ಉಚಿತವಾಗಿ 6 ತಿಂಗಳು ಯೂಟ್ಯೂಬ್ ಪ್ರೀಮಿಯಂ ಸದಸ್ಯತ್ವ ಪಡೆಯುವುದು ಹೇಗೆ?

|

ಗೂಗಲ್ ಒಡೆತನದ ಯೂಟ್ಯೂಬ್ ಒಂದು ಅತ್ಯುತ್ತಮ ವಿಡಿಯೊ ಪ್ಲಾಟ್‌ಫಾರ್ಮ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಯೂಟ್ಯೂಬ್‌ನಲ್ಲಿ ಬಳಕೆದಾರರು ವಿಡಿಯೋ ವೀಕ್ಷಿಸುವಾಗ ನಡು ನಡುವೆ ಕಾಣಿಸಿಕೊಳ್ಳುವ ಜಾಹಿರಾತುಗಳು ಕಿರಿ ಕಿರಿ ಅನಿಸುತ್ತವೆ. ವಿಡಿಯೊ ವೀಕ್ಷಣೆಯಲ್ಲಿ ಉಂಟಾಗುವ ಈ ಅಡಚಣೆಯನ್ನು ತಪ್ಪಿಸಲು ಯೂಟ್ಯೂಬ್ ಒಂದು ಪರ್ಯಾಯ ವ್ಯವಸ್ಥೆಯನ್ನು ತನ್ನ ಬಳಕೆದಾರರಿಗೆ ಪರಿಚಯಿಸಿದೆ. ಅದುವೇ ಯೂಟ್ಯೂಬ್ ಪ್ರೀಮಿಯಂ.

ಯೂಟ್ಯೂಬ್

ಹೌದು, ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಿಸುವಾಗ ಜಾಹಿರಾತುಗಳು ಕಾಣಿಸಿಕೊಳ್ಳುವುದನ್ನು ತಡೆಯಲು ಸಂಸ್ಥೆಯು ಯೂಟ್ಯೂಬ್ ಪ್ರೀಮಿಯಂ ಸೇವೆಯನ್ನು ನೀಡಿದೆ. ಬಳಕೆದಾರರು ಪ್ರೀಮಿಯಂ ಸೇವೆಯನ್ನು ಅನುಭವಿಸಲು ನಿಗದಿತ ಶುಲ್ಕ ಪಾವತಿಸಬೇಕಿರುತ್ತದೆ. ಆದರೆ ಬಳಕೆದಾರರು ಆರಂಭಿಕ 30 ದಿನಗಳ ಅವಧಿಗೆ ಉಚಿತವಾಗಿ ಯೂಟ್ಯೂಬ್ ಪ್ರೀಮಿಯಂ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಉಚಿತವಾಗಿ ಯೂಟ್ಯೂಬ್ ಪ್ರೀಮಿಯಂ ಸದಸ್ಯತ್ವ ಪಡೆಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಉಚಿತ ಯೂಟ್ಯೂಬ್ ಪ್ರೀಮಿಯಂ ಪಡೆಯಲು ಎರಡು ದಾರಿ

ಉಚಿತ ಯೂಟ್ಯೂಬ್ ಪ್ರೀಮಿಯಂ ಪಡೆಯಲು ಎರಡು ದಾರಿ

ನೀವು ಉಚಿತವಾಗಿ ಯೂಟ್ಯೂಬ್ ಪ್ರೀಮಿಯಂ ಸದಸ್ಯತ್ವವನ್ನು ಪಡೆದುಕೊಳ್ಳಲು ಎರಡು ದಾರಿಗಳಿವೆ. ಯೂಟ್ಯೂಬ್ ಸಂಸ್ಥೆಯೇ ಆರಂಭಿಕ ಟ್ರಾಯಲ್/ಪ್ರಾಯೋಗಿಕವಾಗಿ 30 ದಿನಗಳ ಅವಧಿಗೆ ಉಚಿತವಾಗಿ ಯೂಟ್ಯೂಬ್ ಪ್ರೀಮಿಯಂ ಸದಸ್ಯತ್ವ ಆಯ್ಕೆ ನೀಡಿದೆ. ಹಾಗೆಯೇ ಫ್ಲಿಪ್‌ಕಾರ್ಟ್‌ ಪ್ಲಸ್‌ ಗ್ರಾಹಕರು ಸಹ ಯೂಟ್ಯೂಬ್ ಪ್ರೀಮಿಯಂ ಸದಸ್ಯತ್ವವನ್ನು ಉಚಿತವಾಗಿ ಆರು ತಿಂಗಳ ಅವಧಿಗೆ ಪಡೆದುಕೊಳ್ಳಬಹುದಾಗಿದೆ.

ಹಂತ 1:

ಹಂತ 1:

ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ಗೆ ಭೇಟಿ ನೀಡಿ ಇಲ್ಲವೇ ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ ತೆರೆಯಿರಿ. ನಂತರ ನಿಮ್ಮ ಫ್ಲಿಪ್‌ಕಾರ್ಟ್ ಪ್ಲಸ್ ಐಡಿಗೆ ಲಾಗ್ ಇನ್ ಮಾಡಿ> ನೀವು ಫ್ಲಿಪ್‌ಕಾರ್ಟ್ ಪ್ಲಸ್ ಐಡಿ ಹೊಂದಿರಬೇಕು. ಇನ್ನು ಫ್ಲಿಪ್‌ಕಾರ್ಟ್‌ ಆಪ್‌ ಅನ್ನು ನೀವು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಹಂತ 2:

ಹಂತ 2:

ಫ್ಲಿಪ್‌ಕಾರ್ಟ್‌ ವೆಬ್‌ಸೈಟ್‌ನಲ್ಲಿ ಅಥವಾ ಅಪ್ಲಿಕೇಶನ್‌ನ ಮೂಲಕ ಲಾಗ್‌ ಇನ್ ಆದ ನಂತರ ‘ಫ್ಲಿಪ್‌ಕಾರ್ಟ್ ವಲಯ/Flipkart Zone'ಕ್ಕೆ ಹೋಗಿ. ಆ ನಂತರ, ‘ಕ್ಲೈಮ್ ಎಕ್ಸ್‌ಕ್ಲೂಸಿವ್ ರಿವಾರ್ಡ್/Claim Exclusive Reward' ವಿಭಾಗವನ್ನು ನೋಡಿ.

ಹಂತ 3:

ಹಂತ 3:

ಕ್ಲೈಮ್ ಎಕ್ಸ್‌ಕ್ಲೂಸಿವ್ ರಿವಾರ್ಡ್ ನಲ್ಲಿ ನೀವು YouTube ಪ್ರೀಮಿಯಂ ರೀವಾರ್ಡ್‌ ಹುಡುಕಿರಿ. ಇದು 150 ಸೂಪರ್ ನಾಣ್ಯಗಳ ಲಭ್ಯವಾಗುತ್ತವೆ. ಒಮ್ಮೆ ನೀವು ಆಫರ್ ಆಯ್ದಕೊಂಡ ನಂತರ ವೋಚರ್ ಸ್ವೀಕರಿಸುವಿರಿ. ಆಗ ಆ ವೋಚರ್‌ ಬಳಸಿ 6 ತಿಂಗಳ ಉಚಿತ ಪ್ರೀಮಿಯಂ ಚಂದಾದಾರಿಕೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದಾಗ್ಯೂ, ನೀವು ಈ ಮೊದಲು ಯೂಟ್ಯೂಬ್ ಪ್ರೀಮಿಯಂ ಅಥವಾ ಅದರ ಸೇವೆಯನ್ನು ಬಳಸದ ಹೊಸ ಗ್ರಾಹಕರಾಗಿದ್ದರೆ ಮಾತ್ರ ಅದು ಕಾರ್ಯನಿರ್ವಹಿಸುತ್ತದೆ.

ಹಂತ 4:

ಹಂತ 4:

YouTube ಪ್ರೀಮಿಯಂ ಉಚಿತ ಚಂದಾದಾರಿಕೆ ಪೇಜ್‌ಗೆ ಭೇಟಿ ನೀಡಿರಿ. ಅಲ್ಲಿ ವೋಚರ್ ಕೋಡ್ ನಮೂದಿಸಲು ಕೇಳಲಾಗುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿರುವ ಯೂಟ್ಯೂಬ್ ಪ್ರೀಮಿಯಂ ರಿವಾರ್ಡ್‌ನಿಂದ ನೀವು ಸ್ವೀಕರಿಸಿದ ವೋಚರ್ ಕೋಡ್ ಅನ್ನು ನಮೂದಿಸಿ. ನಂತರದ ಹಂತದಲ್ಲಿ, ‘Try it Free' ಆಯ್ಕೆ ಕ್ಲಿಕ್ ಮಾಡಿ.

ಗಮನಿಸಬೇಕಾದ ಅಂಶಗಳು

ಗಮನಿಸಬೇಕಾದ ಅಂಶಗಳು

ಉಚಿತ ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆ ಕೊಡುಗೆಯನ್ನು ಪಡೆಯಲು, ಬಳಕೆದಾರರು ತಮ್ಮ ಕ್ರೆಡಿಟ್ / ಡೆಬಿಟ್ ಕಾರ್ಡ್ ವಿವರಗಳನ್ನು ನವೀಕರಿಸಬೇಕಾಗುತ್ತದೆ. ಯಾವುದೇ ನಿರ್ಬಂಧಿತ ಕಾರ್ಡ್‌ಗಳು ಪ್ರಕ್ರಿಯೆಗೆ ಮಾನ್ಯವಾಗಿರುವುದಿಲ್ಲ. ಇದಲ್ಲದೆ, ಈ ಪ್ರಕ್ರಿಯೆಯು ಮಾಸ್ಟರ್‌ಕಾರ್ಡ್ ಮತ್ತು ವೀಸಾ ಕಾರ್ಡ್‌ಗಳೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಪ್ರಾಯೋಗಿಕ ಅವಧಿ ಮುಗಿಯುವ ಮೊದಲು ಬಳಕೆದಾರರು ಯಾವುದೇ ಸಮಯದಲ್ಲಿ ಚಂದಾದಾರಿಕೆಯನ್ನು ಕೊನೆಗೊಳಿಸಬಹುದು. ಆದಾಗ್ಯೂ, ನೀವು 6 ತಿಂಗಳ ಕೊಡುಗೆ ಅವಧಿಯ ಮುಕ್ತಾಯದ ಯೂಟ್ಯೂಬ್ ಪ್ರೀಮಿಯಂ ಪೋಸ್ಟ್ ಅನ್ನು ಬಳಸುವುದನ್ನು ಮುಂದುವರಿಸಿದರೆ, ನಿಮಗೆ ಚಂದಾದಾರಿಕೆಯನ್ನು ವಿಧಿಸಲಾಗುತ್ತದೆ.

Most Read Articles
Best Mobiles in India

English summary
how you can use your Flipkart Plus membership to avail a free YouTube Premium subscription for 6 months.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X