ಅಮೆಜಾನ್ ಪ್ರೈಮ್ ವೀಡಿಯೊ ಪಾಸ್‌ವರ್ಡ್ ಅನ್ನು ಬದಲಾಯಿಸುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿನ ಮನರಂಜನೆಯು ಕೇವಲ YouTubeಗೆ ಮಾತ್ರ ಸೀಮಿತವಾಗಿಲ್ಲ. ಮನರಂಜನೆಯ ಕಾರ್ಯಕ್ರಮಗಳನ್ನ ಕೇವಲ ಟಿವಿ ಮಾತ್ರವಲ್ಲ ಆಪ್‌ಗಳಲ್ಲು ಸಹ ವೀಕ್ಷಿಸಬಹುದಾಗಿದೆ. ಇದಕ್ಕಾಗಿಯೇ ಒಟಿಟಿ ಪ್ಲಾಟ್‌ಫಾರ್ಮ್‌ ಸೇವೆ ನಿಡುವ ಆಪ್‌ಗಳು ಕೂಡ ಇಂದು ಲಭ್ಯವಿವೆ. ಸದ್ಯ ಅಮೆಜಾನ್‌ ಪ್ರೈಮ್ ವೀಡಿಯೊ ಆಪ್‌ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ ಆಪ್‌ಗಳಲ್ಲಿ ಒಂದಾಗಿದ್ದು, ಬಳಕೆದಾರರ ನೆಚ್ಚಿನ ಆಯ್ಕೆಳಲ್ಲಿ ಒಂದಾಗಿದೆ. ಇನ್ನು ಅಮೆಜಾನ್‌ ಪ್ರೈಮ್‌ ವಿಡಿಯೋ ಕೂಡ ಸಾಕಷ್ಟು ಹೊಸ ಮಾದರಿಯ ಸೇವೆಗಳನ್ನ ಪರಿಚಯಿಸುತ್ತಲೇ ಬಂದಿದೆ.

ಅಮೆಜಾನ್‌ ಪ್ರೈಮ್ ವೀಡಿಯೊ ಪ್ಲಾಟ್‌ಫಾರ್ಮ್

ಹೌದು, ಶಾಪಿಂಗ್‌ ದೈತ್ಯ ಅಮೆಜಾನ್ ತನ್ನ ಅಮೆಜಾನ್‌ ಪ್ರೈಮ್ ವೀಡಿಯೊ ಪ್ಲಾಟ್‌ಫಾರ್ಮ್ ನಲ್ಲಿ ಚಲನಚಿತ್ರಗಳು ಮತ್ತು ಪ್ರದರ್ಶನಗಳ ವಿಶಾಲ ಲೈಬ್ರರಿಯನ್ನು ಹೊಂದಿದೆ. ಇನ್ನು ನೀವು ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ಡೆಸ್ಕ್‌ಟಾಪ್ ಆವೃತ್ತಿಯನ್ನು ಸಹ ಬಳಸಬಹುದಾಗಿದೆ. ಜೊತೆಗೆ ಇದು ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಳ ಜೊತೆಗೆ ಸಹ ಹೊಂದಿಕೊಳ್ಳುತ್ತದೆ. ಇದಲ್ಲದೆ ನೀವು ಈ ಅಪ್ಲಿಕೇಶನ್ ಬಳಸುತ್ತಿದ್ದರೆ ಸುರಕ್ಷಿತ ಲಾಗಿನ್‌ಗಾಗಿ ನಿಮಗೆ ನಿರ್ದಿಷ್ಟ ಐಡಿ ಮತ್ತು ಪಾಸ್‌ವರ್ಡ್ ಅಗತ್ಯವಿದೆ. ಅಲ್ಲದೆ ಐಡಿ ಪಾಸ್‌ವರ್ಡ್‌ಗಳನ್ನ ಆಗಾಗ ಬದಲಾಯಿಸಲೂ ಬಹುದಾಗಿದೆ. ಹಾಗಾದ್ರೆ ಅಮೆಜಾನ್‌ ಪ್ರೈಮ್‌ ವೀಡಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಐಡಿ ಪಾಸ್‌ವರ್ಡ್‌ ಅನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್‌ ಪ್ರೈಮ್‌ ವೀಡಿಯೋ

ಅಮೆಜಾನ್‌ ಪ್ರೈಮ್‌ ವೀಡಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಐಡಿ ಪಾಸ್‌ವರ್ಡ್‌ ಬಹಳ ಮುಖ್ಯವಾಗಿರುತ್ತೆ. ಸುಲಭ ಪ್ರವೇಶಕ್ಕಾಗಿ ಹೆಚ್ಚಿನವರು ಸಾಮಾನ್ಯ ಪಾಸ್‌ವರ್ಡ್‌ಗಳನ್ನ ಬಳಸಿ ಲಾಗ್ ಇನ್ ಆಗಿರುವುದನ್ನು ನಾವೆಲ್ಲರೂ ಒಪ್ಪುತ್ತೇವೆ. ಆದರೆ, ಭದ್ರತಾ ಕಾಳಜಿಗಳಿಗಾಗಿ ನಾವು ಪಾಸ್‌ವರ್ಡ್‌ಗಳನ್ನು ಆಪ್ಡೇಟ್‌ ಮಾಡುವುದು ಅವಶ್ಯಕವಾಗಿದೆ. ಹೀಗಾಗಿ ಅಮೆಜಾನ್ ಪ್ರೈಮ್ ವೀಡಿಯೊಗಳಲ್ಲಿ ಪಾಸ್‌ವರ್ಡ್ ಬದಲಾಯಿಸುವುದಕ್ಕೆ ಕೆಲವು ಹಂತಗಳನ್ನ ಅನುಸರಿಬೇಕಾಗುತ್ತದೆ. ಈ ಕೆಳಗಿನ ಅನುಸರಿಸಿ ನಿಮ್ಮ ಅಮೆಜಾನ್‌ ಪ್ರೈಮ್‌ ವೀಡಿಯೋ ಪಾಸ್‌ವರ್ಡ್‌ ಬದಲಾಯಿಸಬಹುದಾಗಿದೆ.

ಅಮೆಜಾನ್ ಪ್ರೈಮ್ ವೀಡಿಯೊ ಪಾಸ್‌ವರ್ಡ್ ಅನ್ನು ಬದಲಾಯಿಸುವುದು ಹೇಗೆ?

ಅಮೆಜಾನ್ ಪ್ರೈಮ್ ವೀಡಿಯೊ ಪಾಸ್‌ವರ್ಡ್ ಅನ್ನು ಬದಲಾಯಿಸುವುದು ಹೇಗೆ?

ಹಂತ 1: ಅಮೆಜಾನ್ ಪ್ರೈಮ್ ವೀಡಿಯೊಗಳ ಪಾಸ್‌ವರ್ಡ್ ಬದಲಾಯಿಸಲು ನೀವು ಅಧಿಕೃತ ಅಮೆಜಾನ್ ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ಖಾತೆಗೆ ಲಾಗ್ ಇನ್ ಆಗಬೇಕು. ಹಂತಗಳು ಎರಡಕ್ಕೂ ಒಂದೇ ಆಗಿರುವುದರಿಂದ ಅಮೆಜಾನ್ ಶಾಪಿಂಗ್ ಅಪ್ಲಿಕೇಶನ್ ಬಳಸಿ ನೀವು ಪಾಸ್‌ವರ್ಡ್ ಅನ್ನು ಸಹ ಬದಲಾಯಿಸಬಹುದು.

ಹಂತ 2: 'ಲಾಗಿನ್ ಮತ್ತು ಸೆಕ್ಯುರಿಟಿ' ಆಯ್ಕೆಗೆ ಹೋಗಿ.

ಹಂತ 3: ನಿಮ್ಮ ಪ್ರೊಫೈಲ್ ಅನ್ನು ನೀವು ನವೀಕರಿಸಬಹುದಾದ ವಿಭಿನ್ನ ಮಾಹಿತಿಯನ್ನು ನೆಕ್ಸ್ಟ್‌ ಪೇಜ್‌ ನಿಮಗೆ ತೋರಿಸುತ್ತದೆ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹೆಸರು, ಇಮೇಲ್ ವಿಳಾಸ, ಫೋನ್ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ಎಡಿಟ್ ಮಾಡಲು ಇಲ್ಲಿ ನಿಮಗೆ ಸಾಧ್ಯವಾಗುತ್ತದೆ.

ಹಂತ 4: 'ಪಾಸ್‌ವರ್ಡ್' ಆಯ್ಕೆಯ ಮುಂದೆ 'ಎಡಿಟ್‌' ಟ್ಯಾಬ್ ಆಯ್ಕೆಮಾಡಿ.

ಹಂತ 5: ಮುಂದಿನ ಪುಟದಿಂದ ನಿಮ್ಮ ಖಾತೆಗಾಗಿ ಹೊಸ ಪಾಸ್‌ವರ್ಡ್ ಅನ್ನು ಆಪ್ಡೇಟ್‌ ಮಾಡಿ.

Best Mobiles in India

English summary
Amazon Prime Videos platform offers a vast library of movies and shows. You can download the mobile app and can also use the desktop version.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X