ನಿಮ್ಮ ಫೇಸ್‌ಬುಕ್ ಪೋಸ್ಟ್‌ಗಳನ್ನು ಎಕ್ಸಪೋರ್ಟ್‌ ಮಾಡುವುದು ಹೇಗೆ?

|

ಫೇಸ್‌ಬುಕ್‌ ಬಳಕೆದಾರರ ನೆಚ್ಚಿನ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಆಗಿದೆ. ಫೇಸ್‌ಬುಕ್‌ನಲ್ಲಿ ನಿಮ್ಮ ಫೋಟೋ, ಭಾವನೆ ಇತರೆ ವಿಚಾರಗಳನ್ನು ಹಂಚಿಕೊಳ್ಳಬಹುದು. ದರೂ ಸೊಶೀಯಲ್‌ ಮೀಡಿಯಾ ಬಳಕೆಯಿಂದ ನಿಮಗೆ ಕಿರಿಕಿರಿ ಎನಿಸಿದೆಯಾ? ಇದಕ್ಕಾಗಿ ನಿಮ್ಮ ಫೇಸ್‌ಬುಕ್‌ ಅಕೌಂಟ್‌ ಅನ್ನು ಡಿಲೀಟ್‌ ಮಾಡಲು ನೀವು ಚಿಂತಿಸಬಹುದು. ನಿಮ್ಮ ಭಾವನೆಗಳನ್ನು ಒಳಗೊಂಡ ಪೋಸ್ಟ್‌ಗಳನ್ನು ನೀವು ಮತ್ತೆ ನೋಡಲು ಬಯಸಬಹುದು. ಇದೇ ಕಾರಣಕ್ಕೆ ನಿಮ್ಮ ಫೇಸ್‌ಬುಕ್ ನಲ್ಲಿರುವ ನಿಮ್ಮ ಹಳೆಯ ಪೊಸ್ಟ್‌ಗಳನ್ನು ಸೇವ್‌ ಮಾಡಲು ಬಯಸಿದರೆ ಅದಕ್ಕೂ ಕೂಡ ಅವಕಾಶವಿದೆ.

ಫೇಸ್‌ಬುಕ್‌

ಹೌದು, ನೀವು ನಿಮ್ಮ ಫೇಸ್‌ಬುಕ್‌ ಅಕೌಂಟ್ ಡಿಲೀಟ್‌ ಮಾಡುವ ಮುನ್ನ ಅದರಲ್ಲಿರುವ ನಿಮ್ಮ ಹಳೆಯ ಪೊಸ್ಟ್‌ಗಳನ್ನು ಸೇವ್‌ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಈ ಮೂಲಕ ನೀವು ಈ ಹಿಂದೆ ಫೇಸ್‌ಬುಕ್‌ ನಲ್ಲಿ ಹಂಚಿಕೊಂಡಿದ್ದ, ನಿಮ್ಮ ಅತ್ಯಮೂಲ್ಯ ಪೋಸ್ಟ್‌ಗಳನ್ನು ಉಳಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಗೂಗಲ್‌ ಡ್ರೈವ್‌ಗೆ ಟ್ರಾನ್ಸಫರ್‌ ಮಾಡಬಹುದಾಗಿದೆ. ಅದನ್ನು ಹೇಗೆ ಮಾಡುವುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್‌

ಫೇಸ್‌ಬುಕ್‌ನಲ್ಲಿ ನೀವು ಪೋಸ್ಟ್‌ ಮಾಡಿದ್ದ ಹಿಂದಿನ ಎಲ್ಲಾ ಪೋಸ್ಟ್‌ಗಳನ್ನು ಉಳಿಸಿಕೊಳ್ಳಬಹುದಾಗಿದೆ. ಇವುಗಳನ್ನು ನೀವು ನಿಮ್ಮ ಪರ್ಸನಲ್‌ ಲ್ಯಾಪ್‌ಟಾಪ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಅಲ್ಲದೆ ಅದನ್ನು ಬ್ಯಾಕಪ್ ಮಾಡಿ ಮತ್ತು ಸುರಕ್ಷಿತವಾಗಿರಿಸಿಕೊಳ್ಳಬಹುದು. ಅದರಲ್ಲೂ ಕಳೆದ ಒಂದು ದಶಕದಲ್ಲಿ ಅಥವಾ ನೀವು ಪೋಸ್ಟ್ ಮಾಡಿದ ಎಲ್ಲಾ ಪೋಸ್ಟ್‌ಗಳನ್ನು ಸಹ ಉಳಿಸಿಕೊಳ್ಳಬಹುದು ನಂತರ ನಿಮ್ಮ ಪೇಸ್‌ಬುಕ್‌ ಅಕೌಂಟ್‌ ಅನ್ನು ಡಿಲೀಟ್‌ ಮಾಡಬಹುದು.

ನಿಮ್ಮ ಫೇಸ್‌ಬುಕ್ ಪೋಸ್ಟ್‌ಗಳನ್ನು ಎಕ್ಸಪೋರ್ಟ್‌ ಮಾಡುವುದು ಹೇಗೆ?

ನಿಮ್ಮ ಫೇಸ್‌ಬುಕ್ ಪೋಸ್ಟ್‌ಗಳನ್ನು ಎಕ್ಸಪೋರ್ಟ್‌ ಮಾಡುವುದು ಹೇಗೆ?

ಹಂತ:1 ಫೇಸ್‌ಬುಕ್ ತೆರೆಯಿರಿ ಮತ್ತು ಸೆಟ್ಟಿಂಗ್‌ಗಳಿಗೆ ಹೋಗಿ.

ಹಂತ:2 ನಿಮ್ಮ ಫೇಸ್‌ಬುಕ್ ಮಾಹಿತಿ ವಿಭಾಗಕ್ಕೆ ಹೋಗಿ. ‘ವೀಕ್ಷಿಸಿ' ಕ್ಲಿಕ್ ಮಾಡಿ.

ಹಂತ:3 ನಂತರ ‘ಟ್ರಾನ್ಸಫರ್‌ ಎ ಕಾಪಿ ಆಪ್ ಯುವರ್ ಇನ್ಫಾರ್ಮಶನ್' ಸಾಲಿನಲ್ಲಿ ಕ್ಲಿಕ್ ಮಾಡಿ.

ಹಂತ:4 ನೀವು ಹಳೆಯ ಪೋಸ್ಟ್‌ಗಳನ್ನು ‘ಮೂವಿಂಗ್‌' ಅಥವಾ ‘ಡಿಲಿಟಿಂಗ್‌' ಎಂದು ಫೇಸ್‌ಬುಕ್ ಎಚ್ಚರಿಸಿದಂತೆ ದಯವಿಟ್ಟು ಗಮನಿಸಿ. ನೀವು ಅವುಗಳನ್ನು ಬೇರೆ ಸ್ಥಳಕ್ಕೆ ನಕಲಿಸುತ್ತಿದ್ದೀರಿ. ನಿಮ್ಮ ಎಲ್ಲಾ ಪೋಸ್ಟ್‌ಗಳನ್ನು ಅಳಿಸಲು, ನೀವು ಎಲ್ಲವನ್ನೂ ಕೈಯಾರೆ ಮಾಡಬೇಕಾಗಿದೆ, ಅಥವಾ ನಿಮ್ಮ ಸಂಪೂರ್ಣ ಫೇಸ್‌ಬುಕ್ ಖಾತೆಯನ್ನು ನೀವು ಅಳಿಸಬಹುದು.

ಹಂತ:5 ಈಗ, ನೀವು ವರ್ಗಾವಣೆ ಮಾಡಲು ಬಯಸುವ ಯಾವುದೇ ಪೋಸ್ಟ್‌ಗಳು, ಅಥವಾ ಟಿಪ್ಪಣಿಗಳು ಅಥವಾ ಫೋಟೋಗಳನ್ನು ಉಳಿಸಲು ನೀವು ಬಯಸುತ್ತೀರಾ ಎಂದು ಆಯ್ಕೆ ಮಾಡಬಹುದು.

ಪ್ರೊಫೈಲ್‌

ಇನ್ನು ನೀವು ಹೀಗೆ ಸೇವ್‌ ಮಾಡಲು ಬಯಸುವ ಪೋಸ್ಟ್‌ಗಳು ನಿಮ್ಮ ಸ್ವಂತ ಪ್ರೊಫೈಲ್‌ನಿಂದ ಮಾತ್ರ ಸಾಧ್ಯ. ಇತರ ಗುಂಪುಗಳು ಮತ್ತು ಪುಟಗಳಲ್ಲಿ ನೀವು ಮಾಡಿದ ಪೋಸ್ಟ್‌ಗಳನ್ನು ನಕಲಿಸಲಾಗುವುದಿಲ್ಲ. ಅಲ್ಲದೆ ಈ ಫೀಚರ್ಸ್‌ ನಿಮ್ಮ ಪೋಸ್ಟ್‌ಗಳನ್ನು ಮಾತ್ರ ಸೇವ್‌ ಮಾಡಲಿದೆ, ಆದರೆ ನಿಮ್ಮ ಫೇಸ್‌ಬುಕ್ ವಾಲ್‌ನಲ್ಲಿ ನಿಮ್ಮ ಸ್ನೇಹಿತರು ಮಾಡಿದ ಪೋಸ್ಟ್‌ಗಳನ್ನು ಸೇವ್‌ ಮಾಡಲು ಸಾಧ್ಯವಾಗುವುದಿಲ್ಲ.

Best Mobiles in India

English summary
We told you yesterday that Facebook now allows you to export your posts, notes, etc to Google Drive. Here’s a step-by-step guide on how to do it.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X