ಆಂಡ್ರಾಯ್ಡ್‌, ಐಫೋನ್‌ನಲ್ಲಿ ಗೂಗಲ್‌ ಆಕ್ಟಿವಿಟಿ ಆಟೋ-ಡಿಲೀಟ್‌ ಆಯ್ಕೆಯ ಬಳಕೆ ಹೇಗೆ?

|

ಸ್ಮಾರ್ಟ್‌ಫೋನ್‌ ಈಗಂತೂ ಎಲ್ಲರ ಬಳಿ ಇದೆ. ಈ ಫೋನ್‌ ಮೂಲಕ ಕರೆ ಮಾಡಬಹುದು, ಚಾಟಿಂಗ್ ಮಾಡಬಹುದು. ಇದೆಲ್ಲಾ ಸಾಮಾನ್ಯ ವಿಷಯ. ಆದರೆ, ಸ್ಮಾರ್ಟ್‌ಫೋನ್‌ನಲ್ಲಿ ನಾವು ಏನಾದರೂ ಮಾಹಿತಿ ಪಡೆಯಬೇಕು ಎಂದರೆ ಸರ್ಚ್‌ ಇಂಜಿನ್‌ ಕಡೆ ಮುಖ ಮಾಡುತ್ತೇವೆ, ಅದರಲ್ಲಿ ಹಲವಾರು ಮಾಹಿತಿಯನ್ನೂ ಪಡೆಯುತ್ತೇವೆ. ಇದರ ಜೊತೆಗೆ ಸರ್ಚ್ ಮಾಡಲಾದ ವಿಷಯಗಳನ್ನು ಆಟೋಮ್ಯಾಟಿಕ್‌ ಆಗಿ ಡಿಲೀಟ್ ಮಾಡುವುದು ಹೇಗೆ ಎಂಬುದು ನಿಮಗೆ ಗೊತ್ತಾ?

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ನಲ್ಲಿ ಸರ್ಚ್‌ ಹಿಸ್ಟರಿಯನ್ನು ಡಿಲೀಟ್ ಮಾಡುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ಸರ್ಚ್‌ ಮಾಡಲಾದ ವಿಷಯಗಳು ಆಟೋಮ್ಯಾಟಿಕ್‌ ಆಗಿ ಡಿಲೀಟ್ ಆಗುವ ಫೀಚರ್ಸ್‌ ಬಗ್ಗೆ ನಿಮಗೆ ಗೊತ್ತಿದೆಯೇ?. ಕೆಲವು ಜನರಿಗೆ ಈ ವಿಷಯ ಗೊತ್ತಿಲ್ಲದಿರಬಹುದು. ಈ ಕಾರಣಕ್ಕಾಗಿಯೇ ಸರ್ಚ್ ಮಾಡಲಾದ ಕಂಟೆಂಟ್‌ ಆಟೋಮ್ಯಾಟಿಕ್‌ ಆಗಿ ನಿಮ್ಮ ಆಂಡ್ರಾಯ್ಡ್‌ ಹಾಗೂ ಐಫೋನ್ ನಲ್ಲಿ ಹೇಗೆ ಅಳಿಸಬಹುದು ಬಗ್ಗೆ ವಿವರಿಸಲಾಗಿದೆ ಈ ಲೇಖನ ಓದಿ.

ಸ್ವಯಂಚಾಲಿತವಾಗಿ ಅಳಿಸಬಹುದೇ?

ಸ್ವಯಂಚಾಲಿತವಾಗಿ ಅಳಿಸಬಹುದೇ?

ಹೌದು, ನೀವು ಗೂಗಲ್‌ ಸರ್ಚ್‌ ಇಂಜಿನ್‌ನಲ್ಲಿ ಏನೇ ಹುಡುಕಾಡಿದರೂ ಆ ವಿಷಯವನ್ನು ಸ್ವಯಂಚಾಲಿತವಾಗಿ ಅಳಿಸಿಹಾಕುವ ಆಯ್ಕೆಯನ್ನು ನೀಡಲಾಗಿದೆ. ಆದರೆ, ಇದಕ್ಕೆ ನೀವು ನಿಮ್ಮ ಫೋನ್‌ ಮೂಲಕ ಸೆಟ್ಟಿಂಗ್‌ನಲ್ಲಿ ಕೆಲವು ಬದಲಾವಣೆ ಮಾಡಬೇಕಿದೆ. ಇದರಲ್ಲಿ 'ಆಟೋ ಡಿಲೀಟ್' ಆಯ್ಕೆಯನ್ನು 'ಆನ್‌' ಮಾಡಿದರೆ ಆಟೋಮ್ಯಾಟಿಕ್‌ ಆಗಿ ಡಿಲೀಟ್‌ ಆಗುತ್ತವೆ. ಹಾಗೆಯೇ ಬೇಡ ಹಾಗೆಯೇ ಇರಲಿ ಎಂದರೆ ಆಟೋ ಡಿಲೀಟ್ ಆಯ್ಕೆಯಲ್ಲಿ 'ಆಫ್‌' ಎನ್ನುವ ಆಯ್ಕೆ ಮೇಲೆ ಟ್ಯಾಪ್‌ ಮಾಡಿದರೆ ಸಾಕು.

ಹಾಗಿದ್ರೆ, ಈ ಫೀಚರ್ಸ್‌ ಬಳಕೆ ಹೇಗೆ?

ಹಾಗಿದ್ರೆ, ಈ ಫೀಚರ್ಸ್‌ ಬಳಕೆ ಹೇಗೆ?

 • * ಮೊದಲು ನಿಮ್ಮ ಆಂಡ್ರಾಯ್ಡ್ ಡಿವೈಸ್ ಅಥವಾ ಐಫೋನ್‌ ನಲ್ಲಿ 'ಗೂಗಲ್‌ ಆಪ್‌' ಓಪನ್‌ ಮಾಡಿ
 • * ನಂತರ ನಿಮ್ಮ ಪ್ರೊಫೈಲ್ ಆಯ್ಕೆಯ ಮೇಲೆ ಟ್ಯಾಪ್ ಮಾಡಿ ಹಾಗೆಯೇ ಅಲ್ಲಿ ಪಾಪ್ ಅಪ್ ಆಗುವ ಮೆನುವಿನಿಂದ 'ಮ್ಯಾನೇಜ್‌ ಯುವರ್‌ ಗೂಗಲ್‌ ಅಕೌಂಟ್' ಮೇಲೆ ಟ್ಯಾಪ್‌ ಮಾಡಿ.
 • * ಬಳಿಕ 'ಡೇಟಾ ಹಾಗೂ ಪ್ರೈವೆಸಿ'ಯನ್ನು ಆಯ್ಕೆ ಮಾಡಿ
 • * ನಂತರದಲ್ಲಿ ಕಾಣಿಸಿಕೊಳ್ಳುವ 'ವೆಬ್ ಮತ್ತು ಆಪ್‌ ಆಕ್ಟಿವಿಟಿ' ಆಯ್ಕೆಯ ಮೇಲೆ ಟ್ಯಾಪ್‌ ಮಾಡಿ ಬಳಿಕ ಸ್ಕ್ರಾಲ್ ಮಾಡಿದರೆ ಅಲ್ಲಿ 'ಆಟೋ-ಡಿಲೀಟ್' ಆಯ್ಕೆ ನೀಡಲಾಗಿದೆ ಅದರ ಮೇಲೆ ಟ್ಯಾಪ್‌ ಮಾಡಿ.
 • * 'ಆಟೋ-ಡಿಲೀಟ್' ಮೇಲೆ ಟ್ಯಾಪ್‌ ಮಾಡಿದ ಮೇಲೆ ಯಾವ ಸಮಯದ ನಂತರ ಡಿಲೀಟ್ ಆಗಬೇಕು ಎಂಬ ವಿವರ ಇರುತ್ತದೆ. ಅದನ್ನು ಸೆಟ್‌ ಮಾಡಿ. ಇದರಲ್ಲಿ ಡೀಫಾಲ್ಟ್ ಸೆಟ್ಟಿಂಗ್ ಆಗಿ 18 ತಿಂಗಳುಗಳು ಇರುತ್ತದೆ. ಆದರೆ ನೀವು 3 ಮತ್ತು 36 ತಿಂಗಳುಗಳ ನಡುವಿನ ಸಮಯವನ್ನು ಆಯ್ಕೆ ಮಾಡಬಹುದು.
 • * ನಂತರ 'ಸೇವ್‌' ಬಟನ್‌ ಮೇಲೆ ಟ್ಯಾಪ್‌ ಮಾಡಿದರೆ ನೀವು ಮಾಡಿದ ಬದಲಾವಣೆ ಉಳಿದುಕೊಳ್ಳುತ್ತದೆ. ಬಳಿಕ ನಿರ್ದಿಷ್ಟ ಸಮಯದ ನಂತರ ಸರ್ಚ್ ಹಿಸ್ಟರಿ, ಬ್ರೌಸರ್ ಸೇರಿದಂತೆ ನಿಮ್ಮ ಎಲ್ಲಾ ಚಟುವಟಿಕೆಯನ್ನು ಗೂಗಲ್‌ನಿಂದ ಸ್ವಯಂಚಾಲಿತವಾಗಿ ಡಿಲೀಟ್‌ ಆಗುತ್ತವೆ.
 • ತಕ್ಷಣಕಕ್ಕೆ ಗೂಗಲ್ ಬ್ರೌಸರ್ ಹಿಸ್ಟರಿ ಡಿಲೀಟ್‌ ಮಾಡುವುದು ಹೇಗೆ?

  ತಕ್ಷಣಕಕ್ಕೆ ಗೂಗಲ್ ಬ್ರೌಸರ್ ಹಿಸ್ಟರಿ ಡಿಲೀಟ್‌ ಮಾಡುವುದು ಹೇಗೆ?

  ಮೇಲೆ ತಿಳಿಸಿದ ಆಯ್ಕೆಯ ಹೊರತಾಗಿಯೂ ತ್ವರಿತ ಆಯ್ಕೆಯ ಮೂಲಕವೂ ಈ ಕಾರ್ಯ ಮಾಡಬಹುದಾಗಿದೆ. ಒಮ್ಮೆ ಡಿಲೀಟ್‌ ಮಾಡಿದ ಮಾಹಿತಿಯನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಂಡು ನೀವು ಮುಂದುವರೆಯಬೇಕಿದೆ. ಇದಿಷ್ಟೇ ಅಲ್ಲದೆ ಎಷ್ಟು ದಿನದಲ್ಲಿ ಡಿಲೀಟ್ ಆಗಬೇಕು ಎಂಬ ಆಯ್ಕೆಯನ್ನೂ ನೀವು ಸೆಟ್‌ ಮಾಡಬಹುದು, ಇದಕ್ಕಾಗಿ ಈ ಹಂತಗಳನ್ನು ಗಮನಿಸಿ.

  ಹಂತ 1

  ಹಂತ 1

  ನಿಮ್ಮ ಆಂಡ್ರಾಯ್ಡ್‌ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ 'ಗೂಗಲ್‌ ಆಪ್‌' ಓಪನ್‌ ಮಾಡಿ, ನಂತರ ಮೇಲಿನ ಬಲ ಭಾಗದಲ್ಲಿ ನಿಮ್ಮ ಪ್ರೊಫೈಲ್ ಚಿತ್ರ ಕಾಣಿಸುತ್ತದೆ ಅದರ ಮೇಲೆ ಟ್ಯಾಪ್‌ಮಾಡಿ. ಹಾಗೆಯೆ 'ಸರ್ಚ್‌ ಹಿಸ್ಟರಿ' ಆಯ್ಕೆಯನ್ನು ಗಮನಿಸಿ.

  ಹಂತ 2

  ಹಂತ 2

  ಸರ್ಚ್‌ ಹಿಸ್ಟರಿಯಲ್ಲಿ ನಿರ್ಧಿಷ್ಟವಾಗಿ ಏನನ್ನು ಡಿಲೀಟ್ ಮಾಡಬೇಕು ಎಂದುಕೊಂಡಿದ್ದೀರೋ ಅದನ್ನು ಆಯ್ಕೆ ಮಾಡಬಹುದಾಗಿದೆ. ಅಥವಾ ಎಲ್ಲವನ್ನೂ ಡಿಲೀಟ್‌ ಮಾಡಬೇಕು ಎಂದುಕೊಂಡಿದ್ದರೆ 'ಡಿಲೀಟ್‌ ಆಲ್ ಐಟಮ್ಸ್‌' ಎಂಬ ಆಯ್ಕೆ ಮೇಲೆ ಟ್ಯಾಪ್‌ ಮಾಡಿ.

  ಹಂತ 3

  ಹಂತ 3

  ಅದರಲ್ಲೂ ನಿರ್ದಿಷ್ಟ ಅವಧಿಯಲ್ಲಿ ಮಾಡಲಾದ ಚಟುವಟಿಕೆಯನ್ನು ಡಿಲೀಟ್ ಮಾಡಲು ಮುಂದಾದರೆ ಅದಕ್ಕೂ ಸಹ ಆಯ್ಕೆ ನೀಡಲಾಗಿದೆ. 'ಕಸ್ಟಮ್ ರೇಂಜ್‌' ಆಯ್ಕೆಯನ್ನು ಟ್ಯಾಪ್‌ ಮಾಡಿ, ಇದರಲ್ಲಿ ಯಾವ ದಿನದ ಹಿಸ್ಟರಿಯನ್ನು ತೆಗೆದುಹಾಕಬೇಕೋ ಅದನ್ನು ಆರಿಸಿ ಡಿಲೀಟ್‌ ಮಾಡಿ.

Best Mobiles in India

English summary
Several features in the smartphone have caught the attention of consumers. Similarly, Google has also allowed to delete Google activity automatically.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X