ಗೂಗಲ್‌ಪೇ, ಫೋನ್‌ಪೇನಲ್ಲಿ ಕ್ರೆಡಿಟ್‌ ಕಾರ್ಡ್‌ ಅನ್ನು ಲಿಂಕ್‌ ಮಾಡುವುದು ಹೇಗೆ?

|

ಇಂದಿನ ದಿನಗಳಲ್ಲಿ ಯುಪಿಐ ಆಧಾರಿತ ಪಾವತಿ ಅಪ್ಲಿಕೇಶನ್‌ಗಳು ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ. ಪ್ರತಿಯೊಂದು ವ್ಯವಹಾರಕ್ಕೂ ಯುಪಿಐ ಮೂಲಕ ಪಾವತಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹಣವನ್ನು ನಿಮ್ಮ ಬ್ಯಾಂಕ್‌ ಅಕೌಂಟ್‌ನಿಂದ ಬೇರೆಯವರಿಗೆ ಟ್ರಾನ್ಸಫರ್‌ ಮಾಡುವುದು ಯುಪಿಐ ಪಾವತಿ ಅಪ್ಲಿಕೇಶನ್‌ಗಳಲ್ಲಿ ತುಂಬಾ ಸುಲಭವಾಗಿದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಯುಪಿಐ ಪಾವತಿ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಸದ್ಯ ಗೂಗಲ್‌ ಪೇ, ಫೋನ್‌ಪೇ, ಪೇಟಿಎಂ ಅಪ್ಲಿಕೇಶನ್‌ಗಳು ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿವೆ.

ಗೂಗಲ್‌

ಹೌದು, ಗೂಗಲ್‌ ಪೇ, ಫೋನ್‌ಪೇ, ಪೇಟಿಎಂ ಅಪ್ಲಿಕೇಶನ್‌ಗಳು ಜನಪ್ರಿಯ ಯುಪಿಐ ಅಪ್ಲಿಕೇಶನ್‌ಗಳಾಗಿ ಗುರುತಿಸಿಕೊಂಡಿವೆ. ಇನ್ನು ಈ ಅಪ್ಲಿಕೇಶನ್‌ಗಳ ಮೂಲಕ ನೀವು ಹಣ ಪಾವತಿಸಬೇಕಾದರೆ ನಿಮ್ಮ ಬ್ಯಾಂಕ್‌ ಅಕೌಂಟ್‌ ಅನ್ನು ಲಿಂಕ್‌ ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು ನಿಮ್ಮ ಬ್ಯಾಂಕಿನ ಎಟಿಎಂ ಕಾರ್ಡಿನ ವಿವರ ನಮೂದಿಸುವುದು ಅತ್ಯಗತ್ಯವಾಗಿದೆ. ಇದರಿಂದ ನೀವು ನಿಮ್ಮ ಬ್ಯಾಂಕ್‌ ಅಕೌಂಟ್‌ ಮೂಲಕ ಹಣ ಪಾವತಿಸಲು ಸಾಧ್ಯವಾಗಲಿದೆ. ಆದರೆ ಇದೀಗ ಯುಪಿಐ ಪಾವತಿ ಅಪ್ಲಿಕೇಶನ್‌ಗಳು ಕ್ರೆಡಿಟ್‌ ಕಾರ್ಡ್‌ಗಳನ್ನು ಕೂಡ ಲಿಂಕ್‌ ಮಾಡುವುದಕ್ಕೆ ಅವಕಾಶವನ್ನು ನೀಡಿವೆ.

ಅಪ್ಲಿಕೇಶನ್‌ಗಳು

ಭಾರತದಲ್ಲಿ ಫೋನ್‌ಪೇ, ಪೇಟಿಎಂ, ಗೂಗಲ್‌ಪೇ ಮತ್ತು ಇತರ ಯುಪಿಐ ಅಪ್ಲಿಕೇಶನ್‌ಗಳು ಇದೀಗ ಕ್ರೆಡಿಟ್‌ ಕಾರ್ಡ್‌ಗಳನ್ನು ಬೆಂಬಲಿಸಲಿವೆ. ನಿಮ್ಮ ಯುಪಿಐ ಪಾವತಿ ಅಪ್ಲಿಕೇಶನ್‌ಗಳಲ್ಲಿ ಕ್ರೆಡಿಟ್‌ ಕಾರ್ಡ್‌ಗಳನ್ನು ಸುಲಭವಾಗಿ ಲಿಂಕ್‌ ಮಾಡಬಹುದಾಗಿದೆ. ಕ್ರೆಡಿಟ್‌ ಕಾರ್ಡ್‌ಗಳನ್ನು ಲಿಂಕ್‌ ಮಾಡುವ ಮೂಲಕ ಕ್ರೆಡಿಟ್‌ ಕಾರ್ಡ್‌ನಲ್ಲಿನ ಹಣವನ್ನು ಪಾವತಿಸುವುದಕ್ಕೆ ಸಾಧ್ಯವಿದೆ. ಇದರಿಂದ ನೀವು ಭಾರತ್‌ QR ಕೋಡ್ ಬೆಂಬಲಿತ ಬ್ಯುಸಿನೆಸ್‌ ಅಕೌಂಟ್‌ಗಳಿಗೆ ಕ್ರೆಡಿಟ್ ಕಾರ್ಡ್‌ಗಳ (CC) ಮೂಲಕ ಸ್ಕ್ಯಾನ್ ಮಾಡಬಹುದು ಮತ್ತು ಪಾವತಿಸಬಹುದು. ಹಾಗಾದ್ರೆ ಯುಪಿಐ ಪಾವತಿ ಅಪ್ಲಿಕೇಶನ್‌ಗಳಿಗೆ ಕ್ರೆಡಿಟ್‌ ಕಾರ್ಡ್‌ ಅನ್ನು ಲಿಂಕ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಾಡುವುದು

ಯುಪಿಐ ಪಾವತಿ ಅಪ್ಲಿಕೇಶನ್‌ಗಳಲ್ಲಿ ಕ್ರೆಡಿಟ್‌ ಕಾರ್ಡ್‌ ಅನ್ನು ಲಿಂಕ್‌ ಮಾಡುವುದು ನಿಮ್ಮ ಡೆಬಿಟ್‌ ಕಾರ್ಡ್‌ ಲಿಂಕ್‌ ಮಾಡಿದ ರೀತಿಯಲ್ಲಿಯೇ ಇರುತ್ತದೆ. ಅಲ್ಲದೆ ಕ್ರೆಡಿಟ್‌ ಕಾರ್ಡ್‌ ಅನ್ನು ಲಿಂಕ್‌ ಮಾಡಿದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ UPI ಪಾವತಿಗಳ ರೀತಿಯಲ್ಲಿಯೇ ಇದು ಕಾರ್ಯನಿರ್ವಹಿಸುತ್ತದೆ. ನೀವು QR ಕೋಡ್ ಅನ್ನು ಸ್ಕ್ಯಾನ್ ಮಾಡಿ > ಹಣವನ್ನು ನಮೂದಿಸಿ> ಪಾವತಿ ಮೂಲವನ್ನು ಆಯ್ಕೆಮಾಡಿ > ಪ್ರಕ್ರಿಯೆಯನ್ನು ಪ್ರಾರಂಭಿಸಿ> UPI ಪಿನ್ ಬದಲಿಗೆ OTP ಅನ್ನು ನಮೂದಿಸಿ > ಇದೀಗ ನಿಮ್ಮ ಪಾವತಿ ಪೂರ್ಣವಾಗಲಿದೆ.

ಕ್ರೆಡಿಟ್

ಪ್ರಸ್ತುತ ಕ್ರೆಡಿಟ್ ಕಾರ್ಡ್‌ಗಳ ಮೂಲಕ UPI ಪಾವತಿಗಳನ್ನು ಮಾಡುವುದಕ್ಕೆ ಅವಕಾಶವಿಲ್ಲ. ಆದರೆ UPI ಅಪ್ಲಿಕೇಶನ್‌ಗಳಿಗೆ ಕಾರ್ಡ್‌ಗಳನ್ನು ಸೇರಿಸಲು ಸಾಧ್ಯವಿದೆ. ಹಾಗೆಯೇ ನಿಮ್ಮ ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಭಾರತ್ ಕ್ಯೂಆರ್ ಕೋಡ್‌ ಸ್ಕ್ಯಾನ್‌ ಮಾಡಿ ಪಾವತಿ ಮಾಡುವುದಕ್ಕೆ ಅನುಮತಿಸುತ್ತದೆ. ಇನ್ನು ನಿಮ್ಮ ಯುಪಿಐ ಪಾವತಿ ಅಪ್ಲಿಕೇಶನ್‌ಗಳಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ಸೇರಿಸುವಾಗ ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಗೂಗಲ್‌ ಪೇ, ಫೋನ್‌ಪೇ, ಪೇಟಿಎಂ ಅಪ್ಲಿಕೇಶನ್‌ಗಳಲ್ಲಿ ವಿವಿಧ ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಗೂಗಲ್‌ ಪೇ ಅಪ್ಲಿಕೇಶನ್‌ಗೆ ನಿಮ್ಮ ಕ್ರೆಡಿಟ್ ಕಾರ್ಡ್ ಲಿಂಕ್‌ ಮಾಡುವುದು ಹೇಗೆ?

ಗೂಗಲ್‌ ಪೇ ಅಪ್ಲಿಕೇಶನ್‌ಗೆ ನಿಮ್ಮ ಕ್ರೆಡಿಟ್ ಕಾರ್ಡ್ ಲಿಂಕ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಗೂಗಲ್‌ ಪೇ ಅಪ್ಲಿಕೇಶನ್‌ ತೆರೆಯಿರಿ ಮತ್ತು ನಿಮ್ಮ ಪ್ರೊಫೈಲ್ ಅನ್ನು ಟ್ಯಾಪ್ ಮಾಡಿ.
ಹಂತ:2 ಇದರಲ್ಲಿ ಪೇ ಬ್ಯುಸಿನೆಸ್‌ ಅನ್ನು ಟ್ಯಾಪ್‌ ಮಾಡಿ.
ಹಂತ:3 ಇದರಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಸೇರಿಸಿ ಆಯ್ಕೆಮಾಡಿ.
ಹಂತ:4 ಕಂಟಿನ್ಯೂ ಮಾಡಲು ಪ್ರೊಸಿಡ್‌ ಅನ್ನು ಟ್ಯಾಪ್‌ ಮಾಡಿ.
ಹಂತ:5 ಇದೀಗ ನಿಮ್ಮ ಕ್ರೆಡಿಟ್‌ ಕಾರ್ಡ್‌ನ ವಿವರಗಳನ್ನು ನಮೂದಿಸಿರಿ.
ಹಂತ:6 ನಂತರ ಕಾರ್ಡ್‌ ಮುಕ್ತಾಯದ ದಿನಾಂಕ ಮತ್ತು CVV ವಿವರಗಳನ್ನು ನಮೂದಿಸಿ
ಹಂತ:7 ನಂತರ ಸೇವ್‌ ಟ್ಯಾಪ್ ಮಾಡಿ.
ಹಂತ:8 ಇದಾದ ಮೇಲೆ ಬರುವ ಎಲ್ಲಾ ನಿಯಮಗಳನ್ನು ಓದಿರಿ ಮತ್ತು ಮೋರ್‌ ಟ್ಯಾಪ್ ಮಾಡಿ.
ಹಂತ:9 ನಂತರ Accept & continue ಮಾಡಿ.
ಹಂತ:10 ಇದೀಗ ನಿಮ್ಮ ನೋಂದಾಯಿತ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿ.
ಹೀಗೆ ಮಾಡುವ ಮೂಲಕ ನಿಮ್ಮ ಕ್ರೆಡಿಟ್‌ ಕಾರ್ಡ್‌ ಅನ್ನು ಗೂಗಲ್‌ಪೇ ಅಕೌಂಟ್‌ಗೆ ಲಿಂಕ್‌ ಮಾಡಬಹುದು. ಇನ್ನು ಗೂಗಲ್‌ ಪೇ ಅಪ್ಲಿಕೇಶನ್‌ ಕೇವಲ Visa ಮತ್ತು Mastercard ಕ್ರೆಡಿಟ್ ಕಾರ್ಡ್‌ಗಳನ್ನು ಮಾತ್ರ ಬೆಂಬಲಿಸುತ್ತದೆ.

ಫೋನ್‌ಪೇ ಅಕೌಂಟ್‌ಗೆ ಕ್ರೆಡಿಟ್ ಕಾರ್ಡ್ ಅನ್ನು ಸೇರಿಸಲು ಹೀಗೆ ಮಾಡಿ:

ಫೋನ್‌ಪೇ ಅಕೌಂಟ್‌ಗೆ ಕ್ರೆಡಿಟ್ ಕಾರ್ಡ್ ಅನ್ನು ಸೇರಿಸಲು ಹೀಗೆ ಮಾಡಿ:

ಹಂತ:1 ಫೋನ್‌ ಪೇ ಅಪ್ಲಿಕೇಶನ್‌ ತೆರೆಯಿರಿ ಮತ್ತು ನಿಮ್ಮ ಪ್ರೊಫೈಲ್‌ ಅನ್ನು ಟ್ಯಾಪ್‌ ಮಾಡಿ.
ಹಂತ:2 ನಂತರ ಪೇಮೆಂಟ್‌ ವಿಧಾನಗಳಲ್ಲಿ ವ್ಯೂವ್‌ ಆಲ್‌ ಪೇಮೆಂಟ್‌ ಮೆತೆಡ್ಸ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ಇದರಲ್ಲಿ ಕ್ರೆಡಿಟ್/ಡೆಬಿಟ್ ಕಾರ್ಡ್ಸ್‌ ಆಯ್ಕೆಯಲ್ಲಿ ಆಡ್‌ ಕಾರ್ಡ್ ಟ್ಯಾಪ್ ಮಾಡಿ.
ಹಂತ:4 ಇದೀಗ ನಿಮ್ಮ ಕ್ರೆಡಿಟ್‌ ಕಾರ್ಡ್‌ನ ವಿವರಗಳನ್ನು ನಮೂದಿಸಿ
ಹಂತ:5 ಎಲ್ಲಾ ವಿವರಗಳನ್ನು ಆಡ್‌ ಮಾಡಿದ ನಂತರ ಆಡ್‌ ಟ್ಯಾಪ್ ಮಾಡಿ.
ಹಂತ:6 ನಂತರ ನಿಮ್ಮ ಫೋನ್‌ ನಂಬರ್‌ಗೆ ಬರುವ 6-ಅಂಕಿಯ OTP ಅನ್ನು ನಮೂದಿಸಿ ಮತ್ತು ಸಬ್ಮಿಟ್‌ ಟ್ಯಾಪ್ ಮಾಡಿ.

ಹೀಗೆ ಮಾಡುವ ಮೂಲಕ ಫೋನ್‌ ಪೇ ಅಕೌಂಟ್‌ನಲ್ಲಿ ಕ್ರೆಡಿಟ್‌ ಕಾರ್ಡ್‌ ಅನ್ನು ಲಿಂಕ್‌ ಮಾಡಬಹುದಾಗಿದೆ. ಇದರ ಮೂಲಕ ನೀವು ಬ್ಯುಸಿನೆಸ್‌ ಅಕೌಂಟ್‌ಗಳಿಗೆ ಹಣವನ್ನು ಪಾವತಿ ಮಾಡಬಹುದಾಗಿದೆ. ಫೋನ್‌ ಪೇ ಅಮೆರಿಕನ್‌ ಎಕ್ಸ್‌ಪ್ರೆಸ್‌ ಡಿನರ್ಸ್‌ ಕ್ಲಬ್‌, ಮಾಸ್ಟರ್‌ ಕಾರ್ಡ್‌ ರುಪೇ, ರುಪೇ, ವೀಸಾ ಮತ್ತು ಪೇಮೆಂಟ್‌ ಕಾರ್ಡ್‌ ನೆಟ್‌ವರ್ಕ್‌ ಸೇರಿದಂತೆ ಪ್ರಮುಖ ಕ್ರೆಡಿಟ್‌ ಕಾರ್ಡ್‌ಗಳನ್ನು ಬೆಂಬಲಿಸಲಿದೆ.

ಪೇಟಿಎಂ ಅಪ್ಲಿಕೇಶನ್‌ನಲ್ಲಿ ನಿಮ್ಮ ಕ್ರೆಡಿಟ್‌ ಕಾರ್ಡ್‌ ಲಿಂಕ್‌ ಮಾಡಲು ಹೀಗೆ ಮಾಡಿ:

ಪೇಟಿಎಂ ಅಪ್ಲಿಕೇಶನ್‌ನಲ್ಲಿ ನಿಮ್ಮ ಕ್ರೆಡಿಟ್‌ ಕಾರ್ಡ್‌ ಲಿಂಕ್‌ ಮಾಡಲು ಹೀಗೆ ಮಾಡಿ:

ಹಂತ:1 ಮೊದಲಿಗೆ ಪೇಟಿಎಂ ಅಪ್ಲಿಕೇಶನ್‌ ತೆರೆಯಿರಿ ಮತ್ತು ನಿಮ್ಮ ಪ್ರೊಫೈಲ್ ಅನ್ನು ಟ್ಯಾಪ್‌ ಮಾಡಿ.
ಹಂತ:2 ಇದೀಗ ಪೇಮೆಂಟ್‌ ಸೆಟ್ಟಿಂಗ್ಸ್‌ ಟ್ಯಾಪ್ ಮಾಡಿ.
ಹಂತ:3 ನಂತರ ಸೇವ್ಡ್‌ ಕಾರ್ಡ್ಸ್‌ ಟ್ಯಾಪ್ ಮಾಡಿ.
ಹಂತ:4 ಈಗ ಆಡ್‌ ನ್ಯೂ ಕಾರ್ಡ್ ಟ್ಯಾಪ್ ಮಾಡಿರಿ.
ಹಂತ:5 ನಂತರ ಪೇಟಿಎಂ 2ರೂ.ಗಳನ್ನು ಕಡಿತಗೊಳಿಸಲಿದೆ ಎಂದು ತಿಳಿಸುವ ವಿಂಡೋ ಕಾಣಲಿದೆ.
ಹಂತ:6 ಇದರಲ್ಲಿ ನೀವು ಪ್ರೊಸಿಡ್‌ ಟ್ಯಾಪ್‌ ಮಾಡಿ.
ಹಂತ:7 ಇದೀಗ ನಿಮ್ಮ ಕಾರ್ಡ್ ವಿವರಗಳನ್ನು ನಮೂದಿಸಿ, ನಂತರ 'ಇತ್ತೀಚಿನ RBI ಗೈಡ್‌ಲೈನ್‌ಗಳ ಪ್ರಕಾರ ಕಾರ್ಡ್ ಉಳಿಸಿ' ಆಯ್ಕೆಮಾಡಿ ಮತ್ತು 2 ರೂ ಪಾವತಿಸಿ ಟ್ಯಾಪ್ ಮಾಡಿ.
ಹಂತ:8 ನಂತರ, ನಿಮ್ಮ ಮೊಬೈಲ್‌ ನಂಬರ್‌ಗೆ ಬರುವ OTP ಅನ್ನು ನಮೂದಿಸಿ ಮತ್ತು ಪಾವತಿಸಿ ಟ್ಯಾಪ್ ಮಾಡಿ.
ಹಂತ:9 ಸ್ವಲ್ಪ ಸಮಯದ ನಂತರ ನಿಮ್ಮ ಕ್ರೆಡಿಟ್ ಕಾರ್ಡ್ ಆಡ್‌ ಆಗಿರುವುದನ್ನು ನೀವು ಕಾಣಬಹುದು.

ಇನ್ನು ಪೇಟಿಎಂ ಅಪ್ಲಿಕೇಶನ್‌ ವೀಸಾ, ಮಾಸ್ಟರ್, ರುಪೇ, ಅಮೆಕ್ಸ್ ಮತ್ತು ಡೈನರ್ಸ್‌ ಕ್ರೆಡಿಟ್ ಕಾರ್ಡ್‌ಗಳನ್ನು ಬೆಂಬಲಿಸಲಿದೆ. ಅಲ್ಲದೆ ನಿಮ್ಮ ಕ್ರೆಡಿಟ್‌ ಕಾರ್ಡ್‌ ಮೂಲಕ ಪೇಟಿಎಂ ವ್ಯಾಲೆಟ್‌ಗೆ ಕೂಡ ಹಣವನ್ನು ಜಮೆ ಮಾಡುವುದಕ್ಕೆ ಅವಕಾಶವನ್ನು ನೀಡಿದೆ.

Best Mobiles in India

English summary
Google Pay, Paytm, PhonePe, and other UPI apps support credit cards in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X