ಡೆಸ್ಕ್‌ಟಾಪ್‌ನಲ್ಲಿ ಖಾಸಗಿ ಫೋಲ್ಡರ್‌ ರಚಿಸುವುದು ಹೇಗೆ?; ಇದು ನಿಮಗಷ್ಟೇ ಕಾಣಿಸುತ್ತದೆ!

|

ಸ್ಮಾರ್ಟ್‌ ಡಿವೈಸ್‌ ಬಳಕೆಮಾಡುವ ಯಾರೇ ಆದರೂ ಒಂದಷ್ಟು ಖಾಸಗಿ ವಿಷಯಗಳನ್ನು ಭದ್ರವಾಗಿ ಯಾರಿಗೂ ಕಾಣದ ಹಾಗೆ ಇಟ್ಟುಕೊಳ್ಳಲು ಮುಂದಾಗುತ್ತಾರೆ. ಅದೇ ರೀತಿ ಸ್ಮಾರ್ಟ್‌ಫೋನ್‌ನಲ್ಲಿ ಹಲವಾರು ಆಪ್‌ಗಳು ಇದಕ್ಕೆಂದೇ ಮೀಸಲಿವೆ. ಆದರೆ ಪಿಸಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ಮೊಬೈಲ್‌ಗಿಂತಲೂ ಹೆಚ್ಚಿನ ಮಾಹಿತಿ ಸ್ಟೋರ್‌ ಮಾಡುವುದರಿಂದ ಖಾಸಗಿ ಫೈಲ್‌ಗಳನ್ನು ಯಾರಿಗೂ ಕಾಣದ ಹಾಗೆ ಹಾಗೂ ಹೆಚ್ಚಿನ ಭದ್ರತೆಯೊಂದಿಗೆ ಇರಿಸಿಕೊಳ್ಳುವುದು ಹೇಗೆ ಎಂಬುದು ನಿಮಗೆ ಗೊತ್ತಾ!?.

ಲ್ಯಾಪ್‌ಟಾಪ್‌

ಹೌದು, ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಬ್ಯಾಂಕ್‌ ವಿವರ, ಪಾಸ್‌ವರ್ಡ್‌ ಹಾಗೂ ಫೋಟೋಗಳನ್ನು ಯಾರಿಗೂ ಕಾಣದ ಹಾಗೆ ಇರಿಸಿಕೊಳ್ಳಬಹುದು. ಈ ಮೂಲಕ ನೀವು ಖಾಸಗಿ ಫೈಲ್‌ಗಳನ್ನು ಸಂಗ್ರಹಿಸಲು ವಿಂಡೋಸ್‌ನಲ್ಲಿ ರಹಸ್ಯ ಅಥವಾ ಖಾಲಿ ಫೋಲ್ಡರ್ ಒಂದನ್ನು ರಚಿಸಬಹುದು. ಹಾಗಿದ್ರೆ ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಮರೆಮಾಡಲು ವಿಂಡೋಸ್ ನಲ್ಲಿ ರಹಸ್ಯ ಫೋಲ್ಡರ್ ಅನ್ನು ಹೇಗೆ ರಚಿಸಬಹುದು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ವಿಂಡೋಸ್

ವಿಂಡೋಸ್

ವಿಂಡೋಸ್ ಅತ್ಯಂತ ಸಾಮಾನ್ಯವಾದ ಪಿಸಿ ಆಪರೇಟಿಂಗ್ ಸಿಸ್ಟಮ್ ಆಗಿದ್ದು, ಹಲವು ಬಳಕೆದಾರರಿಗೆ ಸಾಮಾನ್ಯವಾಗಿ ತಿಳಿಯದ ಹಲವಾರು ಕುತೂಹಲಕರ ಫೀಚರ್ಸ್‌ ಇದರಲ್ಲಿವೆ. ಅವುಗಳಲ್ಲಿ ಪ್ರಮುಖವಾದುದೇ ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಅಥವಾ ಉಪ-ಫೋಲ್ಡರ್‌ನಲ್ಲಿ ಖಾಲಿ ಫೋಲ್ಡರ್ ಅನ್ನು ರಚಿಸುವ ಸೌಲಭ್ಯ. ಇದು ಬೇರೆಯವರಿಗಷ್ಟೇ ಖಾಲಿ ಫೋಲ್ಡರ್‌. ಆದರೆ, ಅದರಲ್ಲಿ ಅಡಕ ಮಾಡಲಾದ ಮಾಹಿತಿಗಳನ್ನು ನೀವಷ್ಟೇ ನೋಡಬಹುದು.

ಮೌಸ್‌ ಸಹಾಯ ಬೇಕು

ಮೌಸ್‌ ಸಹಾಯ ಬೇಕು

ನೀವು ಈ ಫೋಲ್ಡರ್‌ ಅನ್ನು ಕ್ರಿಯೇಟ್‌ ಮಾಡಿದ ನಂತರ ಸಾಮಾನ್ಯವಾಗಿ ನಿಮ್ಮ ಕಣ್ಣಿಗೆ ಥಟ್ಟನೆ ಈ ಫೋಲ್ಡರ್‌ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಮೌಸ್‌ ಅಥವಾ ಟಚ್‌ ಪ್ಯಾಡ್‌ ಮೂಲಕ ಡಿಸ್‌ಪ್ಲೇ ನಲ್ಲಿ ಸುಳಿದಾಡಬೇಕಿದೆ. ಆಗ ಆ ಫೋಲ್ಡರ್‌ ಅನ್ನು ಗುರುತಿಸಬಹುದು. ಇದರಿಂದ ಇತರೆ ಬಳಕೆದಾರರು ಹಾಗೂ ಮಕ್ಕಳು ಸುಖಾ ಸುಮ್ಮನೆ ಆ ಫೋಲ್ಡರ್‌ಗೆ ಹೋಗಿ ಏನಾದರೂ ಡಿಲೀಟ್‌ ಮಾಡುವುದನ್ನು ಹಾಗೂ ನಿಮ್ಮ ಮಾಹಿತಿ ಬೇರೆಯವರಿಗೆ ಗೊತ್ತಾಗದ ಹಾಗೆ ಕಾಪಾಡಿಕೊಳ್ಳುವುದನ್ನು ಇದು ಖಚಿತಪಡಿಸುತ್ತದೆ.

ಕಾಣದ ಫೋಲ್ಡರ್ ರಚಿಸುವುದು ಹೇಗೆ?

ಕಾಣದ ಫೋಲ್ಡರ್ ರಚಿಸುವುದು ಹೇಗೆ?

ಹಂತ 1
ನೀವು ನಿಮ್ಮ ಮುಖ್ಯ ಮಾಹಿತಿಯನ್ನು ಸ್ಟೋರ್‌ ಮಾಡಲು ಬಯಸುವ ಖಾಲಿ ಫೋಲ್ಡರ್‌ ಅನ್ನು ರಚಿಸುವುದು ಸುಲಭವಾದ ಕೆಲಸ. ಇದಕ್ಕಾಗಿ ನೀವು ಡೆಸ್ಕ್‌ಟಾಪ್‌ನಲ್ಲಿ ಎಲ್ಲಿಯಾದರೂ ರಿಕ್ ಕ್ಲಿಕ್ ಮಾಡುವ ಮಾಡಿ ನಂತರ ಫೋಲ್ಡರ್ ಕ್ರಿಯೇಟ್‌ ಮಾಡಿ. ಇದಾದ ಬಳಿಕ ಫೋಲ್ಡರ್‌ ಮೇಲೆ ಕರ್ಸರ್‌ ಇರಿಸಿ ನಂತರ ಮೌಸ್‌ನಲ್ಲಿ ಬಲಗಡೆಯ ಬಟನ್‌ ಕ್ಲಿಕ್‌ ಮಾಡುವ ಮೂಲಕ ಫೋಲ್ಡರ್‌ ನೇಮ್‌ ಬದಲಾಯಿಸಬೇಕಿದೆ.

ಹಂತ 2

ಹಂತ 2

ಫೋಲ್ಡರ್‌ ಹೆಸರು ಬದಲಾಯಿಸುವ ಹಂತದಲ್ಲಿ ನೀವು ಗಮನಿಸಬೇಕಾದ ಅಂಶ ಎಂದರೆ ಪೂರ್ಣ ಗಾತ್ರದ ಕೀಬೋರ್ಡ್‌ ಇದೆಯೇ ಎಂದು ಕಚಿತಪಡಿಸಿಕೊಳ್ಳಿ. ಅಂದರೆ ನಿಮ್ಮ ಕೀಬೋರ್ಡ್‌ನಲ್ಲಿನ ಬಲ ವಿಭಾಗದಲ್ಲಿ ನಂಬರ್‌ ಆಯ್ಕೆಗಳು ಇರಬೇಕು. ಇದಾದ ನಂತರ Alt+0160 ಎಂದು ರೀನೇಮ್‌ ವಿಭಾಗದಲ್ಲಿ ಎಂಟ್ರಿ ಮಾಡಿ. ಆ ಹೆಸರು ಅಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ನಿಮ್ಮ ಗಮನಕ್ಕಿರಲಿ. ಈ ಮೂಲಕ ಹೆಸರಿಲ್ಲದ ಫೋಲ್ಡರ್‌ ಡೆಸ್ಕ್‌ಟಾಪ್‌ನಲ್ಲಿ ಕಾಣಿಸಿಕೊಳ್ಳುತ್ತದೆ.

ಹಂತ 3

ಹಂತ 3

ಇದಾದ ಬಳಿಕ ಐಕಾನ್‌ ಅನ್ನು ಅಲ್ಲಿಂದ ಮರೆ ಮಾಡುವ ಕೆಲಸ. ಇದಕ್ಕಾಗಿ ನೀವು ಫೋಲ್ಡರ್ ಮೇಲೆ ಕರ್ಸರ್‌ ಇರಿಸಿ ಮೌಸ್‌ನಲ್ಲಿ ಬಲ ಬಟನ್‌ ಕ್ಲಿಕ್ ಮಾಡಿ. ನಂತರ 'ಪ್ರಾಪರ್ಟೀಸ್' ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಕ್ಲಿಕ್‌ ಮಾಡಿ. ಇದಾದ ನಂತರ 'ಪ್ರಾಪರ್ಟೀಸ್' ವಿಭಾಗದ ಕೊನೆಯಲ್ಲಿ 'ಕಸ್ಟಮೈಸ್' ಎಂಬ ಶೀರ್ಷಿಕೆ ಕಾಣಿಸಿಕೊಳ್ಳುತ್ತದೆ ಗಮನಿಸಿ.

ಹಂತ 4

ಹಂತ 4

ಕಸ್ಟಮೈಸ್ ವಿಭಾಗದಲ್ಲಿನ ಕೊನೆಯ ಆಯ್ಕೆಯಲ್ಲಿ 'ಚೇಂಜ್‌ ಐಕಾನ್‌' ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ. ಇದಾದ ನಂತರ ಐಕಾನ್‌ ಯಾವ ರೀತಿ ಕಾಣಿಸಿಕೊಳ್ಳಬೇಕು ಎನ್ನುವ ಇತರೆ ಐಕಾನ್‌ಗಳು ಸಹ ಕಾಣಿಸಿಕೊಳ್ಳುತ್ತವೆ. ಜೊತೆಗೆ ಆ ಫೋಲ್ಡರ್‌ ಕಾಣಿಸಿಕೊಳ್ಳಲೇ ಬಾರದು ಎಂದಾದರೆ ನಾಲ್ಕು ಖಾಲಿ ಆಯ್ಕೆಗಳಿವೆ ಅವುಗಳ ಮೇಲೆ ಕ್ಲಿಕ್‌ ಮಾಡಿ.

ಹೆಸರು

ಇದಾದ ನಂತರ ಹೆಸರು ಹಾಗೂ ಐಕಾನ್‌ ಇಲ್ಲದ ಫೋಲ್ಡರ್‌ ಕ್ರಿಯೇಟ್‌ ಆಗುತ್ತದೆ. ಈ ಮೂಲಕ ಅದನ್ನು ಡೆಸ್ಕ್‌ಟಾಪ್‌ ವಿಭಾಗದಲ್ಲಿ ಎಲ್ಲಿ ಬೇಕಾದರೂ ಇರಿಸಿಕೊಳ್ಳಬಹುದು. ಹಾಗೆಯೇ ಆ ಫೋಲ್ಡರ್‌ಗೆ ಬೇಕಾದ ಫೈಲ್ಸ್‌ಗಳನ್ನು ಆಡ್‌ ಮಾಡಿಕೊಳ್ಳಬಹುದು. ಮೊದಲೇ ಹೇಳಿದಂತೆ ಇದನ್ನು ಪತ್ತೆ ಮಾಡಲು ಪಿಸಿಯಲ್ಲಿ ಮೌಸ್‌ ಬಳಕೆ ಕಡ್ಡಾಯ.

Best Mobiles in India

English summary
How to create a secret, blank folder on Windows.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X