Google ಡಾಕ್ಸ್ ಅಪ್ಲಿಕೇಶನ್‌ನಲ್ಲಿ ಡಾರ್ಕ್ ಮೋಡ್ ಸೆಟ್‌ ಮಾಡುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ಡಾರ್ಕ್‌ಮೋಡ್‌ ಥೀಮ್‌ ಅನ್ನು ಎಲ್ಲಾ ಮಾದರಿಯ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಣಬಹುದಾಗಿದೆ. ಇನ್ನು ಗೂಗಲ್ ಕಳೆದ ವರ್ಷ ಆಂಡ್ರಾಯ್ಡ್ 10 ನಲ್ಲಿ ಡಾರ್ಕ್ ಮೋಡ್ ಅನ್ನು ಪರಿಚಯಿಸಿತು. ಅಲ್ಲದೆ ಈ ಡಾರ್ಕ್ ಮೋಡ್ ಫೀಚರ್ಸ್‌ ವಿಭಿನ್ನ ಯುಐ ಅನ್ನು ನೀಡಲಿದ್ದು, ಇದು ಕಡಿಮೆ-ಬೆಳಕಿನ ಪರಿಸರದಲ್ಲಿ ಕಾರ್ಯನಿರ್ವಹಿಸುವುದಕ್ಕೆ ಸಹಕಾರಿಯಾಗಿದೆ. ಜೊತೆಗೆ ನಿಮ್ಮ ಡಿವೈಸ್‌ಗಳ ಬ್ಯಾಟರಿ ಅವಧಿಯನ್ನು ಉಳಿಸಲು ಸಹಾಯ ಮಾಡುತ್ತದೆ. ಸದ್ಯ ಇದೀಗ ಗೂಗಲ್ ತನ್ನ ಇತರೆ ಅಪ್ಲಿಕೇಶನ್‌ಗಳಲ್ಲಿ ಸಹ ಡಾರ್ಕ್‌ ಮೊಡ್‌ ಪರಿಚಯಿಸಿದೆ. ಅದರಲ್ಲಿ Google ಡಾಕ್ಸ್, ಶೀಟ್‌ಗಳು ಮತ್ತು Android ಸ್ಲೈಡ್‌ಗಳು ಸಹ ಸೇರಿವೆ.

ಗೂಗಲ್‌

ಹೌದು, ಗೂಗಲ್‌ ಈಗಾಗಲೇ ಗೂಗಲ್‌ ಡಾಕ್ಸ್‌, ಗೂಗಲ್‌ ಶೀಟ್‌, ಗೂಗಲ್‌ ಆಂಡ್ರಾಯ್ಡ್‌ ಸ್ಲೈಡ್‌ಗಳಲ್ಲಿ ಡಾರ್ಕ್‌ಮೋಡ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಕಣ್ಣಿನ ಮೇಲೆ ಬೆಳಿಕೆನ ತೀವ್ರತೆ ತಡೆಯುವ ಈ ಡಾರ್ಕ್‌ಮೋಡ್‌ ಥೀಮ್‌ ಎಲ್ಲರಿಗೂ ಸಹಕಾರಿಯಾಗಿದ್ದು, ಬಳಕೆದಾರರು ಡಾರ್ಕ್‌ಮೋಡ್‌ ಅನ್ನು ಸೆಟ್‌ಮಾಡಿಕೊಳ್ಳುತ್ತಿದ್ದಾರೆ. ಇದೀಗ ಎಲ್ಲಾ G ಸೂಟ್ ಮತ್ತು ವೈಯಕ್ತಿಕ ಬಳಕೆದಾರರು ಡಾಕ್ಸ್, ಶೀಟ್‌ಗಳು ಮತ್ತು ಸ್ಲೈಡ್‌ಗಳಿಗಾಗಿ ಡಾರ್ಕ್ ಮೋಡ್ ಲಭ್ಯವಿರುವುದರಿಂದ ಇದನ್ನ ಸೆಟ್‌ ಮಾಡುವುದು ಹೇಗೆ ಅನ್ನೊದು ಕೆಲವರಿಗೆ ತಿಳಿದಿಲ್ಲ. ಹಾಗಾದ್ರೆ ಗೂಗಲ್‌ ಡಾಕ್ಸ್‌, ಶೀಟ್‌,ಸ್ಲೈಡ್‌ಗಳಲ್ಲಿ ಡಾರ್ಕ್‌ ಮೋಡ್‌ ಸೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Google

ಇನ್ನು Google ಡಾಕ್ಸ್, ಶೀಟ್‌ಗಳು ಅಥವಾ ಸ್ಲೈಡ್‌ಗಳ ಅಪ್ಲಿಕೇಶನ್‌ಗಳಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಲು ಎರಡು ಮಾರ್ಗಗಳಿವೆ. ಫೋನ್‌ನ ಸಿಸ್ಟಮ್-ವೈಡ್ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಿದಾಗ ಒಂದನ್ನು ಪೂರ್ವನಿಯೋಜಿತವಾಗಿ ಆನ್ ಮಾಡಲಾಗುತ್ತದೆ. ಇನ್ನೊಂದು, ಪ್ರತಿ ಅಪ್ಲಿಕೇಶನ್‌ಗೆ ಡಾರ್ಕ್ ಮೋಡ್ ಅನ್ನು ಮ್ಯಾನುಯಲ್‌ ಆನ್ ಮಾಡುವುದು. ಹಾಗಾದ್ರೆ ಇದನ್ನು ಸೆಟ್‌ ಮಾಡುವುದು ಹೇಗೆ ಅನ್ನೊದನ್ನ ಹಂತಹಂತವಾಗಿ ತಿಳಿಸಿಕೊಡ್ತಿವಿ ತಿಳಿಯಿರಿ.

Google

1. Google ಡಾಕ್ಸ್, ಶೀಟ್‌ಗಳು ಅಥವಾ ಸ್ಲೈಡ್‌ಗಳ ಅಪ್ಲಿಕೇಶನ್ ತೆರೆಯಿರಿ.

2. ಮೆನುಗೆ ಹೋಗಿ ಮತ್ತು ಸೆಟ್ಟಿಂಗ್‌ಗಳನ್ನು ತೆರೆಯಿರಿ.

3. ನಂತರ ಥೀಮ್ ಮತ್ತು ಡಾರ್ಕ್ ಆಯ್ಕೆಮಾಡಿ.

4. ಎಲ್ಲಾ ಮೂರು ಅಪ್ಲಿಕೇಶನ್‌ಗಳಲ್ಲಿ ಡಾರ್ಕ್ ಮೋಡ್ ಅನ್ನು ಅನ್ವಯಿಸಲಾಗುತ್ತದೆ.

ಅಪ್ಲಿಕೇಶನ್‌

ಇದು ಪ್ರತಿ ಅಪ್ಲಿಕೇಶನ್‌ಗೆ ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನಷ್ಟು> ಬೆಳಕಿನ ಥೀಮ್‌ನಲ್ಲಿ ವೀಕ್ಷಿಸುವುದರ ಮೂಲಕ ನೀವು ಬೆಳಕಿನ ಥೀಮ್‌ನಲ್ಲಿ ದಾಖಲೆಗಳು ಅಥವಾ ಹಾಳೆಗಳನ್ನು ವೀಕ್ಷಿಸಬಹುದು. ಈಗಾಗಲೇ ತಮ್ಮ ಫೋನ್‌ಗಳಲ್ಲಿ ಡಾರ್ಕ್ ಥೀಮ್ ಅನ್ನು ಸಕ್ರಿಯಗೊಳಿಸಿದ ಬಳಕೆದಾರರು ಈ ಅಪ್ಲಿಕೇಶನ್‌ಗಳನ್ನು ಸ್ವಯಂಚಾಲಿತವಾಗಿ ಡಾರ್ಕ್ ಮೋಡ್‌ಗೆ ಬದಲಾಯಿಸಬಹುದಾಗಿದೆ. ಅಪ್ಲಿಕೇಶನ್‌ನ ಥೀಮ್‌ಗಳಲ್ಲಿ ಡಾರ್ಕ್, ಲೈಟ್ ಅಥವಾ ಸಿಸ್ಟಮ್ ಡೀಫಾಲ್ಟ್ ಅನ್ನು ಆರಿಸುವ ಮೂಲಕ ನೀವು ಇದನ್ನು ಬದಲಾಯಿಸಬಹುದು. ಡಾರ್ಕ್ ಅಥವಾ ಲೈಟ್ ಥೀಮ್‌ಗಳ ನಡುವೆ ಬದಲಾಯಿಸಲು ಆಯ್ಕೆ ಮಾಡಲು ಮೇಲೆ ಪಟ್ಟಿ ಮಾಡಲಾದ ಅದೇ ಹಂತಗಳನ್ನು ಮತ್ತೆ ಅನುಸರಿಸಬೇಕಾಗುತ್ತದೆ.

Best Mobiles in India

Read more about:
English summary
Dark mode support for Google Docs, Sheets and Slides apps is available for Android users.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X