Google Play ಮ್ಯೂಸಿಕ್‌ನಿಂದ ಡೇಟಾವನ್ನು ವರ್ಗಾಯಿಸುವುದು ಹೇಗೆ?

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಸೇವೆಗಳನ್ನು ಪರಿಚಯಿಸಿದೆ. ಇದರಲ್ಲಿ ಗೂಗಲ್‌ ಪ್ಲೇ ಮ್ಯೂಸಿಕ್‌ ಸೇವೆ ಕೂಡ ಒಂದಾಗಿತ್ತು. ಆದರೆ ಕೆಲ ತಿಂಗಳುಗಳ ಹಿಂದೆ ಗೂಗಲ್‌ ತನ್ನ ಗೂಗಲ್‌ ಮ್ಯೂಸಿಕ್‌ ಸೇವೆಯನ್ನು ನಿಲ್ಲಿಸಿದೆ. ಇದೀಗ ತನ್ನ ಬಳಕೆದಾರರಿಗೆ ಇ-ಮೇಲ್‌ನಲ್ಲಿ, ಗೂಗಲ್ ತಮ್ಮ ಎಲ್ಲಾ ಗೂಗಲ್ ಪ್ಲೇ ಮ್ಯೂಸಿಕ್ ಡೇಟಾವನ್ನು ಈ ತಿಂಗಳ ಕೊನೆಯಲ್ಲಿ ಡಿಲೀಟ್‌ ಮಾಡಲಾಗುವುದು ಎಂದು ತಿಳಿಸಿದೆ.

ಗೂಗಲ್‌ ಪ್ಲೇ ಮ್ಯೂಸಿಕ್

ಹೌದು, ಗೂಗಲ್‌ ಪ್ಲೇ ಮ್ಯೂಸಿಕ್‌ ಸೇವೆ ಈಗಾಗಲೇ ಸ್ಥಗಿತಗೊಂಡಿದೆ. ತನ್ನ ಬಳಕೆದಾರರಿಗೆ ಇದರ ಬಗ್ಗೆ ಈಗಾಗಲೇ ಮಾಹಿತಿ ನೀಡಿದೆ. ಇದೀಗ ತನ್ನ ಮ್ಯೂಸಿಕ್‌ ಅಪ್ಲಿಕೇಶನ್‌ನಲ್ಲಿರುವ ಡೇಟಾವನ್ನು ಈ ತಿಂಗಳ ಕೊನೆಯಲ್ಲಿ ಡಿಲೀಟ್‌ ಮಾಡಲು ಮುಂದಾಗಿದೆ. ಇದರ ಬಗ್ಗೆ ಇಮೇಲ್‌ನಲ್ಲಿ ಮಾಹಿತಿ ನೀಡಿದೆ. ಇದರಲ್ಲಿ ಡೇಟಾ ಅಪ್‌ಲೋಡ್‌ಗಳು, ಖರೀದಿಗಳು ಮತ್ತು Google Play ಮ್ಯೂಸಿಕ್‌ ಖರೀದಿಸಿದ ಯಾವುದನ್ನಾದರೂ ಹೊಂದಿರುವ ಮ್ಯೂಸಿಕ್‌ ಲೈಬ್ರರಿಯನ್ನು ಒಳಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಇನ್ನುಳಿದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌

ಇನ್ನು ಗೂಗಲ್‌ ತನ್ನ ಗೂಗಲ್‌ ಮ್ಯೂಸಿಕ್‌ ನಲ್ಲಿರುವ ಬಳಕೆದಾರರ ಡೇಟಾವನ್ನು ಇದೇ ಫೆಬ್ರವರಿ 24 ರಂದು ಡಿಲೀಟ್‌ ಮಾಡಲಿದೆ. ಇದಾದ ನಂತರ ಗೂಗಲ್‌ ಮ್ಯೂಸಿಕ್‌ನಲ್ಲಿರುವ ಡೇಟಾವನ್ನು ನೀವು ಮತ್ತೆ ಪಡೆಯಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ಗೂಗಲ್‌ ತನ್ನ ಬಳಕೆದಾರರಿಗೆ ಫೆಬ್ರವರಿ 24, 2021 ರಂದು, ನಿಮ್ಮ ಎಲ್ಲಾ Google Play ಸಂಗೀತ ಡೇಟಾವನ್ನು ನಾವು ಅಳಿಸುತ್ತೇವೆ. ಯಾವುದೇ ಅಪ್‌ಲೋಡ್‌ಗಳು, ಖರೀದಿಗಳು ಮತ್ತು Google Play ಸಂಗೀತದಿಂದ ನೀವು ಸೇರಿಸಿದ ಯಾವುದನ್ನಾದರೂ ಹೊಂದಿರುವ ನಿಮ್ಮ ಮ್ಯೂಸಿಕ್‌ ಲೈಬ್ರರಿಯನ್ನು ಇದು ಒಳಗೊಂಡಿದೆ. ಈ ದಿನಾಂಕದ ನಂತರ, ಅದನ್ನು ಮರುಪಡೆಯಲು ಯಾವುದೇ ಮಾರ್ಗವಿಲ್ಲ ಎಂದು ಗೂಗಲ್ ಮೇಲ್‌ನಲ್ಲಿ ತಿಳಿಸಿದೆ.

ಗೂಗಲ್‌

ಸದ್ಯ ನಿಮಗೆಲ್ಲಾ ತಿಳಿದಿರುವಂತೆ ಗೂಗಲ್‌ ತನ್ನ ಮ್ಯೂಸಿಕ್‌-ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅನ್ನು ಡಿಸೆಂಬರ್ 2020 ರಲ್ಲಿ ಅಧಿಕೃತವಾಗಿ ಮುಚ್ಚಲಾಯಿತು. ಆದಾಗ್ಯೂ, ಇದು ಗೂಗಲ್ ಪ್ಲೇ ಮ್ಯೂಸಿಕ್‌ನಿಂದ ತಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಲು, ವರ್ಗಾಯಿಸಲು ಅಥವಾ ಅಳಿಸಲು ಫೆಬ್ರವರಿ 24 ರವರೆಗೆ ಸಮಯವನ್ನು ನೀಡಿದೆ. ನಂತರ ಎಲ್ಲವನ್ನೂ ಶಾಶ್ವತವಾಗಿ ಅಳಿಸಲಾಗುತ್ತದೆ. ಟೆಕ್ ದೈತ್ಯ ಬಳಕೆದಾರರು ಫೆಬ್ರವರಿ 24 ರ ಮೊದಲು ತನ್ನ ಇತರ ಸಂಗೀತ ಸ್ಟ್ರೀಮಿಂಗ್ ಸೇವೆ ಯೂಟ್ಯೂಬ್ ಮ್ಯೂಸಿಕ್‌ಗೆ ವರ್ಗಾಯಿಸುವಂತೆ ವಿನಂತಿಸಿದೆ.

Google Play ಮ್ಯೂಸಿಕ್‌ನಿಂದ ಡೇಟಾವನ್ನು ವರ್ಗಾಯಿಸುವುದು ಹೇಗೆ?

Google Play ಮ್ಯೂಸಿಕ್‌ನಿಂದ ಡೇಟಾವನ್ನು ವರ್ಗಾಯಿಸುವುದು ಹೇಗೆ?

ಹಂತ 1: ಐಒಎಸ್ ಅಥವಾ ಆಂಡ್ರಾಯ್ಡ್‌ಗಾಗಿ ಯೂಟ್ಯೂಬ್ ಮ್ಯೂಸಿಕ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.

ಹಂತ 2: ಪರದೆಯ ಮೇಲ್ಭಾಗದಲ್ಲಿರುವ transfer button ಅನ್ನು ಟ್ಯಾಪ್ ಮಾಡಿ.

ಹಂತ 3: ಈಗ ನಿಮ್ಮ ಅಪ್‌ಲೋಡ್‌ಗಳು, ಖರೀದಿಗಳು, ಸೇರಿಸಿದ ಹಾಡುಗಳು ಮತ್ತು ಆಲ್ಬಮ್‌ಗಳು, ವೈಯಕ್ತಿಕ ಮತ್ತು ಚಂದಾದಾರರಾದ ಪ್ಲೇಪಟ್ಟಿಗಳು, ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳು, ಕ್ಯುರೇಟೆಡ್ ಕೇಂದ್ರಗಳು ಮತ್ತು ವೈಯಕ್ತಿಕ ಅಭಿರುಚಿ ಆದ್ಯತೆಗಳು ಎಲ್ಲವೂ Google Play ಸಂಗೀತದಿಂದ YouTube ಮ್ಯೂಸಿಕ್‌ಗೆ ಟ್ರಾನ್ಸಫರ್‌ ಆಗಲಿದೆ.

ಹಂತ 4: ವರ್ಗಾವಣೆಗೆ ಕೆಲವು ಗಂಟೆಗಳವರೆಗೆ ತೆಗೆದುಕೊಳ್ಳಬಹುದು.

ಹಂತ 5: ಬಳಕೆದಾರರು ತಮ್ಮ ಮ್ಯೂಸಿಕ್‌ ಲೈಬ್ರರಿ ಪೂರ್ಣಗೊಂಡಾಗ ಅಧಿಸೂಚನೆ ಮತ್ತು ಇಮೇಲ್ ಅನ್ನು ಪಡೆಯುತ್ತಾರೆ.

ಗೂಗಲ್‌

ಟೆಕ್ ದೈತ್ಯ ಗೂಗಲ್‌ ತನ್ನ ಹೊಸ ನೀತಿಯನ್ನು 1 ಜೂನ್ 2021 ರಿಂದ ಜಾರಿಗೆ ತರುವ ಸಾಧ್ಯತೆಯಿದೆ, ಈ ಹಿನ್ನೆಲೆಯಲ್ಲಿ ಗೂಗಲ್ ಎರಡು ವರ್ಷಗಳಿಂದ ನಿಷ್ಕ್ರಿಯವಾಗಿರುವ ಬಳಕೆದಾರರ ಖಾತೆಗಳನ್ನು ಮುಚ್ಚಬಹುದು ಎಂಬ ಊಹಾಪೋಹಗಳು ಹರಡಿವೆ. ಇದಕ್ಕಾಗಿ ನಿಮ್ಮ ಖಾತೆಯನ್ನು ಸಕ್ರಿಯವಾಗಿಡಲು ಸರಳ ಮಾರ್ಗವೆಂದರೆ ವೆಬ್ ಅಥವಾ ಮೊಬೈಲ್‌ನಲ್ಲಿ ನಿಯತಕಾಲಿಕವಾಗಿ Gmail, ಡ್ರೈವ್, ಅಥವಾ ಫೋಟೋಗಳನ್ನು ಭೇಟಿ ಮಾಡುವುದು, ಸೈನ್ ಇನ್ ಆಗಿರುವಾಗ ಮತ್ತು ಇಂಟರ್ನೆಟ್‌ಗೆ ಸಂಪರ್ಕ ಸಾಧಿಸುವುದು ಮಾಡಬೇಕಿರುತ್ತದೆ.

Best Mobiles in India

English summary
How to Transfer Data From Google Play Music.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X