ವಾಟ್ಸಾಪ್‌ ಮೂಲಕ ಇಂಡಿಪೆಂಡೆನ್ಸ್‌ ಡೇ 2022 ಸ್ಟಿಕ್ಕರ್‌ಗಳನ್ನು ಶೇರ್‌ ಮಾಡುವುದು ಹೇಗೆ?

|

ಇಂದು ಇಡೀ ದೇಶವೇ ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಮುಳುಗಿದೆ. ಈ ಸಂಭ್ರಮದ ಅಂಗವಾಗಿ ದೇಶವಾಸಿಗಳು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಇದರಲ್ಲಿ ವಾಟ್ಸಾಪ್‌ ಸ್ಟಿಕ್ಕರ್‌ಗಳ ಮೂಲಕ ಶುಭಾಶಯ ಶೇರ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್‌ ಆಗಿದೆ. ಇದಕ್ಕೆ ತಕ್ಕಂತೆ ವಾಟ್ಸಾಪ್‌ ಕೂಡ ವಿಶೇಷ ದಿನಗಳಲ್ಲಿ ವಿಶೇಷ ಸ್ಟಿಕ್ಕರ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಅದರಂತೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಶೇಷ ಸ್ಟಿಕ್ಕರ್‌ಗಳನ್ನು ಪರಿಚಯಿಸಿದೆ.

ಇಂಡಿಪೆಂಡೆನ್ಸ್‌

ಹೌದು, ವಾಟ್ಸಾಪ್‌ನಲ್ಲಿ ಇಂಡಿಪೆಂಡೆನ್ಸ್‌ ಡೇ ಸ್ಟಿಕ್ಕರ್‌ಗಳನ್ನು ನೀವು ವಿನಿಮಯ ಮಾಡಿಕೊಳ್ಳಬಹುದಾಗಿದೆ.ವಾಟ್ಸಾಪ್‌ನಲ್ಲಿ ನಿಮ್ಮ ಸ್ನೇಹಿತರಿಗೆ ಶುಭಾಶಯಗಳನ್ನು ಕಳುಹಿಸಲು ನೀವು ಕೆಲವು ಉತ್ತಮ ಅನಿಮೇಟೆಡ್ ಅಥವಾ ಸಾಮಾನ್ಯ ಸ್ಟಿಕ್ಕರ್ ಪ್ಯಾಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹಾಗಾದ್ರೆ ವಾಟ್ಸಾಪ್‌ ಮೂಲಕ ಇಂಡಿಪೆಂಡೆನ್ಸ್‌ ಡೇ ಸ್ಟಿಕ್ಕರ್‌ಗಳನ್ನು ಶೇರ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ ಮೂಲಕ ಇಂಡಿಪೆಂಡೆನ್ಸ್‌ ಡೇ 2022 ಸ್ಟಿಕ್ಕರ್‌ಗಳನ್ನು ಶೇರ್‌ ಮಾಡುವುದು ಹೇಗೆ?

ವಾಟ್ಸಾಪ್‌ ಮೂಲಕ ಇಂಡಿಪೆಂಡೆನ್ಸ್‌ ಡೇ 2022 ಸ್ಟಿಕ್ಕರ್‌ಗಳನ್ನು ಶೇರ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ "Sticker.ly" ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ
ಹಂತ:2 ನಂತರ ಅದನ್ನು ತೆರೆಯಿರಿ ಮತ್ತು ಪರದೆಯ ಮೇಲ್ಭಾಗದಲ್ಲಿ ನೀವು ಸ್ವಾತಂತ್ರ್ಯ ದಿನದ ಸ್ಟಿಕ್ಕರ್ ಪ್ಯಾಕ್‌ಗಳನ್ನು ಕಾಣಬಹುದು.
ಹಂತ:3 ಇದರಲ್ಲಿ ನಿಮಗೆ ಬೇಕೆನಿಸುವ ವಾಟ್ಸಾಪ್‌ ಸ್ಟಿಕ್ಕರ್ ಪ್ಯಾಕ್ ಅನ್ನು ಟ್ಯಾಪ್ ಮಾಡಿರಿ.
ಹಂತ:4 ಇದೀಗ ನಿಮ್ಮ ಆಯ್ಕೆಯ ಸ್ಟಿಕ್ಕರ್‌ ಪ್ಯಾಖ್‌ ಅನ್ನು ವಾಟ್ಸಾಪ್‌ಗೆ ಆಡ್‌ ಮಾಡಿರಿ.
ಹಂತ:5 ಸ್ಟಿಕ್ಕರ್‌ ಅಪ್ಲಿಕೇಶನ್ ವಾಟ್ಸಾಪ್‌ ಐಕಾನ್ ಅನ್ನು ಪ್ರದರ್ಶಿಸುತ್ತದೆ, ಅದರ ಮೇಲೆ ಟ್ಯಾಪ್ ಮಾಡಿ ಮತ್ತು ನಂತರ ಮತ್ತೆ "ADD" ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ:6 ನಂತರ ನೀವು ನಿಮ್ಮ ವಾಟ್ಸಾಪ್‌ನಲ್ಲಿ ಇಂಡಿಪೆಂಡೆನ್ಸ್‌ ಡೇ ಸ್ಟಿಕ್ಕರ್‌ಗಳನ್ನು ಬಳಸಬಹುದಾಗಿದೆ.

ವಾಟ್ಸಾಪ್‌ನಲ್ಲಿ ಇಂಡಿಪೆಂಡೆನ್ಸ್‌ ಡೇ 2022 ಅನಿಮೇಟೆಡ್ ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಹೇಗೆ?

ವಾಟ್ಸಾಪ್‌ನಲ್ಲಿ ಇಂಡಿಪೆಂಡೆನ್ಸ್‌ ಡೇ 2022 ಅನಿಮೇಟೆಡ್ ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಹೇಗೆ?

ವಾಟ್ಸಾಪ್‌ನಲ್ಲಿ ನೀವು ಆನಿಮೇಟೆಡ್‌ ಸ್ಟಿಕ್ಕರ್‌ಗಳನ್ನು ಕೂಡ ಬಳಸಬಹುದು. ಆನಿಮೇಟೆಡ್‌ ಸ್ಟಿಕ್ಕರ್‌ಗಳ ಮೂಲಕವೂ ಇಂಡಿಪೆಂಡೆನ್ಸ್‌ ಡೇ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಬಹುದು. ನೀವು ವಾಟ್ಸಾಪ್‌ನಲ್ಲಿ ಸ್ಟಿಕ್ಕರ್‌ಗಳು, GIF ಗಳು ಮತ್ತು ಸ್ಟಿಕ್ಕರ್‌ಗಳನ್ನು ಕಾಣಬಹುದು.
ಹಂತ:1 ಮೊದಲಿಗೆ ನೀವು ವಾಟ್ಸಾಪ್‌ನಲ್ಲಿ ನಿಮ್ಮ ಸಂಪರ್ಕ ಚಾಟ್‌ ತೆರೆಯಿರಿ.
ಹಂತ:2 ಚಾಟ್‌ನ ಕೆಳಗಿನ ಎಡಭಾಗದಲ್ಲಿ ಎಮೋಜಿ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:3 ಇದರಲ್ಲಿ ನೀವು GIF ವಿಭಾಗವನ್ನು ಕಾಣಬಹುದು. ಅದರ ಮೇಲೆ ಟ್ಯಾಪ್ ಮಾಡಿ.
ಹಂತ:4 ಇದೀಗ ನೀವು ಸರ್ಚ್‌ ಬಟನ್ ಮೇಲೆ ಟ್ಯಾಪ್‌ ಮಾಡಿ.
ಹಂತ:5 ಇದರಲ್ಲಿಇಂಡಿಪೆಂಡೆನ್ಸ್‌ ಡೇ ಎಂದು ಟ್ಯಾಪ್‌ ಮಾಡಿ
ಹಂತ:6 ಇದೀಗ ಇಂಡಿಪೆಂಡೆನ್ಸ್‌ ಡೇ ಗೆ ಸಂಬಂಧಿಸಿದ ಅನಿಮೇಟೆಡ್ ಸ್ಟಿಕ್ಕರ್‌ ಪ್ಯಾಕ್‌ಗಳನ್ನು ಕಾಣಬಹುದು.
ಹಂತ:7 ಇದರಲ್ಲಿ ನಿಮ್ಮ ಆಯ್ಕೆಯ ಸ್ಟಿಕ್ಕರ್‌ ಅನ್ನು ಆಯ್ಕೆ ಮಾಡುವ ಮೂಲಕ ಶೇರ್‌ ಮಾಡಬಹುದು.

ಬಳಕೆದಾರರು ಆಪ್‌ ಡೌನ್‌ಲೋಡ್ ಮಾಡುವಾಗ ಈ ಸುರಕ್ಷತಾ ಕ್ರಮಗಳನ್ನು ಅನುಸರಿಸಿ:

ಬಳಕೆದಾರರು ಆಪ್‌ ಡೌನ್‌ಲೋಡ್ ಮಾಡುವಾಗ ಈ ಸುರಕ್ಷತಾ ಕ್ರಮಗಳನ್ನು ಅನುಸರಿಸಿ:

ಸುರಕ್ಷಿತ/ ಸುರಕ್ಷಿತ ಚಾಟ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಸಲಹೆಗಳ ಬಗ್ಗೆ ಯಾವಾಗಲೂ ಜಾಗರೂಕರಾಗಿರಿ ಮತ್ತು ನೀವು ಒಂದನ್ನು ಡೌನ್‌ಲೋಡ್ ಮಾಡಲು ಹೊರಟಿರುವಾಗ, ಮೂರನೇ ವ್ಯಕ್ತಿಯ ಸೈಟ್‌ಗಿಂತ ಅಧಿಕೃತ (Google Play Store) ಗೂಗಲ್‌ ಪ್ಲೇ ಸ್ಟೋರ್‌ ಅನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಸಾಧನದಲ್ಲಿ ಹೊಸ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡುವಾಗ, ವಿನಂತಿಸಿದ ಅನುಮತಿಗಳಿಗೆ ಗಮನ ಕೊಡಿ ಮತ್ತು ಹಿನ್ನೆಲೆಯಲ್ಲಿ ಚಾಲನೆಯಲ್ಲಿರುವ ಯಾವುದೇ ಪ್ರಕ್ರಿಯೆಗಳನ್ನು ಬಹಿರಂಗಪಡಿಸಲು ಬ್ಯಾಟರಿ ಮತ್ತು ಇಂಟರ್ನೆಟ್ ಡೇಟಾ ಬಳಕೆಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.

Best Mobiles in India

English summary
One can send Independence Day wishes to their friends on WhatsApp using stickers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X