ವಾಟ್ಸಾಪ್‌ನ ಫೋನ್‌ಗಳು ಡಿಲೀಟ್‌ ಆಗಿವೆಯಾ? ಚಿಂತೆ ಬಿಡಿ ಮರಳಿ ಪಡೆಯಲು ಹೀಗೆ ಮಾಡಿ!

|

ವಾಟ್ಸಾಪ್‌ ಕೇವಲ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಮಾತ್ರವಲ್ಲದೆ ಅಗತ್ಯದ ಆ್ಯಪ್‌ಗಳಾಗಿ ಗುರುತಿಸಿಕೊಂಡಿದೆ. ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ತಮ್ಮ ಸಂವಹನಕ್ಕಾಗಿ ವಾಟ್ಸಾಪ್‌ ಅನ್ನು ಬಳಸುತ್ತಾರೆ. ಇನ್ನು ವಾಟ್ಸಾಪ್‌ನಲ್ಲಿ ಪ್ರತಿನಿತ್ಯವೂ ನೂರಾರು ಫೋಟೋಗಳು, ವೀಡಿಯೋ ಕ್ಲಿಪ್‌ ಮತ್ತು ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಕೆಲವೊಮ್ಮೆ ಆಕಸ್ಮಿಕವಾಗಿ ನಿಮ್ಮ ಫೋಟೋ, ವೀಡಿಯೋಗಳ ಡಿಲೀಟ್‌ ಆಗಿ ಹೋದರೆ ಆಗುವ ಬೇಸರ ಅಷ್ಟಿಷ್ಟಲ್ಲ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಫೋಟೋ ಮತ್ತು ವೀಡಿಯೋಗಳು ಡಿಲೀಟ್‌ ಆದಾಗ ಬೇಸರವಾಗುವುದು ಸಾಮಾನ್ಯ. ಅಷ್ಟೇ ಅಲ್ಲ ಅದನ್ನು ರಿಕವರಿ ಮಾಡಿಕೊಳ್ಳುವುದಕ್ಕಾಗಿ ಪರದಾಡುವುದು ಕೂಡ ಉಂಟೂ. ಆದರೆ ವಾಟ್ಸಾಪ್‌ನಲ್ಲಿ ಫೋಟೋ ಮತ್ತು ವೀಡಿಯೋ ಡಿಲೀಟ್‌ ಆದರೆ ಅದನ್ನು ಮರಳಿ ಪಡೆಯುವುದು ಹೇಗೆ ಅನ್ನೊದು ಕೆಲವರಿಗೆ ತಿಳಿದಿಲ್ಲ. ಆದರಿಂದ ವಾಟ್ಸಾಪ್‌ನಲ್ಲಿ ಡಿಲೀಟ್‌ ಆದ ಫೋಟೋ ಮತ್ತು ವೀಡಿಯೋಗಳನ್ನು ಮರಳಿಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌ ಫೋಟೋಗಳನ್ನು ಫೋನ್‌ ಗ್ಯಾಲರಿಯಲ್ಲಿ ಸೇವ್‌ ಮಾಡಿ!

ವಾಟ್ಸಾಪ್‌ ಫೋಟೋಗಳನ್ನು ಫೋನ್‌ ಗ್ಯಾಲರಿಯಲ್ಲಿ ಸೇವ್‌ ಮಾಡಿ!

ವಾಟ್ಸಾಪ್‌ನಲ್ಲಿ ಬರುವ ಫೋಟೋಗಳು ಮತ್ತು ವೀಡಿಯೋಗಳು ಸಾಮಾನ್ಯವಾಗಿ ಫೋನ್‌ ಗ್ಯಾಲರಿಯಲ್ಲಿ ಸೇವ್‌ ಆಗಲಿವೆ. ಆದರೆ ಕೆಲವರು ವಾಟ್ಸಾಫ್‌ ಮೀಡಿಯಾ ಗ್ಯಾಲರಿಯಲ್ಲಿ ಸೇವ್‌ ಆಗದಂತೆ ಆಯ್ಕೆ ಮಾಡಿರುತ್ತಾರೆ. ಆದರಿಂದ ನೀವು ವಾಟ್ಸಾಪ್‌ ಮೀಡಿಯಾ ಫೋನ್‌ ಗ್ಯಾಲರಿಯಲ್ಲಿ ಸೇವ್‌ ಆಗುವ ಆಯ್ಕೆ ಸೆಟ್‌ ಮಾಡಿದ್ದರೆ ಎಲ್ಲಾ ಫೋಟೋಗಳು ಗ್ಯಾಲರಿಯಲ್ಲಿರುತ್ತವೆ. ಇಂತಹ ಸನ್ನಿವೇಶದಲ್ಲಿ ವಾಟ್ಸಾಪ್‌ನಲ್ಲಿರುವ ಫೋಟೋ ವೀಡಿಯೋಗಳಿರುವ ಚಾಟ್‌ ಡಿಲೀಟ್‌ ಆಗಿದ್ದರು ಗ್ಯಾಲರಿಯಲ್ಲಿರುತ್ತದೆ.

ಗೂಗಲ್‌ ಡ್ರೈವ್‌ನಲ್ಲಿ ಬ್ಯಾಕ್‌ಅಪ್‌ ಮಾಡಿ?

ಗೂಗಲ್‌ ಡ್ರೈವ್‌ನಲ್ಲಿ ಬ್ಯಾಕ್‌ಅಪ್‌ ಮಾಡಿ?

ಇನ್ನು ವಾಟ್ಸಾಪ್‌ ಚಾಟ್‌ಗಳನ್ನು ಡಿಲಿಟ್‌ ಮಾಡಿದ್ದರೂ ನಿಮ್ಮ ಫೋಟೋ ಮತ್ತು ವೀಡಿಯೋ ನಿಮಗೆ ಸಿಗಬೇಕಾದರೆ ವಾಟ್ಸಾಪ್‌ ಚಾಟ್‌ ಮತ್ತು ಮೀಡಿಯಾವನ್ನು ಗೂಗಲ್‌ ಡ್ರೈವ್‌ನಲ್ಲಿ ಬ್ಯಾಕ್‌ಅಪ್‌ ಮಾಡುವುದು ಉತ್ತಮ. ದೈನಂದಿನ ಬ್ಯಾಕಪ್ ನಂತರ ಮೀಡಿಯಾವನ್ನು ನೀವು ಡಿಲೀಟ್‌ ಮಾಡಿದ್ದರೆ, ನಿಮ್ಮ ಗೂಗಲ್‌ ಡ್ರೈವ್‌ನಲ್ಲಿ ಎಲ್ಲವೂ ಸ್ಟೋರೇಜ್‌ ಆಗಿರುತ್ತದೆ. ಗೂಗಲ್‌ ಡ್ರೈವ್‌ನಲ್ಲಿರುವ ನಿಮ್ಮ ಮೀಡಿಯಾವನ್ನು ರಿಕವರಿ ಮಾಡಲು ಈ ಕೆಳಗಿನ ನಿಯಮಗಳನ್ನು ಅನುಸರಿಸಿ.
* ಮೊದಲಿಗೆ ನಿಮ್ಮ ಡಿವೈಸ್‌ನಲ್ಲಿ ವಾಟ್ಸಾಪ್‌ ಅನ್‌ ಇನ್‌ಸ್ಟಾಲ್‌ ಮಾಡಿ ಮತ್ತು ರಿ ಇನ್‌ಸ್ಟಾಲ್‌ ಮಾಡಿ.
* ನಿಮ್ಮ ಫೋನ್ ಸಂಖ್ಯೆಯೊಂದಿಗೆ ವಾಟ್ಸಾಪ್‌ ಸೆಟಪ್ ಮಾಡಿ.
* ಇದೀಗ ವಾಟ್ಸಾಪ್‌ ಬ್ಯಾಕಪ್‌ನಿಂದ ಡೇಟಾವನ್ನು ರಿಸ್ಟೋರ್‌ ಮಾಡಲು ಕೇಳಿದಾಗ ಅದನ್ನು ಅಕ್ಸೆಪ್ಟ್‌ ಮಾಡಿ.
* ಸೆಟ್‌ಅಪ್‌ ಪೂರ್ಣಗೊಂಡ ನಂತರ ಡ್ರೈವ್‌ನಲ್ಲಿರುವ ಎಲ್ಲಾ ಮೀಡಿಯಾ ಹಾಗೂ ಚಾಟ್‌ಗಳು ವಾಟ್ಸಾಪ್‌ನಲ್ಲಿ ರಿಕವರಿ ಆಗಲಿದೆ.

ವಾಟ್ಸಾಪ್‌ ಮೀಡಿಯಾ ಫೋಲ್ಡರ್‌ ಚೆಕ್‌ ಮಾಡಿ!

ವಾಟ್ಸಾಪ್‌ ಮೀಡಿಯಾ ಫೋಲ್ಡರ್‌ ಚೆಕ್‌ ಮಾಡಿ!

ವಾಟ್ಸಾಪ್‌ನಲ್ಲಿ ಮೀಡಿಯಾ ಫೋಲ್ಡರ್‌ನಿಂದ ವಾಟ್ಸಾಪ್‌ ಮೀಡಿಯಾವನ್ನು ರಿಸ್ಟೋರ್‌ ಮಾಡುವ ಆಯ್ಕೆಯು ಕೇವಲ ಆಂಡ್ರಾಯ್ಡ್‌ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಆದರಿಂದ ಆಂಡ್ರಾಯ್ಡ್‌ ಬಳಕೆದಾರರು ವಾಟ್ಸಾಪ್‌ ಮೀಡಿಯಾ ಫೋಲ್ಡರ್‌ ಚೆಕ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ.
* ಮೊದಲಿಗೆ ಫೈಲ್ ಎಕ್ಸ್‌ಪ್ಲೋರರ್ ಅಪ್ಲಿಕೇಶನ್ ತೆರೆಯಿರಿ.
* ಇದೀಗ ರೂಟ್ ಡೈರೆಕ್ಟರಿಯಲ್ಲಿ ವಾಟ್ಸಾಪ್‌ ಫೋಲ್ಡರ್‌ಗೆ ಹೋಗಿ.
* ನಂತರ ಮೀಡಿಯಾ ಫೋಲ್ಡರ್ ಮತ್ತು ವಾಟ್ಸಾಪ್ ಇಮೇಜ್ ಫೋಲ್ಡರ್‌ಗೆ ಹೋಗಿ.
* ಈ ಫೋಲ್ಡರ್‌ನಲ್ಲಿ ನೀವು ಸ್ವೀಕರಿಸಿದ ಎಲ್ಲಾ ಚಿತ್ರಗಳನ್ನು ಕಾಣಬಹುದು.
* ಸೆಂಡ್‌ ಫೋಲ್ಡರ್‌ಗೆ ಹೋಗಿ ಮತ್ತು ಅಲ್ಲಿ ಡಿಲೀಟ್‌ ಮಾಡಲಾದ ಫೋಟೋಗಳನ್ನು ನೋಡಬಹುದು.

ಗ್ಯಾಲರಿಯಲ್ಲಿ ಮಾತ್ರ ಫೋಟೋ ಡಿಲೀಟ್‌ ಮಾಡಿ!

ಗ್ಯಾಲರಿಯಲ್ಲಿ ಮಾತ್ರ ಫೋಟೋ ಡಿಲೀಟ್‌ ಮಾಡಿ!

ನಿಮ್ಮ ಫೋನ್‌ ಗ್ಯಾಲರಿಯಲ್ಲಿ ಫೋಟೋ ಡಿಲೀಟ್‌ ಆದರು ವಾಟ್ಸಾಪ್‌ ಚಾಟ್‌ನಲ್ಲಿ ಅದು ಉಳಿಯುವಂತೆ ಮಾಡುವುದಕ್ಕೆ ನಿಮಗೆ ಅವಕಾಶವಿದೆ. ಇದಕ್ಕಾಗಿ ಈ ಕ್ರಮಗಳನ್ನು ಅನುಸರಿಸಿ
* ಮೊದಲಿಗೆ ವಾಟ್ಸಾಪ್‌ನಲ್ಲಿ ಯಾವುದೇ ಚಾಟ್‌ ತೆರೆಯಿರಿ.
* ಮೀಡಿಯಾವನ್ನು ಆಯ್ಕೆಮಾಡಿ ಮತ್ತು ಡಿಲೀಟ್‌ ಐಕಾನ್ ಮೇಲೆ ಟ್ಯಾಪ್ ಮಾಡಿ.
* ಇದೀಗ ವಾಟ್ಸಾಪ್‌ ನಿಮ್ಮ ಬಳಿ 4 ಆಯ್ಕೆಗಳನ್ನು ಕೇಳುತ್ತದೆ
1. ಈ ಚಾಟ್‌ನಲ್ಲಿ ಸ್ವೀಕರಿಸಿದ ಮೀಡಿಯಾವನ್ನು ಡಿವೈಸ್‌ ಗ್ಯಾಲರಿಯಿಂದ ಸಹ ಅಳಿಸಿ.
2. ಡಿಲೀಟ್‌ ಫಾರ್‌ ಎವರಿವನ್‌
3. ಡಿಲೀಟ್‌ ಫಾರ್‌ ಮಿ
4. ಕ್ಯಾನ್ಸಲ್‌

ಈ ನಾಲ್ಕು ಆಯ್ಕೆಗಳಲ್ಲಿ ನಿಮ್ಮ ಫೋನ್ ಗ್ಯಾಲರಿಯಿಂದ ಮೀಡಿಯಾವನ್ನು ಡಿಲೀಟ್‌ ಆಗುವುದನ್ನು ತಪ್ಪಿಸಬೇಕಾದರೆ ಮೊದಲ ಆಯ್ಕೆಯನ್ನು ಗುರುತಿಸಬೇಡಿ.

Best Mobiles in India

English summary
How To recover deleted photos and videos on WhatsApp?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X