ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌ ಆದಾಗ, ನಿಮ್ಮ ಖಾತೆ ಮರಳಿ ಪಡೆಯಲು ಹೀಗೆ ಮಾಡಿ?

|

ಮೆಟಾ ಒಡೆತನದ ಫೇಸ್‌ಬುಕ್‌ ಜನಪ್ರಿಯ ಸಾಮಾಜಿಕ ಜಾಲತಾಣವಾಗಿದೆ. ಪ್ರಸ್ತುತ ದಿನಗಳಲ್ಲಿ ಫೇಸ್‌ಬುಕ್‌ ಬಳಸುವವರ ಪ್ರಮಾಣ ಹೆಚ್ಚಿನ ಸಂಖ್ಯೆಯಲ್ಲಿದೆ. ಇದೇ ಕಾರಣಕ್ಕೆ ಫೇಸ್‌ಬುಕ್‌ ಕೂಡ ತನ್ನ ಬಳಕೆದಾರರಿಗೆ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದರಲ್ಲಿ ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡುವ ಫೀಚರ್ಸ್‌ಗಳು ಕೂಡ ಸೇರಿವೆ. ಆದರೂ ಕೂಡ ಫೇಸ್‌ಬುಕ್‌ ಖಾತೆಯನ್ನು ಹ್ಯಾಕ್‌ ಮಾಡುವ ಘಟನೆಗಳು ನಡೆಯುತ್ತಲೇ ಇವೆ. ಆದರೆ ನೀವು ಕೆಲವು ನಿಯಮಗಳನ್ನು ಪಾಲಿಸಿದಿರೆ ನಿಮ್ಮ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌ ಆಗದಂತೆ ತಡೆಯಬಹುದಾಗಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌ ಆಗಿದೆ ಎನ್ನುವ ವಿಚಾರ ಆಗಾಗ ಕೇಳಿ ಬರುವುದು ಸಾಮಾನ್ಯವಾಗಿಬಿಟ್ಟಿದೆ. ಒಂದು ವೇಳೆ ನಿಮ್ಮ ಫೇಸ್‌ಬುಕ್‌ ಖಾತೆ ಹ್ಯಾಕ್‌ ಆದರೆ ನಿಮ್ಮ ಡೇಟಾವನ್ನು ವಂಚಕರು ಕದಿಯುವ ಸಾಧ್ಯತೆಯಿದೆ. ಇಂತಹ ಸಮಯದಲ್ಲಿ ನೀವು ನಿಮ್ಮ ಖಾತೆಯನ್ನು ಮರಳಿ ಪಡೆಯುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ನಿಮ್ಮ ಪಾಸ್‌ವರ್ಡ್‌ ಅನ್ನು ಬದಲಾಯಿಸಬೇಕಾಗುತ್ತದೆ. ಇದಲ್ಲದೆ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ನಿಮ್ಮ ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗದಂತೆ ತಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್‌

ಮೊದಲಿಗೆ ನೀವು ನಿಮ್ಮ ಫೇಸ್‌ಬುಕ್‌ ಹ್ಯಾಕ್‌ ಆಗಿದೆಯಾ ಅನ್ನೊದನ್ನ ತಿಳಿದುಕೊಳ್ಳಬೇಕು. ನಿಮ್ಮ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌ ಆಗಿದ್ದರೆ ನಿಮ್ಮ ಇಮೇಲ್ ಅಥವಾ ಪಾಸ್‌ವರ್ಡ್ ಬದಲಾಗಿರುತ್ತದೆ. ಅಲ್ಲದೆ ನಿಮಗೆ ಪರಿಚಯವಿಲ್ಲದ ಜನರಿಗೆ ಫ್ರೆಂಡ್ಸ್‌ ರಿಕ್ವೆಸ್ಟ್‌ ಸೆಂಡ್‌ ಆಗಿರುತ್ತದೆ. ಅಲ್ಲದೆ ನೀವು ಬರೆಯದ ಸಂದೇಶಗಳು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಆಗಿದ್ದರೆ ನಿಮ್ಮ ಅಕೌಂಟ್‌ ಹ್ಯಾಕ್‌ ಆಗಿದೆ ಅನ್ನೊದು ಪಕ್ಕಾ ಆಗಿರುತ್ತದೆ. ಇಂತಹ ಸಮಯದಲ್ಲಿ ನೀವು ನಿಮ್ಮ ಪಾಸ್‌ವರ್ಡ್‌ ಬದಲಾಯಿಸುವ ಕೆಲಸ ಮಾಡಬೇಕು.

ಫೇಸ್‌ಬುಕ್‌ನಲ್ಲಿ ಪಾಸ್‌ವರ್ಡ್‌ ಬದಲಾಯಿಸುವುದು ಹೇಗೆ?

ಫೇಸ್‌ಬುಕ್‌ನಲ್ಲಿ ಪಾಸ್‌ವರ್ಡ್‌ ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ ಫೇಸ್‌ಬುಕ್‌ನಲ್ಲಿ "ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆ" ಗೆ ಹೋಗಿ.
ಹಂತ:2 ಪಾಸ್‌ವರ್ಡ್‌ ಮತ್ತು ಸೆಕ್ಯುರಿಟಿ ಆಯ್ಕೆಮಾಡಿ
ಹಂತ:3 ನಂತರ ಪಾಸ್‌ವರ್ಡ್‌ ಬದಲಾಯಿಸಿ ಕ್ಲಿಕ್ ಮಾಡಿ.

ಪಾಸ್‌ವರ್ಡ್‌

ಇನ್ನು ಪಾಸ್‌ವರ್ಡ್‌ ಮತ್ತು ಸೆಕ್ಯುರಿಟಿ ಪೇಜ್‌ನಲ್ಲಿ ಈಗಾಗಲೇ ಲಾಗ್‌ ಇನ್‌ ಆಗಿರುವ ಡಿವೈಸ್‌ಗಳ ಲಿಸ್ಟ್‌ ಅನ್ನು ಸಹ ನೀವು ಪರಿಶೀಲಿಸಬಹುದು. ಇದಕ್ಕಾಗಿ ನೀವು ಎಲ್ಲಿ ಲಾಗ್ ಇನ್ ಆಗಿದ್ದೀರಿ ಎಂಬ ಶೀರ್ಷಿಕೆಯ ಪಟ್ಟಿಯ ಮೇಲೆ ಕ್ಲಿಕ್ ಮಾಡಿ. ನಿಮಗೆ ಸಂಬಂಧಿಸದ ಡಿವೈಸ್‌ ಲಾಗ್‌ ಇನ್‌ ಆಗಿದೆ ಅನ್ನೊದು ಕಂಡುಬಂದರೆ, ತಕ್ಷಣ ನಿಮ್ಮ ಖಾತೆಯನ್ನು ಆ ಸಿಸ್ಟಮ್‌ನಿಂದ ರಿಮೂವ್‌ ಮಾಡಿರಿ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ

* ಅನುಮಾನಾಸ್ಪದ ಲಾಗ್ ಇನ್ ಕ್ಲಿಕ್ ಮಾಡಿ
* ಸುರಕ್ಷಿತ ಖಾತೆಯನ್ನು ಆಯ್ಕೆಮಾಡಿ
* ನಂತರ ನಿಮ್ಮ ಖಾತೆಯನ್ನು ಸುರಕ್ಷಿತಗೊಳಿಸಲು ನೀವು ಮುಂದುವರಿಯುತ್ತಿರುವಾಗ ಫೇಸ್‌ಬುಕ್ ತೋರಿಸುವ ಹಂತಗಳನ್ನು ಅನುಸರಿಸಿ.

ಫೇಸ್‌ಬುಕ್‌

ನಿಮ್ಮ ಫೇಸ್‌ಬುಕ್‌ ಅಕೌಂಟ್‌ನಿಂದ ಹ್ಯಾಕರ್ ನಿಮ್ಮನ್ನು ಲಾಗ್ ಔಟ್ ಮಾಡಿದ್ದರೆ, Facebook.com/ hacked ಗೆ ಹೋಗಿ. ನಿಮ್ಮ Facebook ಖಾತೆಗೆ ಲಿಂಕ್ ಮಾಡಲಾದ ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ನೀವು ನಮೂದಿಸಿದ ಸಂಖ್ಯೆಯು ನಿಮ್ಮ ನೋಂದಾಯಿತ ಸಂಖ್ಯೆಯೊಂದಿಗೆ ಹೊಂದಾಣಿಕೆಯಾದರೆ, ನಿಮ್ಮ Facebook ಖಾತೆಗೆ ಪ್ರವೇಶವನ್ನು ಮರಳಿ ಪಡೆಯಲು ಫೇಸ್‌ಬುಕ್‌ ನಿಮಗೆ ಸಹಾಯ ಮಾಡಲಿದೆ.

ಕೆಲವೊಮ್ಮೆ

ಇದಲ್ಲದೆ ಕೆಲವೊಮ್ಮೆ ಥರ್ಡ್‌ ಪಾರ್ಟಿ ಬದಲಿಗೆ ದೋಷಪೂರಿತ ಅಪ್ಲಿಕೇಶನ್‌ಗಳು ಕೂಡ ನಿಮ್ಮ ಫೇಸ್‌ಬುಕ್‌ ಖಾತೆಯನ್ನು ಹ್ಯಾಕ್ ಮಾಡುವ ಸಂಭವ ಇರುತ್ತದೆ. ಈ ದೋಷಪೂರಿತ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವುದಕ್ಕಾಗಿ ನೀವು ಹೋಮ್ > ಅಕೌಂಟ್ ಸೆಟ್ಟಿಂಗ್ಸ್>ಅಪ್ಲಿಕೇಶನ್ ಮತ್ತು ರಿಮೂವ್ ಮಾಡಬೇಕೆಂದಿರುವ ಅಪ್ಲಿಕೇಶನ್ ಕ್ಲಿಕ್ ಮಾಡಬೇಕಾಗುತ್ತದೆ.

Best Mobiles in India

English summary
The only way someone can get access to a Facebook account is by guessing your password.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X