Instagram ಖಾತೆಯನ್ನು ಫೇಸ್‌ಬುಕ್‌ ಕಂಟ್ಯಾಕ್ಟ್‌ನಿಂದ ಕಡಿತಗೊಳಿಸುವುದು ಹೇಗೆ!

|

ಇದು ಸೊಶೀಯಲ್‌ ಮೀಡಿಯಾ ಜಮಾನ. ಬೆರಳ ತುದಿಯಲ್ಲಿಯೇ ವಿಶ್ವದ ಯಾವುದೇ ಮೂಲದಲ್ಲಿ ನಡೆಯುವ ಮಾಹಿತಿಯನ್ನ ತಿಳಿಯಬಹುದಾಗಿದೆ. ಕ್ಷಣಾರ್ಧದಲ್ಲಿಯೇ ಯಾವುದೇ ವಿಚಾರವನ್ನ ಬೇಕಿದ್ದರೂ ವೈರಲ್‌ ಮಾಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಾದ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಖಾತೆಗಳನ್ನು ಒಂದಕ್ಕೊಂದು ಲಿಂಕ್ ಸಹ ಮಾಡಬಹುದಾಗಿದೆ. ಈ ರೀತಿ ಲಿಂಕ್‌ ಮಾಡುವುದರಿಂದ ನಿಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಸಹ ಶೇರ್‌ ಮಾಡಿಕೊಳ್ಳಬಹುದಾಗಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ಮತ್ತು ಫೇಸ್‌ಬುಕ್‌ ಅಕೌಂಟ್‌ಗಳನ್ನ ಒಂದಕ್ಕೊಂದು ಲಿಂಕ್‌ ಮಾಡಬಹುದಾಗಿದೆ. ಈ ಮೂಲಕ ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿದ ಫೋಸ್ಟ್‌ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿಯೂ ಸಹ ಶೇರ್‌ ಮಾಡಬಹುದಾಗಿದೆ. ಇದರಿಂದ Instagram ನಲ್ಲಿ ನಿಮ್ಮ ಫೇಸ್‌ಬುಕ್ ಸ್ನೇಹಿತರನ್ನು ಹುಡುಕಲು ಮತ್ತು ಸಂಪರ್ಕಿಸಲು ಇದು ತುಂಬಾ ಸುಲಭವಾಗಿದೆ. ಇನ್ನು ನೀವು ಈ ಎರಡೂ ಸೋಶೀಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್‌ಗಳ ಲಿಂಕ್‌ ಅನ್ನು ಕಡಿತಗೊಳಿಸಲು ಬಯಸಿದರೆ, ಅದಕ್ಕೂ ಸುಲಭ ಮಾರ್ಗವಿದೆ. ಹಾಗಾದ್ರೆ ಎರಡು ಖಾತೆಗಳ ಲಿಂಕ್ ಅನ್ನು ಕಡಿತಗೊಳಿಸುವುದು ಹೇಗೆ ಅನ್ನೊದನ್ನ ತಿಳಿಯಲು ಈ ಲೇಖನವನ್ನ ಓದಿರಿ.

Instagram ಖಾತೆಯನ್ನು ಫೇಸ್‌ಬುಕ್‌ನಿಂದ ಲಿಂಕ್‌ನಿಂದ ಕಡಿತಗೊಳಿಸುವುದು ಹೇಗೆ?

Instagram ಖಾತೆಯನ್ನು ಫೇಸ್‌ಬುಕ್‌ನಿಂದ ಲಿಂಕ್‌ನಿಂದ ಕಡಿತಗೊಳಿಸುವುದು ಹೇಗೆ?

ಫೇಸ್‌ಬುಕ್‌ನಿಂದ ಇನ್‌ಸ್ಟಾಗ್ರಾಮ್ ಕಂಟ್ಯಾಕ್ಟ್‌ ಕಡಿತಗೊಳಿಸಲು, ನೀವು ಮೊದಲು ನಿಮ್ಮ ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್ ತೆರೆಯಬೇಕು ಮತ್ತು ಕೆಳಗಿನ ಹಂತಗಳನ್ನು ಅನುಸರಿಸಬೇಕು.
ಹಂತ:1 ಸೆಟ್ಟಿಂಗ್‌ಗಳು -> ಆಯ್ಕೆಗಳಿಗೆ ಹೋಗಿ ಮತ್ತು ಲಿಂಕ್ಡ್ ಅಕೌಂಟ್ಸ್ -> ಫೇಸ್‌ಬುಕ್ ಕ್ಲಿಕ್ ಮಾಡಿ.
ಹಂತ:2 ಅನ್ಲಿಂಕ್ ಖಾತೆಯನ್ನು ಟ್ಯಾಪ್ ಮಾಡಿ.
ಹಂತ:3 ನಂತರ ಐಒಎಸ್ ಸಾಧನಗಳಲ್ಲಿ, ನೀವು ಫೇಸ್‌ಬುಕ್ ಖಾತೆಯನ್ನು ಸಂಪರ್ಕ ಕಡಿತಗೊಳಿಸಲು ಬಯಸುತ್ತೀರಾ ಎಂದು ಕೇಳುವ ಪ್ರಾಂಪ್ಟ್ ನಿಮಗೆ ಸಿಗುತ್ತದೆ. Yes, I'm Sure. ಟ್ಯಾಪ್ ಮಾಡಿ.

ಫೇಸ್‌ಬುಕ್‌ನಿಂದ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ತೆಗೆದುಹಾಕುವುದು ಹೇಗೆ

ಫೇಸ್‌ಬುಕ್‌ನಿಂದ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ತೆಗೆದುಹಾಕುವುದು ಹೇಗೆ

Instagram ಖಾತೆಯನ್ನು ಫೇಸ್‌ಬುಕ್‌ನಿಂದ ಲಿಂಕ್‌ನಿಂದ ಕಡಿತಗೊಳಿಸುವುದು ಸಾಕಾಗಿದ್ದರೆ, ನೀವು ಈ ಹಿಂದೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ತೆಗೆದುಹಾಕಬಹುದು. ಇದಕ್ಕಾಗಿ ನೀವು ಕೆಳಗಿನ ಹಂತಗಳನ್ನು ಬ್ರೌಸರ್‌ನಲ್ಲಿ ಅನುಸರಿಸಬಹುದು.

ಇನ್‌ಸ್ಟಾಗ್ರಾಮ್

ಹಂತ:1 ಸೆಟ್ಟಿಂಗ್ಸ್‌ -> ಅಪ್ಲಿಕೇಶನ್‌ಗಳಿಗೆ ಹೋಗಿ. ಪಟ್ಟಿಯಲ್ಲಿ ಇನ್‌ಸ್ಟಾಗ್ರಾಮ್ ಗೋಚರಿಸದಿದ್ದರೆ See More ಕ್ಲಿಕ್ ಮಾಡಿ.
ಹಂತ:2 ಪಟ್ಟಿಯಿಂದ Instagram ಐಕಾನ್ ಕ್ಲಿಕ್ ಮಾಡಿ.
ಹಂತ:3 ಪರದೆಯ ಕೆಳಭಾಗದಲ್ಲಿ, ನೀವು ಅಪ್ಲಿಕೇಶನ್ ತೆಗೆದುಹಾಕಿ ಆಯ್ಕೆಯನ್ನು ಕಾಣಬಹುದಾಗಿದೆ. ಈ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:4 ಪಾಪ್-ಅಪ್ ವಿಂಡೋದಲ್ಲಿ, ನಿಮ್ಮ ಫೇಸ್‌ಬುಕ್ ಖಾತೆಯಲ್ಲಿ ನೀವು ಹಂಚಿಕೊಂಡಿರುವ ನಿಮ್ಮ ಎಲ್ಲಾ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ತೆಗೆದುಹಾಕಲು ಬಾಕ್ಸ್ ಪರಿಶೀಲಿಸಿ. ತೆಗೆದುಹಾಕು ಕ್ಲಿಕ್ ಮಾಡುವ ಮೂಲಕ ದೃಡೀಕರಿಸಿ.

Best Mobiles in India

English summary
If you are active on social media, then you will know that there are many advantages of linking both your Instagram and Facebook accounts.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X