ವೀಡಿಯೊ ಕರೆಯಲ್ಲಿ ನಿಮ್ಮನ್ನು ಕಾರ್ಟೂನ್ ಪಾತ್ರವಾಗಿ ಪರಿವರ್ತಿಸುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಯೊಬ್ಬರೂ ತಮ್ಮ ಕಾರ್ಟೂನ್ ಫೋಟೋಗಳನ್ನು ತಮ್ಮ ಸ್ನೇಹಿತರು ಮತ್ತು ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಜನರು ತಮ್ಮನ್ನು 3D ಮತ್ತು ಅನಿಮೇಟೆಡ್ ಕಾರ್ಟೂನ್ ಪಾತ್ರಗಳಲ್ಲಿ ಪರಿವರ್ತಿಸಲು ಕಾರ್ಟೂನ್ ಕ್ಯಾರೆಕ್ಟರ್‌ ಫಿಲ್ಟರ್ ಅನ್ನು ಬಳಸುತ್ತಿದ್ದಾರೆ. ಇನ್ನು ಫೋಟೋಗಳನ್ನು ಕಾರ್ಟೂನ್ ಪಾತ್ರಗಳಾಗಿ ಪರಿವರ್ತಿಸುವುದರ ಜೊತೆಗೆ, ಸ್ನ್ಯಾಪ್‌ಚಾಟ್‌ನ ಡೆಸ್ಕ್‌ಟಾಪ್ ವೀಡಿಯೊ ಕರೆಗಳ ಸಮಯದಲ್ಲಿ ಬಳಕೆದಾರರು ತಮ್ಮನ್ನು ಕಾರ್ಟೂನ್ ಪಾತ್ರಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡಲಿದೆ.

ಸೊಶೀಯಲ್‌

ಹೌದು, ಸೊಶೀಯಲ್‌ ಮೀಡಿಯಾದಲ್ಲಿ ಬಳಕೆದಾರರು ತಮ್ಮ ಕಾರ್ಟೂನ್‌ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಾರೆ. ಹಾಸ್ಯವಾಗಿ ಕಾಣವ ಫೊಟೋಗಳನ್ನು ಶೇರ್‌ ಮಾಡುವ ಮೂಲಕ ಎಜಾಯ್‌ ಮಾಡುತ್ತಿದ್ದಾರೆ. ಅದರಲ್ಲೂ ಜೂಮ್ ಅಥವಾ ಇತರ ವೀಡಿಯೊ ಕರೆ ಪ್ಲಾಟ್‌ಫಾರ್ಮ್‌ಗಳಲ್ಲಿನ ವೀಡಿಯೊ ಕಾನ್ಫರೆನ್ಸ್ ಕರೆಯ ಸಮಯದಲ್ಲಿ ಸಹ ಸ್ನ್ಯಾಪ್ ಕ್ಯಾಮೆರಾ ಟೂಲ್‌ ಬಳಕೆದಾರರನ್ನು ಆಸಕ್ತಿದಾಯಕ ಕಾರ್ಟೂನ್ ಪಾತ್ರಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಹಾಗಾದ್ರೆ ವೀಡಿಯೊ ಕಾಲ್‌ನಲ್ಲಿ ಕಾರ್ಟೂನ್‌ ಪಾತ್ರವಾಗಿ ಪರಿವರ್ತಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕಾರ್ಟೂನ್‌

ಸೊಶೀಯಲ್‌ ಮೀಡಿಯಾದಲ್ಲಿ ತಮ್ಮದೇ ಆದ ಕಾರ್ಟೂನ್‌ ಫೋಟೋಗಳು ಸಾಕಷ್ಟು ಮಜವಾಗಿರುತ್ತೆ. ಅಲ್ಲದೆ ವೀಡಿಯೋ ಕರೆಯಲ್ಲೂ ತಮ್ಮನ್ನು ಕಾರ್ಟೂನ್‌ ರೂಪದಲ್ಲಿ ಕಾಣುವಂತೆ ಮಾಡುವುದು ಇನ್ನೂ ಕೂಡ ಉತ್ತಮವಾಗಿರುತ್ತದೆ. ಆ ನಿಟ್ಟಿನಲ್ಲಿ ಜೂಮ್ ಅಥವಾ ಲಭ್ಯವಿರುವ ಇತರ ವೀಡಿಯೊ ಕರೆ ಪ್ಲಾಟ್‌ಫಾರ್ಮ್‌ನಲ್ಲಿನ ವೀಡಿಯೊ ಕರೆ ಸಮಯದಲ್ಲಿ ನಿಮ್ಮನ್ನು ಕಾರ್ಟೂನ್ ಪಾತ್ರವಾಗಿ ಪರಿವರ್ತಿಸುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ವೀಡಿಯೊ ಕರೆಯಲ್ಲಿ ನಿಮ್ಮನ್ನು ಕಾರ್ಟೂನ್ ಪಾತ್ರವಾಗಿ ಪರಿವರ್ತಿಸುವುದು ಹೇಗೆ?

ವೀಡಿಯೊ ಕರೆಯಲ್ಲಿ ನಿಮ್ಮನ್ನು ಕಾರ್ಟೂನ್ ಪಾತ್ರವಾಗಿ ಪರಿವರ್ತಿಸುವುದು ಹೇಗೆ?

ಹಂತ 1: ನಿಮ್ಮ ಡೆಸ್ಕ್‌ಟಾಪ್ / ಪಿಸಿಯಲ್ಲಿ ಸ್ನ್ಯಾಪ್ ಕ್ಯಾಮೆರಾ ಟೂಲ್‌ ಅನ್ನು ಡೌನ್‌ಲೋಡ್ ಮಾಡಿ.

ಹಂತ 2: ನಿಮ್ಮ ಪಿಸಿಯಲ್ಲಿ ಕ್ಯಾಮೆರಾ ಉಪಕರಣವನ್ನು ಇನ್‌ಸ್ಟಾಲ್‌ ಮಾಡಿದ ನಂತರ, ನಿಮ್ಮ ಮೈಕ್ರೊಫೋನ್ ಮತ್ತು ಕ್ಯಾಮೆರಾಗೆ ಪ್ರವೇಶವನ್ನು ನೀವು ಒದಗಿಸಬೇಕಾಗುತ್ತದೆ. ಈ ಸೆಟ್ಟಿಂಗ್ ಅನ್ನು ಪ್ರವೇಶಿಸಿದ ನಂತರ ಸ್ನ್ಯಾಪ್ ಕ್ಯಾಮೆರಾ ಉಪಕರಣವು ಸರಿಯಾಗಿ ಕಾರ್ಯನಿರ್ವಹಿಸುತ್ತದೆ.

ಹಂತ 3: ನಿಮ್ಮ ಪಿಸಿಯಲ್ಲಿ ನೀವು ಈಗ ಟೂಲ್‌ ಅನ್ನು ಸೆಟ್‌ ಮಾಡಬೇಕಾಗುತ್ತದೆ. ನಂತರ, ಹೊಸ ಕಾರ್ಟೂನ್ ಫಿಲ್ಟರ್ ಅನ್ನು ಹುಡುಕಿ ಮತ್ತು ಅನ್ವಯಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 4: ಇತರ ಫಿಲ್ಟರ್‌ಗಳ ನಡುವೆ ಮುಖ್ಯ ಪರದೆಯಲ್ಲಿಯೇ ಫಿಲ್ಟರ್ ಲಭ್ಯವಿದೆ. ಒಮ್ಮೆ ನೀವು ಫಿಲ್ಟರ್ ಅನ್ನು ಅನ್ವಯಿಸಿದ ನಂತರ, ನಿಮ್ಮನ್ನು ನೈಜ ಸಮಯದಲ್ಲಿ ಅನಿಮೇಟೆಡ್ ಪಾತ್ರವಾಗಿ ಪರಿವರ್ತಿಸಲಾಗುತ್ತದೆ. ನಿಮ್ಮ ಕಾರ್ಟೂನ್ ಪಾತ್ರವನ್ನು ನಿಮ್ಮ ಪಿಸಿ ಪರದೆಯಲ್ಲಿಯೇ ನೋಡಲು ನಿಮಗೆ ಸಾಧ್ಯವಾಗುತ್ತದೆ.

ಹಂತ 5: ಈಗ ವೀಡಿಯೊ ಕರೆಯ ಸಮಯದಲ್ಲಿ ನಿಮ್ಮನ್ನು ಕಾರ್ಟೂನ್ ಪಾತ್ರವಾಗಿ ಪರಿವರ್ತಿಸಲು ನೀವು ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಸ್ನ್ಯಾಪ್ ಕ್ಯಾಮೆರಾ ಉಪಕರಣವನ್ನು ನಿಮ್ಮ ಡೀಫಾಲ್ಟ್ ಕ್ಯಾಮೆರಾವನ್ನಾಗಿ ಮಾಡಬೇಕಾಗುತ್ತದೆ.

ಕ್ಯಾಮೆರಾ

ಕ್ಯಾಮೆರಾ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದ ನಂತರ ನೀವು ವೀಡಿಯೊ ಕರೆಯ ಸಮಯದಲ್ಲಿ ಕಾರ್ಟೂನ್ ಪಾತ್ರವಾಗಿ ಕಾಣಿಸಿಕೊಳ್ಳುತ್ತೀರಿ. ಜೂಮ್ ಕರೆಯ ಸಮಯದಲ್ಲಿ ನೀವು ಯಾವುದೇ ಸಮಯದಲ್ಲಿ ಕ್ಯಾಮೆರಾ ಪರಿಣಾಮವನ್ನು ಆಫ್ ಮಾಡಲು ಬಯಸಿದರೆ, 'ಸ್ಟಾಪ್ ವೀಡಿಯೋ' ಆಯ್ಕೆಯ ಪಕ್ಕದಲ್ಲಿರುವ ಬಾಣವನ್ನು ಆಯ್ಕೆ ಮಾಡಿ ಮತ್ತು ನಂತರ ವೆಬ್‌ಕ್ಯಾಮ್ ಔಟ್‌ಪುಟ್‌ಗೆ ಬದಲಾಯಿಸಲು ನಂತರದ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ ನೀವು ಕಾರ್ಟೂನ್‌ ರೂಪದಲ್ಲಿ ಕಾಣುತ್ತೀರಿ.

Best Mobiles in India

English summary
Want to turn yourself into a cool cartoon character during a video call?.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X