ಯುಟ್ಯೂಬ್‌ನಲ್ಲಿ ಹಣಗಳಿಸಲು ಇರುವ ಸುಲಭ ಮಾರ್ಗಗಳು!

|

ಇಂದು ಡಿಜಿಟಲ್‌ ಜಗತ್ತು. ತಂತ್ರಜ್ಞಾನ ಮುಂದುವರೆದಂತೆ ಇಂದು ಎಲ್ಲವೂ ಬೆರಳ ತುದಿಯಲ್ಲಿ ಸಿಕ್ಕಿ ಬಿಡುತ್ತೆ. ಆನ್‌ಲೈನ್‌ ಒಂದಿದ್ದರೇ ಸಾಕು ಏನು ಬೇಕಾದರೂ ಸಾದಿಸಬಹುದು ಅನ್ನುವಷ್ಟರ ಮಟ್ಟಿಗೆ ಮನುಷ್ಯ ಇಂದು ಡಿಜಿಟಲ್‌ ವ್ಯಾಮೋಹಕ್ಕೆ ಒಳಗಾಗಿದ್ದಾನೆ. ಅಷ್ಟೇ ಯಾಕೆ ಆನ್‌ಲೈನ್‌ ಮೂಲಕವೇ ಹಣ ಸಂಪಾದನೆ ಮಾಡುವ ಹಲವಾರು ಸುಲಭ ದಾರಿಗಳನ್ನು ಹುಡುಕಿಕೊಂಡು ಮನೆಯಲ್ಲಿಯೇ ಕುಳಿತು ಹಣ ಮಾಡುವಷ್ಟರ ಮಟ್ಟಿಗೆ ಡಿಜಿಟಲ್‌ ತಂತ್ರಜ್ಞಾನ ಮುಂದುವರೆದಿದೆ.

ಇಂದು

ಹೌದು, ಇಂದು ಯುಟ್ಯೂಬ್‌ ಮೂಲಕ ಸಾಕಷ್ಟು ಮಂದಿ ಸ್ಟಾರ್‌ಗಳಾಗಿದ್ದಾರೆ. ಅಷ್ಟೇ ಯಾಕೆ ಯೂಟ್ಯೂಬ್‌ ಸ್ಟಾರ್‌ಗಳಾಗಿ ಯುಟ್ಯೂಬ್‌ ಮೂಲಕ ಹಣ ಸಂಪಾದನೆ ಮಾಡುತ್ತಿರೊದನ್ನ ನಾವೆಲ್ಲ ಗಮನಿಸಿದ್ದೇವೆ. ಬುದ್ದಿ ಶಕ್ತಿಯೊಂದಿದ್ದರೆ ನೀವು ಕೂಡ ಯುಟ್ಯೂಬ್‌ ಸ್ಟಾರ್‌ ಆಗಿ ಮೆರೆಯಬಹುದು. ನಿಮ್ಮ ವಿಚಾರಗಳನ್ನ ಯುಟ್ಯೂಬ್‌ನಲ್ಲಿ ಹಂಚಿಕೊಳ್ಳುವ ಮೂಲಕ ಹಣ ಸಂಪಾದನೆಯನ್ನು ಮಾಡಬಹುದು. ಆದರೆ ಯುಟ್ಯೂಬ್‌ ಮೂಲಕ ಹಣ ಮಾಡಲು ಇರುವ ಮಾರ್ಗಗಳೇನು ಅನ್ನೊದನ್ನ ನಿಮಗೆ ಗೊತ್ತಿಲ್ಲದೆ ಇರಬಹುದು. ಆದ್ರೆ ನಾನು ನಿಮಗೆ ಯುಟ್ಯೂಬ್‌ ಮೂಲಕ ಹಣ ಗಳಿಸಲು ಇರುವ ಮಾರ್ಗಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀನಿ ಮಿಸ್‌ ಮಾಡ್ದೇ ಓದಿ.

1. ಯುಟ್ಯೂಬ್‌ನಲ್ಲಿ ಸ್ವಂತ ಚಾನೆಲ್‌ ಕ್ರಿಯೆಟ್‌ ಮಾಡಿ

1. ಯುಟ್ಯೂಬ್‌ನಲ್ಲಿ ಸ್ವಂತ ಚಾನೆಲ್‌ ಕ್ರಿಯೆಟ್‌ ಮಾಡಿ

ಯುಟ್ಯೂಬ್‌ನಲ್ಲಿ ನೀವು ಹಣ ಸಂಪಾದನೆ ಮಾಡಬೇಕಾದರೆ ಮೊದಲಿಗೆ ನೀವು ಯುಟ್ಯೂಬ್‌ ಖಾತೆಯನ್ನ ತೆರೆಯಬೇಕು. ಅದರಲ್ಲಿ ನಿಮ್ಮ ಅಕೌಂಟ್‌ ಕ್ರಿಯೆಟ್‌ ಮಾಡಿ ನಂತರ ನಿಮ್ಮದೇ ಆದ ಸ್ವಂತ ಯುಟ್ಯೂಬ್‌ ಚಾನೆಲ್‌ ಅನ್ನ ಕ್ರಿಯೆಟ್ ಮಾಡಬೇಕು. ನಂತರ ಜನರನ್ನ ಸುಲಭವಾಗಿ ಆಕರ್ಷಿಸಬಲ್ಲ ಹೆಸರನ್ನ ಚಾನೆಲ್‌ ನೀಡಬೇಕು. ನಂತರ ನೀವೇ ಶೂಟ್‌ ಮಾಡಿದ ಅಥವಾ ಕ್ರಿಯೆಟ್‌ ಮಾಡಿದ ವೀಡಿಯೋಗಳನ್ನ ಆಪ್‌ಲೋಡ್‌ ಮಾಡಿದರೆ ಅದು ನಿಮ್ಮದೆ ಚಾನೆಲ್‌ ಮುಖಾಂತರ ಪ್ರಸಾರವಾಗುತ್ತದೆ.

2. ಸ್ವಂತ ವಿಡಿಯೋಗಳನ್ನ ಆಪ್‌ಲೋಡ್‌ ಮಾಡಿ

2. ಸ್ವಂತ ವಿಡಿಯೋಗಳನ್ನ ಆಪ್‌ಲೋಡ್‌ ಮಾಡಿ

ಇನ್ನು ನೀವು ಕ್ರಿಯೆಟ್‌ ಮಾಡಿದ ಚಾನೆಲ್‌ನಲ್ಲಿ ನೀವೇ ಕ್ರಿಯೆಟ್‌ ಮಾಡಿದ ವೀಡಿಯೋಗಳನ್ನ ಆಪ್‌ಲೋಡ್‌ ಮಾಡಬೇಕು. ಬೇರೆ ಮಾರ್ಗಗಳಿಂದ ಇತರೆ ವೀಡಿಯೋಗಳನ್ನ ನಕಲು ಮಾಡಿ ಎಡಿಟ್‌ ಮಾಡ ಆಪ್‌ಲೋಡ್‌ ಮಾಡಿದರೆ ನಿಮ್ಮ ಹೆಸರಿನ ಚಾನೆಲ್‌ ರದ್ದಾಗಿ ಬಿಡುವ ಸಾಧ್ಯತೆಯೂ ಕೂಡ ಉಂಟೂ. ಆದರಿಂದ ಜನರಿಗೆ ಇಷ್ಟವಾಗುವ ಹಾಗೂ ನಿಮ್ಮ ಚಾಣಾಕ್ಷತೆಗೆ ಹತ್ತಿರವಿರುವ ವೀಡಿಯೋಗಳನ್ನ ಕ್ರಿಯೆಟ್‌ ಮಾಡಿ ಆಪ್‌ಲೋಡ್‌ ಮಾಡಬೇಕು.

3. ಯುಟ್ಯೂಬ್ ಪಾರ್ಟನರ್ ಆಗುವುದು

3. ಯುಟ್ಯೂಬ್ ಪಾರ್ಟನರ್ ಆಗುವುದು

ಯುಟ್ಯೂಬ್‌ನಲ್ಲಿ ವೀಡಿಯೋ ಆಪ್‌ಲೋಡ್‌ ಮಾಡಿದ ತಕ್ಷಣವೇ ನಿಮಗೆ ಹಣ ಸಿಗುವುದಿಲ್ಲ ಹಾಗೂ ಹಣ ಸಂಪಾದನೆ ಮಾಡುವುದಕ್ಕೆ ಆಗೋದಿಲ್ಲ. ಬದಲಿಗೆ ನೀವು ಯುಟ್ಯೂಬ್‌ ಪಾರ್ಟ್‌ನರ್‌ ಪ್ರೊಗ್ರಾಮ್‌ ಆಗಿ ಸೇರಿಕೊಳ್ಳಬೇಕು, ಯುಟ್ಯೂಬ್‌ ಪಾರ್ಟ್‌ನರ್‌ ಪ್ರೋಗ್ರಾಮ್‌ ಸೇರಿಕೊಂಡರೆ ನಿಮ್ಮ ಚಾನೆಲ್‌ಗೆ ಜಾಹಿರಾತುಗಳು ದೊರೆಯುತ್ತದೆ. ಆದರಲ್ಲಿ ನೀವೆ ಆಯ್ಕೆಮಾಡಿಕೊಂಡ ಜಾಹಿರಾತುಗಳನ್ನ ನಿಮ್ಮ ಚಾನೆಲ್‌ನಲ್ಲಿ ಪ್ರಕಟಿಸಬಹುದು. ಇದರಿಂದ ನಿಮಗೆ ಜಾಹಿರಾತು ಮೂಲಕ ಆದಾಯ ಬರುತ್ತದೆ. ಆದರೆ ನೀವು ಯುಟ್ಯೂಬ್‌ ಪಾರ್ಟನರ್‌ ಆಗಲು ಒಂದು ವರ್ಷದ ಅವಧಿಯಲ್ಲಿ ನಿಮ್ಮ ಯುಟ್ಯೂಬ್‌ ಚಾನೆಲ್‌ 1,000 ಕ್ಕೂ ಅಧಿಕ ಚಂದಾದಾರರನ್ನ ಹಾಗೂ 4,000ಕ್ಕೂ ಅಧಿಕ ವೀಕ್ಷಕರನ್ನ ಪಡೆದಿರಬೇಕು.

4. ಜಾಹೀರಾತುಗಳ ಆಯ್ಕೆಗಳಲ್ಲಿ ಜಾಣ್ಮೆ ಇರಬೇಕು

4. ಜಾಹೀರಾತುಗಳ ಆಯ್ಕೆಗಳಲ್ಲಿ ಜಾಣ್ಮೆ ಇರಬೇಕು

ನಿಮ್ಮ ಚಾನೆಲ್‌ನಲ್ಲಿ ಪ್ರಸಾರವಾಗುವ ನಿಮ್ಮ ವೀಡಿಯೋಗಳಿಗೆ ಸಮೀಪವಿರುವ ಜಾಹೀರಾತುಗಳನ್ನ ಪ್ರಕಟಿಸಿದರೆ ಅದು ನಿಮಗೆ ಅನುಕೂಲವಾಗಲಿದೆ. ಯಾಕೆಂದರೆ ನಿಮ್ಮ ವಿಡಿಯೋಗೆ ಜಾಹೀರಾತು ಪ್ರಚಾರ ಸಿಕ್ಕ ತಕ್ಷಣ ಹಣ ಬರುವುದಿಲ್ಲ. ಬದಲಿಗೆ ಯುಟ್ಯೂಬ್‌ನ CPM ಎಂಬ ನಿಯಮದ ಪ್ರಕಾರ ನಿಮ್ಮ ವೀಡಿಯೋ ವೀಕ್ಷಿಸಿದ ಜನರು ಜಾಹಿರಾತಿನ ಮೇಲೆ ಕ್ಲಿಕ್‌ ಮಾಡಿದರೆ ಮಾತ್ರ ನಿಮಗೆ ಹಣ ಸಿಗಲಿದೆ. ಹೀಗಾಗಿ ಜಾಹೀರಾತು ಸಮೇತ ನಿಮ್ಮ ವೀಡಿಯೊ ವೀಕ್ಷಿಸಿದ ಪ್ರತಿ ಸಾವಿರ ಜನರಿಗೆ 200 ರೂ, ನಿಂದ 400 ರೂ ವರೆಗೆ ನಿಮಗೆ ಹಣ ದೊರೆಯಲಿದೆ.

5. ಪ್ರಾಡಕ್ಟ್‌ಗಳ ಪ್ರಮೋಷನ್‌ ಮಾಡುವುದು

5. ಪ್ರಾಡಕ್ಟ್‌ಗಳ ಪ್ರಮೋಷನ್‌ ಮಾಡುವುದು

ಇನ್ನು ಯುಟ್ಯೂಬ್‌ ಚಾನೆಲ್‌ನಲ್ಲಿ ನೀವೆ ತಯಾರಿಸಿದ ಅಥವಾ ಇತರೆ ನಿಮ್ಮ ಜೊತೆ ಒಪ್ಪಂದಿತ ಮಾಡಿಕೊಂಡ ಪ್ರಾಡಕ್ಟ್‌ಗಳನ್ನ ನಿಮ್ಮ ಚಾನೆಲ್‌ ಮೂಲಕ ಪ್ರಮೋಟ್‌ ಮಾಡುವುದು. ಇದರಿಂದ ಹೆಚ್ಚು ಮಂದಿಗೆ ಪ್ರಾಡಕ್ಟ್‌ ಬಗ್ಗೆ ಆಸಕ್ತಿ ಬರುವಂತೆ ಮಾಡುವುದು. ಅಲ್ಲದೆ ವ್ಯಾಪಾರವನ್ನ ವಿಸ್ತಾರ ಮಾಡುವುದರಿಂದ ನಿಮ್ಮ ಪ್ರಾಡಕ್ಟ್‌ಗೆ ಉತ್ತಮ ಪ್ರಚಾರ ಸಿಕ್ಕಿದಂತಾಗುತ್ತದೆ. ಅಲ್ಲದೆ ನಿಮ್ಮ ವಿಡಿಯೋ ಕೊನೆಯಲ್ಲಿ ಉತ್ಪನಕ್ಕೆ ಸಂಬಂಧಿಸಿದ ಲಿಂಕ್‌ ಅಳವಿಡಿಸಿದರೆ ಲಿಂಕ್‌ ಮೂಲಕ ಜನರು ಪ್ರಾಡಕ್ಟ್‌ ಖರೀದಿಸಲು ಮುಂದಾದರೆ ನಿಮಗೆ ಹಣ ಸಂದಾಯವಾಗಲಿದೆ.

6. ಇತರೆ ಅಂಗ ಸಂಸ್ಥೆಗಳ ಉತ್ಪನ್ನಗಳ ಮಾರಾಟ

6. ಇತರೆ ಅಂಗ ಸಂಸ್ಥೆಗಳ ಉತ್ಪನ್ನಗಳ ಮಾರಾಟ

ಅಂಗಸಂಸ್ಥೆ ಮಾರ್ಕೆಟಿಂಗ್ ಎಂದರೆ ಕಮಿಷನ್‌ಗಾಗಿ ಉತ್ಪನ್ನಗಳನ್ನು ಮಾರಾಟ ಮಾಡುವುದು. ಹೌದು ಈಗಾಗ್ಲೆ ಅಮೆಜಾನ್ ಮತ್ತು ಇ-ಬೇ ನಂತಹ ಬೃಹತ್ ಇ-ಕಾಮರ್ಸ್‌ ಕಂಪನಿಗಳು ಮತ್ತು ಸಣ್ಣ ಕಂಪನಿಗಳು ಸೇರಿದಂತೆ ತಮ್ಮ ಉತ್ಪನ್ನಗಳನ್ನು ಉತ್ತೇಜಿಸುವ ಅಂಗಸಂಸ್ಥೆ ಮಾರಾಟಗಾರರಿಗೆ ಆಕರ್ಷಕ ವ್ಯವಹಾರಗಳನ್ನು ನೀಡುತ್ತಿವೆ. ಈ ಉತ್ಪನ್ನಗಳನ್ನ ನಿಮ್ಮ ಯುಟ್ಯೂಬ್‌ ಚಾನೆಲ್‌ ಮುಖಾಂತರ ಪ್ರಮೋಟ್‌ ಮಾಡಿ ಉತ್ತನ್ನಗಳನ್ನ ಗ್ರಾಹಕರು ಖರೀದಿಸುವಂತೆ ಮಾಡಿದರೆ ನಿಮ್ಮ ಕೈ ಗೆ ಹಣ ಬರಲಿದೆ. ಈ ಮಾದರಿಯ ನೆಟ್‌ವರ್ಕ್‌ಗಳಲ್ಲಿ ಕ್ಲಿಕ್‌ಬ್ಯಾಂಕ್, ಕಮಿಷನ್ ಜಂಕ್ಷನ್ ಮತ್ತು ಶೇರ್‌ಸೇಲ್.ಕಾಮ್ ಕಂಪೆನಿಗಳು ಕೂಡ ಸೇರಿದ್ದು ನೀವು ಪ್ರಯತ್ನಿಸಬಹುದು.

7. ವೆಬ್‌ ಟಿವಿ ಸಿರೀಸ್‌ ಕ್ರಿಯೆಟ್‌ ಮಾಡುವುದು

7. ವೆಬ್‌ ಟಿವಿ ಸಿರೀಸ್‌ ಕ್ರಿಯೆಟ್‌ ಮಾಡುವುದು

ಇನ್ನು ನೀವು ಉತ್ತಮ ಬರಹಗಾರರಾಗಿದ್ದು, ಒಳ್ಳೆಯ ಕಥೆಗಳನ್ನ ನಿರೂಪಿಸಬಲ್ಲೆ ಎನ್ನುವುದಾದರೆ ನೀವು ನಿಮ್ಮದೇ ಆದ ವೆಬ್ ಟಿವಿ ಕಾರ್ಯಕ್ರಮಗಳನ್ನು ರಚಿಸಲು ಯುಟ್ಯೂಬ್‌ ನಿಮಗೆ ಅವಕಾಶ ಕಲ್ಪಿಸಿದೆ. ನಿಮ್ಮ ಕಲ್ಪನೆಯ ಹಾಗೂ ನಿಮ್ಮ ಬಜೆಟ್‌ಗೆ ಸರಿ ಎನಿಸುವ ಉತ್ತಮ ಕಾಮಿಡಿ ಸಿರೀಸ್‌, ನಾಟಕಗಳ ಪ್ರದರ್ಶನ, ಅಥವಾ ನಿಮ್ಮ ಸ್ವಂತ ಟಾಕ್‌ ಶೋ ರಚಿಸಿ ಯುಟ್ಯೂಬ್‌ನಲ್ಲಿ ಆಫ್‌ಲೋಡ್‌ ಮಾಡಬಹುದು. ಆದರೆ ಪ್ರತಿ ವಿಡಿಯೋ 15 ನಿಮಿಷಗಳಿಗೆ ಸೀಮಿತವಾಗಿರಬೇಕು. ಇತ್ತೀಚಿನ ದಿನಗಳಲ್ಲಿ ವೆಬ್‌ ಸಿರೀಸ್‌ಗೆ ಉತ್ತಮ ಪ್ರತಿಕ್ರಿಯೆಗಳು ದೊರೆಯುತ್ತಿದ್ದು, ಉತ್ತಮ ಟೀಂ ಕಟ್ಟಿಕೊಂಡು ನೀವು ಮಾಡಿದ್ದೇ ಆದರೆ ಒಮ್ಮೆ ಕ್ಲಿಕ್‌ ಆದರೆ ನಿಮ್ಮ ಜೀವನದ ಕ್ರಮವೇ ಬದಲಾಗಿ ಬಿಡಬಹುದು.

8. ಸೂಪರ್ ಚಾಟ್

8. ಸೂಪರ್ ಚಾಟ್

ನಿಮ್ಮ ಮಾತುಗಳ ಮೂಲಕವೇ ಜನರನ್ನ ಆಕರ್ಷಿಸುವಂತಿದ್ದರೆ ಹಾಗೂ ಅಭಿಮಾನಿಗಳನ್ನ ಪಡೆದುಕೊಂಡಿದ್ದರೆ, ನಿಮ್ಮ ಚಾನೆಲ್‌ನಲ್ಲಿ ಲೈವ್ ಚಾಟ್‌ನಲ್ಲಿ ಸಂವಹನ ನಡೆಸಲು ಸೂಪರ್ ಚಾಟ್ ಒಂದು ಮಾರ್ಗವಾಗಿದೆ. ಲೈವ್ ಸ್ಟ್ರೀಮ್ ಅಥವಾ ಪ್ರೀಮಿಯರ್ ಸಮಯದಲ್ಲಿ ಅಭಿಮಾನಿಗಳು ತಮ್ಮ ಸಂದೇಶಗಳನ್ನು ಚಾಟ್‌ನಲ್ಲಿ ಹೈಲೈಟ್ ಮಾಡಲು ಸೂಪರ್ ಚಾಟ್‌ಗಳನ್ನು ಖರೀದಿಸಬಹುದು. ಅವಶ್ಯಕತೆಗಳನ್ನು ಪೂರೈಸುವ ಕೆಲವು ಸ್ಥಳಗಳಲ್ಲಿನ ಚಾನಲ್‌ಗಳಿಗೆ ಈ ವೈಶಿಷ್ಟ್ಯವು ಲಭ್ಯವಿದೆ. ನೀವು ಸೂಪರ್ ಚಾಟ್ ಅನ್ನು ಸಕ್ರಿಯಗೊಳಿಸಿದ್ದರೆ, ನೀವು ಆಡ್ಸೆನ್ಸ್‌ನೊಂದಿಗೆ ಜಾಹೀರಾತುಗಳ ಆದಾಯವನ್ನು ಪಡೆಯುವ ರೀತಿಯಲ್ಲಿಯೇ ಈ ಆದಾಯವನ್ನು ಸ್ವೀಕರಿಸಬಹುದಾಗಿದೆ.

9. ಯುಟ್ಯೂಬ್‌ನಲ್ಲಿ ಗೈಡ್‌ ಮಾಡಿ

9. ಯುಟ್ಯೂಬ್‌ನಲ್ಲಿ ಗೈಡ್‌ ಮಾಡಿ

ಇನ್ನು ಯುಟ್ಯೂಬ್‌ನಲ್ಲಿ ಹಣಗಳಿಸಲು ಉತ್ತಮ ವಿಧಾನ ಅಂದರೆ ಇತರರಿಗೆ ಟ್ಯೂಷನ್‌ ಮಾಡುವುದು. ಹೌದು ನಿಮಗೆ ತಿಳಿದಿರುವ ವಿಚಾರಗಳನ್ನ ನಿಮ್ಮ ಚಾನೆಲ್‌ ಮುಖಾಂತರ ಮಾರ್ಗದರ್ಶಕರಾಗಿ ಇತರರಿಗೆ ತಿಳಿಸುತ್ತಿದ್ದರೆ ನೀವು ಉತ್ತಮ ಆಧಾಯಗಳಿಸಬಹುದಾಗಿದೆ. ಉದಾಹರಣೆಗೆ ಸಾಕಷ್ಟು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಹೇಗೆ,? ಯಾವ ವಿಚಾರಗಳಿಗೆ ಎಷ್ಟು ಓದಿರಬೇಕು.? ಪ್ರಶ್ನೆಗಳಿಗೆ ಉತ್ತರಿಸುವುದು ಹೇಗೆ ? ಇಂತಹ ಮಾರ್ಗದರ್ಶನವನ್ನ ನೀಡುವ ಮೂಲಕ ಆದಾಯವನ್ನ ಗಳಿಸಬಹುದು.

10. ಯುಟ್ಯೂಬ್‌ ಮೂಲಕ ನಿಮ್ಮನ್ನ ನೀವು ಬ್ರ್ಯಾಂಡ್‌ ಮಾಡಿಕೊಳ್ಳಿ

10. ಯುಟ್ಯೂಬ್‌ ಮೂಲಕ ನಿಮ್ಮನ್ನ ನೀವು ಬ್ರ್ಯಾಂಡ್‌ ಮಾಡಿಕೊಳ್ಳಿ

ಮೊದಲಿಗೆ ನೀವು ಯಾವ ವಿಚಾರಗಳ ಬಗ್ಗೆ ವೀಡಿಯೊ ಮಾಡ್ತಾ ಇದ್ದೀರಾ ಅನ್ನುವುದು ನಿಮಗೆ ಸ್ಪಷ್ಟತೆ ಇರಬೇಕು. ಈ ಮುಖಾಂತರ ನಿಮ್ಮನ್ನ ನೀವೆ ಒಂದು ಬ್ರ್ಯಾಂಡ್‌ ಆಗಿ ಗುರ್ತಿಸಿಕೊಳ್ಳುವಂತೆ ಮಾಡಿಕೊಳ್ಳಬೇಕು. ಉದಾಹರಣೆಗೆ ಮಾರ್ಕೆಟಿಂಗ್ ಗುರು ಮೂಲಕ ಟಾಮ್ ಪೀಟರ್ಸ್ ಬ್ರಾಂಡ್ ಆದಂತೆ, ಮತ್ತು ನಿಮಗೆ ನೀವೇ ಬ್ರಾಂಡ್‌ ಆಗಬೇಕು. ಆಗ ನಿಮ್ಮನ್ನು ಅನುಕರಿಸುವವರ ಸಾಕಷ್ಟು ಮಂದಿ ಸಿಗುತ್ತಾರೆ. ಆ ಮೂಲಕ ಯಶಸ್ಸು ಅನ್ನೊದು ಪ್ರಾರಂಭವಾಗಲಿದೆ.

11. ನಿಮಗೆ ಮುದ್ದಾಗಿ ಕಾಣಿಸಿದ್ದನ್ನ ಆಪ್‌ಲೋಡ್‌ ಮಾಡಿ

11. ನಿಮಗೆ ಮುದ್ದಾಗಿ ಕಾಣಿಸಿದ್ದನ್ನ ಆಪ್‌ಲೋಡ್‌ ಮಾಡಿ

ನಿಮಗೆ ಗೊತ್ತರಲಿ ಯುಟ್ಯೂಬ್‌ ಮೂಲಕ ಮನುಷ್ಯರಷ್ಟೇ ಅಲ್ಲ ಬೆಕ್ಕು, ಸಾಕು ನಾಯಿಗಳು ಕೂಡ ವಿಶ್ವಪ್ರಸಿದ್ದಿಯನ್ನ ಪಡೆದುಕೊಂಡಿವೆ. ಯಾವಾಗ ನಸೀಬು ಚೆನ್ನಾಗಿರುತ್ತೆ ಅಂತಾಹೇಳೊಕ್ಕಾಗಲ್ಲ. ಇದೇ ಕಾರಣಕ್ಕೆ ನಿಮಗೆ ಏನಾದರೂ ಮುದ್ದಾಗಿ ಕಂಡು ಬಂದರೆ, ಅಥವಾ ಅದು ಇತರರನ್ನ ಗಮನಸೆಳೆಯಬಲ್ಲದು ಎಂದು ಅನಿಸಿದರೆ ಅದರ ವಿಡಿಯೋ ಮಾಡಿ ಆಪ್‌ಲೋಡ್‌ ಮಾಡಿ ಅದು ಏನು ಅನ್ನೊದನ್ನ ಮುಂದಿನ ವಿಡಿಯೋದಲ್ಲಿ ತಿಳಿಸುವುದಾಗಿ ಹೇಳಿ ಆಗ ನೋಡಿ ಕುತೂಹಲಬರಿತ ಜನ ಫಾಲೋ ಮಾಡಲು ಶುರುಮಾಡುತ್ತಾರೆ. ಇದು ನಿಮ್ಮನ್ನ ಮುಂದೆ ಯುಟ್ಯೂಬ್‌ ಸ್ಟಾರ್‌ ಮಾಡಿದರೂ ಆಶ್ಚರ್ಯವಿಲ್ಲ.

12. ವಿಡಿಯೋಗಳನ್ನ ಶೆಡೂಲ್ಡ್‌ ಮಾಡಿ

12. ವಿಡಿಯೋಗಳನ್ನ ಶೆಡೂಲ್ಡ್‌ ಮಾಡಿ

ನಿಮ್ಮ ವಿಡಿಯೋ ವೀಕ್ಷಕರನ್ನ ಹಿಡಿದಿಟ್ಟುಕೊಳ್ಳಲು ನಿಗಧಿತ ಸಮಯವನ್ನ ಗುರುತು ಮಾಡಿಕೊಳ್ಳಿ, ಆ ಸಮಯದಲ್ಲಿ ಯಾವುದೇ ಕೆಲಸವಿದ್ದರೂ ಸರಿ ನಿಮ್ಮ ವೀಡಿಯೋ ಆಪ್‌ಲೋಡ್‌ ಆಗುವಂತೆ ಮಾಡಬೇಕು. ಇದರಿಂದಾಗಿ ನಿಮ್ಮ ಚಾನೆಲ್‌ ಫಾಲೋ ಮಾಡುವ ಜನರಲ್ಲಿ ವಿಶ್ವಾಸಾರ್ಹತೆ ಮೂಡುತ್ತದೆ. ಇದರಿಂದ ನಿಮ್ಮ ಚಾನೆಲ್‌ ಇನ್ನಷ್ಟು ವಿಸ್ತಾರವಾಗುವ ಸಾದ್ಯತೆ ಇರಲಿದ್ದು, ಆದಾಯ ಹರಿದು ಬರಲಿದೆ.

13. ಪ್ರಾಯೋಜಕತ್ವವನ್ನು ಪಡೆಯಿರಿ

13. ಪ್ರಾಯೋಜಕತ್ವವನ್ನು ಪಡೆಯಿರಿ

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಂಪನಿಗಳು ನೇರ ಜಾಹೀರಾತುಗಾಗಿ ಯೂಟ್ಯೂಬ್ ಚಾನೆಲ್‌ಗಳಿಗೆ ಪ್ರಾಯೋಜಕತ್ವವನ್ನು ಒದಗಿಸುತ್ತವೆ. ಈ ಪ್ರಾಯೋಜಕತ್ವವನ್ನು ಪಡೆಯಲು ನೀವು ಒದಗಿಸಲು ಸಾಧ್ಯವಾಗುವ ವಿಷಯಗಳ ಬಗ್ಗೆ ವಿವರವಾದ ಪ್ರಸ್ತಾವನೆಯನ್ನ ನೀವು ನೀಡಬೇಕಾಗುತ್ತದೆ. ಇದರಿಂದ ನಿಮ್ಮ ಪ್ರೇಕ್ಷಕರು ಮತ್ತು ನೀವು ಪ್ರಾಯೋಜಿಸುವ ಬ್ರ್ಯಾಂಡ್ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆಯೆ ಅನ್ನೊದನ್ನ ಮೊದಲು ಖಚಿತಪಡಿಸಿಕೊಳ್ಳಿ. ಇದು ನಿಮಗೆ ಚೆನ್ನಾಗಿ ಅರ್ಥವಾಗಿದ್ದರೆ ಮಾತ್ರ ಪ್ರಾಯೋಜಕತ್ವದಲ್ಲಿ ಯಶಸ್ವಿಯಾಗಬಹುದು. ಹಾಗೊಂದು ವೇಳೆ ಯಶಸ್ವಿಯಾದರೆ ನೀವು ಪ್ರಾಯೋಜಿತ ಮೊತ್ತವನ್ನು ಯೂಟ್ಯೂಬ್‌ನೊಂದಿಗೆ ವಿಭಜಿಸುವ ಬದಲು ನೇರವಾಗಿ ಸ್ವೀಕರಿಸಬಹುದು.

14. ಚಂದಾದಾರರಾಗುವುದು ಹೇಗೆ ಅನ್ನೊದನ್ನ ತಿಳಿಸಿ

14. ಚಂದಾದಾರರಾಗುವುದು ಹೇಗೆ ಅನ್ನೊದನ್ನ ತಿಳಿಸಿ

ಹೌದು ನಿಮ್ಮ ವೀಡಿಯೋಗಳನ್ನ ಯುಟ್ಯೂಬ್‌ನಲ್ಲಿ ಆಪ್‌ಲೋಡ್‌ ಮಾಡಿದ ನಂತರ ನಿಮ್ಮ ವೀಕ್ಷಕರಿಗೆ "ನೀವು ಈ ವೀಡಿಯೊವನ್ನು ಇಷ್ಟಪಟ್ಟರೆ, ನಂತರ ಲೈಕ್ ಬಟನ್ ಒತ್ತಿ ಮತ್ತು ಚಂದಾದಾರರಾಗಿ." ಹೀಗೆ ಅನೇಕ ಯೂಟ್ಯೂಬರ್‌ಗಳು ತಮ್ಮ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಲು ಅವರ ವೀಡಿಯೊಗಳ ಕೊನೆಯಲ್ಲಿ ಹೇಳುವ ಮೂಲಕ ವೀಕ್ಷಕರನ್ನ ಚಂದಾದಾರರಾಗುವಂತೆ ಮಾಡುತ್ತಾರೆ. ಇದನ್ನ ನೀವು ಮಾಡುವುದರಿಂದ ನಿಮ್ಮ ಪ್ರೇಕ್ಷಕರು ಈ ವಿಧಾನಕ್ಕೆ ಬೇಗ ಹೊಂದಿಕೊಳ್ಳಬಹುದು.

15. ಕ್ರಿಯೆಟಿವ್

15. ಕ್ರಿಯೆಟಿವ್

ಒಟ್ಟಾರೆ ಹೇಳೊದಾದರೆ ಯುಟ್ಯೂಬ್‌ನಲ್ಲಿ ಹಣಗಳಿಸಬೇಕಾದರೆ ಮೊದಲಿಗೆ ನಮ್ಮಲ್ಲಿ ಕ್ರಿಯೆಟಿವಿಟಿ ಇರಬೇಕು, ಏನಾದರೂ ಸಮ್‌ಥಿಂಗ್‌ ಸ್ಪೆಷಲ್‌ ಎನ್ನುವಂತೆ ಹೊಸ ಹೊಸ ವಿಚಾರಗಳಿಗೆ ಜನರನ್ನ ತೊಡಗಿಕೊಲ್ಳುವಂತೆ ಮಾಡಬೇಕು. ಹೊಸ ವಿಚಾರಗಳ ಬಗ್ಗೆ ಚರ್ಚಿಸಿ ಮುಕ್ತ ವೇದಿಕೆ ಕರೆತರುವಂತಹ ಕ್ರಿಯೆಟಿವಿಟಿ ನಿಮ್ಮಲ್ಲಿದ್ದರೆ ನೀವೆ ನಾಳಿನ ಯುಟ್ಯೂಬ್‌ ಸ್ಟಾರ್‌ ಆಗೋದ್ರಲ್ಲಿ ಅನುಮಾನವೇ ಇಲ್ಲ.

Best Mobiles in India

Read more about:
English summary
Making money might not be your reason for starting a YouTube channel.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X