ವಾಟ್ಸಾಪ್ ಚಾಟ್‌ನಲ್ಲಿ ಇಮೇಜ್‌ಗಳು, ವೀಡಿಯೊಗಳನ್ನ ಮಾತ್ರ ಡಿಲೀಟ್‌ ಮಾಡುವುದು ಹೇಗೆ?

|

ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ವೈಯಕ್ತಿಕ ಮಾಹಿತಿ ಸುರಕ್ಷತೆಗಾಗಿಯು ಸೆಕ್ಯುರಿಟಿ ಫೀಚರ್ಸ್‌ಗಳನ್ನು ಅಳವಡಿಸಿದೆ. ಹಾಗೆಯೇ ವಾಟ್ಸಾಪ್‌ ನಲ್ಲಿರುವ ಚಾಟ್‌ಗಳ ಬಿಟ್ಟು ಇನ್ನುಳಿದ ವಾಟ್ಸಾಪ್‌ ಪೋಟೋ, ವೀಡಿಯೋಗಳನ್ನು ಮಾತ್ರ ಡಿಲೀಟ್‌ ಮಾಡುವ ಅವಕಾಶವೂ ಸಹ ಇದೆ. ಆದರೆ ಬಹುತೇಕ ಬಳಕೆದಾರರಿಗೆ ವಾಟ್ಸಾಪ್ ಚಾಟ್‌ನಲ್ಲಿರುವ ಟೆಕ್ಸ್ಟ್‌ ಮೆಸೇಜ್‌ ಉಳಿಸಿ ಇನ್ನುಳಿದ ಪೋಟೋ, ವೀಡಿಯೋಗಳನ್ನು ಡಿಲೀಟ್‌ ಮಾಡುವುದು ಹೇಗೆ ಎಂಬ ಪ್ರಶ್ನೆ ಇರುತ್ತದೆ.

ವಾಟ್ಸಾಪ್‌ನಲ್ಲಿ

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್‌ನಲ್ಲಿ ಟೆಕ್ಸ್ಟ್ ಚಾಟ್‌ಗಳು, ಫೋಟೊಗಳು, ವಿಡಿಯೊಗಳು ಸೇರಿದಂತೆ ಇತರೆ ಫೈಲ್‌ಗಳನ್ನು ಶೇರ್‌ ಮಾಡುವ ಅವಕಾಶವಿದೆ. ಕೆಲವೊಮ್ಮೆ ನಿಮ್ಮ ವಾಟ್ಸಾಪ್‌ ಚಾಟ್‌ನಲ್ಲಿ ಟೆಕ್ಸ್ಟ್‌ ಮೆಸೇಜ್‌, ಪೋಟೋ, ವಿಡಿಯೋಗಳು ಜಾಸ್ತಿಯಾಗಿ ಕಿರಿಕಿರಿ ಎನಿಸದರೆ, ಇಲ್ಲವೇ ಪೋಟೋ, ವೀಡಿಯೋಗಳು ನಿಮಗೆ ಅವಶ್ಯಕತೆ ಇಲ್ಲ ಎನಿಸಿದರೆ ಅದನ್ನು ಡಿಲೀಟ್‌ ಮಾಡುವ ಅವಕಾಶ ನೀಡಿದೆ. ನಿಮ್ಮ ಹಳೆಯ ವಾಟ್ಸಾಪ್‌ನ ಚಾಟ್‌ಗಳನ್ನು ಉಳಿಸಿ ಫೋಟೋಗಳು ಮತ್ತು ವೀಡಿಯೊಗಳನ್ನು ಮಾತ್ರ ವಾಟ್ಸಾಪ್‌ ಚಾಟ್‌ನಲ್ಲಿ ಡಿಲೀಟ್‌ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ವೈಯಕ್ತಿಕ ಮತ್ತು ಗ್ರೂಪ್‌ ಚಾಟ್‌ ಮಾಡುವುದಕ್ಕೆ ಅವಕಾಶ ನೀಡಿದೆ. ನಿಮಗೆ ವಾಟ್ಸಾಪ್‌ ಗ್ರೂಪ್‌ನಲ್ಲಿ ಬರುವ ಚಾಟ್‌ಗಳು ಕಿರಿಕಿರಿ ಎನಿಸಿದರೆ ಆ ಗ್ರೂಪ್‌ ಅನ್ನು ಶಾಶ್ವತವಾಗಿ ಮ್ಯೂಟ್ ಆಯ್ಕೆಯನ್ನು ವಾಟ್ಸಾಪ್‌ ಪರಿಚಯಿಸಿದೆ. ಇದರಿಂದ ನಿಮಗೆ ಯಾವುದೇ ನೊಟೀಪೀಕೇಷನ್‌ ಬರುವುದಿಲ್ಲ ನಿಮಗೆ ಬೇಕಾದಲ್ಲಿ ವಾಟ್ಸಾಪ್‌ ಮೆಸೇಜ್‌ ಅನ್ನು ಪರಿಶೀಲಿಸಬಹುದಾಗಿದೆ. ಹಾಗೇಯೇ ನಿಮ್ಮ ವಾಟ್ಸಾಪ್‌ ಅಕೌಂಟ್‌ ನಲ್ಲಿ ಬರುವ ಪೋಟೋ, ವಿಡಿಯೋ ಸಮದೇಶಗಳ ಆಟೋಮ್ಯಾಟಿಕ್‌ ಡೌನ್‌ಲೋಡ್‌ ಮಾಡುವ ಮತ್ತು ತಿರಸ್ಕರಿಸುವ ಆಯ್ಕೆಯೂ ಇದೆ. ಅದೇ ರೀತಿ ನಿಮಗೆ ಅಗತ್ಯವಿರುವ ಕೆಲವು ಟೆಕ್ಸ್ಟ್‌ ಮೆಸೇಜ್‌ಗಳನ್ನು ಮಾತ್ರ ಇಟ್ಟುಕೊಂಡು ಫೋಟೋಗಳು, ವೀಡಿಯೊಗಳು, ಜಿಐಎಫ್ ಇತ್ಯಾದಿ ಅಳಿಸಲು ಆಯ್ಕೆ ಮಾಡಬಹುದಾಗಿದ್ದು, ಇದಕ್ಕಾಗಿ ಈ ಕೆಳಗಿನ ಹಂತಗಳನ್ನ ಅನುಸರಿಸಿ.

ಮಾಧ್ಯಮ

ಹಂತ:1 ಸೆಟ್ಟಿಂಗ್‌ಗಳಿಗೆ ಹೋಗಿ, ಡೇಟಾ ಮತ್ತು ಶೇಖರಣಾ ಬಳಕೆ ಕ್ಲಿಕ್ ಮಾಡಿ, ನಂತರ ಶೇಖರಣಾ ಬಳಕೆ ಕ್ಲಿಕ್ ಮಾಡಿ.

ಹಂತ:2 ನೀವು ಅಳಿಸಲು ಬಯಸುವ ಮಾಧ್ಯಮ ಅಥವಾ ಗುಂಪನ್ನು ಆಯ್ಕೆ ಮಾಡಿ.

ಹಂತ:3 ಇದೀಗ manage ಕ್ಲಿಕ್ ಮಾಡಿ ಮತ್ತು ನಂತರ ನೀವು ಅಳಿಸಲು ಬಯಸುವ ಎಲ್ಲಾ ಬಾಕ್ಸ್‌ಗಳನ್ನು ಟಿಕ್ ಮಾಡಿ.

ಹಂತ:4 ಈಗ clear ಕ್ಲಿಕ್ ಮಾಡಿ ನಂತರ ದೃಡೀಕರಿಸಿ.

Most Read Articles
Best Mobiles in India

Read more about:
English summary
WhatsApp saves all the photos, videos and GIFs from every chat when it backs up your chats. It’s unnecessary clutter and you really don’t need all that there, you can delete them from the chat itself and keep just the texts.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X