ನಿಮ್ಮ ಫೋನಿನಲ್ಲಿ ಇಂಟರ್ನೆಟ್‌ ವೇಗ ಎಷ್ಟು?..ಚೆಕ್ ಮಾಡುವುದು ಹೇಗೆ ಗೊತ್ತಾ?

|

ಸ್ಮಾರ್ಟ್‌ಫೋನ್‌ ಸೇರಿದಂತೆ ಇಂದಿನ ಸ್ಮಾರ್ಟ್‌ ಡಿವೈಸ್‌ಗಳನ್ನು ಬಳಕೆ ಮಾಡಲು ಇಂಟರ್ನೆಟ್‌ ಎಷ್ಟು ಅಗತ್ಯ ಎಂಬುದು ನಿಮಗೆ ತಿಳಿದೆ ಇದೆ. ಸಾಮಾನ್ಯವಾಗಿ ಎಲ್ಲರೂ ವೇಗದ ಇಂಟರ್ನೆಟ್ ಬಯಸುತ್ತಾರೆ. ಉತ್ತಮ ವೇಗದ ಇಂಟರ್ನೆಟ್‌ ಬಳಕೆ ಮತ್ತು ಕಡಿಮೆ ವೇಗದ ಇಂಟರ್ನೆಟ್‌ ಬಳಕೆ ಇವೆರಡರ ಅನುಭವ ಬಹುಶಃ ನಿಮಗೆ ಗೊತ್ತೆ ಇರುತ್ತದೆ. ವೇಗದ ಇಂಟರ್ನೆಟ್‌ ಸೌಲಭ್ಯ ಇದ್ರೆ, ಆನ್‌ಲೈನ್‌ ಕೆಲಸಗಳನ್ನು ತ್ವರಿತವಾಗಿ ಮಾಡಿ ಮುಗಿಸಬಹುದು. ಹೀಗಾಗಿ ನಿಮ್ಮ ಡಿವೈಸ್‌ನಲ್ಲಿ ಇಂಟರ್ನೆಟ್‌ ವೇಗ ತಿಳಿಯುವುದು ಮುಖ್ಯ.

ಡೌನ್‌ಲೋಡ್

ಹೌದು, ನಿಮ್ಮ ಫೋನಿನಲ್ಲಿ ಇಂಟರ್ನೆಟ್‌ ವೇಗವನ್ನು ಚೆಕ್ ಮಾಡಬಹುದಾಗಿದೆ. ವೈಫೈ ಇಂಟರ್ನೆಟ್ ಅಥವಾ ಮೊಬೈಲ್‌ (ಸೆಲ್ಯುಲರ್) ಇಂಟರ್ನೆಟ್‌ ಯಾವುದೇ ಇರಲಿ. ಅದರ ಅಪ್‌ಲೋಡ್ ಮತ್ತು ಡೌನ್‌ಲೋಡ್ ವೇಗವನ್ನು ಬಳಕೆದಾರರು ಸುಲಭವಾಗಿ ತಿಳಿದುಕೊಳ್ಳಬಹುದು. ಇಂಟರ್ನೆಟ್‌ ವೇಗವನ್ನು ತ್ವರಿತವಾಗಿ ಪರಿಶೀಲಿಸಲು ಕೆಲವು ಮಾರ್ಗಗಳಿವೆ. ಹಾಗಾದರೇ ನಿಮ್ಮ ಫೋನಿನಲ್ಲಿ ಇಂಟರ್ನೆಟ್‌ ವೇಗ ಚೆಕ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಇಂಟರ್ನೆಟ್ ವೇಗ ಎಂದರೇನು?

ಇಂಟರ್ನೆಟ್ ವೇಗ ಎಂದರೇನು?

ಇಂಟರ್ನೆಟ್ ವೇಗವು ಎರಡು ಡಿವೈಸ್‌ಗಳ ನಡುವೆ ಡೇಟಾವನ್ನು ವರ್ಗಾಯಿಸುವ ದರವಾಗಿದೆ. ಅಧಿಕ ವೇಗ, ಡೇಟಾವನ್ನು ವೇಗವಾಗಿ ವರ್ಗಾಯಿಸಬಹುದು. ನೀವು ಬಳಸುತ್ತಿರುವ ಡಿವೈಸ್‌ನ ಪ್ರಕಾರ, ನೀವು ಬಳಸುತ್ತಿರುವ ಸಂಪರ್ಕದ ಪ್ರಕಾರ ಮತ್ತು ಸಿಗ್ನಲ್‌ನ ಸಾಮರ್ಥ್ಯ ಸೇರಿದಂತೆ ಇಂಟರ್ನೆಟ್ ವೇಗದ ಮೇಲೆ ಪರಿಣಾಮ ಬೀರುವ ಹಲವು ಅಂಶಗಳಿವೆ.

ಆಂಡ್ರಾಯ್ಡ್‌ ಫೋನಿನಲ್ಲಿ ಇಂಟರ್ನೆಟ್ ವೇಗ ತಿಳಿಯಲು ಹೀಗೆ ಮಾಡಿ:

ಆಂಡ್ರಾಯ್ಡ್‌ ಫೋನಿನಲ್ಲಿ ಇಂಟರ್ನೆಟ್ ವೇಗ ತಿಳಿಯಲು ಹೀಗೆ ಮಾಡಿ:

ಸ್ಟಾಕ್ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್‌ಗಳನ್ನು ಹೊರತುಪಡಿಸಿ ಬಹುತೇಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು, ಸ್ಟೇಟಸ್ ಬಾರ್‌ನಿಂದ ನಿಮ್ಮ ಇಂಟರ್ನೆಟ್ ಸಂಪರ್ಕದ ವೇಗವನ್ನು ಚೆಕ್‌ ಮಾಡಲು ಅನುಮತಿಸುತ್ತವೆ. ಈ ಸೌಲಭ್ಯ ಇದ್ದರೆ, ಥರ್ಡ್‌ ಪಾರ್ಟಿ ಆಪ್‌ಗಳನ್ನು ಅವಲಂಬಿಸಬೇಕಾಗಿಲ್ಲ ಹಾಗೂ ಯಾವುದೇ ಇತರೆ ಇನ್‌ಸ್ಟಾಲ್‌ ಅಗತ್ಯ ಇರದು. ಪರಿಶೀಲಿಸಲು ಈ ಮುಂದಿನ ಕ್ರಮ ಫಾಲೋ ಮಾಡಿರಿ.

ಹಂತ 1: ನಿಮ್ಮ ಸ್ಮಾರ್ಟ್‌ಫೋನ್ ಸೆಟ್ಟಿಂಗ್‌ಗಳಿಗೆ ಹೋಗಿ.

ಹಂತ 2: ಸ್ಟೇಟಸ್ ಬಾರ್‌ನಲ್ಲಿ ಇಂಟರ್ನೆಟ್ ವೇಗದ ಡಿಸ್‌ಪ್ಲೇಯನ್ನು ಸಕ್ರಿಯ ಮಾಡಿ.

ಈಗ ನೀವು ಇಂಟರ್ನೆಟ್ ಬಳಸುವಾಗ, ನಿಮ್ಮ ಸ್ಟೇಟಸ್ ಬಾರ್‌ನಲ್ಲಿ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ನೀವು ನೋಡಬಹುದು.

ಓಕ್ಲಾ ಆಪ್‌ ಮೂಲಕ ಸಹ ಇಂಟರ್ನೆಟ್ ವೇಗವನ್ನು ಚೆಕ್ ಮಾಡಬಹುದು.

ಓಕ್ಲಾ ಆಪ್‌ ಮೂಲಕ ಸಹ ಇಂಟರ್ನೆಟ್ ವೇಗವನ್ನು ಚೆಕ್ ಮಾಡಬಹುದು.

ಓಕ್ಲಾ ಸಂಸ್ಥೆಯು ಅಭಿವೃದ್ಧಿಪಡಿಸಿದ ಸ್ಪೀಡ್‌ಟೆಸ್ಟ್ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಆಪ್‌ ಇನ್‌ಸ್ಟಾಲ್‌ ಮಾಡಿದ ನಂತರ ಮತ್ತು ಅಗತ್ಯವಿರುವ ಅನುಮತಿಗಳನ್ನು ಅನುಮತಿಸಿದ ನಂತರ, ಆಪ್‌ ಅನ್ನು ತೆರೆಯಿರಿ. ಬಳಿಕ GO ಬಟನ್ ಅನ್ನು ಟ್ಯಾಪ್ ಮಾಡಿ. ಆ ಬಳಿಕ ಆಪ್‌ ನಿಮ್ಮ ಡಿವೈಸ್‌ ಇಂಟರ್ನೆಟ್‌ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಪರೀಕ್ಷಿಸುತ್ತದೆ. ಇನ್ನು ಇದು ಉಚಿತ ಅಪ್ಲಿಕೇಶನ್ ಆಗಿದೆ.

ಆಪಲ್‌ ಡಿವೈಸ್‌ಗಳಲ್ಲಿ ಇಂಟರ್ನೆಟ್ ವೇಗವನ್ನು ಚೆಕ್ ಮಾಡಲು ಹೀಗೆ ಮಾಡಿ:

ಆಪಲ್‌ ಡಿವೈಸ್‌ಗಳಲ್ಲಿ ಇಂಟರ್ನೆಟ್ ವೇಗವನ್ನು ಚೆಕ್ ಮಾಡಲು ಹೀಗೆ ಮಾಡಿ:

ಆಪಲ್‌ ಐಫೋನ್‌ ಅಥವಾ ಐಪ್ಯಾಡ್‌ ನಲ್ಲಿ ಅಪ್‌ಲೋಡ್ ಮತ್ತು ಡೌನ್‌ಲೋಡ್ ವೇಗವನ್ನು ಚೆಕ್ ಮಾಡಲು ಯಾವುದೇ ನೇರ ಆಯ್ಕೆಯನ್ನು ನೀಡಿಲ್ಲ.. ಬದಲಿಗೆ, ಸ್ಪೀಡ್‌ಟೆಸ್ಟ್‌ನಂತಹ ಥರ್ಡ್‌ ಪಾರ್ಟಿ ಆಪ್‌ ಮೂಲಕವೇ ತಿಳಿಯಬಹುದಾಗಿದೆ. ಅದಕ್ಕಾಗಿ ಅಧಿಕೃತ ಆಪ್ ಸ್ಟೋರ್‌ನಿಂದ ಓಕ್ಲಾ ಅವರ ಸ್ಪೀಡ್‌ಟೆಸ್ಟ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು. ಒಮ್ಮೆ ನೀವು ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಿದ ನಂತರ, ಅದನ್ನು ತೆರೆಯಿರಿ. ಬಳಿಕ ಪ್ರಸ್ತುತ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ನೋಡಲು Begin Test ಟ್ಯಾಪ್ ಮಾಡಿ.

ಅದಕ್ಕಾಗಿ

ಇನ್ನು ಮ್ಯಾಕ್‌ನಲ್ಲಿ, ಇಂಟರ್ನೆಟ್ ವೇಗವನ್ನು ಚೆಕ್ ಮಾಡಲು, ನೆಟ್‌ವರ್ಕ್ ಯುಟಿಲಿಟಿ ಟೂಲ್ ಅನ್ನು ಬಳಸಬಹುದು. ಅದಕ್ಕಾಗಿ ಅಪ್ಲಿಕೇಶನ್‌ಗಳು > ಉಪಯುಕ್ತತೆಗಳು > ನೆಟ್‌ವರ್ಕ್ ಯುಟಿಲಿಟಿಗೆ ಹೋಗಿ. ನಂತರ Info ಟ್ಯಾಬ್ ಅನ್ನು ಕ್ಲಿಕ್ ಮಾಡಿ. ನಂತರ Ethernet ವಿಭಾಗದ ಅಡಿಯಲ್ಲಿ Transmit Rate ಆಯ್ಕೆಯನ್ನು ನೋಡಿ.

Best Mobiles in India

English summary
How to Check Internet Speed on Your Smartphone? Follow these steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X