ ಮಾಡುವ ಉದ್ದೇಶ ಹೊಂದಿದ್ದ, ಹ್ಯಾಕಿಂಗ್‌ ಯೋಜನೆಯಲ್ಲಿ ತೊಡಗಿದ್ದ ಮೂವರು ಪುರಷರನ್ನು ಅಮೇರಿಕ ಬಂಧಿಸಿದೆ.

60 ದಶಲಕ್ಷ ಜನರ ವಯಕ್ತಿಕ ಮಾಹಿತಿ ಹ್ಯಾಕ್‌

60 ದಶಲಕ್ಷ ಜನರ ವಯಕ್ತಿಕ ಮಾಹಿತಿ ಹ್ಯಾಕ್‌

ವಯಕ್ತಿಕ ಮಾಹಿತಿ ಹ್ಯಾಕಿಂಗ್‌

ಬಂಧನಕ್ಕೆ ಒಳಗಾದ ಮೂವರು ಪುರುಷರು ಸಹ 60 ದಶಲಕ್ಷ ಜನರ ವಯಕ್ತಿಕ ಮಾಹಿತಿ ಹ್ಯಾಕ್‌ ಮಾಡುವ ಯೋಜನೆಯಲ್ಲಿ ತೊಡಗಿದ್ದು, ಹ್ಯಾಕಿಂಗ್‌ಗೆ ಕಾಮ್‌ಕಾಸ್ಟ್‌ ಗ್ರಾಹಕರು ಸಹ ಒಳಗಗಾಗಿದ್ದಾರೆ ಎಂದು ಅಮೇರಿಕ ಪ್ರಾಸಿಕ್ಯೂಟರು ಘೋಷಿಸಿದ್ದಾರೆ.

ಹ್ಯಾಕಿಂಗ್ ದೋಷಾರೋಪಣೆ

ಹ್ಯಾಕಿಂಗ್ ದೋಷಾರೋಪಣೆ

ಬಂಧನಕ್ಕೆ ಒಳಗಾದವರು

ಹ್ಯಾಕಿಂಗ್ ದೋಷಾರೋಪಣೆಯಡಿಯಲ್ಲಿ ತಿಮೋತಿ ಲಿವಿಂಗ್ಸ್ಟನ್, 30, ಟೊಮಾಸ್ಜ್ ಖೀಲಾರ್ಜ್‌, 32, ಮತ್ತು ಡೆವಿನ್ ಮ್ಯಾಕ್ಆರ್ಥರ್, 27 ಇವರುಗಳನ್ನು ಇತರ ಅಪರಾಧಗಳ ಅಡಿಯಲ್ಲಿಯೂ ಸಹ ಬಂಧಿಸಿದ್ದು, ನ್ಯೂಜರ್ಸಿ ಫೆಡರಲ್‌ ನ್ಯಾಯಾಲಯದ ವ್ಯಾಪ್ತಿಯಲ್ಲಿ ದೋಷಾರೋಪಣೆಯನ್ನು ಸಲ್ಲಿಸಲಾಗಿದೆ.

ಇಮೇಲ್‌ ಖಾತೆ

ಇಮೇಲ್‌ ಖಾತೆ

ಇಮೇಲ್‌ ಖಾತೆ

ನ್ಯೂಯಾರ್ಕ್‌ ಟೆಲಿಕಂಮ್ಯೂನಿಕೇಷನ್‌ ಕಂಪನಿಯ ಹಲವು ಗ್ರಾಹಕರು ಸಹ ಈ ಹ್ಯಾಕಿಂಗ್‌ಗೆ ಇಮೇಲ್‌ ಮೂಲಕ ಒಳಗಾಗಿರುವ ಬಗ್ಗೆ ಆರೋಪಿಗಳು ಹೇಳಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are some tips on staying safe even if one or more of your online accounts are hacked.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot