ಸ್ಮಾರ್ಟ್‌ಫೋನ್ ಖರೀದಿಸುವಾಗ ಪ್ರಮುಖವಾಗಿರಬೇಕಾದ ಅಂಶಗಳು

Posted By:

ಇಂದಿನ ಯುಗದಲ್ಲಿ ಸ್ಮಾರ್ಟ್‌ಫೋನ್ ಅನ್ನು ನಿಮ್ಮದಾಗಿಸಿಕೊಳ್ಳುವುದು ಅಷ್ಟೊಂದು ಕಷ್ಟದ ವಿಚಾರವಲ್ಲ. ನಿಮ್ಮ ಬಜೆಟ್‌ಗೆ ತಕ್ಕುದಾಗಿರುವ ಅಂತೆಯೇ ಮನಕ್ಕೊಪ್ಪುವ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇವುಗಳನ್ನು ಯಾವಾಗ ಬೇಕಾದರೂ ನಿಮ್ಮದಾಗಿಸಿಕೊಳ್ಳಬಹುದು. ಆದರೆ ಇಂತಹ ಸ್ಮಾರ್ಟ್‌ಫೋನ್‌ಗಳನ್ನು ಹೇಗೆ ಖರೀದಿ ಮಾಡುವುದು ಎಂಬುದನ್ನು ಎಂದಾದರೂ ಊಹಿಸಿದ್ದೀರಾ?

ಇದನ್ನೂ ಓದಿ: ಜಗತ್ತಿನಲ್ಲೇ ಪ್ರಚಂಡನಾಗಿರುವ ಆಂಡ್ರಾಯ್ಡ್ ಟಾಪ್ ವಿಶೇಷತೆಗಳು

ನಿಮ್ಮ ಈ ಸಮಸ್ಯೆಯನ್ನು ದೂರಮಾಡಲೆಂದೇ ಇಂದಿನ ಲೇಖನದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಖರೀದಿಗೆ ಅತ್ಯವಶ್ಯಕವಾಗಿರುವ ಪ್ರಮುಖ ಅಂಶಗಳೊಂದಿಗೆ ನಾವು ಬಂದಿರುವೆವು. ಈ ಅಂಶಗಳು ಫೋನ್ ಖರೀದಿಗೆ ಹೆಚ್ಚು ಸಹಕಾರಿ ಎಂದೆನಿಸಿದ್ದು ಉತ್ತಮ ಫೋನ್ ಅನ್ನು ನಿಮಗೆ ಒದಗಿಸುವಲ್ಲಿ ಸಹಕಾರಿಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪರೇಟಿಂಗ್ ಸಿಸ್ಟಮ್

ಆಪರೇಟಿಂಗ್ ಸಿಸ್ಟಮ್

ಸ್ಮಾರ್ಟ್‌ಫೋನ್ ಖರೀದಿಸುವಾಗ ಪ್ರಮುಖವಾಗಿರಬೇಕಾದ ಅಂಶಗಳು

ನಿಮ್ಮ ಸ್ಮಾರ್ಟ್‌ಫೋನ್‌ಗೆ 'ಸ್ಮಾರ್ಟ್' ಎಂಬ ಅಂಶವನ್ನು ಸೇರ್ಪಡೆಗೊಳಿಸುವ ಆಪರೇಟಿಂಗ್ ಸಿಸ್ಟಮ್ ಯಾವುದಾಗಬೇಕು ಅದರ ಪ್ರಮುಖ ಅಂಶಗಳೇನು? ಅದರಿಂದ ನಿಮ್ಮ ಫೋನ್‌ಗೆ ಆಗುವ ಪ್ರಯೋಜನವೇನು ಎಂಬುದನ್ನು ನೀವು ಅರಿತುಕೊಂಡಿರಬೇಕು.

ಆಂಡ್ರಾಯ್ಡ್ ಓಎಸ್

ಆಂಡ್ರಾಯ್ಡ್ ಓಎಸ್

ಸ್ಮಾರ್ಟ್‌ಫೋನ್ ಖರೀದಿಸುವಾಗ ಪ್ರಮುಖವಾಗಿರಬೇಕಾದ ಅಂಶಗಳು

ಸರ್ಚ್, ಜಿಮೇಲ್, ಮ್ಯಾಪ್ಸ್, ಹ್ಯಾಂಗ್‌ಔಟ್ಸ್, ಯೂಟ್ಯೂಬ್, ಮೊದಲಾದ ಫೀಚರ್‌ಗಳನ್ನು ಒಳಗೊಂಡಿರುವ ಆಂಡ್ರಾಯ್ಡ ಓಎಸ್‌ ನಿಮಗೆ ಪ್ಲೇ ಸ್ಟೋರ್ ಎಂಬ ವೇದಿಕೆಯನ್ನು ಒದಗಿಸುತ್ತಿದ್ದು ಇಲ್ಲಿ ನೀವು ನೂರಾರು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ.

ವಿಂಡೋಸ್ ಫೋನ್

ವಿಂಡೋಸ್ ಫೋನ್

ಸ್ಮಾರ್ಟ್‌ಫೋನ್ ಖರೀದಿಸುವಾಗ ಪ್ರಮುಖವಾಗಿರಬೇಕಾದ ಅಂಶಗಳು

ಇದು ಉಚಿತ ಚಲನಚಿತ್ರ ಮತ್ತು ಸಂಗೀತಗಳನ್ನು ಬಳಕೆದಾರರಿಗೆ ಒದಗಿಸುತ್ತಿದ್ದು ಮ್ಯಾಪ್ಸ್, ಡ್ರೈವ್ ಪ್ಲಸ್ ಮೊದಲಾದ ವೈಶಿಷ್ಟ್ಯತೆಗಳನ್ನು ಈ ಫೋನ್‌ಗಳು ಒಳಗೊಂಡಿವೆ.

ಐಓಎಸ್

ಐಓಎಸ್

ಸ್ಮಾರ್ಟ್‌ಫೋನ್ ಖರೀದಿಸುವಾಗ ಪ್ರಮುಖವಾಗಿರಬೇಕಾದ ಅಂಶಗಳು

ಐಫೋನ್‌ಗಳಲ್ಲಿ ಮಾತ್ರ ಕಂಡುಬರುವ ಈ ಓಎಸ್, ನಿಮಗೆ ಉತ್ತಮ ಗುಣಮಟ್ಟದ ಅಪ್ಲಿಕೇಶನ್‌ಗಳನ್ನು ಒದಗಿಸುತ್ತದೆ. ಐಫೋನ್‌ಗಳು ಫ್ರೀಜ್ ಆಗುವುದು ಅತಿ ಕಡಿಮೆ ಸಂದರ್ಭದಲ್ಲಿ ಎಂಬುದು ನಿಮಗೆ ಗೊತ್ತಿರಲಿ.

ಪ್ರೊಸೆಸರ್‌ಗಳು

ಪ್ರೊಸೆಸರ್‌ಗಳು

ಸ್ಮಾರ್ಟ್‌ಫೋನ್ ಖರೀದಿಸುವಾಗ ಪ್ರಮುಖವಾಗಿರಬೇಕಾದ ಅಂಶಗಳು

ಹೆಚ್ಚಿನ ಪ್ರೊಸೆಸರ್‌ಗಳು ಈಗ ಸ್ಮಾರ್ಟ್‌ಫೋನ್‌ಗಳಲ್ಲಿ ಬರುತ್ತಿದ್ದು ಯಾವ ಪ್ರೊಸೆಸರ್ ಅನ್ನು ನೀವು ಇರಿಸಿಕೊಳ್ಳಬೇಕು ಎಂಬುದನ್ನು ಮೊದಲು ಅರಿತುಕೊಳ್ಳಿ. ಓಎಸ್‌ನ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಪ್ರೊಸೆಸರ್‌ಗಳು ಕಾರ್ಯನಿರ್ವಹಿಸುತ್ತವೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಸ್ಮಾರ್ಟ್‌ಫೋನ್ ಖರೀದಿಸುವಾಗ ಪ್ರಮುಖವಾಗಿರಬೇಕಾದ ಅಂಶಗಳು

ನೀವು ಟ್ಯಾಬ್ಲೆಟ್ ಖರೀದಿಸುವವರು ಎಂದಾದಲ್ಲಿ ಪೂರ್ಣ ಎಚ್‌ಡಿ ಡಿಸ್‌ಪ್ಲೇಗೆ ಗಮನಹರಿಸಿ. ಇನ್ನು ಐದು ಇಂಚುಗಳವರೆಗಿನ ಫೋನ್‌ಗಳಿಗೆ ಎಚ್‌ಡಿ ಸ್ಕ್ರೀನ್‌ಗಳು ಸೂಕ್ತ.

RAM

RAM

ಸ್ಮಾರ್ಟ್‌ಫೋನ್ ಖರೀದಿಸುವಾಗ ಪ್ರಮುಖವಾಗಿರಬೇಕಾದ ಅಂಶಗಳು

ಹೆಚ್ಚುವರಿ RAM ಯಾವಾಗಲೂ ಅತ್ಯುತ್ತಮವಾಗಿರುತ್ತದೆ.

ಸಂಗ್ರಹಣೆ

ಸಂಗ್ರಹಣೆ

ಸ್ಮಾರ್ಟ್‌ಫೋನ್ ಖರೀದಿಸುವಾಗ ಪ್ರಮುಖವಾಗಿರಬೇಕಾದ ಅಂಶಗಳು

ಬಜೆಟ್ ಫೋನ್ ಅನ್ನು ನೀವು ಖರೀದಿಸುತ್ತಿದ್ದೀರಿ ಎಂದಾದಲ್ಲಿ ಹೆಚ್ಚುವರಿ ಸಂಗ್ರಹಣೆ ನಿಮ್ಮ ಫೋನ್‌ನಲ್ಲಿ ಇರುವಂತೆ ನೋಡಿಕೊಳ್ಳಿ. ನಿಮಗೆ 4ಜಿಬಿ ಸಂಗ್ರಹಣೆ ಬೇಕು ಎಂದಾದಲ್ಲಿ 8 ರಿಂದ 16 ಜಿಬಿವರೆಗಿನ ಫೋನ್‌ಗಳನ್ನು ಖರೀದಿಸಿ.

ಗಾತ್ರ

ಗಾತ್ರ

ಸ್ಮಾರ್ಟ್‌ಫೋನ್ ಖರೀದಿಸುವಾಗ ಪ್ರಮುಖವಾಗಿರಬೇಕಾದ ಅಂಶಗಳು

ಐದು ಇಂಚುಗಳ ಸ್ಕ್ರೀನ್ ಫೋನ್‌ಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತವೆ. ಹೆಚ್ಚು ಗಾತ್ರದ ಪರದೆಯುಳ್ಳ ಫೋನ್‌ಗಳು ನಿಮಗೆ ಹ್ಯಾಂಡಲ್ ಮಾಡುವಲ್ಲಿ ಕಷ್ಟವನ್ನುಂಟು ಮಾಡಬಹುದು.

ಕ್ಯಾಮೆರಾ

ಕ್ಯಾಮೆರಾ

ಸ್ಮಾರ್ಟ್‌ಫೋನ್ ಖರೀದಿಸುವಾಗ ಪ್ರಮುಖವಾಗಿರಬೇಕಾದ ಅಂಶಗಳು

5 ಎಮ್‌ಪಿ ಕ್ಯಾಮೆರಾ 8x6 ಇಂಚಿನ ಪ್ರಿಂಟ್‌ಗಳು 300 ಡಿಪಿಐ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ವೃತ್ತಿಪರ ಮುದ್ರಣದಲ್ಲಿ ಬಳಸುವ ಪ್ರಮಾಣಿತ ರೆಸಲ್ಯೂಶನ್ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How to Choose the right smartphone in a simple 10 ways.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot