ಐಫೋನ್‌ನಲ್ಲಿ 5G ಇಂಟರ್‌ನೆಟ್‌ ಸ್ಪೀಡ್‌ ಹೆಚ್ಚಿಸುವುದು ಹೇಗೆ? ಇಲ್ಲಿದೆ ಮಾಹಿತಿ!

|

ಆಪಲ್‌ ಕಂಪೆನಿ ಭಾರತದಲ್ಲಿ 16.2 ಸಾಫ್ಟ್‌ವೇರ್ ಅಪ್ಡೇಟ್‌ ಪರಿಚಯಿಸುವ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ. ಇನ್ನು 5G ಸೇವೆ ಲಭ್ಯವಾದ ನಂತರ ನಿಮ್ಮ ಐಫೋನ್‌ನಲ್ಲಿ 5G ಸ್ಪೀಡ್‌ ಹೆಚ್ಚಿಸುವುದು ಹೇಗೆ, ಬ್ಯಾಟರಿ ಬಾಳಿಕೆ ಹೆಚ್ಚಿಸುವುದಕ್ಕೆ ಏನು ಮಾಡಬೇಕು ಅನ್ನೊದು ಕೂಡ ಮುಖ್ಯವಾಗಲಿದೆ. ಸದ್ಯ ಜಿಯೋ ಮತ್ತು ಏರ್‌ಟೆಲ್‌ 5G ಸೇವೆಯನ್ನು ಐಫೋನ್‌ಗೆ ಕನೆಕ್ಟ್‌ ಮಾಡೋದು ಸುಲಭವಾಗಲಿದೆ. ಈ ಟೆಲಿಕಾಂ ಆಪ್‌ರೇಟರ್‌ಗಳ 5G ಸೇವೆ ಬಳಸುವಾಗ ನೀವು ಕೆಲವು ಕ್ರಮಗಳನ್ನು ಅನುಸರಿಸುವುದು ಸೂಕ್ತವಾಗಿದೆ.

ಐಫೋನ್‌

ಹೌದು, ಐಫೋನ್‌ ಬಳಕೆದಾರರು ಭಾರತದಲ್ಲಿ 5G ಸೇವೆ ಪಡೆಯುವುದಕ್ಕೆ ದಿನಗಣನೆ ಶುರುವಾಗಿದೆ. ಆಪಲ್‌ ಕಂಪೆನಿ ಹೊಸ ಸಾಫ್ಟ್‌ವೇರ್‌ ಅಪ್ಡೇಟ್‌ ಹೊರತರುವ ಮೂಲಕ ಬಹು ದಿನಗಳ ನಿರೀಕ್ಷೆಯನ್ನು ಈಡೇರಿಸಿದೆ. ಇನ್ನು ಐಫೋನ್‌ಗಳಲ್ಲಿ 5G ಅನ್ನು ಸಕ್ರಿಯಗೊಳಿಸುವುದು ಸರಳವಾಗಿದೆ, ಇದಕ್ಕಾಗಿ ಬಳಕೆದಾರರು ವೆಚ್ಚ ಮತ್ತು ಸೆಟಪ್‌ಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಹಾಗಾದ್ರೆ ಭಾರತದಲ್ಲಿ ಐಫೋನ್‌ಗಳಲ್ಲಿ 5G ಸೇವೆಯನ್ನು ಆಕ್ಟಿವ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್‌ನಲ್ಲಿ ಭಾರತದ 5G ಸೇವೆಯನ್ನು ಆಕ್ಟಿವ್‌ ಮಾಡುವುದು ಹೇಗೆ?

ಐಫೋನ್‌ನಲ್ಲಿ ಭಾರತದ 5G ಸೇವೆಯನ್ನು ಆಕ್ಟಿವ್‌ ಮಾಡುವುದು ಹೇಗೆ?

ಭಾರತದ 5G ಸೇವೆಯನ್ನು ಐಫೋನ್‌ನಲ್ಲಿ ಆಕ್ಟಿವ್‌ ಮಾಡಬೇಕಾದರೆ ಮೊದಲಿಗೆ ಬಳಕೆದಾರರು iOS ಆವೃತ್ತಿ 16.2 ಅಪ್ಡೇಟ್‌ ಮಾಡಬೇಕಾಗಿದೆ. ಹೊಸ ಸಾಫ್ಟ್‌ವೇರ್‌ ಅಪ್ಡೇಟ್‌ಗಾಗಿ ಸೆಟ್ಟಿಂಗ್ಸ್‌ > ಜನರಲ್‌ > ಸಾಫ್ಟ್‌ವೇರ್ ಅಪ್ಡೇಟ್‌ ಹೋಗಬೇಕಾಗುತ್ತದೆ. ಸಾಫ್ಟ್‌ವೇರ್‌ ಅಪ್ಡೇಟ್‌ ಡೌನ್‌ಲೋಡ್‌ ಆದ ನಂತರ ಸೆಟ್ಟಿಂಗ್ಸ್‌ > ಮೊಬೈಲ್ ಡೇಟಾ > ಮೊಬೈಲ್ ಡೇಟಾ ಆಯ್ಕೆಗಳು > ಧ್ವನಿ ಮತ್ತು ಡೇಟಾ > 5G ಅಥವಾ 5G ಆಟೋಗೆ ಹೋಗುವ ಮೂಲಕ 5G ಆಯ್ಕೆಯನ್ನು ಆಕ್ಟಿವ್‌ ಮಾಡಬಹುದಾಗಿದೆ.

5G ನೆಟ್‌ವರ್ಕ್‌ ವೇಗವನ್ನು ಹೆಚ್ಚಿಸುವುದು ಹೇಗೆ?

5G ನೆಟ್‌ವರ್ಕ್‌ ವೇಗವನ್ನು ಹೆಚ್ಚಿಸುವುದು ಹೇಗೆ?

ಇನ್ನು ಆಪಲ್‌ ಐಫೋನ್‌ನಲ್ಲಿ 5G ಸೇವೆಯನ್ನು ಆಕ್ಟಿವ್‌ ಮಾಡಿದ ನಂತರ ನೀವು 5G ಸ್ಪೀಡ್‌ ಹೆಚ್ಚಿಸಲು 5G ನೆಟ್‌ವರ್ಕ್‌ ಆಯ್ಕೆಯನ್ನು ಮಾತ್ರ ಸೆಲೆಕ್ಟ್‌ ಮಾಡಬೇಕಾಗುತ್ತದೆ. ಇದರಿಂದ ವೇಗದ ಡೌನ್‌ಲೋಡ್‌ಗಳು, ಬ್ರೌಸರ್‌ ಎಲ್ಲವೂ ಸಾಧ್ಯವಾಗಲಿದೆ. ಆದರೆ ಈ ಅವಧಿಯಲ್ಲಿ ನಿಮ್ಮ ಐಫೋನ್‌ ಬ್ಯಾಟರಿ ದಕ್ಷತೆ ಕಡಿಮೆಯಾಗುವ ಸಾದ್ಯತೆ ಕೂಡ ಇದೆ.

5G ಬಳಸುವಾಗ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಹೀಗೆ ಮಾಡಿ?

5G ಬಳಸುವಾಗ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಹೀಗೆ ಮಾಡಿ?

ಐಫೋನ್‌ ಬಳಕೆದಾರರಯ ಬ್ಯಾಟರಿ ಬಳಕೆಯ ಅವಧಿಯ ಮೇಲೆ ಕೂಡ ನೀವು ಗಮನಿಸಬೇಕಾಗುತ್ತದೆ. ಆದ್ದರಿಂದ ನೀವು ಬ್ಯಾಟರಿ ಬಾಳಿಕೆಯ ಅವಧಿಯನ್ನು ಹೆಚ್ಚುಸುವುದಕ್ಕೆ 5G ಆಟೋ ಆಯ್ಕೆಯನ್ನು ಆಯ್ಕೆ ಮಾಡಬಹುದಾಗಿದೆ. ಇನ್ನು ಜಿಯೋ ಬಳಕೆದಾರರು 5G ಸ್ಟ್ಯಾಂಡಲೋನ್ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದರಿಂದ 5G ಯ ಸಂಪೂರ್ಣ ಸಾಮರ್ಥ್ಯವನ್ನು ಅನ್ಲಾಕ್ ಮಾಡುತ್ತದೆ. ಆದರೆ ಏರ್‌ಟೆಲ್ ಸ್ವತಂತ್ರವಲ್ಲದ 5G ಅನ್ನು ಬಳಸುತ್ತಿದೆ, ಇದು ಈಗಾಗಲೇ ಲಭ್ಯವಿರುವ 4G ನೆಟ್‌ವರ್ಕ್ ಅನ್ನು ಆಧರಿಸಿದೆ ಎನ್ನಲಾಗಿದೆ.

ಬಳಕೆದಾರರು

ಐಫೋನ್‌ ಬಳಕೆದಾರರು ಭಾರತದಲ್ಲಿ 5G ಸೇವೆಗೆ ಪ್ರವೇಶ ಪಡೆಯುವ ಮುಖಾಂತರ 5G ನೆಟ್‌ವರ್ಕ್‌ ಅನ್ನು ಅನುಭವಿಸಬಹುದಾಗಿದೆ. ಈಗಾಗಲೇ ದೇಶದ ಪ್ರಮುಖ ನಗರಗಳಲ್ಲಿ ಲಭ್ಯವಾಗುತ್ತಿರುವ 5G ಸೇವೆ ನಿಮ್ಮ ಐಫೋನ್‌ನಲ್ಲಿ ಕೂಡ ದೊರೆಯಲಿದೆ. ಮುಂದಿನ ವರ್ಷ ದೇಶದ ಎಲ್ಲಾ ನಗರಗಳಲ್ಲಿ ಲಭ್ಯವಾದ ನಂತರ ಎಲ್ಲಾ ಕಡೆಯು ಕೂಡ 5G ಸೇವೆಯನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.

ಭಾರತದಲ್ಲಿ 5G ಸೇವೆಯ ಯಾವೆಲ್ಲಾ ನಗರಗಳಲ್ಲಿ ಲಭ್ಯವಾಗುತ್ತಿದೆ?

ಭಾರತದಲ್ಲಿ 5G ಸೇವೆಯ ಯಾವೆಲ್ಲಾ ನಗರಗಳಲ್ಲಿ ಲಭ್ಯವಾಗುತ್ತಿದೆ?

ಪ್ರಸ್ತುತ ಭಾರತದ 5G ಸೇವೆ ದೇಶದ ಕೆಲವೇ ಆಯ್ದ ಪ್ರಮುಖ ನಗರಗಳಲ್ಲಿ ಲಭ್ಯವಾಗ್ತಿದೆ. ಇದರಲ್ಲಿ ಏರ್‌ಟೆಲ್‌ ಮತ್ತು ಜಿಯೋ ಟೆಲಿಕಾಂನ 5G ಸೇವೆ ದೊರೆಯುತ್ತಿದೆ. ಇನ್ನು ಏರ್‌ಟೆಲ್ ತನ್ನ 5G ಸೇವೆಗಳು ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಸಿಲಿಗುರಿ, ನಾಗ್ಪುರ, ವಾರಣಾಸಿ, ಪಾಣಿಪತ್, ಗುರುಗ್ರಾಮ್, ಗುವಾಹಟಿ ಮತ್ತು ಪಾಟ್ನಾ ನಗರದಲ್ಲಿ ಪ್ರಾರಂಭಿಸಿದೆ. ಆದರೆ ರಿಲಯನ್ಸ್‌ ಜಿಯೋ ತನ್ನ ಜಿಯೋ ಟ್ರೂ 5G ಸೇವೆಯನ್ನು ದೆಹಲಿ-NCR, ಮುಂಬೈ, ಕೋಲ್ಕತ್ತಾ, ವಾರಣಾಸಿ, ಚೆನ್ನೈ, ಬೆಂಗಳೂರು, ಹೈದರಾಬಾದ್, ಪುಣೆ, ನಾಥದ್ವಾರ ಮತ್ತು ಗುಜರಾತ್ (33 ಜಿಲ್ಲೆಗಳು) ನಲ್ಲಿ ಪರಿಚಯಿಸಿದೆ.

Best Mobiles in India

English summary
How to activate 5G internet speed on iPhone: here's steps

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X