ಸೆಂಡರ್‌ಗೆ ತಿಳಿಯದಂತೆ ವಾಟ್ಸಾಪ್‌ ಮೆಸೇಜ್‌ ಓದುವುದು ಹೇಗೆ

Written By:

ಮೊಬೈಲ್‌ನಲ್ಲಿ ಕರೆ ಮಾಡಲು ಬ್ಯಾಲೆನ್ಸ್‌ ಇಲ್ಲದಿದ್ರು ಪರವಾಗಿಲ್ಲಾ. ವಾಟ್ಸಾಪ್ ಬಳಕೆಗೆ ಇಂಟರ್ನೆಟ್‌ ಪ್ಯಾಕ್‌ ಇದ್ರೆ ಸಾಕು. ಯಾಕಂದ್ರೆ ಇಂಟರ್ನೆಟ್‌ ಪ್ಯಾಕ್‌ ಇದ್ರೆ ವಾಟ್ಸಾಪ್‌ನಲ್ಲೇ ಕರೆ ಸಹ ಮಾಡಬಹುದು ಹಾಗೆ ಅಪರಿಮಿತ ಮೆಸೇಜ್‌ ಚಾಟಿಂಗ್‌ ಸಹ ಮಾಡಬಹುದು.

ವಾಟ್ಸಾಪ್‌ನಲ್ಲಿ ಹಲವರು ಕಳುಹಿಸಿದ ಮೆಸೇಜ್‌ಗಳನ್ನು ಓದಿದರೆ ಮೆಸೇಜ್‌ ಕಳುಹಿಸಿದವರಿಗೂ ಸಹ ಗೊತ್ತಾಗುತ್ತದೆ. ಆದರೆ ಮೆಸೇಜ್‌ಗಳನ್ನು ಓದಿದರೂ ಸಹ ಕಳುಹಿಸಿದವರಿಗೆ ತಿಳಿಯದಂತೆ ಓದಬೇಕು ಎಂಬುದು ಹಲವರ ಆಕಾಂಕ್ಷೆ. ಹಾಗಾದ್ರೆ ಆ ರೀತಿ ಮೆಸೇಜ್‌ ಸೆಂಡ್‌ ಮಾಡಿದವರಿಗೆ ಓದಿರುವುದು ತಿಳಿಯದಂತೆ ಮೇಸೇಜ್‌ ಸ್ವೀಕರಿಸಿದವರು ಓದುವುದು ಹೇಗೆ? ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ವಾಟ್ಸಾಪ್

ವಾಟ್ಸಾಪ್

1

ವಾಟ್ಸಾಪ್‌ ಇಂದು ಅಪರಿಮಿತವಾಗಿ ಮೆಸೇಜ್‌ ಸೆಂಡ್‌ ಮಾಡಲು ಅವಕಾಶ ಹೊಂದಿರುವ ಆಪ್‌ ಅಗಿದೆ. ವಾಟ್ಸಾಪ್‌ ಬಳಕೆದಾರರು ತಾವು ಇತರರಿಗೆ ಮೆಸೇಜ್‌ ಕಳುಹಿಸಿದರೆ ಸ್ವೀಕೃತಿದಾರರು ಮೆಸೇಜ್‌ ಓದಿದ್ದಾರೆಯೇ ಇಲ್ಲವೋ ಎಂದು ತಿಳಿಯಬಹುದಾಗಿದೆ. ಮೆಸೇಜ್‌ ಓದಿದ್ದರೆ 2 ನೀಲಿ ಟಿಕ್‌ಗಳು ಕಾಣುವುದು ಎಲ್ಲರಿಗೂ ತಿಳಿದಿರುವ ವಿಷಯ

ವಾಟ್ಸಾಪ್‌

ವಾಟ್ಸಾಪ್‌

2

ವಾಟ್ಸಾಪ್‌ ಬಳಕೆದಾರರು ಕೆಲವೊಮ್ಮೆ ಮೆಸೇಜ್‌ ಓದಬೇಕು ಆದರೆ ಸೆಂಡರ್‌ಗೆ ತಿಳಿಯಬಾರದು ಎಂದು ಆಕಾಂಕ್ಷಿತರಾಗಿರುತ್ತಾರೆ. ಕಾರಣ ಓದಿದ ಮೇಲೆ ಸೆಂಡರ್‌ಗೆ ರೀಪ್ಲೇ ನೀಡಬೇಕಾಗುತ್ತದೆ. ಅಂತಹ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗುವುದು ಹಲವರ ಬೇಡಿಕೆ.

ಟಿಕ್‌ಗಳು

ಟಿಕ್‌ಗಳು

3

ಒಂದು ಟಿಕ್‌ ಮೆಸೇಜ್‌ ಸೆಂಡ್‌ ಆಗಿರುವುದು, 2 ಬೂದು ಬಣ್ಣದ ಟಿಕ್‌ ಇದ್ದರೆ ಮೆಸೇಜ್‌ ಸ್ವೀಕೃತವಾಗಿದೆ. ಆದರೆ ಮೆಸೇಜ್‌ ಓದಿಲ್ಲ ಎಂಬುದು. ಹಾಗೂ 2 ನೀಲಿ ಟಿಕ್‌ಗಳು ಬಂದರೆ ಮೆಸೇಜ್‌ ಅನ್ನು ಓದಲಾಗಿದೆ ಎಂದು ಅರ್ಥ.

 ಸೆಂಡರ್‌ಗೆ ತಿಳಿಯದಂತೆ ಮೆಸೇಜ್‌ ಓದುವುದು ಹೇಗೆ?

ಸೆಂಡರ್‌ಗೆ ತಿಳಿಯದಂತೆ ಮೆಸೇಜ್‌ ಓದುವುದು ಹೇಗೆ?

4

ಮೆಸೇಜ್‌ ಸ್ವೀಕರಿಸಿ ಓದಿದರು ಸಹ ಸೆಂಡರ್‌ ಗೆ ತಿಳಿಯದಂತೆ ಓದಬಹುದಾಗಿದೆ. ಅದು ಹೇಗೆ ಎಂದರೆ ಮೊದಲು ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ "Flight Mode" ಅಥವಾ "Airplane Mode" ಅನ್ನು ಆನ್‌ ಮಾಡಿರಿ.

ಸೆಂಡರ್‌ಗೆ ತಿಳಿಯದಂತೆ ಮೆಸೇಜ್‌ ಓದುವುದು ಹೇಗೆ?

ಸೆಂಡರ್‌ಗೆ ತಿಳಿಯದಂತೆ ಮೆಸೇಜ್‌ ಓದುವುದು ಹೇಗೆ?

5

ನಂತರ ನಿಮ್ಮ ವಾಟ್ಸಾಪ್‌ ಆಪ್‌ ಓಪನ್‌ ಮಾಡಿ ಓದಿಲ್ಲದ ಎಲ್ಲಾ ಮೆಸೇಜ್‌ಗಳನ್ನು ಎಷ್ಟು ಬಾರಿ ಬೇಕಾದರೂ ಸಹ ಓದಿರಿ. ನಿಮಗೆ ಮೆಸೇಜ್‌ ಕಳುಹಿಸಿದ ಯಾರಿಗೂ ಸಹ ನೀವು ಅವರ ಮೆಸೇಜ್‌ ಓದಿದ್ದೀರಿ ಎಂದು ತಿಳಿಯುವುದಿಲ್ಲಾ.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How To Read Any WhatsApp Message Without The Sender Knowing. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot