ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವೈಫೈ ಕಾಲ್‌ ಮೂಲಕ ಕರೆ ಮಾಡಲು ಹೀಗೆ ಮಾಡಿ?

|

ಅಗತ್ಯ ಸಂದರ್ಭಗಳಲ್ಲಿ ಕರೆ ಮಾಡುವಾಗ ನೆಟ್‌ವರ್ಕ್‌ ಸಮಸ್ಯೆ ಎದುರಾದರೆ ಸಾಕಷ್ಟು ಕಿರಿಕಿರಿ ಎನಿಸಲಿದೆ. ಬಹುಮುಖ್ಯವಾದ ಒಟಿಪಿಗಾಗಿ ಪಡೆದುಕೊಳ್ಳಲು ಯತ್ನಿಸುವಾಗ ಸೆಲ್ಯುಲಾರ್‌ ಸಿಗ್ನಲ್‌ ಸಿಗದೆ ಹೋದಾಗ ಆಗುವ ಸಮಸ್ಯೆ ಅಷ್ಟಿಷ್ಟಲ್ಲ. ಇಂತಹ ಸಮಯದಲ್ಲಿ ವೈಫೈ ನೆಟ್‌ವರ್ಕ್ ಲಭ್ಯವಿದ್ದರೆ ನಿಮಗೆ ನೆಟ್‌ವರ್ಕ್‌ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ವೈಫೈ ಕಾಲ್‌ ಬಳಸುವುದು ಸೂಕ್ತವಾಗಲಿದೆ.

ನೆಟ್‌ವರ್ಕ್‌

ಹೌದು, ನಿಮ್ಮ ಫೋನಿನ ನೆಟ್‌ವರ್ಕ್‌ ಸೆಲ್ಯುಲಾರ್‌ ಸಿಗ್ನಲ್‌ ಕಡಿಮೆ ಇದ್ದಾಗ ವೈಫೈ ಕಾಲ್‌ ಬಳಸುವುದು ಸೂಕ್ತವಾಗಲಿದೆ. ವೈಫೈ ನೆಟ್‌ವರ್ಕ್‌ ನಿಮಗೆ ಲಭ್ಯವಿದ್ದು, ನೆಟ್‌ವರ್ಕ್‌ ಸೆಲ್ಯುಲಾರ್‌ ಸಿಗ್ನಲ್‌ ಇಲ್ಲದೆ ಹೋದರೆ ವೈಫೈ ಕರೆ ಮಾಡಬಹುದಾಗಿದೆ. ವೈಫೈ ಕರೆಯಲ್ಲಿ ಇಂಟರ್‌ನೆಟ್‌ ಕನೆಕ್ಟಿವಿಟಿ ಬಳಸಿಕೊಂಡು ಅದೇ ಸಂಖ್ಯೆಯಿಂದ ಕರೆಗಳನ್ನು ಡಯಲ್‌ ಮಾಡಲು ಸಾಧ್ಯವಾಗಲಿದೆ. ಹಾಗಾದ್ರೆ ನಿಮ್ಮ ಆಂಡ್ರಾಯ್ಡ್‌ ಫೋನ್‌ ಅಥವಾ ಐಫೋನ್‌ನಲ್ಲಿ ವೈಫೈ ಕಾಲ್‌ ಅನ್ನು ಆಕ್ಟಿವ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೈಫೈ

ನೀವು ಯಾರಿಗಾದರೂ ವೈಫೈ ಕರೆ ಮಾಡಿದರೂ ಕೂಡ ನಿಮ್ಮ ಕರೆ ಸ್ವಿಕರಿಸುವವರಿಗೆ ನಿಮ್ಮ ಫೋನ್‌ ನಂಬರ್‌ನಿಂದಲೇ ಕರೆ ಹೋಗಲಿದೆ. ಇದು ಇಂಟರ್‌ನೆಟ್‌ ಕನೆಕ್ಟಿವಿಟಿಯಿಂದ ನಿಮ್ಮ ಫೋನ್‌ ನಂಬರ್‌ನಿಂದಲೇ ಕರೆ ಮಾಡಲಿದೆ ಅಷ್ಟೇ. ನೀವು ವೈಫೈ ಕರೆ ಮಾಡಿದಾಗ ನಿಮ್ಮ ಫೋನ್‌ನ ಕಾಲ್‌ ಸ್ಕ್ರೀನ್‌ನಲ್ಲಿ ವೈಫೈ ಕರೆಯ ಬಗ್ಗೆ ಮಾಹಿತಿಯನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ವೈಫೈ ಬಳಸಿಕೊಂಡು ಕರೆ ಮಾಡಿದರೆ ಸುಧಾರಿತ ಕರೆ ಗುಣಮಟ್ಟವನ್ನು ಪಡೆದುಕೊಳ್ಳಬಹುದು. ಅಲ್ಲದೆ ನಿಮ್ಮ ಫೋನ್‌ನ ಬ್ಯಾಟರಿಯನ್ನು ಕೂಡ ಸೇವ್‌ ಮಾಡಲಿದೆ. ಆದರಿಂದ ಹೆಚ್ಚಿನ ಜನರು ವೈಫೈ ಕರೆಯನ್ನು ಆಕ್ಟಿವ್‌ ಮಾಡಲು ಬಯಸುತ್ತಾರೆ. ನೀವು ವೈಫೈ ಕರೆಯನ್ನು ಆಕ್ಟಿವ್‌ ಮಾಡಬೇಕಾದರೆ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಆಂಡ್ರಾಯ್ಡ್‌ನಲ್ಲಿ ವೈಫೈ ಕಾಲ್‌ ಆಕ್ಟಿವ್‌ ಮಾಡುವುದು ಹೇಗೆ?

ಆಂಡ್ರಾಯ್ಡ್‌ನಲ್ಲಿ ವೈಫೈ ಕಾಲ್‌ ಆಕ್ಟಿವ್‌ ಮಾಡುವುದು ಹೇಗೆ?

ಆಂಡ್ರಾಯ್ಡ್‌ ಬಳಕೆದಾರರು ಗೂಗಲ್‌ ಪಿಕ್ಸೆಲ್‌ನಲ್ಲಿ ವೈಫೈ ಕಾಲ್‌ ಆಕ್ಟಿವ್‌ ಮಾಡಲು ಈ ಕ್ರಮ ಅನುಸರಿಸಬೇಕಾಗುತ್ತದೆ.
ಹಂತ:1 ಸೆಟ್ಟಿಂಗ್ಸ್‌ > ನೆಟ್‌ವರ್ಕ್ ಮತ್ತು ಇಂಟರ್‌ನೆಟ್ > ಕಾಲ್ಸ್‌ ಮತ್ತು ಎಸ್‌ಎಂಎಸ್‌ ಅನ್ನು ತೆರೆಯಬೇಕು.
ಹಂತ:2 ಇದರಲ್ಲಿ ವೈ-ಫೈ ಕಾಲ್‌ ಮಾಡುವ ಆಯ್ಕೆಯನ್ನು ಸರ್ಚ್‌ ಮಾಡಿ ಮತ್ತು ತೆರೆಯಿರಿ.
ಹಂತ:3 ಇದೀಗ ಯೂಸ್‌ ವೈಫೈ ಕಾಲಿಂಗ್‌ ಆಯ್ಕೆಯನ್ನು ಟ್ಯಾಪ್‌ ಮಾಡಿ.

ಇನ್ನು ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ನಲ್ಲಿ ವೈಫೈ ಕಾಲ್‌ ಆಕ್ಟಿವ್‌ ಮಾಡಲು ಹೀಗೆ ಮಾಡಿ?

ಇನ್ನು ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ನಲ್ಲಿ ವೈಫೈ ಕಾಲ್‌ ಆಕ್ಟಿವ್‌ ಮಾಡಲು ಹೀಗೆ ಮಾಡಿ?

ಹಂತ:1 ಸೆಟ್ಟಿಂಗ್ಸ್‌ > ಮೊಬೈಲ್ ನೆಟ್‌ವರ್ಕ್ > ಸಿಮ್ 1 ಅನ್ನು ಟ್ಯಾಪ್ ಮಾಡಿ
ಹಂತ:2 ವೈ-ಫೈ ಕಾಲ್‌ ಆಯ್ಕೆಯನ್ನು ಟ್ಯಾಪ್‌ ಮಾಡಿ
ಹಂತ:3 ವೈ-ಫೈ ಕಾಲ್‌ ಅನ್ನು ಆನ್ ಮಾಡಿ.
ಹಂತ:4 ಇದೀಗ ನೀವು ವೈ-ಫೈ ಕಾಲ್‌ ಮತ್ತು ಸೆಲ್ಯುಲಾರ್ ಕಾಲ್‌ ನಡುವೆ ನಿಮ್ಮಆದ್ಯತೆಯನ್ನು ಸೆಟ್‌ ಮಾಡಬಹುದು.

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ನಲ್ಲಿ ವೈಫೈ ಕಾಲ್‌ ಆಕ್ಟಿವ್‌ ಮಾಡಲು ಈ ಕ್ರಮ ಅನುಸರಿಸಿ!

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ನಲ್ಲಿ ವೈಫೈ ಕಾಲ್‌ ಆಕ್ಟಿವ್‌ ಮಾಡಲು ಈ ಕ್ರಮ ಅನುಸರಿಸಿ!

ಹಂತ:1 ಮೊದಲಿಗೆ ನಿಮ್ಮ ಫೋನ್ ಅಪ್ಲಿಕೇಶನ್ ತೆರೆಯಿರಿ
ಹಂತ:2 ಇದರ ಮೇಲಿನ ಬಲಭಾಗದಲ್ಲಿರುವ ಟ್ರಿಪಲ್-ಡಾಟ್ ಐಕಾನ್ ಮೇಲೆ ಟ್ಯಾಪ್ ಮಾಡಿ
ಹಂತ:3 ಇದೀಗ ಸೆಟ್ಟಿಂಗ್ಸ್‌ ತೆರೆಯಿರಿ
ಹಂತ:4 ಇದರಲ್ಲಿ ನೀವು ವೈಫೈ ಕಾಲ್‌ ಮಾಡುವ ಆಯ್ಕೆಯನ್ನು ಕಾಣಬಹುದು.
ಹಂತ:5 ವೈಫೈ ಕಾಲ್‌ ಆಯ್ಕೆಯನ್ನು ತೆರೆಯಿರಿ ಮತ್ತು ಟಾಗಲ್ ಮಾಡಿ.

ಐಫೋನ್‌ನಲ್ಲಿ ವೈ-ಫೈ ಕಾಲ್‌ ಆಕ್ಟಿವ್‌ ಮಾಡುವುದು ಹೇಗೆ?

ಐಫೋನ್‌ನಲ್ಲಿ ವೈ-ಫೈ ಕಾಲ್‌ ಆಕ್ಟಿವ್‌ ಮಾಡುವುದು ಹೇಗೆ?

ಹಂತ:1 ಸೆಟ್ಟಿಂಗ್ಸ್‌> ಫೋನ್ >ವೈ-ಫೈ ಕಾಲ್‌ ಟ್ಯಾಪ್ ಮಾಡಿ.
ಹಂತ:2 ನಂತರ ಐಫೋನ್‌ನಲ್ಲಿ ವೈಫೈ ಕಾಲ್‌ ಮಾಡುವುದನ್ನು ಟಾಗಲ್‌ ಮಾಡಿ.

Best Mobiles in India

English summary
Wi-Fi calling enables receiving calls and text messages via internet connection.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X