ಫೇಸ್‌ಬುಕ್‌, ಟ್ವಿಟ್ಟರ್, ಲಿಂಕ್ಡ್‌ಇನ್ ನಲ್ಲಿ ಈ ರೀತಿ ಪೋಲ್‌ ರಚಿಸಿ!

|

ಸಮಾಜದಲ್ಲಿ ನಡೆಯುವ ಯಾವುದೇ ರೀತಿಯ ಸಮೀಕ್ಷೆಗಳು ಪ್ರಮುಖ ಪಾತ್ರವಹಿಸುತ್ತವೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ರಚಿಸುವ ಸಮೀಕ್ಷೆಯಲ್ಲಿ ತಂತ್ರಜ್ಞಾನ ಸಂಬಂಧಿತ ಮಾಹಿತಿ ಜೊತೆಗೆ ರಾಜಕೀಯ, ಕ್ರೀಡೆ ಹಾಗೂ ಇನ್ನಿತರೆ ವಿಷಯಗಳಲ್ಲಿ ಜನಾಭಿಪ್ರಾಯವನ್ನು ರೂಪಿಸುತ್ತವೆ. ಹಾಗೆಯೇ ಬಳಕೆದಾರರು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸಿಕೊಂಡು ಈ ಸಮೀಕ್ಷೆಗಳಲ್ಲಿ ಸುಲಭವಾಗಿ ಭಾಗಿಯಾಗಬಹುದು. ಈಗಂತೂ ಕರ್ನಾಟಕದಲ್ಲಿ ಚುನಾವಣಾ ಅಬ್ಬರ ಜೋರಾಗಿದ್ದು, ಸಾಮಾಜಿಕ ಜಾಲತಾಣದ ಸಮೀಕ್ಷೆಯಲ್ಲಿ ಬಹುಪಾಲು ಜನರು ತೊಡಗಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ

ಹೌದು, ಸಾಮಾಜಿಕ ಜಾಲತಾಣ ಬಳಕೆದಾರರು ಅವರ ಅಭಿಪ್ರಾಯ ವ್ಯಕ್ತಪಡಿಸಲು ಈ ಸಮೀಕ್ಷೆ ಅವಕಾಶ ಕಲ್ಪಿಸಲಿದೆ. ಮುಖ್ಯವಾಗಿ ಬಹುಪಾಲು ಜನರು ಬಳಕೆ ಮಾಡುವ ಫೇಸ್‌ಬುಕ್‌, ಟ್ವಿಟ್ಟರ್‌ ಹಾಗೂ ಲಿಂಕ್ಡ್ಇನ್ ನಲ್ಲಿ ಈ ಕಾರ್ಯ ಹೆಚ್ಚಾಗಿ ನಡೆಯುತ್ತದೆ. ಈ ಮೂಲಕ ನಿಮ್ಮ ಬಳಕೆದಾರರಿಗೆ ನೆರವಾಗಿ ಪ್ರಶ್ನೆಗಳನ್ನು ಹಾಕಬಹುದು ಹಾಗೆಯೇ ನಿರಂತರ ಸಂಪರ್ಕದಲ್ಲಿರಬಹುದು. ಹಾಗಿದ್ರೆ, ಫೇಸ್‌ಬುಕ್‌, ಟ್ವಿಟ್ಟರ್‌ ಹಾಗೂ ಲಿಂಕ್ಡ್ಇನ್ ಖಾತೆಗಳಲ್ಲಿ ಈ ಸಮೀಕ್ಷೆಯನ್ನು ಹೇಗೆ ರಚಿಸುವುದು ಎಂಬುದನ್ನು ಈ ಲೇಖನದಲ್ಲಿ ಎರಡು ಹಂತಗಳಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಫೇಸ್‌ಬುಕ್‌

ಬಹುಪಾಲು ನೆಟ್ಟಿಗರು ಫೇಸ್‌ಬುಕ್‌ ಅನ್ನು ವಿವಿಧ ಕಾರಣಕ್ಕೆ ಬಳಕೆ ಮಾಡುತ್ತಾರೆ. ಈ ಪ್ಲಾಟ್‌ಫಾರ್ಮ್‌ನಲ್ಲೂ ಸಮೀಕ್ಷೆಯ ಫೀಚರ್ಸ್ ಇದ್ದು, ಇದನ್ನು ಹೇಗೆ ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಹಂತ 1

ಹಂತ 1

ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ಫೇಸ್‌ಬುಕ್‌ ಆಪ್‌ ಅನ್ನು ಓಪನ್‌ ಮಾಡಿ, ನಂತರ ಬಲ ಮೂಲೆಯಲ್ಲಿ ಕಾಣುವ ಮೂರು ಅಡ್ಡ ಸಾಲಿನ 'ಮೆನು' ಆಯ್ಕೆ ಮೇಲೆ ಟ್ಯಾಪ್ ಮಾಡಿ. ಇದನ್ನು ಟ್ಯಾಪ್‌ ಮಾಡಿದಾಗ ಹಲವು ಆಯ್ಕೆಗಳ ಜೊತೆಗೆ 'ಗ್ರೂಪ್‌'ಎಂಬ ಆಯ್ಕೆಯೂ ಸಹ ಕಾಣುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ.

ಹಂತ 2

ಹಂತ 2

ಈ ಪ್ರಕ್ರಿಯೆ ಮುಗಿದ ನಂತರ ಫೇಸ್‌ಬುಕ್‌ ಪೇಜ್‌ ಓಪನ್ ಆಗುತ್ತದೆ. ಅಲ್ಲಿ 'ನ್ಯೂ ಪೋಸ್ಟ್‌ ಬಾಕ್ಸ್' ಆಯ್ಕೆಯ ಕೆಳಗೆ ಕಾಣುವ 'ಪೋಲ್‌' ಮೇಲೆ ಟ್ಯಾಪ್‌ ಮಾಡಿ. ಬಳಿಕೆ ಪೋಲ್‌ ಬಾಕ್ಸ್‌ ಓಪನ್ ಆಗುತ್ತದೆ. ಅದರಲ್ಲಿ ನಿಮಗೆ ಅಗತ್ಯ ಇರುವ ಮಾಹಿತಿಯನ್ನು ನಮೂದು ಮಾಡಿ. ಒಂದು ಪ್ರಶ್ನೆ ರೂಪದ ಸಮೀಕ್ಷೆಗೆ ಹಲವು ಉತ್ತರ ರೂಪದ ಆಯ್ಕೆಗಳನ್ನು ಇಲ್ಲಿ ಸೇರಿಸಬಹುದು. ಇದರೊಂದಿಗೆ ಈ ಪೋಲ್ ಅನ್ನು ಯಾರು ನೋಡಬೇಕು, ಯಾರು ಪ್ರತಿಕ್ರಿಯಿಸಬೇಕು ಎಂಬ ಆಯ್ಕೆಯನ್ನೂ ಸಹ ಮಾಡಬಹುದಾಗಿದೆ.

ಟ್ವಿಟ್ಟರ್‌

ಟ್ವಿಟ್ಟರ್‌ನಲ್ಲಿ ಈ ಸಮೀಕ್ಷೆ ಫೀಚರ್ಸ್‌ ಬಳಕೆ ಹೇಗೆ ಮಾಡಬಹುದು ಎಂಬುದನ್ನು ವಿವರಿಸಲಾಗಿದೆ ನೋಡಿ.

 ಹಂತ 1

ಹಂತ 1

ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಟ್ವಿಟ್ಟರ್‌ ಆಪ್‌ ಓಪನ್‌ ಮಾಡಿ. ಅದರಲ್ಲಿ'+' ಐಕಾನ್‌ ಕಾಣುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ, ನಂತರ, 'ಟ್ವೀಟ್' ಆಯ್ಕೆಯನ್ನು ಆರಿಸಿ. ಅದರ ಕೆಳಗೆ 'ಪೋಲ್' ಬಟನ್ ಡಿಸ್‌ಪ್ಲೇ ಆಗುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ನಂತರ ಪೋಲ್‌ ಬಾಕ್ಸ್ ಓಪನ್‌ ಆಗುತ್ತದೆ.

ಹಂತ 2

ಹಂತ 2

ಪೋಲ್‌ ಬಾಕ್ಸ್ ಓಪನ್‌ ಆದ ನಂತರ ನಿಮಗೆ ಬೇಕಾದ ಮಾಹಿತಿಯನ್ನು ನಮೂದು ಮಾಡಿ, ಹಾಗೆಯೇ ಪೋಲ್‌ ಅವಧಿಯನ್ನು ನಿಗದಿ ಮಾಡಿ. ನಂತರ ಪೋಲ್‌ ಅನ್ನು ಟ್ವೀಟ್‌ ಮಾಡಿ. ಈ ಪ್ರಕ್ರಿಯೆ ಮುಗಿದ ಬಳಿಕ ಅದು ಮೇನ್‌ ಪೇಜ್‌ನಲ್ಲಿ ಡಿಸ್‌ಪ್ಲೇ ಆಗುತ್ತದೆ.

ಲಿಂಕ್ಡ್‌ಇನ್‌

ಲಿಂಕ್ಡ್‌ಇನ್‌ನಲ್ಲಿ ಸಮೀಕ್ಷೆಗಳನ್ನು ರಚಿಸಲು ಇರುವ ಹಂತಗಳನ್ನು ಗಮನಿಸಿ

ಹಂತ 1

ಹಂತ 1

ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಲಿಂಕ್ಡ್‌ಇನ್‌ ಆಪ್‌ ಓಪನ್‌ ಮಾಡಿ ಹಾಗೆಯೇ ಮುಖಪುಟದ ಕೆಳಭಾಗದ ಮಧ್ಯದಲ್ಲಿ ಕಾಣಿಸುವ 'ಪೋಸ್ಟ್' ಎಂಬ ಆಯ್ಕೆಯ ಮೇಲೆ ಟ್ಯಾಪ್‌ ಮಾಡಿ. ಟ್ಯಾಪ್‌ ಮಾಡಿದ ನಂತರ ಹಲವಾರು ಆಯ್ಕೆಗಳು ಕಾಣಿಸಿಕೊಳ್ಳತ್ತದೆ, ಅದರಲ್ಲಿ ನಿಮಗೆ ಬೇಕಾದ 'ಪೋಲ್‌' ಎಂಬ ಆಯ್ಕೆ ಬರುತ್ತದೆ ಅದನ್ನು ಕ್ಲಿಕ್‌ ಮಾಡಿ.

ಹಂತ  2

ಹಂತ 2

'ಪೋಲ್‌' ಆಯ್ಕೆಯ ಮೇಲೆ ಟ್ಯಾಪ್‌ ಮಾಡಿದಾಗ ಸಮೀಕ್ಷೆಯ ಬಾಕ್ಸ್‌ ತೆರೆದುಕೊಳ್ಳುತ್ತದೆ ಅಲ್ಲಿ ನಿಮಗೆ ಬೇಕಾದ ಮಾಹಿತಿಯಲ್ಲಿ ನಮೂದು ಮಾಡಿ. ನಂತರ ಪೋಲ್‌ ಎಷ್ಟು ದಿನಗಳ ವರೆಗೆ ಡಿಸ್‌ಪ್ಲೇ ಆಗಬೇಕು ಎಂದು ಕೇಳುತ್ತದೆ ಆಗ ದಿನಾಂಕ ನಮೂದು ಮಾಡಿ ನಂತರ 'ಡನ್' ಆಯ್ಕೆಯ ಮೇಲೆ ಟ್ಯಾಪ್‌ ಮಾಡಿದರೆ ನಿಮ್ಮ ಪೋಲ್ ಡಿಸ್‌ಪ್ಲೇ ಆಗುತ್ತದೆ.

Best Mobiles in India

English summary
Any type of survey in society plays an important role. Meanwhile, here's Explain how to create polls on social media as well.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X