ನೀವು ಜಿಯೋ ಬಳಕೆದಾರರೇ?..ಹಾಗಿದ್ರೆ ಈ ಮಾಹಿತಿ ನಿಮಗೆ ತಿಳಿದಿರಲಿ!

|

ರಿಲಯನ್ಸ್‌ ಜಿಯೋ ದೇಶದ ಮುಂಚೂಣಿಯ ಟೆಲಿಕಾಂ ಆಪರೇಟರ್‌ ಆಗಿ ಕಾಣಿಸಿಕೊಂಡಿದೆ. ಹಲವು ಆಕರ್ಷಕ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳ ಮೂಲಕ ಜಿಯೋ ಟೆಲಿಕಾಂ ಏರ್‌ಟೆಲ್‌ ಮತ್ತು ವಿ ಟೆಲಿಕಾಂಗಳಿಗೆ ಪೈಪೋಟಿ ನೀಡುತ್ತ ಮುಂದೆ ನಡೆದಿದೆ. ಇನ್ನು ರಿಲಯನ್ಸ್‌ ಜಿಯೋ ಬಳಕೆದಾರರ ಅನುಕೂಲಕ್ಕಾಗಿ ಡೇಟಾ ಬ್ಯಾಲೆನ್ಸ್‌, ಪ್ರೀಪೇಯ್ಡ್‌ ಯೋಜನೆಯ ಮಾಹಿತಿ, ವಾಯಿಸ್ ಕರೆ, ವ್ಯಾಲಿಡಿಟಿ, ಎಸ್‌ಎಮ್‌ಎಸ್‌ ಪ್ರಯೋಜನಗಳನ್ನು ಚೆಕ್‌ ಮಾಡಲು ಅವಕಾಶ ನೀಡಿದೆ.

ಹೊಂದಿದೆ

ಜಿಯೋ ನಂಬರ್‌ನ ಅಕೌಂಟ್‌ ಬ್ಯಾಲೆನ್ಸ್‌ ಮಾಹಿತಿ ಪಡೆಯಲು ಬಳಕೆದಾರರಿಗೆ ಜಿಯೋ ಟೆಲಿಕಾಂ ಆಯ್ಕೆ ನೀಡಿದೆ. ಅದಕ್ಕಾಗಿ ಜಿಯೋ ಕೆಲವೊಂದು ಉಪಯುಕ್ತ USSD ಕೋಡ್ ಲಿಸ್ಟ್‌ ಹೊಂದಿದೆ. ಆ ಮೂಲಕ ಬಳಕೆದಾರರು ಡೇಟಾ, ಎಸ್‌ಎಮ್‌ಎಸ್‌, ಪ್ರೀಪೇಯ್ಡ್‌ ಪ್ಲ್ಯಾನ್ ವ್ಯಾಲಿಡಿಟಿ ಮಾಹಿತಿಗಳನ್ನು ಸುಲಭವಾಗಿ ತಿಳಿಯಬಹುದಾಗಿದೆ. ಹಾಗೆಯೇ ಜಿಯೋ ಬಳಕೆದಾರರು ಮೈ ಜಿಯೋ ಆಪ್‌ ಮೂಲಕವು ಸಹ ಯೋಜನೆಯ ಬ್ಯಾಲನ್ಸ್ ಮಾಹಿತಿ ತಿಳಿಯಬಹುದು.

ತಿಳಿದುಕೊಳ್ಳುವುದು

ಆದರೆ ಕೆಲವೊಮ್ಮೆ ಬ್ಯಾಲೆನ್ಸ್‌ ಪರಿಶೀಲನೆ ಮಾಡುವಾಗ ತಕ್ಷಣಕ್ಕೆ USSD ಕೋಡ್‌ಗಳು ನೆನಪಿಗೆ ಬರುವುದಿಲ್ಲ. ಹೀಗಾಗಿ ಕೆಲವು ಬಳಕೆದಾರರಿಗೆ ತಮ್ಮ ಜಿಯೋ ಅಕೌಂಟ್‌ ಬ್ಯಾಲೆನ್ಸ್‌ ತಿಳಿದುಕೊಳ್ಳುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಹಾಗಾದರೇ ಜಿಯೋ ಅಕೌಂಟ್‌ ಬ್ಯಾಲೆನ್ಸ್‌ ಚೆಕ್ ಮಾಡುವುದು ಹೇಗೆ ಹಾಗೂ ವಿ ಟೆಲಿಕಾಂ ಬ್ಯಾಲೆನ್ಸ್‌ ತಿಳಿಯೋದು ಹೇಗೆ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

USSD ಕೋಡ್ ಬಳಸುವ ಮೂಲಕ ಜಿಯೋ ಮೊಬೈಲ್ ಸಂಖ್ಯೆ ತಿಳಿಯಲು ಹೀಗೆ ಮಾಡಿ:

USSD ಕೋಡ್ ಬಳಸುವ ಮೂಲಕ ಜಿಯೋ ಮೊಬೈಲ್ ಸಂಖ್ಯೆ ತಿಳಿಯಲು ಹೀಗೆ ಮಾಡಿ:

- ನಿಮ್ಮ ಮೊಬೈಲ್‌ನಲ್ಲಿ ಡಯಲರ್ ತೆರೆಯಿರಿ.
- *1# ಅನ್ನು ಡಯಲ್ ಮಾಡಿ.
- ನಿಮ್ಮ ಫೋನ್ ಪರದೆಯಲ್ಲಿ ಸಂಖ್ಯೆಯನ್ನು ಫ್ಲಾಶ್ ಸಂದೇಶದ ಮೂಲಕ ಪ್ರದರ್ಶಿಸಲಾಗುತ್ತದೆ.

ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಜಿಯೋ ಸಂಖ್ಯೆಯನ್ನು ತಿಳಿಯಲು ಹೀಗೆ ಮಾಡಿ:

ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಜಿಯೋ ಸಂಖ್ಯೆಯನ್ನು ತಿಳಿಯಲು ಹೀಗೆ ಮಾಡಿ:

ನಿಮ್ಮ ಜಿಯೋ ಮೊಬೈಲ್ ಸಂಖ್ಯೆಯನ್ನು ಕಂಡುಹಿಡಿಯಲು ನೀವು ಜಿಯೋ ಮೊಬೈಲ್ ಸಂಖ್ಯೆಯನ್ನು ತಿಳಿಯಲು 1299 ಗೆ ಕರೆ ಮಾಡಬಹುದು. ನೀವು ಈ ಸಂಖ್ಯೆಗೆ ಕರೆ ಮಾಡಿದಾಗ, ಅದು ಸ್ವಯಂಚಾಲಿತವಾಗಿ ಸಂಪರ್ಕ ಕಡಿತಗೊಳ್ಳುತ್ತದೆ. ನಂತರ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಜಿಯೋ ಸಂಖ್ಯೆ ಮತ್ತು ಇತರೆ ಹೆಚ್ಚಿನ ವಿವರಗಳೊಂದಿಗೆ ಎಸ್‌ಎಮ್‌ಎಸ್‌ ಅನ್ನು ಪಡೆಯುತ್ತಿರಿ.

ಮೈ ಜಿಯೋ ಆಪ್‌ ಬಳಸಿ ಜಿಯೋ ಮೊಬೈಲ್ ಸಂಖ್ಯೆ ತಿಳಿಯಲು ಹೀಗೆ ಮಾಡಿ:

ಮೈ ಜಿಯೋ ಆಪ್‌ ಬಳಸಿ ಜಿಯೋ ಮೊಬೈಲ್ ಸಂಖ್ಯೆ ತಿಳಿಯಲು ಹೀಗೆ ಮಾಡಿ:

* ಗೂಗಲ್‌ ಪ್ಲೇ ಸ್ಟೋರ್‌ ಗೆ ಹೋಗಿ ಮತ್ತು MyJio ಅಪ್ಲಿಕೇಶನ್‌ ಸರ್ಚ್ ಮಾಡಿರಿ
* ಡೌನ್ಲೋಡ್ ಅಪ್ಲಿಕೇಶನ್ ಅನ್ನು ಕ್ಲಿಕ್ ಮಾಡಿ ಮತ್ತು ಅದನ್ನು ನಿಮ್ಮ ಫೋನಿನಲ್ಲಿ ಇನ್‌ಸ್ಟಾಲ್‌ ಮಾಡಿ.
* MyJio ಆಪ್‌ ತೆರೆಯಿರಿ ಮತ್ತು ‘Sign in with SIM' ಅನ್ನು ಕ್ಲಿಕ್ ಮಾಡಿ.
* ಸ್ಕ್ರೀನ್‌ ಮೇಲ್ಭಾಗದಲ್ಲಿ ನಿಮ್ಮ ಜಿಯೋ ಸಂಖ್ಯೆಯನ್ನು ನೋಡಲು ನಿಮಗೆ ಸಾಧ್ಯವಾಗುತ್ತದೆ.

ಜಿಯೋದ ಕೆಲವು ಪ್ರಮುಖ USSD ಕೋಡ್‌ಗಳು ಮತ್ತು SMS ಸಂಖ್ಯೆಗಳ ಲಿಸ್ಟ್‌ ಇಲ್ಲಿದೆ

ಜಿಯೋದ ಕೆಲವು ಪ್ರಮುಖ USSD ಕೋಡ್‌ಗಳು ಮತ್ತು SMS ಸಂಖ್ಯೆಗಳ ಲಿಸ್ಟ್‌ ಇಲ್ಲಿದೆ

* ಜಿಯೋ ಮೊಬೈಲ್ ಸಂಖ್ಯೆ ತಿಳಿಯಲು *1# ಅನ್ನು ಡಯಲ್ ಮಾಡಿ
* ಬ್ಯಾಲೆನ್ಸ್/ಟಾಕ್ ಟೈಮ್ ಅನ್ನು ತಿಳಿದುಕೊಳ್ಳಲು *333# ಅನ್ನು ಡಯಲ್ ಮಾಡುವ ಮೂಲಕ
* 4G ಡೇಟಾ ಬಳಕೆಯನ್ನು ತಿಳಿಯಲು MBAL ಅನ್ನು 55333 ಗೆ ಎಸ್‌ಎಮ್‌ಎಸ್‌ ಕಳುಹಿಸಿ.
* ಪ್ರಿಪೇಯ್ಡ್ ಬ್ಯಾಲೆನ್ಸ್ ಮತ್ತು ವ್ಯಾಲಿಡಿಟಿ ತಿಳಿಯಲು BAL 199 ಗೆ ಎಸ್‌ಎಮ್‌ಎಸ್‌ ಕಳುಹಿಸಿ.
* ಬಿಲ್ ಎಷ್ಟು ಎಂಬುದನ್ನು ತಿಳಿಯಲು, BILL ಎಂದು 199 ಗೆ ಎಸ್‌ಎಮ್‌ಎಸ್‌ ಕಳುಹಿಸಿ.
* 4G ಡೇಟಾವನ್ನು ಸಕ್ರಿಯಗೊಳಿಸಲು, 1925 ಅನ್ನು ಡಯಲ್ ಮಾಡಿ ಅಥವಾ START ಎಂದು 1925 ಗೆ ಟೆಕ್ಸ್ಟ್ ಮಾಡಿ.
* ಕಾಲರ್ ಟ್ಯೂನ್ ಸಕ್ರಿಯಗೊಳಿಸಲು *333*3*1*1# ಡಯಲ್ ಮಾಡಿ.
* ಜಿಯೋ ಕಾಲರ್ ಟ್ಯೂನ್ ಅನ್ನು ನಿಷ್ಕ್ರಿಯಗೊಳಿಸಲು *333*3*12# ಡಯಲ್ ಮಾಡಿ.

ವಿ ಟೆಲಿಕಾಂನ ನಂಬರ್‌ ತಿಳಿಯಲು ಹೀಗೆ ಮಾಡಿ:

ವಿ ಟೆಲಿಕಾಂನ ನಂಬರ್‌ ತಿಳಿಯಲು ಹೀಗೆ ಮಾಡಿ:

ವಿ ಬಳಕೆದಾರರು ತಮ್ಮ ವಿ ಸಂಖ್ಯೆ ಚೆಕ್ ಮಾಡಲು *199# ಯುಎಸ್‌ಎಸ್‌ಡಿ ಕೋಡ್‌ ಅನ್ನು ನಿಮ್ಮ ಮೊಬೈಲ್‌ನಲ್ಲಿ ಡಯಲ್‌ ಮಾಡಿರಿ.

ವಿ ಆಪ್‌ ಬಳಸಿ ವಿ ಅಕೌಂಟ್‌ ಬ್ಯಾಲೆನ್ಸ್ ತಿಳಿಯಲು ಹೀಗೆ ಮಾಡಿ

ವಿ ಆಪ್‌ ಬಳಸಿ ವಿ ಅಕೌಂಟ್‌ ಬ್ಯಾಲೆನ್ಸ್ ತಿಳಿಯಲು ಹೀಗೆ ಮಾಡಿ

ವಿ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಬ್ಯಾಲೆನ್ಸ್ ಮತ್ತು ವ್ಯಾಲಿಡಿಟಿ ಅನ್ನು ಪರಿಶೀಲಿಸಬಹುದು.
* ಗೂಗಲ್‌ ಪ್ಲೇ ಸ್ಟೋರ್ (Google Play Store) ಅಪ್ಲಿಕೇಶನ್ ತೆರೆಯಿರಿ ಮತ್ತು ವಿ ಅಪ್ಲಿಕೇಶನ್ ಅನ್ನು ಸರ್ಚ್ ಮಾಡಿ.
* ಡೌನ್‌ಲೋಡ್ ಅಪ್ಲಿಕೇಶನ್ ಅನ್ನು ಕ್ಲಿಕ್ ಮಾಡಿ ಮತ್ತು ಅದನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿ.
* ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ವೊಡಾಫೋನ್ ಐಡಿಯಾ ಸಂಖ್ಯೆಯನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಿ.
* ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು OTP ಅನ್ನು ಪಡೆಯುತ್ತೀರಿ. ಲಾಗ್ ಇನ್ ಮಾಡಲು ಅದನ್ನು ನಮೂದಿಸಿ.
* ನಿಮ್ಮ ಸಂಖ್ಯೆಯ ಮುಖ್ಯ ಬ್ಯಾಲೆನ್ಸ್ ಮತ್ತು ವ್ಯಾಲಿಡಿಟಿ ಅನ್ನು ಅಪ್ಲಿಕೇಶನ್‌ನ ಮುಖಪುಟ ಪರದೆಯಲ್ಲಿ ಪ್ರದರ್ಶಿಸಲಾಗುತ್ತದೆ.

USSD ಕೋಡ್ ಬಳಸಿ ವಿ ಸಂಖ್ಯೆಯ ಬ್ಯಾಲೆನ್ಸ್ ತಿಳಿಯಲು ಹೀಗೆ ಮಾಡಿ

USSD ಕೋಡ್ ಬಳಸಿ ವಿ ಸಂಖ್ಯೆಯ ಬ್ಯಾಲೆನ್ಸ್ ತಿಳಿಯಲು ಹೀಗೆ ಮಾಡಿ

- *199*2*1# - ಈ USSD ಕೋಡ್ ಅನ್ನು ವಿ ಟೆಲಿಕಾಂ ಸಂಖ್ಯೆಗೆ ಮುಖ್ಯ ಬ್ಯಾಲೆನ್ಸ್ ಪರಿಶೀಲಿಸಲು ಬಳಸಬಹುದು. ಕೋಡ್ ನಿಮಗೆ ಎಲ್ಲಾ ಬ್ಯಾಲೆನ್ಸ್ ಮತ್ತು ನಿಮ್ಮ ಸಂಖ್ಯೆಯ ವ್ಯಾಲಿಡಿಟಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.
- *121# - ಈ ಕೋಡ್ ಅನ್ನು ಬಳಸಿಕೊಂಡು ಮುಖ್ಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ನೀವು ಈ ಕೋಡ್ ಅನ್ನು ಸಹ ಬಳಸಬಹುದು.

Best Mobiles in India

English summary
How to Know Jio Mobile Through USSD Codes, SMS, My Jio App.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X