ಆಂಡ್ರಾಯ್ಡ್‌ನಿಂದ ಐಫೋನ್‌ಗೆ ವಾಟ್ಸಾಪ್‌ ಚಾಟ್‌ ಟ್ರಾನ್ಸ್‌ಫರ್ ಮಾಡುವುದು ಹೇಗೆ?

|

ಇದು ಸ್ಮಾರ್ಟ್‌ಫೋನ್‌ ಜಮಾನ. ಪ್ರತಿಯೊಬ್ಬರ ಕೈನಲ್ಲೂ ಸ್ಮಾರ್ಟ್‌ಫೋನ್‌ ರಿಂಗಣಿಸುತ್ತಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಪ್ರತಿಯೊಬ್ಬರ ಅಗತ್ಯ ಡಿವೈಸ್ ಆಗಿದೆ. ಇನ್ನು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪ್ರಮುಖ ಮಾಹಿತಿ ದಾಖಲೆಗಳನ್ನು ಸ್ಟೋರ್‌ ಮಾಡಿಕೊಂಡಿರುತ್ತಾರೆ. ಆದರೆ ಒಂದು ವೇಳೆ ಸ್ಮಾರ್ಟ್‌ಫೋನ್‌ ಬದಲಾಯಿಸುವುದು ಬಂದರೇ ಹೆಚ್ಚಿನ ಜನರಿಗೆ ಫೋನಿನಲ್ಲಿರುವ ಡಾಟಾ ಟ್ರಾನ್ಸ್‌ಫರ್‌ ಮಾಡುವುದು ತಲೆನೋವಿನ ಸಂಗತಿ. ಅದರಲ್ಲಿಯೂ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನಿಂದ ಐಫೋನ್‌ಗೆ ವಾಟ್ಸಾಪ್‌ ಚಾಟ್‌ ಡಾಟಾ ಟ್ರಾನ್ಸ್‌ಫರ್‌ ಮಾಡುವುದು ಹೇಗೆ ಅನ್ನೊ ಗೊಂದಲ ಎಲ್ಲರಲ್ಲೂ ಇದೆ.

ಐಫೋನ್

ಹೌದು, ಆಂಡ್ರಾಯ್ಡ್ ಓಎಸ್‌ ಫೋನ್‌ಗಳಿಂದ ಐಫೋನ್‌ಗೆ ಚಾಟ್‌ ಸೇರಿದಂತೆ ಪ್ರಮುಖ ಡಾಟಾ ಟ್ರಾನ್ಸ್‌ಫರ್ ಮಾಡುವುದು ಬಹುತೇಕರಿಗೆ ತಿಳಿದಿಲ್ಲ. ಏಕೆಂದರೆ ಆಂಡ್ರಾಯ್ಡ್ ಮತ್ತು ಐಫೋನ್ ಓಎಸ್(ಆಪರೇಟಿಂಗ್ ಸಿಸ್ಟಂ) ಬೇರೆ ಬೇರೆ ಆಗಿವೆ. ಆದರೆ ಆಂಡ್ರಾಯ್ಡ್‌ ಓಎಸ್‌ ಹಾಗೂ ಐಫೋನ್ ಎರಡರಲ್ಲಿಯೂ ಡಾಟಾ ಬ್ಯಾಕ್‌ಅಪ್‌ ಹಾಗೂ ಟ್ರಾನ್ಸ್‌ಫರ್‌ಗೆ ಆಯ್ಕೆಗಳಿವೆ. ಹಾಗಾದ್ರೆ ಆಂಡ್ರಾಯ್ಡ್‌ ವಾಟ್ಸಾಪ್‌ ಚಾಟ್‌ನ ಐಫೋನ್‌ಗೆ ಟ್ರಾನ್ಸ್‌ಫರ್ ಮಾಡುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ವಾಟ್ಸಾಪ್

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳನ್ನ ಬದಲಾಯಿಸುವಾಗ, ನಿಮ್ಮ ವಾಟ್ಸಾಪ್ ಚಾಟ್‌ಗಳನ್ನ ಟ್ರಾನ್ಸಫರ್‌ ಮಾಡಿಕೊಳ್ಳುವುದು ಮುಖ್ಯವಾಗಿದೆ. ಇದಕ್ಕಾಗೆ ಕೆಲವು ಹಂತಗಳನ್ನ ಅನುಸರಿಸದ ಹೊರತು ಒಂದು ಡಿವೈಸ್‌ನಿಂದ ಇನ್ನೊಂದಕ್ಕೆ ಸುಲಭವಾಗಿ ಡೇಟಾವನ್ನು ವರ್ಗಾಯಿಸುವ ವಿಧಾನವನ್ನು ವಾಟ್ಸಾಪ್ ನೀಡುವುದಿಲ್ಲ. ಇನ್ನು ಆಂಡ್ರಾಯ್ಡ್ ಡಿವೈಸ್‌ನಿಂದ ನಿಮ್ಮ ಐಫೋನ್‌ಗೆ ವಾಟ್ಸಾಪ್ ಚಾಟ್‌ಗಳನ್ನು ವರ್ಗಾಯಿಸುವುದು ಹೇಗೆ ಅನ್ನೊದನ್ನ ಹಂತಹಂತವಾಗಿ ತಿಳಿಯೋಣ ಬನ್ನಿರಿ.

ಆಂಡ್ರಾಯ್ಡ್‌ನಿಂದ ಐಫೋನ್‌ಗೆ ವಾಟ್ಸಾಪ್‌ ಚಾಟ್‌ ಟ್ರಾನ್ಸ್‌ಫರ್ ಮಾಡುವುದು ಹೇಗೆ?

ಆಂಡ್ರಾಯ್ಡ್‌ನಿಂದ ಐಫೋನ್‌ಗೆ ವಾಟ್ಸಾಪ್‌ ಚಾಟ್‌ ಟ್ರಾನ್ಸ್‌ಫರ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನೀವು ನಿಮ್ಮ ಕಂಪ್ಯೂಟರ್‌ನಲ್ಲಿ dr.fone ಟೂಲ್‌ ಡೌನ್‌ಲೋಡ್ ಮಾಡಿ.

ಹಂತ:2 ಈಗ, ನಿಮ್ಮ Android ಡಿವೈಸ್‌ ಮತ್ತು ಐಫೋನ್ ಅನ್ನು ಕಂಪ್ಯೂಟರ್‌ಗೆ ಕನೆಕ್ಟ್‌ ಮಾಡಿ. .

ಹಂತ:3 Dr.fone ಟೂಲ್‌ ತೆರೆಯಿರಿ ಮತ್ತು ‘Restore social app' ಟ್ಯಾಪ್ ಮಾಡಿ.

ಹಂತ:4 ‘ವಾಟ್ಸಾಪ್' ಆಯ್ಕೆಮಾಡಿ ಮತ್ತು ‘Transfer WhatsApp messages' ಕ್ಲಿಕ್ ಮಾಡಿ.

ಹಂತ:5 ಅಪ್ಲಿಕೇಶನ್ ಈಗ ನಿಮ್ಮ ಎರಡೂ ಫೋನ್‌ಗಳಿಗೆ ಕನೆಕ್ಟ್‌ ಆಗಲಿದೆ ಮತ್ತು ಎರಡು ಡಿವೈಸ್‌ಗಳನ್ನು ಪರದೆಯ ಮೇಲೆ ತೋರಿಸುತ್ತದೆ.

ಹಂತ:6 ಪರದೆಯ ಕೆಳಗಿನ ಬಲ ಮೂಲೆಯಲ್ಲಿರುವ ‘Transfer' ಬಟನ್ ಕ್ಲಿಕ್ ಮಾಡಿ.

ಹಂತ:7 ಇದೀಗ Transfer ಪ್ರಕ್ರಿಯೆಯು ಪ್ರಾರಂಭವಾಗುತ್ತದೆ, ಮತ್ತು ನಿಮ್ಮ ಕಂಪ್ಯೂಟರ್‌ನಲ್ಲಿ Transfer ಸ್ಥಿತಿಯನ್ನು ನೀವು ನೋಡಲು ಸಾಧ್ಯವಾಗುತ್ತದೆ.

ಹಂತ:8 ವರ್ಗಾವಣೆ ಪೂರ್ಣಗೊಂಡ ನಂತರ, ‘ok' ಬಟನ್ ಟ್ಯಾಪ್ ಮಾಡಿ ಮತ್ತು ನಿಮ್ಮ ಡಿವೈಸ್‌ ಕನೆಕ್ಟಿವಿಟಿಯನ್ನು ಕಡಿತಗೊಳಿಸಿ.

ಈ ಮೂಲಕ ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೊನ್‌ನಿಂದ ವಾಟ್ಸಾಪ್‌ ಚಾಟ್‌ಗಳನ್ನ ಐಫೋನ್‌ಗೆ Transfer ಮಾಡಬಹುದಾಗಿದೆ.

ಐಫೋನ್‌ನಿಂದ ಆಂಡ್ರಾಯ್ಡ್‌ ಡಿವೈಸ್‌ಗೆ ವಾಟ್ಸಾಪ್ ಚಾಟ್‌ಗಳನ್ನು ಟ್ರಾನ್ಸ್‌ಫರ್ ಮಾಡುವುದು ಹೇಗೆ ?

ಐಫೋನ್‌ನಿಂದ ಆಂಡ್ರಾಯ್ಡ್‌ ಡಿವೈಸ್‌ಗೆ ವಾಟ್ಸಾಪ್ ಚಾಟ್‌ಗಳನ್ನು ಟ್ರಾನ್ಸ್‌ಫರ್ ಮಾಡುವುದು ಹೇಗೆ ?

ಹಂತ:1 ನಿಮ್ಮ ಹೊಸ ಆಂಡ್ರಾಯ್ಡ್ ಫೋನ್‌ನಲ್ಲಿ ಬ್ಯಾಕ್‌ಅಪ್‌ ಪಡೆಯಬೇಕಿರುವ ವಾಟ್ಸಾಪ್ ಚಾಟ್‌ ತೆರೆಯಿರಿ.

ಹಂತ:2 ನಂತರ More ಬಟನ್ ಟ್ಯಾಪ್ ಮಾಡಿ ಮತ್ತು Export Chat ಆಯ್ಕೆಯನ್ನು ಆರಿಸಿ.

ಹಂತ:3 ಈಗ ಮೇಲ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಮತ್ತು ಮೇಲ್ ಕಳುಹಿಸಲು ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ.

ಹಂತ:4 ನಿಮ್ಮ ಹೊಸ Android ಫೋನ್‌ಗೆ ವರ್ಗಾಯಿಸಲು ನೀವು ಬಯಸುವ ಎಲ್ಲಾ ಚಾಟ್‌ಗಳಿಗಾಗಿ ಈ ಪ್ರಕ್ರಿಯೆಯನ್ನು ಬಳಸಿ.

Best Mobiles in India

English summary
When you are moving from an Android device to an iPhone or vice versa, there are several things that you need to keep in mind.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X