ಪಿಡಿಎಫ್‌ ಡಾಕ್ಯುಮೆಂಟ್‌ನಲ್ಲಿ ಸಿಗ್ನೇಚರ್‌ ಕ್ರಿಯೆಟ್‌ ಮಾಡುವುದು ಹೇಗೆ?

|

ಇಂದಿನ ಡಿಜಿಟಲ್‌ ಜಮಾನದಲ್ಲಿ ಬಹುತೇಕ ಮಂದಿ ತಮ್ಮ ಡಾಕ್ಯುಮೆಂಟ್‌ಗಳನ್ನು ಪಿಡಿಎಫ್‌ ಫೈಲ್‌ ರೂಪದಲ್ಲಿಡಲು ಬಯಸುತ್ತಾರೆ. ಪಿಡಿಎಫ್‌ ಫೈಲ್‌ ರೂಪದಲ್ಲಿರುವ ಡಾಕ್ಯಮೆಂಟ್‌ಗಳನ್ನು ಆನ್‌ಲೈನ್‌ ಸ್ಟೋರೇಜ್‌ ಮಾಡುವುದರಿಂದ ಸಾಗಿಸುವುದು ಕೂಡ ಸುಲಭವಾಗಿದೆ. ಇನ್ನು ನಿಮ್ಮ ಪಿಡಿಎಫ್‌ ಫೈಲ್‌ಗಳನ್ನು ಬೇರೆಯವರು ನಕಲು ಮಾಡದಂತೆ ಮಾಡುವುದಕ್ಕೆ ಪಿಡಿಎಫ್‌ ಫೈಲ್‌ನಲ್ಲಿ ನಿಮ್ಮದೇ ಸಿಗ್ನೇಚರ್‌ ಅನ್ನು ಕೂಡ ಸೇರಿಸಬಹುದಾಗಿದೆ.

ಪಿಡಿಎಫ್‌ ಫೈಲ್‌

ಹೌದು, ಪಿಡಿಎಫ್‌ ಫೈಲ್‌ಗಳಲ್ಲಿ ಸಿಗ್ನೇಚರ್‌ ಕ್ರಿಯೆಟ್‌ ಮಾಡುವುದರಿಂದ ನಿಮ್ಮ ಫೈಲ್‌ಗಳನ್ನು ನಕಲು ಮಾಡಲು ಸಾಧ್ಯವಾಗುವುದಿಲ್ಲ. ಪಿಡಿಎಫ್‌ ಫೈಲ್‌ಗಳಲ್ಲಿ ಸಿಗ್ರೇಚರ್‌ ಮಾಡುವುದಕ್ಕೆ ವಿದ್ಯುನ್ಮಾನ ಸಹಿ ಬೇಕಾಗುತ್ತದೆ. ವಿದ್ಯುನ್ಮಾನವಾಗಿ ಮಾಡಿದ ಸಹಿ ನೀವು ಆನ್‌ಲೈನ್‌ನಲ್ಲಿ ಡಾಕ್ಯುಮೆಂಟ್‌ಗೆ ತ್ವರಿತವಾಗಿ ಸಹಿಮಾಡುವುದಕ್ಕೆ ಅವಕಾಶ ನೀಡಲಿದೆ. ಹಾಗಾದ್ರೆ PDF ಡಾಕ್ಯುಮೆಂಟ್‌ಗಳಿಗಾಗಿ ಸಿಗ್ನೇಚರ್‌ ಕ್ರಿಯೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

PDF ಡಾಕ್ಯುಮೆಂಟ್‌ನಲ್ಲಿ ಸಿಗ್ನೇಚರ್‌ ಕ್ರಿಯೆಟ್‌ ಮಾಡುವುದು ಹೇಗೆ?

PDF ಡಾಕ್ಯುಮೆಂಟ್‌ನಲ್ಲಿ ಸಿಗ್ನೇಚರ್‌ ಕ್ರಿಯೆಟ್‌ ಮಾಡುವುದು ಹೇಗೆ?

ಲ್ಯಾಪ್‌ಟಾಪ್‌ನಲ್ಲಿ ಪಿಡಿಎಫ್‌ ಡಾಕ್ಯುಮೆಂಟ್‌ಗಳಿಗೆ ಸಿಗ್ನೇಚರ್‌ ಮಾಡುವುದಕ್ಕೆ ಹಲವು ವಿಧಾನಗಳಿವೆ. ಇದರಲ್ಲಿ ಅಡೋಬ್‌ ಆಕ್ರೋಬಾಟ್‌ ರೀಡರ್‌ ಡಿಸಿ ಬಳಸಿಕೊಂಡು ಕೂಡ ಪಿಡಿಎಫ್‌ ಡಾಕ್ಯುಮೆಂಟ್‌ಗೆ ಸಿಗ್ನೇಚರ್‌ ಮಾಡಬಹುದಾಗಿದೆ ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ:1 ಮೊದಲಿಗೆ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಅಡೋಬ್ ಅಕ್ರೋಬ್ಯಾಟ್ ರೀಡರ್ ಡಿಸಿ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಿ.
ಹಂತ:2 ಡೌನ್‌ಲೋಡ್ ಮಾಡಿದ ನಂತರ, ಸಾಫ್ಟ್‌ವೇರ್ ಅನ್ನು ಇನ್‌ಸ್ಟಾಲ್‌ ಮಾಡಿರಿ ಮತ್ತು ತೆರೆಯಿರಿ.
ಹಂತ:3 ಈಗನೀವು ಅಪ್ಲಿಕೇಶನ್ ಅನ್ನು ತೆರೆದರೆ, ಡ್ಯಾಶ್‌ಬೋರ್ಡ್‌ ತೆರೆಯಲಿದೆ, ಇದರಲ್ಲಿ, ನೀವು ಭರ್ತಿ ಮಾಡಿ ಮತ್ತು ಸಿಗ್ನೇಚರ್‌ ಕ್ಲಿಕ್ ಮಾಡಿ.
ಹಂತ:4 ಇದೀಗ PDF ಅನ್ನು ಆಯ್ಕೆ ಮಾಡಿ.
ಹಂತ:5 ಸೈನ್ ಯುವರ್‌ಸೆಲ್ಫ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:6 ನಿಮ್ಮ ಸಿಗ್ನೇಚರ್‌ ಅನ್ನು ಸೇರಿಸಿ.
ಹಂತ:7 ಇದೀಗ ನೀವು ಆಡ್ ಸಿಗ್ನೇಚರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಇದರಲ್ಲಿ ಟೈಪ್ ಮಾಡುವ ಮೂಲಕ ನಿಮ್ಮ ಸಿಗ್ನೇಚರ್‌ ಅನ್ನು ಕ್ರಿಯೆಟ್‌ ಮಾಡಬಹುದು.
ಹಂತ:8 ನಿಮ್ಮ ಸಿಗ್ನೇಚರ್‌ ಅನ್ನು ಕ್ರಿಯೆಟ್‌ ಮಾಡಿದ ನಂತರ, ಸೇವ್ ಸೈನ್ ಒತ್ತಿರಿ ಮತ್ತು ನಂತರ ಅಪ್ಲೈ ಕ್ಲಿಕ್ ಮಾಡಿ.

ಈಗ, ನಿಮ್ಮ ಸಿಗ್ನೇಚರ್‌ ಅನ್ನು ಅಪ್ಲಿಕೇಶನ್‌ನಲ್ಲಿ ಸೇವ್‌ ಮಾಡಲಾಗುತ್ತದೆ. ನಂತರ ನೀವು ನಿಮ್ಮ ಯಾವುದೇ PDF ಡಾಕ್ಯುಮೆಂಟ್ ಅನ್ನು ತೆರೆದರೆ, ಈಗಾಗಲೇ ಸೇವ್‌ ಮಾಡಿದ ಸಿಗ್ನೇಚರ್‌ ಅನ್ನು ಸೇರಿಸಬಹುದು.

ಅಡೋಬ್ ಅಕ್ರೋಬ್ಯಾಟ್ ರೀಡರ್ DC ವೆಬ್‌ಸೈಟ್ ಅನ್ನು ಬಳಸುವುದು ಹೇಗೆ?

ಅಡೋಬ್ ಅಕ್ರೋಬ್ಯಾಟ್ ರೀಡರ್ DC ವೆಬ್‌ಸೈಟ್ ಅನ್ನು ಬಳಸುವುದು ಹೇಗೆ?

ಹಂತ:1 ಅಡೋಬ್ ಅಕ್ರೋಬ್ಯಾಟ್ ರೀಡರ್ ಡಿಸಿ ಆನ್‌ಲೈನ್ ಅಪ್ಲಿಕೇಶನ್ ತೆರೆಯಿರಿ.
ಹಂತ:2 ಫಿಲ್ & ಸೈನ್ ಅಡಿಯಲ್ಲಿ ಫೈಲ್ ಆಯ್ಕೆಮಾಡಿ ಕ್ಲಿಕ್ ಮಾಡಿ.
ಹಂತ:3 ನೀವು ಸಿಗ್ನೇಚರ್‌ ಮಾಡಲು ಬಯಸುವ PDF ಡಾಕ್ಯುಮೆಂಟ್ ಅನ್ನು ಆಯ್ಕೆ ಮಾಡಿ.
ಹಂತ:4 ನಂತರ ನೀವು ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ಮಾಡಿದಂತೆ, ಸೈನ್ ಯುವರ್‌ಸೆಲ್ಫ್ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:5 ಇದರಲ್ಲಿ ಸಿಗ್ನೇಚರ್‌ ಅನ್ನು ಸೇರಿಸಿ.

ಮೈಕ್ರೋಸಾಫ್ಟ್ ಎಡ್ಜ್ ನಲ್ಲಿ ಪಿಡಿಎಫ್‌ ಫೈಲ್‌ಗೆ ಸಿಗ್ನೇಚರ್‌ ಕ್ರಿಯೆಟ್‌ ಮಾಡುವುದು ಹೇಗೆ?

ಮೈಕ್ರೋಸಾಫ್ಟ್ ಎಡ್ಜ್ ನಲ್ಲಿ ಪಿಡಿಎಫ್‌ ಫೈಲ್‌ಗೆ ಸಿಗ್ನೇಚರ್‌ ಕ್ರಿಯೆಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನೀವು ಸಹಿ ಮಾಡಲು ಬಯಸುವ PDF ಫೈಲ್‌ ಸರ್ಚ್‌ ಮಾಡಿ ಮತ್ತು ಅದರ ಮೇಲೆ ರೈಟ್‌ ಕ್ಲಿಕ್ ಮಾಡಿ.
ಹಂತ:2 ಇದೀಗ, ಓಪನ್ ವಿತ್ > ಮೈಕ್ರೋಸಾಫ್ಟ್ ಎಡ್ಜ್ ಮೇಲೆ ಕ್ಲಿಕ್ ಮಾಡಿ.
ಹಂತ:3 ನಂತರ ನಿಮ್ಮ PDF ಡಾಕ್ಯುಮೆಂಟ್ ಅನ್ನು ಮೈಕ್ರೋಸಾಫ್ಟ್‌ ಎಡ್ಜ್‌ನಲ್ಲಿ ತೆರೆಯಲಾಗುತ್ತದೆ, ಇದಲ್ಲಿ Draw ಐಕಾನ್ ಮೇಲೆ ಕ್ಲಿಕ್ ಮಾಡಿ.
ಹಂತ:4 ಇದೀಗ ನಿಮ್ಮ ಸಿಗ್ನೇಚರ್‌ ಕ್ರಿಯೆಟ್‌ ಮಾಡಿ.

Best Mobiles in India

Read more about:
English summary
how to create a signature for PDF documents on a PC, so that you can easily sign on all sorts of PDF files.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X