ಯುಪಿಐ ಮೂಲಕ ಪೇಟಿಎಂ ವ್ಯಾಲೆಟ್‌ಗೆ ಹಣವನ್ನು ಜಮೆ ಮಾಡುವುದು ಹೇಗೆ?

|

ಯುಪಿಐ ಆಧಾರಿತ ಪಾವತಿ ಅಪ್ಲಿಕೇಶನ್‌ಗಳು ಇಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಪ್ರಸ್ತುತ ದಿನಗಳಲ್ಲಿ ಹಣಕಾಸು ವರ್ಗಾವಣೆಗೆ ಯುಪಿಐ ಪಾವತಿ ಅಪ್ಲಿಕೇಶನ್‌ ಬಳಸುವವರ ಸಂಖ್ಯೆ ಹೆಚ್ಚಿದೆ. ಪ್ರತಿಯೊಂದು ಪಾವತಿಗೂ ಕೂಡ ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸುವುದು ಸಾಮಾನ್ಯವಾಗಿಬಿಟ್ಟಿದೆ. ಸದ್ಯ ಭಾರತದಲ್ಲಿ ಯುಪಿಐ ಆಧಾರಿತ ಅಪ್ಲಿಕೇಶನ್‌ಗಳಲ್ಲಿ ಪೇಟಿಎಂ, ಗೂಗಲ್‌ ಪೇ ಮತ್ತು ಫೋನ್‌ಪೇ ಅಪ್ಲಿಕೇಶನ್‌ಗಳು ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿವೆ. ಇನ್ನು ಯುಪಿಐ ಆಪ್‌ಗಳಿಗೆ ಬ್ಯಾಂಕ್‌ ಅಕೌಂಟ್‌ ಅನ್ನು ಲಿಂಕ್‌ ಮಾಡುವುದು ಮಾತ್ರವಲ್ಲದೆ ಯುಪಿಐ ವ್ಯಾಲೆಟ್‌ನಲ್ಲಿಯೂ ಕೂಡ ನೀವು ಹಣವನ್ನು ಜಮೆ ಮಾಡಿ ಇರಿಸಬಹುದಾಗಿದೆ.

ಯುಪಿಐ

ಹೌದು, ಯುಪಿಐ ಆಪ್‌ಗಳ ವ್ಯಾಲೆಟ್‌ನಲ್ಲಿ ಕೂಡ ನೀವು ಹಣವನ್ನು ಜಮೆ ಮಾಡಿ ಇರಿಸಬಹುದು. ಈ ವ್ಯಾಲೆಟ್‌ಗಳ ಮೂಲಕ ಕೂಡ ನೀವು ಹಣ ಪಾವತಿಸುವುದಕ್ಕೆ ಸಾದ್ಯವಾಗಲಿದೆ. ಯುಪಿಐ ವ್ಯಾಲೆಟ್‌ನಲ್ಲಿ ಹಣ ಜಮೆ ಆಗಿದ್ದರೆ ನೀವು ಶಾಪಿಂಗ್‌ ಮಾಡುವಾಗ, ಬೇರೆಯವರಿಗೆ ಹಣ ಕಳುಹಿಸುವಾಗ ಇನ್ನಷ್ಟು ಸುಲಭವಾಗಲಿದೆ. ಇದಕ್ಕಾಗಿ ನೀವು ನಿಮ್ಮ ಬ್ಯಾಂಕ್‌ ಅಕೌಂಟ್‌ನಿಂದ ಯುಪಿಐ ವ್ಯಾಲೆಟ್‌ಗೆ ಹಣ ಜಮೆ ಮಾಡಬೇಕಿರುತ್ತದೆ. ಯುಪಿಐ ಆಪ್‌ಗಳಲ್ಲಿ ವ್ಯಾಲೆಟ್‌ಗೆ ಹಣ ಜಮೆ ಮಾಡುವುದಕ್ಕೆ ಅವಕಾಶವನ್ನು ಸಹ ನೀಡಲಾಗಿದೆ.

ಯುಪಿಐ

ಇನ್ನು ಯುಪಿಐ ಆಪ್‌ಗಳಲ್ಲಿ ಲಭ್ಯವಿರುವ ವ್ಯಾಲೆಟ್‌ಗಳಲ್ಲಿ ನೀವು ಹಣ ಜಮೆ ಮಾಡುವುದರಿಂದ ನಿಮಗೆ ಶಾಪಿಂಗ್‌ ಅನುಭವ ಸುಲಭವಾಗಲಿದೆ. ಅಂದರೆ ಡಿಜಿಟಲ್‌ ವ್ಯಾಲೆಟ್ ಮೂಲಕ ಬಳಕೆದಾರರು ತಮ್ಮ ಆಫ್‌ಲೈನ್ ಮತ್ತು ಆನ್‌ಲೈನ್ ಔಟ್‌ಲೆಟ್‌ಗಳಲ್ಲಿ ಖರೀದಿಗೆ ಪಾವತಿಸಬಬಹುದು. ಈ ವ್ಯಾಲೆಟ್‌ಗಳಲ್ಲಿ ಹಣವನ್ನು ಜಮೆ ಮಾಡಬೇಕು ಎನ್ನುವ ನಿರ್ಧಿಷ್ಟ ಮಾನದಂಡವಿಲ್ಲ. ಆದರೆ ನಿಮ್ಮ ಅನುಕೂಲಕ್ಕಾಗಿ ನೀವು ಹಣವನ್ನು ಜಮೆ ಮಾಡಿ ಇರಿಸಬಹುದು. ಹಾಗಾದ್ರೆ ಪೇಟಿಎಂ, ಫೋನ್‌ಪೇ ವ್ಯಾಲೆಟ್‌ಗಳಲ್ಲಿ ಹಣ ಜಮೆ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಯುಪಿಐ ಮೂಲಕ ಪೇಟಿಎಂ ವ್ಯಾಲೆಟ್‌ಗೆ ಹಣವನ್ನು ಜಮೆ ಮಾಡುವುದು ಹೇಗೆ?

ಯುಪಿಐ ಮೂಲಕ ಪೇಟಿಎಂ ವ್ಯಾಲೆಟ್‌ಗೆ ಹಣವನ್ನು ಜಮೆ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಪೇಟಿಎಂ ಅಪ್ಲಿಕೇಶನ್ ತೆರೆಯಿರಿ ಮತ್ತು ಪೇಟಿಎಂ ವ್ಯಾಲೆಟ್‌ ಆಯ್ಕೆಯನ್ನು ಆರಿಸಿ
ಹಂತ:2 ಇದೀಗ ‘ಆಡ್‌ ಮನಿ ಟು ಪೇಟಿಎಂ ವಾಲೆಟ್‌' ಅಡಿಯಲ್ಲಿ ನೀವು ಸೇರಿಸಲು ಬಯಸುವ ಮೊತ್ತವನ್ನು ನಮೂದಿಸಿ
ಹಂತ:3 ಕಂಟಿನ್ಯೂ ಬಟನ್‌ ಮೇಲೆ ಕ್ಲಿಕ್ ಮಾಡಿ
ಹಂತ:4 ವ್ಯಾಲೆಟ್‌ಗೆ ಹಣವನ್ನು ಸೇರಿಸಲು ನಿಮಗೆ ಹಲವು ಆಯ್ಕೆಗಳು ಕಾಣಲಿದೆ
ಹಂತ:5 ಇದರಲ್ಲಿ UPI ಆಯ್ಕೆಯನ್ನು ಟ್ಯಾಪ್‌ ಮಾಡಿರಿ
ಹಂತ:6 ಇದೀಗ ನಿಮ್ಮ ವ್ಯಾಲೆಟ್‌ಗೆ ತಕ್ಷಣವೇ ಹಣವನ್ನು ಸೇರಿಸಲು UPI ಪಿನ್ ಅನ್ನು ನಮೂದಿಸಿ
ಇದೀಗ ನಿಮ್ಮ ಪೇಟಿಎಂ ವ್ಯಾಲೆಟ್‌ನಲ್ಲಿ ಹಣ ಜಮೆ ಆಗಿರುತ್ತದೆ. ಇನ್ನು ಪೇಟಿಎಂ ವ್ಯಾಲೆಟ್‌ ಮೂಲಕ ನೀವು ಫ್ಲೈಟ್‌ಗಳು, ರೈಲು ಮತ್ತು ಬಸ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಪೇಟಿಎಂ ವ್ಯಾಲೆಟ್‌ ಅನ್ನು ಇತರೆ ಟಿಕೆಟ್ ಬುಕಿಂಗ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಪಾವತಿ ಮಾಡುವುದಕ್ಕೆ ಕೂಡ ಬಳಸಬಹುದು. ಇದಲ್ಲದೆ ಪೇಟಿಎಂ ವ್ಯಾಲೆಟ್‌ ಬ್ಯಾಲೆನ್ಸ್‌ ಬಳಸಿಕೊಂಡು ನೀವು ಫಾಸ್ಟ್‌ಟ್ಯಾಗ್‌ ಅನ್ನು ಕೂಡ ರೀಚಾರ್ಜ್‌ ಮಾಡಬಹುದು.

ಫೋನ್‌ಪೇ ವ್ಯಾಲೆಟ್‌ಗೆ ಹಣ ಜಮೆ ಮಾಡುವುದಕ್ಕೆ ಈ ಕ್ರಮ ಅನುಸರಿಸಿ

ಫೋನ್‌ಪೇ ವ್ಯಾಲೆಟ್‌ಗೆ ಹಣ ಜಮೆ ಮಾಡುವುದಕ್ಕೆ ಈ ಕ್ರಮ ಅನುಸರಿಸಿ

ಹಂತ:1 ಮೊದಲಿಗೆ ನೀವು ನಿಮ್ಮ ಫೋನ್‌ಪೇ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ಇದೀಗ ಮೇನ್‌ಪೇಜ್‌ನಲ್ಲಿ ನಿಮಗೆ ಫೋನ್‌ಪೇ ವ್ಯಾಲೆಟ್‌ ಆಯ್ಕೆ ಕಾಣಲಿದೆ
ಹಂತ:3 ಫೋನ್‌ಪೇ ವ್ಯಾಲೆಟ್‌ ಆಯ್ಕೆಯ ಮೇಲೆ ಟ್ಯಾಪ್‌ ಮಾಡಿ
ಹಂತ:4 ಇದರಲ್ಲಿ ನೀವು ಬಯಸಿದ ಮೊತ್ತವನ್ನು ನಮೂದಿಸಿ
ಹಂತ:5 ನಂತರ ಪ್ರೊಸಿಡ್‌ ಟಾಪ್‌ ಅಪ್‌ ಆಯ್ಕೆಯನ್ನು ಕ್ಲಿಕ್‌ ಮಾಡಿ.
ಹಂತ:6 ನಿಮ್ಮ ಬ್ಯಾಂಕ್‌ ಅಕೌಂಟ್‌ ಕ್ಲಿಕ್‌ ಮಾಡಿ ಮತ್ತು ಯುಪಿಐ ಪಿನ್‌ ನಮೂದಿಸಿ
ಹಂತ:7 ಪೇ ಆಯ್ಕೆಯನ್ನು ಕ್ಲಿಕ್‌ ಮಾಡಿದ ತಕ್ಷಣ ನಿಮ್ಮ ಹಣ ಫೋನ್‌ ಪೇ ವ್ಯಾಲೆಟ್‌ ಸೇರಲಿದೆ.

ಇನ್ನು ಫೋನ್‌ಪೇ ವ್ಯಾಲೆಟ್‌ನಲ್ಲಿರುವ ಹಣವನ್ನು ಬಳಸಿಕೊಂಡು ನೀವು ವಿದ್ಯುತ್‌ ಬಿಲ್‌, ವಾಟರ್‌ ಬಿಲ್‌, ಫುಡ್‌ ಆರ್ಡರ್‌, ಆನ್‌ಲೈನ್‌ ಶಾಪಿಂಗ್‌ ಸೇವೆಗಳಿಗೆ ಪಾವತಿಸಬಹುದಾಗಿದೆ.

ಫೋನ್‌ಗಳನ್ನು

ಇನ್ನು ನೀವು ನಿಮ್ಮ ಫೋನ್‌ಗಳನ್ನು ರೀಚಾರ್ಜ್ ಮಾಡಲು, ಬಿಲ್‌ಗಳನ್ನು ಪಾವತಿಸಲು, ಡಿಟಿಎಚ್ ಕನೆಕ್ಟಿವಿಟಿ ಮತ್ತು ಫುಡ್‌ ಆರ್ಡರ್‌ ಸೇರಿದಂತೆ ಇತರೆ ವಿಷಯಗಳಲ್ಲಿ ಫೋನ್‌ಪೇ ನಿಮಗೆ ಅನುಮತಿಸುತ್ತದೆ. ಇನ್ನು ಫೋನ್‌ಪೇಯನ್ನು ಹೊಂದಿರುವ ಬಳಕೆದಾರರು ತಮ್ಮದೇ ಆದ ಪಾಸ್‌ವರ್ಡ್‌ ಅನ್ನು ಕ್ರಿಯೆಟ್‌ ಮಾಡಬೇಕಿರುತ್ತದೆ. ಆದರೆ ಈ ಪಾಸ್‌ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಒಂದು ವೇಳೆ ನಿಮ್ಮ ಪಾಸ್‌ವರ್ಡ್‌ ಮರೆತು ಹೋಗಿದ್ದರೆ ನೀವು ನಿಮ್ಮ ಯುಪಿಐ ಪಿನ್ ಅನ್ನು ಬದಲಾಯಿಸಬೇಕಾಗುತ್ತದೆ.

ಫೋನ್‌ಪೇಯಲ್ಲಿ ಯುಪಿಐ ಪಿನ್ ಅನ್ನು ಬದಲಾಯಿಸುವುದು ಹೇಗೆ?

ಫೋನ್‌ಪೇಯಲ್ಲಿ ಯುಪಿಐ ಪಿನ್ ಅನ್ನು ಬದಲಾಯಿಸುವುದು ಹೇಗೆ?

ಹಂತ 1: ಮೊದಲು, ನೀವು ಪೋನ್‌ಪೇ ಡಿಸ್‌ಪ್ಲೇ ಮೇಲೆ ಬಲ ಮೂಲೆಯಲ್ಲಿ ಇರುವ ಮೆನುವನ್ನು ತೆರೆಯಬೇಕು.
ಹಂತ 2: ನೀವು ಬ್ಯಾಂಕ್‌ ಅಕೌಂಟ್‌ ವಿಭಾಗದ ಮೇಲೆ ಕ್ಲಿಕ್ ಮಾಡಬೇಕು, ನಂತರ ನೀವು ವ್ಯಾಲೆಟ್‌ ಜೊತೆಗೆ ಕನೆಕ್ಟ್‌ ಆಗಿರುವ ಬ್ಯಾಂಕ್‌ ಖಾತೆಗಳನ್ನು ಕಾಣಬಹುದು.
ಹಂತ 3: ಅದರ ನಂತರ, ನೀವು ಪಿನ್ ಬದಲಾಯಿಸಲು ಬಯಸುವ ಬ್ಯಾಂಕ್ ಖಾತೆಯನ್ನು ನೀವು ಆರಿಸಬೇಕಾಗುತ್ತದೆ.
ಹಂತ 4: ನಂತರ, ಪಾಸ್‌ವರ್ಡ್ ಬದಲಾಯಿಸಲು ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ, ಅಲ್ಲದೆ ಅಲ್ಲಿ ರಿಸೆಟ್‌ ಬಟನ್‌ ಕಂಡುಬರಲಿದೆ.
ಹಂತ 5: ನಂತರ, ನೀವು ರಿಸೆಟ್‌ ಬಟನ್‌ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ಗಳ ಕೊನೆಯ ಅಂಕಿಗಳನ್ನು ನಮೂದಿಸಬೇಕು. ಜೊತೆಗೆ ವ್ಯಾಲಿಡಿಟಿ ಡೇಟ್ ಅನ್ನು ಸಹ ನಮೂದಿಸಬೇಕು.
ಹಂತ 6: ಇದೀಗ ನಿಮ್ಮ ಬ್ಯಾಂಕಿನಿಂದ ನಿಮ್ಮ ಫೋನ್‌ ನಂಬರ್‌ಗೆ OTP ನಂಬರ್‌ ಬರಲಿದೆ ನಂತರ ನೀವು ಹೊಸ ಪಿನ್ ಜೊತೆಗೆ ಒಟಿಪಿಯನ್ನು ನಮೂದಿಸಬೇಕು.
ಹೀಗೆ ಹಂತಹಂತವಾಗಿ ಮಾಹಿತಿಯನ್ನು ಅನುಸರಿಸುವ ಮೂಲಕ ನಿಮ್ಮ ಫೋನ್‌ಪೇ ಯುಪಿಐ ಪಿನ್‌ ಅನ್ನು ನೀವು ಯಶಸ್ವಿಯಾಗಿ ಬದಲಾಯಿಸಬಹುದಾಗಿದೆ.

Best Mobiles in India

English summary
UPI is considered to be the most secure way for adding money instantly and the process

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X