ಬಿಎಸ್‌ಎನ್‌ಎಲ್‌ ಮತ್ತು ವಿ ಟೆಲಿಕಾಂನ ಈ ಕೋಡ್‌ ನಂಬರ್‌ ಉಪಯುಕ್ತ!

|

ದೇಶದ ಟೆಲಿಕಾಂ ವಲಯದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಹಾಗೂ ವೊಡಾಫೋನ್ ಐಡಿಯಾ (Vi) ಟೆಲಿಕಾಂಗಳು, ಜಿಯೋ, ಏರ್‌ಟೆಲ್‌ಗಳಿಗೆ ಪೈಫೋಟಿ ನೀಡುತ್ತಿವೆ. ಈ ಎರಡು ಟೆಲಿಕಾಂಗಳ ಹಲವು ಆಕರ್ಷಕ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳ ಮೂಲಕ ಚಂದಾದಾರರನ್ನು ಹೆಚ್ಚಿಸಲು ಪ್ರಯತ್ನಿಸುತ್ತಿವೆ. ಬಿಎಸ್‌ಎನ್‌ಎಲ್‌ ಮತ್ತು ವಿ ಟೆಲಿಕಾಂ ಬಳಕೆದಾರರ ಅನುಕೂಲಕ್ಕಾಗಿ ಡೇಟಾ ಬ್ಯಾಲೆನ್ಸ್‌, ಪ್ಲ್ಯಾನ್‌ ಸಂಪೂರ್ಣ ಮಾಹಿತಿ, ವಾಯಿಸ್ ಕರೆ, ವ್ಯಾಲಿಡಿಟಿ, ಎಸ್‌ಎಮ್‌ಎಸ್‌ ಸೌಲಭ್ಯಗಳ ಬಗ್ಗೆ ಸುಲಭವಾಗಿ ಚೆಕ್ ಮಾಡುವ ಆಯ್ಕೆ ನೀಡಿವೆ.

USSD

ಬಿಎಸ್‌ಎನ್‌ಎಲ್‌ ಮತ್ತು ವಿ ಈ ಎರಡು ಟೆಲಿಕಾಂಗಳು ಬ್ಯಾಲೆನ್ಸ್‌ ತಿಳಿಯಲು ಬಳಕೆದಾರರಿಗೆ ಅವಕಾಶ ನೀಡಿವೆ. ಬಿಎಸ್‌ಎನ್‌ಎಲ್‌ ಮತ್ತು ವಿ ಟೆಲಿಕಾಂ ಬ್ಯಾಲೆನ್ಸ್‌ ತಿಳಿಯಲು USSD ಕೋಡ್ ನೀಡಿವೆ. ಆ ಮೂಲಕ ಗ್ರಾಹಕರು ಡೇಟಾ, ಎಸ್‌ಎಮ್‌ಎಸ್‌, ಪ್ಲ್ಯಾನ್ ವ್ಯಾಲಿಡಿಟಿ ಮಾಹಿತಿಗಳನ್ನು ತ್ವರಿತವಾಗಿ ಪಡೆಯಬಹುದು. ಅದಾಗ್ಯೂ ಬಳಕೆದಾರರಿಗೆ ಕೆಲವೊಮ್ಮೆ ಬ್ಯಾಲೆನ್ಸ್‌ ಚೆಕ್ ಮಾಡುವಾಗ ಈ USSD ಕೋಡ್‌ಗಳು ನೆನಪಿಗೆ ಬರುವುದಿಲ್ಲ.

ವ್ಯಾಲಿಡಿಟಿ

ಬಹುತೇಕ ಬಳಕೆದಾರರಿಗೆ ಅವರ ನಂಬರ್‌ನ ಡೇಟಾ ಬ್ಯಾಲೆನ್ಸ್, ವ್ಯಾಲಿಡಿಟಿ ಬ್ಯಾಲೆನ್ಸ್‌ ಚೆಕ್ ಮಾಡುವ ಬಗ್ಗೆ ತಿಳಿದಿರುತ್ತದೆ. ಆದರೆ ಕೆಲವು ಬಳಕೆದಾರರಿಗೆ ಡೇಟಾ ಬ್ಯಾಲೆನ್ಸ್‌ ಅಥವಾ ವ್ಯಾಲಿಡಿಟಿ ಬ್ಯಾಲೆನ್ಸ್ ಬಗ್ಗೆ ತಿಳಿದುಕೊಳ್ಳುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಈ ಪ್ರತಿ ಟೆಲಿಕಾಂ ಪ್ರತ್ಯೇಕ USSD ಕೋಡ್‌ ತಿಳಿಸಿವೆ. ಹಾಗಾದರೇ ಬಿಎಸ್‌ಎನ್‌ಎಲ್‌ ಮತ್ತು ವಿ ಟೆಲಿಕಾಂನ ಬ್ಯಾಲೆನ್ಸ್‌ ಚೆಕ್ ಮಾಡುವುದು ಹೇಗೆ ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ವಿ ನಂಬರ್ ಬ್ಯಾಲೆನ್ಸ್ ಚೆಕ್‌ ಮಾಡಲು ಈ USSD ಕೋಡ್ ಬಳಸಿ:

ವಿ ನಂಬರ್ ಬ್ಯಾಲೆನ್ಸ್ ಚೆಕ್‌ ಮಾಡಲು ಈ USSD ಕೋಡ್ ಬಳಸಿ:

*199*2*1# - ಈ USSD ಕೋಡ್ ಅನ್ನು ವಿ ಟೆಲಿಕಾಂ ಸಂಖ್ಯೆಗೆ ಮುಖ್ಯ ಬ್ಯಾಲೆನ್ಸ್ ಪರಿಶೀಲಿಸಲು ಬಳಸಬಹುದು. ಕೋಡ್ ನಿಮಗೆ ಎಲ್ಲಾ ಬ್ಯಾಲೆನ್ಸ್ ಮತ್ತು ನಿಮ್ಮ ಸಂಖ್ಯೆಯ ವ್ಯಾಲಿಡಿಟಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.

*121# - ಈ ಕೋಡ್ ಅನ್ನು ಬಳಸಿಕೊಂಡು ಮುಖ್ಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ನೀವು ಈ ಕೋಡ್ ಅನ್ನು ಸಹ ಬಳಸಬಹುದು.

ವಿ ಆಪ್‌ ಮೂಲಕ ವಿ ಸಂಖ್ಯೆಯ ಬ್ಯಾಲೆನ್ಸ್ ಚೆಕ್‌ ಮಾಡಲು ಈ ಪ್ರಮ ಫಾಲೋ ಮಾಡಿ:

ವಿ ಆಪ್‌ ಮೂಲಕ ವಿ ಸಂಖ್ಯೆಯ ಬ್ಯಾಲೆನ್ಸ್ ಚೆಕ್‌ ಮಾಡಲು ಈ ಪ್ರಮ ಫಾಲೋ ಮಾಡಿ:

ವಿ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಬ್ಯಾಲೆನ್ಸ್ ಮತ್ತು ವ್ಯಾಲಿಡಿಟಿ ಅನ್ನು ಚೆಕ್ ಮಾಡಬಹುದು.
* ಗೂಗಲ್‌ ಪ್ಲೇ ಸ್ಟೋರ್ (Google Play Store) ಅಪ್ಲಿಕೇಶನ್ ತೆರೆಯಿರಿ ಮತ್ತು ವಿ ಅಪ್ಲಿಕೇಶನ್ ಅನ್ನು ಸರ್ಚ್ ಮಾಡಿ.
* ಡೌನ್‌ಲೋಡ್ ಅಪ್ಲಿಕೇಶನ್ ಅನ್ನು ಕ್ಲಿಕ್ ಮಾಡಿ ಮತ್ತು ಅದನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿ.
* ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ವೊಡಾಫೋನ್ ಐಡಿಯಾ ಸಂಖ್ಯೆಯನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಿ.
* ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು ಓಟಿಪಿ ಅನ್ನು ಪಡೆಯುತ್ತೀರಿ. ಲಾಗ್ ಇನ್ ಮಾಡಲು ಅದನ್ನು ನಮೂದಿಸಿ.
* ನಿಮ್ಮ ಸಂಖ್ಯೆಯ ಮುಖ್ಯ ಬ್ಯಾಲೆನ್ಸ್ ಮತ್ತು ವ್ಯಾಲಿಡಿಟಿ ಅನ್ನು ಅಪ್ಲಿಕೇಶನ್‌ನ ಮುಖಪುಟ ಪರದೆಯಲ್ಲಿ ಪ್ರದರ್ಶಿಸಲಾಗುತ್ತದೆ.

ಬಿಎಸ್‌ಎನ್‌ಎಲ್‌ ಪ್ರಿಪೇಯ್ಡ್ ಮುಖ್ಯ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಬಿಎಸ್‌ಎನ್‌ಎಲ್‌ ಪ್ರಿಪೇಯ್ಡ್ ಮುಖ್ಯ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಬಿಎಸ್‌ಎನ್‌ಎಲ್‌ ಸಂಖ್ಯೆಯಿಂದ ಮುಖ್ಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು, ನೀವು *123# ಅನ್ನು ಡಯಲ್ ಮಾಡಿದರೆ ಸಾಕು. USSD ಕೋಡ್ ಸ್ವಯಂಚಾಲಿತವಾಗಿ ಮಾಹಿತಿ ಕಾಣಿಸುತ್ತದೆ. ಹಾಗೆಯೇ ನೀವು *112# ಅನ್ನು ಸಹ ಡಯಲ್ ಮಾಡಬಹುದು. ಇನ್ನು ಎಸ್‌ಎಂಎಸ್ ಕಳುಹಿಸುವ ಮೂಲಕ ಬಿಎಸ್‌ಎನ್‌ಎಲ್ ಬ್ಯಾಲೆನ್ಸ್ ಪರಿಶೀಲಿಸುವ ಮಾಡುವ ಆಯ್ಕೆ ಅನ್ನು ಕಂಪನಿ ನೀಡಿದೆ. ಅದಕ್ಕಾಗಿ ಬಳಕೆದಾರರು ‘BAL' ಅನ್ನು 123 ಗೆ ಎಸ್‌ಎಮ್‌ಎಸ್‌ ಕಳುಹಿಸಬಹುದು.

ಮಾಡಬಹುದು

ಇದಲ್ಲದೆ, ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು OTP ಬಳಸಿಕೊಂಡು ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಬಹುದು. ಬಳಿಕ ಅಪ್ಲಿಕೇಶನ್‌ನಿಂದ ಮುಖ್ಯ ಬ್ಯಾಲೆನ್ಸ್ ಅನ್ನು ಸುಲಭವಾಗಿ ಪರಿಶೀಲಿಸಬಹುದು.

ಬಿಎಸ್‌ಎನ್‌ಎಲ್‌ ಡೇಟಾ ಬ್ಯಾಲೆನ್ಸ್ ತಿಳಿಸುವ ನಂಬರ್‌ ಅಥವಾ ವಿಚಾರಣೆ ಕೋಡ್‌ಗಳು:

ಬಿಎಸ್‌ಎನ್‌ಎಲ್‌ ಡೇಟಾ ಬ್ಯಾಲೆನ್ಸ್ ತಿಳಿಸುವ ನಂಬರ್‌ ಅಥವಾ ವಿಚಾರಣೆ ಕೋಡ್‌ಗಳು:

- 2G ಅಥವಾ 3G ಡೇಟಾವನ್ನು ಪರಿಶೀಲಿಸಲು ಬಯಸಿದರೆ, *123*6# ಅಥವಾ *123*10# ಅನ್ನು ಡಯಲ್ ಮಾಡಬಹುದು.
- ಬಿಎಸ್‌ಎನ್‌ಎಲ್‌ 4G ನೆಟ್‌ವರ್ಕ್‌ನಲ್ಲಿರುವ ಬಳಕೆದಾರರು *124# ಅನ್ನು ಡಯಲ್ ಮಾಡುವ ಮೂಲಕ ಡೇಟಾವನ್ನು ಚೆಕ್‌ ಮಾಡಬಹುದು.
- *124*2# ಅನ್ನು ಬಳಸಿಕೊಂಡು ಬಿಎಸ್‌ಎನ್‌ಎಲ್‌ ನೆಟ್‌ ಬ್ಯಾಲೆನ್ಸ್‌ ಸಹ ಚೆಕ್‌ ಮಾಡಬಹುದು
- ಡೇಟಾ ಬ್ಯಾಲೆನ್ಸ್ ತಿಳಿಯಲು *112# ಅನ್ನು ಡಯಲ್ ಮಾಡಬಹುದು.
- ನೈಟ್ ಡೇಟಾ ಬ್ಯಾಲೆನ್ಸ್‌ ಪರಿಶೀಲಿಸಲು, *123*8# ಅನ್ನು ಡಯಲ್ ಮಾಡಬಹುದು.
- ಅಪ್ಲಿಕೇಶನ್‌ಗೆ ಹೋಗುವ ಮೂಲಕ ಡೇಟಾ ಬ್ಯಾಲೆನ್ಸ್‌ನ ವಿವರಗಳನ್ನು ಸಹ ಚೆಕ್‌ ಮಾಡಬಹುದು.

ಬಿಎಸ್‌ಎನ್‌ಎಲ್‌ ಪ್ರಿಪೇಯ್ಡ್ ವ್ಯಾಲಿಡಿಟಿ ಚೆಕ್ ಮಾಡಲು ಹೀಗೆ ಮಾಡಿ:

ಬಿಎಸ್‌ಎನ್‌ಎಲ್‌ ಪ್ರಿಪೇಯ್ಡ್ ವ್ಯಾಲಿಡಿಟಿ ಚೆಕ್ ಮಾಡಲು ಹೀಗೆ ಮಾಡಿ:

ಬಿಎಸ್‌ಎನ್‌ಎಲ್‌ ಪ್ರಿಪೇಯ್ಡ್ ಸಿಮ್ ವ್ಯಾಲಿಡಿಟಿ ಅನ್ನು ಪರಿಶೀಲಿಸಲು, *123*1# ಅನ್ನು ಡಯಲ್ ಮಾಡಬಹುದು. ಇದು ನಿಮ್ಮ ಬಿಎಸ್‌ಎನ್‌ಎಲ್‌ ಪ್ರಿಪೇಯ್ಡ್ ಸಂಖ್ಯೆಯ ವ್ಯಾಲಿಡಿಟಿ ವಿವರಗಳೊಂದಿಗೆ ಮುಖ್ಯ ಬ್ಯಾಲೆನ್ಸ್ ಅನ್ನು ನಿಮಗೆ ತೋರಿಸುತ್ತದೆ. ನಿಮ್ಮ BSNL ಮೊಬೈಲ್ ಸಂಖ್ಯೆಯ ಉಳಿದ ವ್ಯಾಲಿಡಿಟಿ ನೋಡಲು ಅಪ್ಲಿಕೇಶನ್ ಅನ್ನು ಸಹ ಬಳಸಬಹುದು.

ಬಿಎಸ್‌ಎನ್‌ಎಲ್‌ ಎಸ್‌ಎಮ್‌ಎಸ್‌ ಪ್ಯಾಕ್ ಬ್ಯಾಲೆನ್ಸ್ ತಿಳಿಯಲು ಈ ಕೋಡ್ ಬಳಸಿ:

ಬಿಎಸ್‌ಎನ್‌ಎಲ್‌ ಎಸ್‌ಎಮ್‌ಎಸ್‌ ಪ್ಯಾಕ್ ಬ್ಯಾಲೆನ್ಸ್ ತಿಳಿಯಲು ಈ ಕೋಡ್ ಬಳಸಿ:

USSD ಕೋಡ್‌ಗಳನ್ನು ಬಳಸಿಕೊಂಡು ಎಸ್‌ಎಮ್‌ಎಸ್‌ (SMS) ಪ್ಯಾಕ್ ಬ್ಯಾಲೆನ್ಸ್ ಅನ್ನು ತಿಳಿಯಲು ಆಯ್ಕೆಯನ್ನು ನೀಡಿದೆ. ಬಳಕೆದಾರರು ಉಳಿದಿರುವ ಎಸ್‌ಎಮ್‌ಎಸ್‌ ಬ್ಯಾಲೆನ್ಸ್‌ನ ಫಲಿತಾಂಶವನ್ನು ಪಡೆಯಲು ನೀವು ಕೆಳಗೆ ಸೂಚಿಸಿದ ಕೋಡ್‌ಗಳನ್ನು ಡಯಲ್ ಮಾಡಬೇಕಾಗಿರುವುದು: *123*1# *123*5# *125# *123*2#

Best Mobiles in India

English summary
How to Check BSNL and VI Data Balance: Follow These Simple Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X