ವಾಟ್ಸಾಪ್‌, ಟೆಲಿಗ್ರಾಂ ಮೂಲಕ ಸುಲಭವಾಗಿ ಕೋವಿಡ್ ಲಸಿಕೆ ಸ್ಲಾಟ್‌ ಬುಕ್ ಮಾಡಬಹುದು!

|

ಪ್ರಸ್ತುತ ದೇಶಾದ್ಯಂತ ಕರೋನಾ ಎರಡನೇ ಅಲೆ ಜನರನ್ನು ದಂಗು ಬಡಿಸಿದೆ. ಕೋವಿಡ್ ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್ ಜೊತೆಗೆ ಅವಶ್ಯ ಕ್ರಮಗಳನ್ನು ಕೈ ಗೊಂಡಿದೆ. ಅದಾಗ್ಯೂ ಕೋವಿಡ್ ವಿರುದ್ಧದ ಹೋರಾಡಲು ಜನರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಅಗತ್ಯವಾಗಿ ಮಾಡಬೇಕಿದೆ. ಇದರೊಂದಿಗೆ ವಾಕ್ಸಿನೇಶನ್/ಲಸಿಕೆ ಪಡೆಯುವುದು ಅಷ್ಟೇ ಮುಖ್ಯವಾಗಿದೆ.

ಲಸಿಕೆಯ

ಹೌದು, ಕೊರೊನಾ ಎರಡನೇ ಅಲೆ ಹೆಚ್ಚು ಪರಿಣಾಮಕಾರಿಯಾಗಿದ್ದು, ಸೋಂಕಿತರು ಬೆಡ್, ಆಕ್ಸಿಜನಗಾಗಿ ಪರದಾಡುತ್ತಿದ್ದಾರೆ. ಇನ್ನೊಂದೆಡೆ ದೇಶದಲ್ಲಿ ಮೂರನೇ ಹಂತದ ಲಸಿಕೆಯ ಅಭಿಯಾನ ಶುರುವಾಗಿದ್ದು, 18 ವರ್ಷದ ಮೇಲ್ಪಟ್ಟವರು ಲಸಿಕೆ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಜನರು ಲಸಿಕೆ ಪಡೆಯಲು ಹತ್ತಿರದ ಲಸಿಕಾ ಕೇಂದ್ರಗಳ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಇದರೊಟ್ಟಿಗೆ ಕರೋನಾ ಪರೀಕ್ಷೆ ಕೇಂದ್ರಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಲಸಿಕೆ ಕೇಂದ್ರ ಹಾಗೂ ಕೊರೊನಾ ಪರೀಕ್ಷೆಯ ಕೇಂದ್ರವನ್ನು ವಾಟ್ಸಾಪ್‌ ಹಾಗೂ ಟೆಲಿಗ್ರಾಂ ಆಪ್‌ಗಳ ಮೂಲಕವು ತಿಳಿಯಬಹುದಾಗಿದೆ. ಆ ಬಗ್ಗೆ ಮುಂದೆ ಮಾಹಿತಿಯನ್ನು ತಿಳಿಯೋಣ ಬನ್ನಿರಿ.

ವಾಟ್ಸಾಪ್‌ ಆಪ್‌ನಲ್ಲಿಯೂ ಸ್ಪಾಟ್ ಮಾಹಿತಿ ಲಭ್ಯ

ವಾಟ್ಸಾಪ್‌ ಆಪ್‌ನಲ್ಲಿಯೂ ಸ್ಪಾಟ್ ಮಾಹಿತಿ ಲಭ್ಯ

ಹಲವಾರು ವೆಬ್‌ಸೈಟ್‌ಗಳು ಲಸಿಕೆಯ ಸ್ಲಾಟ್‌ಗಳ ಲಭ್ಯತೆಯ ಬಗ್ಗೆ ಮಾಹಿತಿ ನೀಡುತ್ತಿವೆ. https://www.vaccinateme.in/ ವೆಬ್‌ಸೈಟ್‌ಗೆ ಭೇಟಿ ನೀಡಿರಿ. ಮೊದಲಿಗೆ, ನೀವು ಈ ಲಿಂಕ್ ಅನ್ನು ತೆರೆಯಬೇಕು ಮತ್ತು ನಂತರ ನಿಮ್ಮ ಪ್ರದೇಶದ ಮಾಹಿತಿಯನ್ನು ನಮೂದಿಸಬೇಕು. ಆ ನಂತರ ನಿಮ್ಮ ಪ್ರದೇಶದಲ್ಲಿ ಲಭ್ಯವಿರುವ ಲಸಿಕೆ ಸ್ಲಾಟ್ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಆಗ ನೀವು 'ಸ್ಲಾಟ್ ತೆರೆದಾಗ ನನಗೆ ತಿಳಿಸಿ' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಆ ನಂತರ ನೀವು ವಾಟ್ಸಾಪ್ ನೋಟಿಫೀಕೇಶನ್ ಬಟನ್ ಕ್ಲಿಕ್ ಮಾಡಬೇಕು. ತದ ನಂತರ ಇದರಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ ಸಲ್ಲಿಸಬೇಕು.

ಟೆಲಿಗ್ರಾಮ್ ಆಪ್‌ನಲ್ಲಿಯೂ ಸ್ಪಾಟ್ ಮಾಹಿತಿ ಲಭ್ಯ

ಟೆಲಿಗ್ರಾಮ್ ಆಪ್‌ನಲ್ಲಿಯೂ ಸ್ಪಾಟ್ ಮಾಹಿತಿ ಲಭ್ಯ

ಟೆಲಿಗ್ರಾಮ್ ಆಪ್ ಬಳಸಿದರೆ ಕೋವಿಡ್ -19 ಲಸಿಕೆಗಾಗಿ ಖಾಲಿ ಸ್ಲಾಟ್ ಅನ್ನು ತಿಳಿಯುವುದು ಸರಳವಾಗಿದೆ. ಮೊದಲಿಗೆ https://under45.in/telegram.php ಅನ್ನು ತೆರೆಯಬೇಕು. ತದ ನಂತರ ನೀವು ನಿಮ್ಮ ರಾಜ್ಯ ಮತ್ತು ಜಿಲ್ಲೆಯನ್ನು ಸೆಲೆಕ್ಟ್ ಮಾಡುವುದು ಮತ್ತು ನಂತರ ಜಾಯಿನಿಂಗ್ ಲಿಂಕ್ ಬಟನ್ ಕ್ಲಿಕ್ ಮಾಡಿ. ಬಳಿಕ ಹೊಸ ಪಾಪ್-ಅಪ್ ವಿಂಡೋ ಕಾಣಿಸುತ್ತದೆ. ಈಗ ನೀವು ಇಲ್ಲಿ ಸೇರ್ಪಡೆ ಚಾನೆಲ್ ಬಟನ್ ಕ್ಲಿಕ್ ಮಾಡಬೇಕು. ಒಮ್ಮೆ ನೀವು ಚಾನಲ್‌ಗೆ ಸೇರಿದ ನಂತರ, ಸ್ಲಾಟ್ ಖಾಲಿಯಾಗಿರುವಾಗ ನೀವು ನೋಟಿಫೀಕೇಶನ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತೀರಿ.

Most Read Articles
Best Mobiles in India

English summary
How To Find Nearest COVID-19 Vaccination Centre On WhatsApp And Telegram.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X