ಸ್ಪೀಕರ್‌ಗಳನ್ನು ಸ್ವಚ್ಛಗೊಳಿಸುವುದು ಹೇಗೆ? ; ಇಲ್ಲಿದೆ ಮಾಗದರ್ಶಿ!

|

ಸಂಗೀತ ಆಲಿಸಲು ಸ್ಪೀಕರ್ಸ್‌ ಹಾಗೂ ಹೋಮ್ ಥಿಯೇಟರ್‌ ಡಿವೈಸ್‌ಗಳು ಸಹಾಯಕ. ಹಾಗೆಯೇ ಮನೆಯಲ್ಲಿಯೇ ಥಿಯೇಟರ್‌ ಅನುಭವ ಪಡೆಯಲು ಈ ಗ್ಯಾಜೆಟ್‌ಗಳು ಅನುಕೂಲಕರವಾಗಿವೆ. ಇದರಲ್ಲಿ ಫಿಲಿಪ್ಸ್‌, ಬೋಟ್, ಜೆಬಿಎಲ್‌ ಸೇರಿದಂತೆ ಹಲವು ಕಂಪೆನಿಗಳು ವಿವಿಧ ಫೀಚರ್ಸ್‌ ಇರುವ ಸ್ಪೀಕರ್‌ಗಳನ್ನು ಪರಿಚಯಿಸಿವೆ. ಆದರೆ, ಸ್ಪೀಕರ್‌ಗಳನ್ನು ಕೊಂಡುಕೊಳ್ಳುವುದರ ಜೊತೆಗೆ ಅವುಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವ ಜವಬ್ದಾರಿಯನ್ನೂ ಸಹ ವಹಿಸಬೇಕಿದೆ.

ಗ್ಯಾಜೆಟ್‌

ಹೌದು, ಯಾವುದೇ ಗ್ಯಾಜೆಟ್‌ ಆದರೂ ಸಹ ತನ್ನದೇ ಆದ ಮೌಲ್ಯವನ್ನು ಹೊಂದಿರುತ್ತದೆ. ಅದರಲ್ಲೂ ಮನೆಯಲ್ಲಿ ಒಂದು ಅದ್ಭುತ ಸ್ಪೀಕರ್‌ ಇರಿಸಿದರೆ ಅದು ಮನೆಗೆ ಇನ್ನಷ್ಟು ಅಂದ ನೀಡುವ ಡಿವೈಸ್‌ ಆಗಿರಬೇಕು. ಆ ರೀತಿ ಇರಬೇಕು ಎಂದರೆ ನೀವು ಅದನ್ನು ಕಾಲಕಾಲಕ್ಕೆ ಸ್ವಚ್ಛ ಮಾಡುವುದು ಅನಿವಾರ್ಯ. ಹಾಗಿದ್ರೆ ಅದನ್ನು ಹೇಗೆ ಸ್ವಚ್ಛ ಮಾಡುವುದು ಎನ್ನುವ ಪ್ರಶ್ನೆ ನಿಮ್ಮಲ್ಲಿ ಇದ್ದರೆ ಅದಕ್ಕೆ ಮಾರ್ಗದರ್ಶಿ ಇಲ್ಲಿದೆ.

ಎಲೆಕ್ಟ್ರಾನಿಕ್ಸ್

ಇತರ ಯಾವುದೇ ಎಲೆಕ್ಟ್ರಾನಿಕ್ಸ್ ಡಿವೈಸ್‌ಗಳ ಹಾಗೆಯೇ ನಿಮ್ಮ ಸ್ಪೀಕರ್‌ಗಳ ಕಡೆಗೂ ಕಾಳಜಿ ವಹಿಸಬೇಕಿದೆ. ಹೀಗಾಗಿಯೇ ಯಾವ ರೀತಿಯ ಸ್ಪೀಕರ್‌ಗಳನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂಬ ಬಗ್ಗೆ ನಾವು ಇಲ್ಲಿ ಕೆಲವು ಸಲಹೆಗಳನ್ನು ಇಲ್ಲಿ ನೀಡಿದ್ದೇವೆ. ಇದಕ್ಕಾಗಿ ನಿಮಗೆ ಕೆಲವು ಮೈಕ್ರೋಫೈಬರ್ ಬಟ್ಟೆಗಳು ಮತ್ತು ಮೃದುವಾದ ಬ್ರಷ್‌ನ ಅಗತ್ಯವಿರುತ್ತದೆ. ಈ ಮೂಲಕ ಸ್ಪೀಕರ್ ಕ್ಯಾಬಿನೆಟ್‌ಗಳನ್ನು ಸಂಪೂರ್ಣವಾಗಿ ಸ್ವಚ್ಛಮಾಡಬಹುದಾಗಿದೆ.

ಸ್ಪೀಕರ್ ಕ್ಯಾಬಿನೆಟ್‌ ಕ್ಲೀನ್ ಮಾಡುವುದೇಗೆ?

ಸ್ಪೀಕರ್ ಕ್ಯಾಬಿನೆಟ್‌ ಕ್ಲೀನ್ ಮಾಡುವುದೇಗೆ?

ನಿಮ್ಮ ಸ್ಪೀಕರ್ ಕ್ಯಾಬಿನೆಟ್‌ ಕ್ಲೀನ್‌ ಮಾಡಲು ಮೊದಲು ನೀವು ಎರಡು ಮೈಕ್ರೊಫೈಬರ್ ಬಟ್ಟೆಗಳನ್ನು ಬಳಕೆ ಮಾಡಬಹುದು. ಒಂದನ್ನು ಉಗುರುಬೆಚ್ಚಗಿನ ನೀರಿನಲ್ಲಿ ತೇವಗೊಳಿಸಿ ಕ್ಯಾಬಿನೆಟ್‌ಗಳಿಂದ ಧೂಳನ್ನು ಒರೆಸಿ ಅದರಲ್ಲೂ ಕ್ಯಾಬಿನೆಟ್ ಮರದಿಂದ ನಿರ್ಮಾಣ ಮಾಡಿದ್ದರೆ ಏಕಮುಖವಾಗಿ ಒರೆಸಿ. ನಂತರ ಒಣ ಮೈಕ್ರೋಫೈಬರ್ ಬಟ್ಟೆಯನ್ನು ತೆಗೆದುಕೊಂಡು ಇದೇ ಶೈಲಿಯಲ್ಲಿ ಮತ್ತೆ ಒರೆಸಿ.

ಸ್ಪೀಕರ್ ಗ್ರಿಲ್‌ಗಳನ್ನು ಸ್ವಚ್ಛಗೊಳಿಸುವುದೇಗೆ?

ಸ್ಪೀಕರ್ ಗ್ರಿಲ್‌ಗಳನ್ನು ಸ್ವಚ್ಛಗೊಳಿಸುವುದೇಗೆ?

ಸ್ಪೀಕರ್ ಗ್ರಿಲ್ಸ್ ಸ್ವಚ್ಛಗೊಳಿಸಲು ಜಿಗುಟಾದ ಲಿಂಟ್ ಬ್ರಷ್ ಅನ್ನು ಬಳಕೆ ಮಾಡಬಹುದು. ಈ ವೇಳೆ ಎಚ್ಚರಿಕೆಯಿಂದ ಅದನ್ನು ಸ್ವಚ್ಛಗೊಳಿಸಬೇಕು ಇಲ್ಲವಾದರೆ ಸ್ಪೀಕರ್‌ಗೆ ಅಪಾಯ ಉಂಟುಮಾಡುವ ಸಾಧ್ಯತೆ ಇರುತ್ತದೆ. ಕೇವಲ ಮೇಲ್ಮೈಯನ್ನು ಕ್ಲೀನ್ ಮಾಡಬೇಕೆಂದರೆ ಏನು ಸಮಸ್ಯೆ ಇರುವುದಿಲ್ಲ, ಒಳಗಿನ ಭಾಗವನ್ನೂ ಕ್ಲೀನ್‌ ಮಾಡಬೇಕು ಎಂದುಕೊಂಡರೆ ಕಂಪೆನಿ ನಿಮಗೆ ನೀಡಲಾದ ಕೈಪಿಡಿಯನ್ನು ಓದಿಕೊಂಡು ಗ್ರಿಲ್‌ ಅನ್ನು ಓಪನ್‌ ಮಾಡಿ ನಂತರ ಕ್ಲೀನ್‌ ಮಾಡಬಹುದಾಗಿದೆ.

ಗ್ರಿಲ್‌

ಗ್ರಿಲ್‌ಗಳನ್ನು ರಿಮೂವ್‌ ಮಾಡಿದ ನಂತರ ಡಿಟರ್ಜಂಟ್‌ ಯುಕ್ತ ನೀರಿನಲ್ಲಿ ಒದ್ದೆ ಮಾಡಿದ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ ಒರೆಸಬಹುದು. ಇದಾದ ನಂತರ ಮತ್ತೊಂದು ಮೈಕ್ರೋಫೈಬರ್ ಬಟ್ಟೆಯನ್ನು ತೆಗೆದುಕೊಂಡು ಶುದ್ಧ ನೀರಿನಲ್ಲಿ ನೆನೆಸಿ ನಂತರ ಅದರಿಂದ ನೀರನ್ನು ಹಿಂಡಿ ಡಿಟರ್ಜೆಂಟ್ ನೀರಿನ ಕಲೆಯನ್ನು ತೆಗೆದುಹಾಕಬಹುದು. ಇದಾದ ಬಳಿಕ ಕೆಲಕಾಲ ಬಿಸಿಲಿಗೆ ಇಡಬೇಕಿದೆ.

ವೂಫರ್‌ಗಳ ಸ್ವಚ್ಛತೆ ಹೇಗೆ?

ವೂಫರ್‌ಗಳ ಸ್ವಚ್ಛತೆ ಹೇಗೆ?

ವೂಫರ್‌ಗಳನ್ನು ಮರ, ಸಿಲಿಕೋನ್, ಪೇಪರ್, ಪಾಲಿಮರ್ ಮುಂತಾದ ವಿವಿಧ ವಸ್ತುಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ. ಕಾಗದದಂತಹ ಸೂಕ್ಷ್ಮವಾದ ವೂಫರ್‌ಗಳಿಗಾಗಿ ಮೃದುವಾದ ಬ್ರಷ್ ಅಥವಾ ಕಂಪ್ರೆಸ್ಸ್ಡ್ ಏರ್ ಕ್ಯಾನ್ ಸಹಾಯ ಪಡೆಯಬಹುದು. ಹಾಗೆಯೇ ಗಟ್ಟಿಯಾದ ವೂಫರ್‌ಗಳಿಗಾಗಿ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಬಹುದು. ಆದರೆ, ವೂಫರ್‌ನ ಮಧ್ಯಭಾಗದ ಸುತ್ತಲೂ ಜಾಗರೂಕತೆ ವಹಿಸಿ ಕ್ಲೀನ್‌ ಮಾಡಬೇಕಿದೆ. ಇಲ್ಲವಾದರೆ ಅದು ಡ್ಯಾಮೇಜ್ ಆಗುವ ಸಂಭವ ಇರುತ್ತದೆ.

ಟ್ವೀಟರ್‌ಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಟ್ವೀಟರ್‌ಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಟ್ವೀಟರ್‌ಗಳನ್ನು ಯಾವುದೇ ಕಾರಣಕ್ಕೂ ಬಟ್ಟೆ ಅಥವಾ ಬ್ರಷ್ ಬಳಸಿ ಸ್ವಚ್ಛಗೊಳಿಸಬಾರದು. ಇವು ಹೆಚ್ಚು ಸೂಕ್ಷ್ಮತೆ ಹೊಂದಿದ್ದು, ಕಂಪ್ರೆಸ್ಸ್ಡ್ ಏರ್ ಕ್ಯಾನ್ ಅನ್ನು ಕೆಲವು ಇಂಚು ದೂರ ಹಿಡಿದುಕೊಂಡೇ ಕ್ಲೀನ್‌ ಮಾಡಬೇಕಿದೆ. ಆದರೂ ಕೆಲವು ಸಮಯ ಡ್ಯಾಮೇಜ್‌ ಆಗಬಹುದು. ಪರಿಣಾಮ ಎಚ್ಚರಿಕೆ ವಹಿಸಿ ಕ್ಲೀನ್‌ ಮಾಡಿ ಸಾಧ್ಯವಾಗದಿದ್ದರೆ ಸಮೀಪದಲ್ಲಿ ಸಿಗುವ ಸ್ಟೋರ್‌ಗಳಲ್ಲಿ ಕ್ಲೀನ್‌ ಮಾಡಿಸಿ.

Best Mobiles in India

English summary
Speakers and home theater devices have become increasingly popular for listening to music. Also information on how to keep them clean is explained in this article.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X