NFT ಎಂದರೇನು? NFTಯನ್ನು ಖರೀದಿಸುವುದು ಹೇಗೆ?

|

ಇಂದಿನ ಡಿಜಿಟಲ್‌ ಜಗತ್ತಿನಲ್ಲಿ ನಾನ್‌ ಫಂಗಬಲ್‌ ಟೋಕನ್ಸ್‌ ಅಥವಾ NFTಗಳು ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಇನ್ನು NFT ಎಂದರೆ ಡಿಜಿಟಲ್ ಸ್ವತ್ತುಗಳಾಗಿದ್ದು, ಅವುಗಳನ್ನು ಡಿಜಿಟಲ್ ಸಹಿಯ ರೂಪದಲ್ಲಿ ಕಾಣಬಹುದು. ಈ ಸ್ವತ್ತಿನ ಮಾಲೀಕತ್ವದ ದಾಖಲೆಯನ್ನು ಸಾರ್ವಜನಿಕ ಲೆಡ್ಜರ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ಇದರಲ್ಲಿ ಎಲ್ಲರೂ ಮಾಲೀಕತ್ವದ ಪ್ರಮಾಣಪತ್ರವನ್ನು ನೋಡಬಹುದು.

ಡಿಜಿಟಲ್‌

ಹೌದು, ಡಿಜಿಟಲ್‌ ಸ್ವತ್ತು ಅಂತಾನೆ ಪರಿಗಣಿಸಬಹುದಾದ NFTಯನ್ನು ವಿವಿಧ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಬಹುದಾಗಿದೆ. ಇಂದಿನ ದಿನಗಳಲ್ಲಿ ಅನೇಕ ಕಲಾವಿದರು, ಸಂಗೀತಗಾರರು ಮತ್ತು ಪ್ರಸಿದ್ಧ ವ್ಯಕ್ತಿಗಳು ತಮ್ಮದೇ ಆದ NFT ಗಳನ್ನು ತಯಾರಿಸುವ ಮೂಲಕ ಮತ್ತು ವಿವಿಧ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಮೂಲಕ ಈ ಪ್ರವೃತ್ತಿಯನ್ನು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಇನ್ನು NFTಯನ್ನು ನೀವು ಖರೀದಿಸಲು ಬಯಸಿದರೆ, ನಿಮಗೆ ಕ್ರಿಪ್ಟೋಕರೆನ್ಸಿ ವ್ಯಾಲೆಟ್ ನಲ್ಲಿ ಎಕ್ಸ್‌ಚೇಂಜ್‌ ಅಕೌಂಟ್‌ ಇರಬೇಕಾಗುತ್ತದೆ. ಹಾಗಾದ್ರೆ NFTಯನ್ನು ಖರೀದಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

NFT ಎಂದರೇನು?

NFT ಎಂದರೇನು?

NFT ಎಂದರೆ ನಾನ್‌ ಫಂಗಬಲ್‌ ಟೋಕನ್ಸ್‌ ಅಂದರೆ ಪರಸ್ಪರ ಬದಲಾಯಿಸುವುದಕ್ಕೆ ಸಾಧ್ಯವಿಲ್ಲದಿರುವುದು ಎಂದರ್ಥ. ಇದನ್ನು ನಿರ್ಧಿಷ್ಟ ಡಿಜಿಟಲ್‌ ಸ್ವತ್ತಿಗೆ ಸಂಬಂಧಿಸಿದ ಒಂದು ಯೂನಿಕ್‌ ಟೋಕನ್‌ ಮಾಲಿಕತ್ವವನ್ನು ತೋರಿಸುವ ಒಂದು ಹ್ಯಾಶ್‌ ಕೋಡ್‌ ಎಂದು ಹೇಳಬಹುದು. NFT ಸಾಮಾನ್ಯವಾಗಿ ಮ್ಯೂಸಿಕ್‌ ಆಲ್ಬಮ್‌ ಇಲ್ಲವೇ ಇತರ ಡಿಜಿಟಲ್‌ ಫೈಲ್‌ಗಳನ್ನು ಪ್ರಸ್ತುತಪಡಿಸಲಿದೆ. ಅಂದರೆ NFT ಡಿಜಿಟಲ್‌ ಜಗತ್ತಿನ ಸ್ವತ್ತುಗಳಾಗಿದ್ದು, ಇವುಗಳನ್ನು ಆಸ್ತಿಯ ರೂಪದಲ್ಲಿ ಖರೀದಿಸಬಹುದು. ಆದರೆ ಇದಕ್ಕೆ ಯಾವುದೇ ಸ್ಪಷ್ಟ ರೂಪವಿಲ್ಲ.

NFT ಹೇಗೆ ಕಾರ್ಯನಿರ್ವಹಿಸುತ್ತದೆ.?

NFT ಹೇಗೆ ಕಾರ್ಯನಿರ್ವಹಿಸುತ್ತದೆ.?

NFT ಮೂಲಕ ನಿಮ್ಮ ಸ್ವತ್ತಿನ ಡಿಜಿಟಲ್‌ ಮಾಲಿಕತ್ವದ ಪ್ರಮಾಣಪತ್ರವನ್ನು ಖರೀದಿಸಬಹುದಾಗಿದೆ ಹಾಗೂ ಮಾರಾಟಮಾಡಬಹುದು. ಆದರೆ ನಿಮ್ಮ NFT ಯಲ್ಲಿರುವ ದಾಖಲೆಗಳು ನಕಲು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಅಂದರೆ NFT ದಾಖಲೆಗಳನ್ನು ಲೆಡ್ಜರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಈ ಲೆಡ್ಜರ್‌ಗಳನ್ನು ನಕಲಿಸಲು ಸಾಧ್ಯವಿಲ್ಲ.

(Photo courtesy:https://i.imgur.com/KxcSkaB.jpg)

(Photo courtesy:https://i.imgur.com/KxcSkaB.jpg)

ಹೆಚ್ಚಿನ ಮಾರುಕಟ್ಟೆ ಸ್ಥಳಗಳು Ethereum ನೆಟ್‌ವರ್ಕ್ ಅನ್ನು ಬಳಸುತ್ತವೆ. ಆದ್ದರಿಂದ ನೀವು NFT ಖರೀದಿಸಲು Ethereum ನ ಲೋಕಲ್‌ ಟೋಕನ್ ಈಥರ್ ಅಗತ್ಯವಿದೆ. ಇಲ್ಲದೇ ಹೋದರೆ WazirX ಅಥವಾ Binance ನಂತಹ ಎಕ್ಸ್‌ಚೇಂಜ್‌ ಅಕೌಂಟ್‌ ಮೂಲಕ NFTಗಳನ್ನು ಖರೀದಿಸಬಹುದು. ಇದಲ್ಲದೆ ನೀವು Ethereum ಗೆ ಹೊಂದಿಕೆಯಾಗುವ ಕ್ರಿಪ್ಟೋ ವ್ಯಾಲೆಟ್ ಅನ್ನು ಸಹ ಹೊಂದಿಸಬೇಕಾಗಿದೆ. ಕ್ರಿಪ್ಟೋ ವ್ಯಾಲೆಟ್ ಡಿಜಿಟಲ್ ವಿಳಾಸವಾಗಿದ್ದು, ನೀವು ಕ್ರಿಪ್ಟೋಕರೆನ್ಸಿಗಳನ್ನು ಸ್ಟೋರೇಜ್‌ ಮಾಡಲು ಅವಕಾಶ ನೀಡಲಿದೆ.

NFT

ಇದಾದ ನಂತರ ನೀವು NFT ಅನ್ನು ಖರೀದಿಸಲು ಬಯಸುವ ಮಾರುಕಟ್ಟೆ ಸ್ಥಳವನ್ನು ಆಯ್ಕೆಮಾಡಿ. NFT ಗಳಿಗೆ ಬಹು ಮಾರುಕಟ್ಟೆ ಸ್ಥಳಗಳಿವೆ. ನೀವು ಬಯಸಿದ ಮಾರುಕಟ್ಟೆಯಲ್ಲಿ ನಿಮ್ಮ ಖಾತೆಯನ್ನು ನೋಂದಾಯಿಸಿ. ನಿಮ್ಮ ವ್ಯಾಲೆಟ್ ಅನ್ನು ಮಾರುಕಟ್ಟೆಗೆ ಸಂಪರ್ಕಿಸಿ. ನಂತರ ಮಾರುಕಟ್ಟೆಯನ್ನು ಬ್ರೌಸ್ ಮಾಡಿ ಮತ್ತು ನಿಮ್ಮ ಇಚ್ಛೆಯ NFT ಆಯ್ಕೆಮಾಡಿ. ಯಶಸ್ವಿ ಬಿಡ್ ನಂತರ, ನೀವು ವಹಿವಾಟನ್ನು ಪೂರ್ಣಗೊಳ್ಳಲಿದೆ. ಇದಕ್ಕೆ ಅಗತ್ಯ ಮೊತ್ತವನ್ನು ನಿಮ್ಮ ವ್ಯಾಲೆಟ್‌ನಿಂದ ಡೆಬಿಟ್ ಮಾಡಲಾಗುತ್ತದೆ.

NFT ನಲ್ಲಿ ಹೂಡಿಕೆ ಮಾಡುವುದು ಹೇಗೆ?

NFT ನಲ್ಲಿ ಹೂಡಿಕೆ ಮಾಡುವುದು ಹೇಗೆ?

NFT ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಫ್ಯಾಶನ್‌ ಆಗಿ ಹೋಗಿದೆ. ಆದರೆ ಈ ಡಿಜಿಟಲ್‌ ಸ್ವತ್ತಿನ ಬಗ್ಗೆ ಪೂರ್ಣ ಅರಿವು ಇಲ್ಲದೆ ಹೂಡಿಕೆ ಮಾಡುವುದು ಸೂಕ್ತವಲ್ಲ. ಏಕೆಂದರೆ ಒಂದು ಊಹಾತ್ಮಕ ಮಾರುಕಟ್ಟೆಯಾಗಿದ್ದು, ನೀವು ಖರೀದಿಸುವ NFT ಸಮಯದೊಂದಿಗೆ ಸಾಗಲಿದೆ ನಂತರದಲ್ಲಿ ಅಷ್ಟೇ ಮೌಲ್ಯವನ್ನು ಹೊಂದಿರುವ ಅವಕಾಶವಿರುವುದಿಲ್ಲ.

Best Mobiles in India

Read more about:
English summary
Non-fungible tokens or NFTs are digital assets that are assigned a digital signature, making them unique.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X