ಗೂಗಲ್ ಮ್ಯಾಪ್‌ನಲ್ಲಿ Incognito Mode ಆನ್‌ ಮಾಡುವುದು ಹೇಗೆ?

|

ಗೂಗಲ್ ಮ್ಯಾಪ್‌ ಎನ್ನುವುದು ವೆಬ್ ಮ್ಯಾಪಿಂಗ್ ಪ್ಲಾಟ್‌ಫಾರ್ಮ್ ಹಾಗೂ ಗೂಗಲ್ ಆಪ್‌ ಆಗಿದೆ. ಇದು ಉಪಗ್ರಹ ಚಿತ್ರಣ, ವೈಮಾನಿಕ ವೀಕ್ಷಣೆ, ರಸ್ತೆಯ ನಕ್ಷೆಗಳು, 360° ವೀಕ್ಷಣೆಯ ನಕ್ಷೆ ಸೇರಿದಂತೆ ಇನ್ನಿತರೆ ಫೀಚರ್ಸ್‌ ಅನ್ನು ಬಳಕೆದಾರರಿಗೆ ನೀಡುತ್ತದೆ. ಹಾಗೆಯೇ ಟ್ರಾಫಿಕ್ ಬಗೆಗಿನ ನಿಖರ ಮಾಹಿತಿ, ಹಾಗೂ ಯಾವ ವಾಹನದಲ್ಲಿ ಸಂಚರಿಸಿದರೆ ಎಷ್ಟು ಸಮಯ ಬೇಕು ಎಂಬಿತ್ಯಾದಿ ಮಾಹಿತಿಯನ್ನು ಬಳಕೆದಾರರಿಗೆ ನೀಡುತ್ತದೆ.

ಗೂಗಲ್ ಮ್ಯಾಪ್‌

ಹೌದು, ಈಗಂತೂ ಪ್ರಯಾಣಿಕರಿಗೆ ಹಾಗೂ ಪ್ರವಾಸಿಗರಿಗೆ ಗೂಗಲ್ ಮ್ಯಾಪ್‌ ಅತ್ಯಂತ ಅವಶ್ಯಕವಾದ ಆಪ್‌ ಆಗಿದೆ. ಗೂಗಲ್‌ ಮ್ಯಾಪ್‌ ಒಂದಿದ್ದರೆ ಯಾರ ಸಹಾಯ ಇಲ್ಲದಿದ್ದರೂ ಸಹ ಯಾವುದೇ ಸ್ಥಳಕ್ಕೆ ಯಾವಾಗ ಬೇಕೆಂದರೂ ಸಹ ಸಂಚರಿಸಬಹುದಾಗಿದೆ. ಮ್ಯಾಪ್‌ ಆನ್‌ ಮಾಡಿಕೊಂಡು ನೀವು ಎಲ್ಲೇ ಸಂಚರಿಸಿದರೂ ಗೂಗಲ್‌ ಆಪ್‌ ಸೇರಿದಂತೆ ಇನ್ನಿತರೆ ಆಪ್‌ಗಳು ನೀವು ಎಲ್ಲೆಲ್ಲಿಗೆ ಸಂಚರಿಸಿದ್ದೀರಿ ಎಂಬೆಲ್ಲಾ ಮಾಹಿತಿಯನ್ನು ಟ್ರ್ಯಾಕ್‌ ಮಾಡುತ್ತವೆ. ಇದನ್ನು ತಪ್ಪಿಸಲು ಗೂಗಲ್‌ ಈ ಫೀಚರ್ಸ್‌ ಮೂಲಕ ಅನುವು ಮಾಡಿಕೊಟ್ಟಿದೆ. ಅದುವೇ Incognito mode ಇದರ ಬಳಕೆ ಹೇಗೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿ.

ಪ್ರಯಾಣವನ್ನು ಖಾಸಗಿಯಾಗಿ ಇರಿಸಿಕೊಳ್ಳಿ

ಪ್ರಯಾಣವನ್ನು ಖಾಸಗಿಯಾಗಿ ಇರಿಸಿಕೊಳ್ಳಿ

ಗೂಗಲ್ ಮ್ಯಾಪ್‌ನಲ್ಲಿ Incognito mode ಅನ್ನು ಬಳಸಿಕೊಂಡು ನಿಮ್ಮ ಪ್ರಯಾಣವನ್ನು ಖಾಸಗಿಯಾಗಿ ಇರಿಸಿಕೊಳ್ಳಬಹುದಾಗಿದೆ. ನೀವು ಹುಡುಕುವ ಅಥವಾ ನ್ಯಾವಿಗೇಟ್ ಮಾಡುವ ಸ್ಥಳಗಳ ಚಟುವಟಿಕೆಯನ್ನು ಗೂಗಲ್‌ ಖಾತೆಯಲ್ಲಿ ಉಳಿಸಲು ಇಚ್ಚೆಪಡದಿದ್ದರೆ ಈ ಫೀಚರ್ಸ್ ಅನ್ನು ಬಳಕೆ ಮಾಡಬಹುದು.

Incognito mode ನಿಂದಾಗುವ ಲಾಭ ಏನು?

Incognito mode ನಿಂದಾಗುವ ಲಾಭ ಏನು?

ಈ Incognito mode ಆನ್ ಆಗಿರುವಾಗ ಗೂಗಲ್‌ ಮ್ಯಾಪ್‌ ನಿಮ್ಮ ಬ್ರೌಸಿಂಗ್, ಸರ್ಚ್‌ ಹಿಸ್ಟರಿಯನ್ನು ನಿಮ್ಮ ಖಾತೆಯಲ್ಲಿ ಉಳಿಸುವುದಿಲ್ಲ ಅಥವಾ ಯಾವುದೇ ರೀತಿಯ ನೋಟಿಫಿಕೇಶನ್‌ ಸಹ ಬರುವುದಿಲ್ಲ. ಅದಾಗ್ಯೂ ನಿಮ್ಮ ಸ್ಥಳದ ಇತಿಹಾಸ ಅಥವಾ ಹಂಚಿಕೊಂಡ ಸ್ಥಳವನ್ನು ನೀವು ನವೀಕರಿಸಬಹುದಾದ ಆಯ್ಕೆಯನ್ನೂ ಸಹ ನೀಡಲಾಗಿದೆ. ಇದೆಲ್ಲಕ್ಕೂ ಮಿಗಿಲಾಗಿ Incognito mode ಅನ್ನು ಸಕ್ರಿಯಗೊಳಿಸುವುದರಿಂದ ನಿಮ್ಮ ಯಾವುದೇ ಚಟುವಟಿಕೆಯನ್ನು ಇಂಟರ್ನೆಟ್ ಪೂರೈಕೆದಾರರು, ಇತರ ಆಪ್‌ಗಳು ನಿಮ್ಮ ಸಂಚಾರ ಮಾಹಿತಿ ಬಗ್ಗೆ ತಿಳಿದುಕೊಳ್ಳುವುದರಿಂದ ಪಾರಾಗಬಹುದಾಗಿದೆ.

ಗೂಗಲ್‌ ಮ್ಯಾಪ್‌ನಲ್ಲಿ Incognito mode ಆನ್‌ ಮಾಡುವುದು ಹೇಗೆ?

ಗೂಗಲ್‌ ಮ್ಯಾಪ್‌ನಲ್ಲಿ Incognito mode ಆನ್‌ ಮಾಡುವುದು ಹೇಗೆ?

ನಿಮ್ಮ ಆಂಡ್ರಾಯ್ಡ್‌ ಹಾಗೂ ಟ್ಯಾಬ್ಲೆಟ್‌ ಡಿವೈಸ್‌ಗಳಲ್ಲಿ ಗೂಗಲ್‌ ಮ್ಯಾಪ್‌ ಓಪನ್‌ ಮಾಡಿ. ನಂತರ ಮೇಲಿನ ಬಲಭಾಗದಲ್ಲಿ ಕಾಣಿಸಿಕೊಳ್ಳುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ ಬಳಿಕ ಅಲ್ಲೇ ಕಾಣಿಸುವ Incognito mode ಅನ್ನು ಸಕ್ರಿಯಗೊಳಿಸಿ. ಇದರ ನಡುವೆ Incognito mode ಫೀಚರ್ಸ್‌ ಬೇಡ ಎಂದರೆ ಇದೇ ಮಾರ್ಗ ಅನುಸರಿಸಿಕೊಂಡು ಆಫ್‌ ಮಾಡಬಹುದಾಗಿದೆ.

ಇಮ್ಮೆರ್ಸಿವ್‌ ವ್ಯೂ

ಇಮ್ಮೆರ್ಸಿವ್‌ ವ್ಯೂ

Incognito mode ಫೀಚರ್ಸ್‌ ಜೊತೆಗೆ ಇಮ್ಮೆರ್ಸಿವ್‌ ವ್ಯೂ ಸಹ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಇತ್ತೀಚೆಗೆ ಇದನ್ನು ಪರಿಚಯಿಸಿದ್ದು, ನೀವು ಯಾವ ಸ್ಥಳಕ್ಕೆ ಭೇಟಿ ನೀಡಲು ಮುಂದಾಗುವಿರೋ ಅದರ ಬಗ್ಗೆ ಪೂರ್ವದಲ್ಲಿಯೇ ಸಾಕಷ್ಟು ಮಾಹಿತಿ ಕಲೆ ಹಾಕಬಹುದಾಗಿದೆ. ಈ ಫೀಚರ್ಸ್‌ ಮೂಲಕ ಯಾವ ದಿನದಲ್ಲಿ, ಯಾವ ಸಮಯದಲ್ಲಿ ಹವಾಮಾನ ಹೇಗಿದೆ. ಸಂಚಾರ ದಟ್ಟಣೆ ಇದೆಯೇ?, ಇಲ್ಲವೇ?, ಜನಸಂದಣಿ ಹೇಗಿದೆ? ಅಲ್ಲಿನ ಹೋಟೆಲ್‌ಗಳು ಯಾವ ಸಮಯದ ವರೆಗೆ ಸೇವೆ ನೀಡಲಿವೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಇದಿಷ್ಟೇ ಅಲ್ಲದೆ, ರಸ್ತೆ ವೀಕ್ಷಣೆಯನ್ನೂ ಸಹ ಮಾಡಬಹುದಾಗಿದೆ.

ಪರಿಸರ ಸ್ನೇಹಿ ರೂಟಿಂಗ್‌

ಪರಿಸರ ಸ್ನೇಹಿ ರೂಟಿಂಗ್‌

ನೀವು ಬೇಕಾದ ಸ್ಥಳಗಳನ್ನು ಅನ್ವೇಷಿಸಲು ಸುಲಭ ಮಾರ್ಗ ತೋರಿಸುವ ಗೂಗಲ್‌ ಮ್ಯಾಪ್ ಯಾವುದೇ ಸಮಸ್ಯೆ ಇಲ್ಲದೆ ಆ ಸ್ಥಳಗಳಿಗೆ ಸಂಚಾರ ಮಾಡಲು ಪರಿಸರ ಸ್ನೇಹಿ ರೂಟಿಂಗ್‌ಫೀಚರ್ಸ್‌ ಮೂಲಕ ಅನುವು ಮಾಡಿಕೊಡುತ್ತದೆ. ಯುಎಸ್‌ ಹಾಗೂ ಕೆನಡಾದಲ್ಲಿ ಈ ಪರಿಸರ ಸ್ನೇಹಿ ರೂಟಿಂಗ್ ಪರಿಚಯಿಸಲಾಗಿದ್ದು, ಈ ಮೂಲಕ ಇಂಧನ ಉಳಿಕೆ ಮಾಡಲು ಹಾಗೂ ಉತ್ತಮ ಪರಿಸರದಲ್ಲಿ ಸಂಚಾರ ಮಾಡಲು ಸಹಾಯವಾಗಲಿದೆ.

Best Mobiles in India

English summary
Google Maps is a web mapping platform and a Google app. It contains Incognito Mode features and is explained about it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X