ಇಂಟರ್‌ನೆಟ್‌ ಡೇಟಾ ಇಲ್ಲದೆ ಪಬ್‌ಜಿ ಗೇಮ್‌ ಡೌನ್‌ಲೋಡ್‌ ಮಾಡೋದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಗೇಮಿಂಗ್‌ಗಳು ಸಾಕಷ್ಟು ಜನಪ್ರಿಯತೆಗಳಿಸಿವೆ. ಇಂದಿನ ಯುವಜನತೆಯ ಮೇಲೆ ಆನ್‌ಲೈನ್‌ ಗೇಮಿಂಗ್‌ಗಳ ಪ್ರಭಾವ ಬೀರಿದ್ದು, ಯುವಜನತೆಯ ಮನಸ್ಸನ್ನು ತಮ್ಮತ್ತ ಸೆಳೆದಿವೆ. ಅದರಲ್ಲೂ PUBG ಮೊಬೈಲ್‌ ಗೇಮ್‌ನಂತಹ ಗೇಮಿಂಗ್‌ಗಳು ಇಂದಿನ ಯುವ ಜನತೆಯ ನೆಚ್ಚಿನ ಆನ್‌ಲೈನ್‌ ಗೇಮಿಂಗ್‌ಗಳಲ್ಲಿ ಒಂದಾಗಿವೆ. ಸದ್ಯ ಕೋವಿಡ್ -19 ಶುರುವಾದಗಿನಿಂದ ಮನೆಯಲ್ಲಿ ಕಾಲಕಳೆಯುತ್ತಿರುವ ಯುವ ಜನತೆ ತಮ್ಮ ಸಮಯವನ್ನ ಕಳೆಯಲು ಈ ಆನ್‌ಲೈನ್‌ ಗೇಮ್‌ಗಳ ಮೊರೆ ಹೋಗಿದ್ದಾರೆ. PUBG ಮಾತ್ರವಲ್ಲ ಇತರೆ ಆನ್‌ಲೈನ್‌ ಗೇಮ್‌ಗಳು ಕೂಡ ಈಗ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ.

ಆನ್‌ಲೈನ್‌ ಗೇಮ್

ಹೌದು, ಆನ್‌ಲೈನ್‌ ಗೇಮ್‌ಗಳು ಸಾಕಷ್ಟು ಜನಪ್ರಿಯತೆಯನ್ನ ಪಡೆದುಕೊಂಡಿದ್ದು, ಇದು ಕೋವಿಡ್‌-19 ಸಮಯದಲ್ಲಿ ಇನ್ನಷ್ಟು ಹೆಚ್ಚಾಗಿದೆ. ಅದರಲ್ಲು ಕೊರೋನಾ ಪ್ರಕರಣಗಳು ಶುರುವಾದ ನಂತರ ಹೆಚ್ಚು ಹೆಚ್ಚು ಡೌನ್‌ಲೋಡ್‌ಗಳನ್ನ ಈ ಆನ್‌ಲೈನ್‌ ಗೇಮ್‌ಗಳು ಪಡೆದುಕೊಂಡಿವೆ. ಆದಾಗ್ಯೂ, ಆನ್‌ಲೈನ್‌ ಗೇಮ್‌ಗಳ ಡೌನ್‌ಲೋಡ್‌ ಸೈಜ್‌ ಜಾಸ್ತಿ ಇದೆ. ಅದರಲ್ಲೂ PUBG ಮೊಬೈಲ್ ಡೌನ್‌ಲೋಡ್ ಗಾತ್ರ 1.8GB ಹೊಂದಿದೆ. ಇಂತಹ ಸನ್ನಿವೇಶದಲ್ಲಿ ನಿಮಗೆ ಇಂಟರ್‌ನೆಟ್‌ ಅತ್ಯಗತ್ಯ. ಆದರೆ ಇಂಟರ್‌ನೆಟ್‌ ಇಲ್ಲದ್ದರೆ ಏನು ಮಾಡುವುದು ಅಂತಿರಾ ಅದಕ್ಕೆ ಚಿಂತಿಸುವ ಅಗತ್ಯವಿಲ್ಲ. ಇಂಟರ್‌ನೆಟ್‌ ಡೇಟಾ ಇಲ್ಲದೆ ಪಬ್‌ಜಿ ಯಂತಹ ಆನ್‌ಲೈನ್‌ಗೇಮ್‌ಗಳನ್ನ ಡೌನ್‌ಲೊಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪಬ್‌ಜಿ ಗೇಮ್

ನೀವು ನಿಮ್ಮ ಮನೆಯಲ್ಲಿ ವೈಫೈ ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಸೀಮಿತ ಡೇಟಾವನ್ನು ಬಳಕೆ ಮಾಡುತ್ತಿದ್ದು, ನೀವು ಪಬ್‌ಜಿ ಗೇಮ್‌ಅನ್ನು ಡೌನ್‌ಲೋಡ್ ಮಾಡಲು ಇಚ್ಚಿಸಿದರೆ, ಗೇಮ್‌ ಡೌನ್‌ಲೌಡ್‌ ಮಾಡುವಷ್ಟು ಡೇಟಾ ನೀವು ಹೊಂದಿಲ್ಲದಿದ್ದರೆ, ಚಿಂತಿಸುವಂತಿಲ್ಲ. ನಿಮ್ಮ ಬಳಿ ಯಾವುದೇ ಇಂಟರ್ನೆಟ್ ಡೇಟಾವನ್ನು ಬಳಸದೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಟಗಳನ್ನು ಡೌನ್‌ಲೋಡ್ ಮಾಡಲು ಮತ್ತು ಇನ್‌ಸ್ಟಾಲ್‌ ಮಾಡಲು ನಿಮಗೊಂದು ಸುಲಭ ಮಾರ್ಗವಿದೆ. ಅದುವೇ ಹ್ಯಾಕ್ ಅಪ್ಲಿಕೇಶನ್‌ ಇದು ಇದು ನೀವು ಯಾವುದೇ ಇಂಟರ್ನೆಟ್ ಡೇಟಾವನ್ನು ಬಳಸದೆ ನಿಮಗೆ ಗೇಮ್‌ ಆಡುವುದಕ್ಕೆ ಅವಕಾಶ ನೀಡುತ್ತದೆ. ಅಲ್ಲದೆ ಈ ಹ್ಯಾಕ್ ಆಂಡ್ರಾಯ್ಡ್ ಫೋನ್‌ಗಳಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ . ಹಾಗಾದ್ರೆ ಈ ಹ್ಯಾಕ್‌ ಮೂಲಕ ನೀವು ಪಬ್‌ಜಿ ಡೌನ್‌ಲೋಡ್‌ ಮಾಡುವುದು ಹೇಗೆ ಅನ್ನೊದನ್ನ ಇಲ್ಲಿ ತಿಳಿಯಿರಿ.

ಅಪ್ಲಿಕೇಶನ್

ಹಂತ:1 ಗೂಗಲ್ ಅಥವಾ ಸೂಪರ್‌ಬೀಮ್‌ನಿಂದ ಫೈಲ್‌ಗಳಂತಹ ಫೈಲ್ ಶೇರ್‌ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್‌ ಮಾಡಿ. ನಂತರ ನಿಮ್ಮ ಸ್ನೇಹಿತರು ತಮ್ಮ ಫೋನ್‌ನಲ್ಲಿಯೂ ನೀವು ಡೌನ್‌ಲೋಡ್‌ ಮಾಡಿರುವ ಫೈಲ್ ಶೇರ್‌ ಅಪ್ಲಿಕೇಶನ್ ಅನ್ನು ಸಹ ಹೊಂದಿರಬೇಕು.

ಹಂತ:2 ಇದೀಗ ನಿಮ್ಮ ಸ್ನೇಹಿತನ ಡಿವೈಸ್‌ನಿಂದ PUBG ಮೊಬೈಲ್ ಗೇಮ್‌ ಅಥವಾ ಇನ್ನಾವುದೇ ಆನ್‌ಲೈನ್‌ ಗೇಮ್‌ನ APK ಫೈಲ್ ಅನ್ನು ನಿಮ್ಮ ಫೋನ್‌ಗೆ ಶೇರ್‌ ಮಾಡಿಕೊಂಡು ಇನ್‌ಸ್ಟಾಲ್‌ ಮಾಡಿರಿ.

ಹಂತ:3 ಇದನ್ನು ಇನ್‌ಸ್ಟಾಲ್‌ ಮಾಡಿದ ನಂತರ, ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಲೋಕಲ್‌ ಫೋಲ್ಡರ್‌ಗಳಲ್ಲಿ ಇರುವ ಆನ್‌ಲೈನ್ ಫೈಲ್‌ಗಳನ್ನು ಹುಡುಕಲು ಪ್ರಯತ್ನಿಸಿ.

ಹಂತ:4 ನಿಮಗೆ ಪೋಲ್ಡರ್‌ನಲ್ಲಿ ಆನ್‌ಲೈನ್ ಫೈಲ್‌ಗಳು ಕಂಡ ನಂತರ ಪೋಲ್ಡರ್‌ ಅನ್ನು ಕ್ಲೋಸ್‌ ಮಾಡಿರಿ.

ಆಬ್ ಫೈಲ್

ಹಂತ:5 ನಂತರ ನಿಮ್ಮ ಡಿವೈಸ್‌ಗೆ ಆಬ್ ಫೈಲ್‌ಗಳನ್ನು ವರ್ಗಾಯಿಸಲು ನಿಮ್ಮ ಸ್ನೇಹಿತನ ಫೋನ್ ಬಳಸಿ.

ಹಂತ:6 ಇದೀಗ ನಿಮ್ಮ ಡಿವೈಸ್‌ನಲ್ಲಿ ಇವುಗಳನ್ನು ಹುಡುಕಲು ಫೈಲ್‌ಗಳಿಗೆ ಹೋಗಿ, ಆಂಡ್ರಾಯ್ಡ್ ಕ್ಲಿಕ್ ಮಾಡಿ ನಂತರ ಆಬ್ ಫೋಲ್ಡರ್‌ನಲ್ಲಿ ಕ್ಲಿಕ್ ಮಾಡಿ.

ಹಂತ:7 ನಂತರ ನೀವು ‘com.tencent.ig' ಶೀರ್ಷಿಕೆಯ ಫೋಲ್ಡರ್ ತೆರೆಯಿರಿ ಮತ್ತು ‘main.11460.comtencent.ig.obb' ಫೈಲ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ನಿಮ್ಮ ಫೋನ್‌ಗೆ ಕಳುಹಿಸಿ. ನಿಮ್ಮ ಸ್ನೇಹಿತ ಹೊಂದಿರುವ ಗೇಮ್‌ನ ಆಪ್ಡೇಟ್‌ ಆವೃತ್ತಿಯನ್ನು ಅವಲಂಬಿಸಿ, ಈ ಫೈಲ್ ಹೆಸರು ಬದಲಾಗುತ್ತದೆ.

ಸ್ಮಾರ್ಟ್‌ಫೋನ್‌

ಹಂತ:8 ಆಬ್ ಫೈಲ್‌ಗಳನ್ನು ವರ್ಗಾಯಿಸಿದ ನಂತರ, ನೀವು "com.tencent.ig" ಫೋಲ್ಡರ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ಗೆ ವರ್ಗಾಯಿಸಬೇಕಾಗುತ್ತದೆ.

ಹಂತ:9 ಈಗ ನಿಮ್ಮ ಫೈಲ್ ಮ್ಯಾನೇಜರ್‌ಗೆ ಹೋಗಿ ಮತ್ತು ನಿಮ್ಮ ಸ್ನೇಹಿತನ ಫೋನ್‌ನಿಂದ ನೀವು ವರ್ಗಾವಣೆ ಮಾಡಿದ ಆಬ್ ಡೇಟಾ ಮತ್ತು ಗೇಮ್‌ ಫೋಲ್ಡರ್ ಅನ್ನು ಬದಲಾಯಿಸಿ.

PUBG ಮೊಬೈಲ್

ಹಂತ:10 ಇದೀಗ PUBG ಮೊಬೈಲ್ ತೆರೆಯಿರಿ ಮತ್ತು ಅಗತ್ಯ ಅನುಮತಿಗಳನ್ನು ನೀಡಿ ಮತ್ತು ಲಾಗಿನ್ ಮಾಡುವ ಮೂಲಕ ಗೇಮ್‌ಅನ್ನು ಈಗ ಸೆಟ್‌ಮಾಡಿ

ಹೀಗೆ ಹಂತಹಂತವಾಗಿ ಈ ಮಾರ್ಗಗಳನ್ನ ಅನುಸರಿಸಿದರೆ ನಿಮ್ಮ ಬಳಿ ಇಂಟರ್‌ನೆಟ್‌ ಇಲ್ಲದೆ ಹೋದರು ನೀವು ಪಬ್‌ಜಿ ಗೇಮ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
This hack works with other games too. All you need is a friend who already has the game downloaded and you won’t need to use even an MB of your Internet data.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X