ಬ್ಯಾಟಲ್‌ಗ್ರೌಂಡ್‌ ಮೊಬೈಲ್‌ ಇಂಡಿಯಾ ಗೇಮ್‌ ಡೌನ್‌ಲೋಡ್‌ ಮಾಡುವುದು ಹೇಗೆ?

|

ಪಬ್‌ಜಿ ಗೇಮ್‌ ಪ್ರಿಯರ ಬಹುದಿನಗಳ ಕನಸಿಗೆ ಇಂದು ಅಂತಿಮ ಸ್ಪರ್ಶ ಸಿಕ್ಕಿದೆ. ಪಬ್‌ಜೀ ಗೇಮ್‌ನ ಹೊಸ ರೂಪ ಬ್ಯಾಟಲ್‌ಗ್ರೌಂಡ್‌ ಮೊಬೈಲ್‌ ಇಂಡಿಯಾ ಗೇಮ್‌ ಅಂತಿಮವಾಗಿ ಬೀಟಾ ಪರೀಕ್ಷರಿಗೆ ಡೌನ್‌ಲೋಡ್‌ಗೆ ಲಭ್ಯವಿದೆ. ಪಬ್‌ಜಿ ಗೇಮ್‌ ರೂಪಿಸಿದ್ದ ಕ್ರಾಫ್ಟನ್ ಭಾರತೀಯ ಗೇಮರುಗಳಿಗಾಗಿ ಹೊಸ ಮಾದರಿಯಲ್ಲಿ ಬ್ಯಾಟಲ್‌ಗ್ರೌಂಡ್‌ ಗೇಮ್‌ ಅನ್ನು ಪರಿಚಯಿಸಿದ್ದಾರೆ. ಈ ಆವೃತ್ತಿಗೆ ಯಾವ ಫೀಚರ್ಸ್‌ಗಳು ಪ್ರತ್ಯೇಕವಾಗಿರುತ್ತವೆ ಎಂಬುದು ಗೇಮಿಂಗ್‌ ಪ್ರಿಯರಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.

ಬ್ಯಾಟಲ್‌ ಗ್ರೌಂಡ್‌ ಮೊಬೈಲ್‌ ಇಂಡಿಯಾ ಗೇಮ್‌

ಹೌದು, ಬ್ಯಾಟಲ್‌ ಗ್ರೌಂಡ್‌ ಮೊಬೈಲ್‌ ಇಂಡಿಯಾ ಗೇಮ್‌ ಇದೀಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪ್ರೀ-ರಿಜಿಸ್ಟರ್‌ಗೆ ಲಭ್ಯವಿದೆ. ಮೊದಲೇ ಬೀಟಾ ಪರೀಕ್ಷಕರಾಗಿ ಪ್ರವೇಶಿಸಲು ಸಾಧ್ಯವಾದವರು ಗೇಮ್‌ ಅನ್ನು ಡೌನ್‌ಲೋಡ್‌ ಮಾಡಬಹುದಾಗಿದೆ. ಗೂಗಲ್ ಪ್ಲೇ ವಿವರಣೆಯ ಪ್ರಕಾರ, ಬೀಟಾ ಪರೀಕ್ಷೆಯಿಂದ ಹೊರಗುಳಿದವರು ಸಾರ್ವಜನಿಕ ಆವೃತ್ತಿಯು ಲಭ್ಯವಾದ ನಂತರ ಅದನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಹಾಗಾದ್ರೆ ಬೀಟಾ ಪರೀಕ್ಷರಾಗಿ ಬ್ಯಾಟಲ್‌ ಗ್ರೌಂಡ್‌ ಮೊಬೈಲ್‌ ಇಂಡಿಯಾ ಗೇಮ್‌ ಡೌನ್‌ಲೋಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬ್ಯಾಟಲ್‌ ಗ್ರೌಂಡ್‌ ಮೊಬೈಲ್‌ ಇಂಡಿಯಾ

ಕಳೆದ ಮೇ ತಿಂಗಳಲ್ಲಿ ಬ್ಯಾಟಲ್‌ ಗ್ರೌಂಡ್‌ ಮೊಬೈಲ್‌ ಇಂಡಿಯಾ ಗೇಮ್‌ ಭಾರತಕ್ಕೆ ಬರುವುದು ಕನ್ಫರ್ಮ್‌ ಆಗಿತ್ತು. ಕಳೆದ 45 ದಿನಗಳಲ್ಲಿ, ಆಟಕ್ಕೆ ಸಂಬಂಧಿಸಿದಂತೆ ಹಲವಾರು ಕ್ರಮಗಳನ್ನು ಪಾಲಿಸಲಾಗಿದ್ದು, ಇದೀಗ ಅಂತಿಮವಾಗಿ, ಭಾರತೀಯ ಪಬ್‌ಜೀ ಗೇಮರ್‌ಗಳು ಬ್ಯಾಟಲ್‌ ಗ್ರೌಂಡ್‌ ಮೊಬೈಲ್ ಇಂಡಿಯಾಗೆ ಬೀಟಾ ಪರೀವೀಕ್ಷಕರರರಾಗಿ ಎಂಟ್ರಿ ಕಡೊಬಹುದಾಗಿದೆ. ಗೇಮಿಂಗ್‌ ಪ್ರಿಯರು ಇದನ್ನು ನೇರವಾಗಿ Google Play ಸ್ಟೋರ್‌ ಮೂಲಕ ಡೌನ್‌ಲೋಡ್‌ ಮಾಡಬಹುದಾಗಿದೆ. ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಬ್ಯಾಟಲ್‌ಗ್ರೌಂಡ್‌ ಮೊಬೈಲ್ ಇಂಡಿಯಾವನ್ನು ಡೌನ್‌ಲೋಡ್ ಮಾಡಲು ಬಳಕೆದಾರರು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಬ್ಯಾಟಲ್‌ಗ್ರೌಂಡ್‌ ಮೊಬೈಲ್‌ ಇಂಡಿಯಾವನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಬ್ಯಾಟಲ್‌ಗ್ರೌಂಡ್‌ ಮೊಬೈಲ್‌ ಇಂಡಿಯಾವನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

ಹಂತ 1: ಮೊದಲು, ಬಳಕೆದಾರರು ಬ್ಯಾಟಲ್‌ಗ್ರೌಂಡ್‌ ಮೊಬೈಲ್ ಇಂಡಿಯಾದ ಬೀಟಾ ಪರೀಕ್ಷಾ ಕಾರ್ಯಕ್ರಮಕ್ಕೆ ಜಾಯಿನ್‌ ಆಗಬೇಕು.

ಹಂತ 2: ನೀವು ಬೀಟಾ ಪರೀಕ್ಷಕರಾದ ನಂತರ, ಗೂಗಲ್ ಪ್ಲೇ ಆಯ್ಕೆಯಲ್ಲಿ "ಡೌನ್‌ಲೋಡ್" ಬಟನ್ ಟ್ಯಾಪ್ ಮಾಡಬೇಕು.

ಹಂತ 3: ಬಳಕೆದಾರರನ್ನು ಗೂಗಲ್‌ಪ್ಲೇ ಸ್ಟೋರ್‌ನಲ್ಲಿನ ಗೇಮ್‌ಪೇಜ್‌ಗೆ ಮರುನಿರ್ದೇಶಿಸಲಾಗುತ್ತದೆ.

ಡೌನ್‌ಲೋಡ್

ಹಂತ 4: "ಇನ್‌ಸ್ಟಾಲ್‌" ಬಟನ್ ಟ್ಯಾಪ್ ಮಾಡಿ. ಗೇಮ್‌ ಅನ್ನು ಆಟೋಮ್ಯಾಟಿಕ್‌ ಡೌನ್‌ಲೋಡ್ ಮಾಡಲಾಗುತ್ತದೆ ಮತ್ತು ಇನ್‌ಸ್ಟಾಲ್‌ ಮಾಡಲಾಗುತ್ತದೆ.

ಹಂತ 5: ಡೌನ್‌ಲೋಡ್ ಪೂರ್ಣಗೊಂಡ ನಂತರ, ಗೇಮ್‌ಅನ್ನು ತೆರೆಯಿರಿ. ಹೆಚ್‌ಡಿ ಮತ್ತು ಲೋ-ಸ್ಪೆಕ್‌ನಿಂದ ಆದ್ಯತೆಯ ಸಂಪನ್ಮೂಲ ಪ್ಯಾಕ್ ಅನ್ನು ಆಯ್ಕೆ ಮಾಡುವ ಆಯ್ಕೆಯನ್ನು ಆಟಗಾರರು ಹೊಂದಿರುತ್ತಾರೆ.

ಹಂತ 6: ಡೌನ್‌ಲೋಡ್ ಪೂರ್ಣಗೊಂಡ ನಂತರ, ಬಳಕೆದಾರರು ಲಾಗ್ ಇನ್ ಆಗಬಹುದು ಮತ್ತು ಆಟವನ್ನು ಎಂಜಾಯ್‌ ಮಾಡಬಹುದಾಗಿದೆ.

ಇಲ್ಲಿ ಗಮನಿಸಬೇಕಾದ ವಿಚಾರ ಏನೆಂದರೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬ್ಯಾಟಲ್‌ ಗ್ರೌಂಡ್‌ ಮೊಬೈಲ್ ಇಂಡಿಯಾದ ಗಾತ್ರ 721 ಎಂಬಿ ಇದೆ. ಆದ್ದರಿಂದ, ಗೇಮ್‌ ಅನ್ನು ಡೌನ್‌ಲೋಡ್‌ ಮಾಡುವ ಮೊದಲು ನಿಮ್ಮ ಡಿವೈಸ್‌ನಲ್ಲಿ ಗೇಮ್‌ಗೆ ಬೇಕಾದ ಸ್ಪೇಸ್‌ ಅನ್ನು ಉಳಿಸಿಕೊಳ್ಳುವುದು ಅವಶ್ಯಕವಾಗಿದೆ.

Best Mobiles in India

English summary
Finally, the moment that Indian PUBG Mobile fans have been waiting for has arrived as Battlegrounds Mobile India’s early access has been released for the players.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X