ಇನ್‌ಸ್ಟಾಗ್ರಾಮ್‌ ರೀಲ್‌ಗಳಲ್ಲಿ 3D ಅವತಾರ್‌ ಬಳಕೆ ಹೇಗೆ?... ಈ ಸಲಹೆ ಅನುಸರಿಸಿ

|

ಸಾಮಾನ್ಯವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್‌ಗಳು ಹೆಚ್ಚಿನ ವೀಕ್ಷಣೆ ಪಡೆಯಲು ಬಳಕೆದಾರರು ಸಾಕಷ್ಟು ಕಸರತ್ತನ್ನು ಮಾಡುತ್ತಲೇ ಬರುತ್ತಾರೆ. ಹಾಗೆಯೇ ಇನ್‌ಸ್ಟಾಗ್ರಾಮ್‌ ಕೂಡ ತನ್ನ ಬಳಕೆದಾರರಿಗೆ ಅನುಕೂಲ ಆಗುವ ಫೀಚರ್ಸ್‌ಗಳನ್ನು ಪರಿಚಯಿಸಿಕೊಂಡು ಬರುತ್ತಿದ್ದು, ಅದರಲ್ಲಿ ಹೊಸದಾಗಿ 3D ಅವತಾರ್‌ ಫೀಚರ್ಸ್‌ ಅನ್ನು ಪರಿಚಯಿಸಿದ್ದು, ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ.

ಮೆಟಾ

ಹೌದು, ಮೆಟಾ ಒಡೆತನದ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ವಿಭಿನ್ನ ಅನುಭವ ನೀಡುವ ಫೀಚರ್ಸ್‌ಗಳನ್ನು ಹೊಂದಿದೆ. ಅದರಲ್ಲೂ ಮನರಂಜನಾತ್ಮಕ ಫೀಚರ್ಸ್‌ ಆಗಿರುವ 3D ಅವತಾರ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚಿನ ಕ್ರೇಜ್‌ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ. ಯಾಕೆಂದರೆ ನಿಮ್ಮದೇ ವಿಡಿಯೋವನ್ನು ಅವತಾರ್‌ ರೂಪದಲ್ಲಿ ನೋಡುವುದನ್ನು ಒಮ್ಮೆ ಊಹಿಸಿಕೊಳ್ಳಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ಆಪ್‌ಗಾಗಿ 3D ಅವತಾರಗಳನ್ನು ಮೆಟಾ ಪರಿಚಯಿಸಿದ್ದು, ಬಳಕೆದಾರರು ಅವತಾರ್‌ಗಳನ್ನು ರೀಲ್ಸ್‌ನೊಂದಿಗೆ ಶೇರ್‌ ಮಾಡಿಕೊಳ್ಳಬಹುದು. ಹಾಗೆಯೇ ತಮ್ಮ 3D ಅವತಾರಗಳನ್ನು ವೈಯಕ್ತೀಕರಿಸುವ ಆಯ್ಕೆಯನ್ನೂ ಸಹ ನೀಡಲಾಗಿದೆ. ಹಾಗಿದ್ರೆ ಈ ಫೀಚರ್ಸ್‌ ಅನ್ನು ಹೇಗೆ ಬಳಸಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಓದಿರಿ.

ಹಂತ 1

ಹಂತ 1

ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ ಆಪ್‌ ಓಪನ್‌ ಮಾಡಿ ನಂತರ ಎಡಕ್ಕೆ ಸ್ವೈಪ್ ಮಾಡಿದರೆ ರೀಲ್ಸ್ ಟ್ಯಾಬ್‌ಗೆ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮಗೆ ಇಷ್ಟವಾದ ರೀಲ್‌ ಅನ್ನು ರೆಕಾರ್ಡ್‌ ಮಾಡಿ.

ಹಂತ 2

ಹಂತ 2

ಇನ್ನು ರೀಲ್‌ ಅನ್ನು ರೆಕಾರ್ಡ್‌ ಮಾಡಿದ ಮೇಲೆ ಅದನ್ನು ಎಡಿಟ್ ಮಾಡುವ ಆಯ್ಕೆ ನೀಡಲಾಗಿದೆ. ಈ ಆಯ್ಕೆಯಲ್ಲಿ ಮೇಲಿನ ಬಲಭಾಗದಲ್ಲಿ ಲಭ್ಯವಿರುವ ಸ್ಟಿಕ್ಕರ್‌ಗಳ ಬಟನ್ ಅನ್ನು ಟ್ಯಾಪ್ ಮಾಡಿ. ಅದರಲ್ಲಿ ಅವತಾರ್ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ.

ಹಂತ 3

ಹಂತ 3

ಇನ್ನು ಅವತಾರ್ ಆಯ್ಕೆಯ ಬಳಿಕ ನಿಮ್ಮ ರೀಲ್‌ಗೆ ನೀವು ಸೇರಿಸಲು ಬಯಸುವ ಅವತಾರ್ ರಿಯಾಕ್ಷನ್‌ ಆಯ್ಕೆಮಾಡಿ. ಅದರಲ್ಲಿ ರೀಲ್ ಅನ್ನು ಎಡಿಟ್‌ ಮಾಡಿದ ನಂತರ ನೆಕ್ಸ್ಟ್‌ ಬಟನ್ ಮೇಲೆ ಟ್ಯಾಪ್ ಮಾಡಿ.

ಹಂತ 4

ಹಂತ 4

ಇದಾದ ನಂತರದಲ್ಲಿ ಅಲ್ಲಿ ಕೇಳಲಾಗುವ ವಿವರಗಳನ್ನು ನಮೂದಿಸಿ, ಅದರಲ್ಲಿ ಶೀರ್ಷಿಕೆ ಸಹ ಇರಲಿದೆ. ಜೊತೆಗೆ ಈ ವೇಳೆ ನಿಮಗೆ ಇಷ್ಟವಾದ ವ್ಯಕ್ತಿಗಳಿಗೆ ಟ್ಯಾಗ್‌ ಮಾಡಬಹುದು. ನಂತರ ಶೇರ್‌ ಬಟನ್ ಮೇಲೆ ಟ್ಯಾಪ್‌ ಮಾಡಿದರೆ ನಿಮ್ಮ ವಿಶೇಷವಾದ ರೀಲ್‌ ಪಬ್ಲಿಷ್‌ ಆಗುತ್ತದೆ.

ಹದಿಹರೆಯದವರಿಗೆ ರಕ್ಷಣೆ

ಹದಿಹರೆಯದವರಿಗೆ ರಕ್ಷಣೆ

ಇನ್ನು ಮೆಟಾ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಭದ್ರತೆಗೆ ಹೆಚ್ಚಿನ ಮಹತ್ವ ನೀಡಿದ್ದು, ಈ ಕಾರಣಕ್ಕೆ ಇನ್ಮುಂದೆ ಹದಿಹರೆಯದವರು ಆಗ್‌ ಇನ್‌ ಆದ ತಕ್ಷಣದಿಂದಲೇ ಅವರಿಗೆ ವಿಶೇಷವಾದ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಅಂದರೆ ಅವರ ಖಾಸಗಿತನಕ್ಕೆ ದಕ್ಕೆ ಬರದ ಹಾಗೆ ಫೇಸ್‌ಬುಕ್‌ ನಿಗಾವಹಿಸಲಿದೆ. ಹೊಸ ಗೌಪ್ಯತೆ ಡೀಫಾಲ್ಟ್‌ ಆಯ್ಕೆ ನೀಡಲಾಗುತ್ತಿದ್ದು, ಸ್ನೇಹಿತರ ಪಟ್ಟಿಯನ್ನು ಯಾರು ನೋಡಬಹುದು, ಪೇಜ್‌ಗಳು ಮತ್ತು ಲಿಸ್ಟ್‌ಗಳನ್ನು ಯಾರು ನೋಡಬಹುದು, ಅವರ ಪ್ರೊಫೈಲ್‌ನಲ್ಲಿ ಅವರು ಟ್ಯಾಗ್ ಮಾಡಲಾದ ಪೋಸ್ಟ್‌ಗಳನ್ನು ಯಾರು ನೋಡಬಹುದು ಎಂಬಿತ್ಯಾದಿ ಆಯ್ಕೆಗಳು ಇವರಿಗೆ ಲಭ್ಯವಿದ್ದು, ಯಾವುದೇ ಆತಂಕ ಇಲ್ಲದೆ ಈ ಪ್ಲಾಟ್‌ಫಾರ್ಮ್‌ ಬಳಕೆ ಮಾಡಬಹುದಾಗಿದೆ.

ಡೀಫಾಲ್ಟ್

ಇನ್ನು ಭಾರತದಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಫೀಚರ್ಸ್ ಲಭ್ಯವಿದೆ. ಹಾಗೆಯೇ ಕೆಲವು ದೇಶಗಳಲ್ಲಿ 18 ವರ್ಷ ವಯಸ್ಸಿನ ಬಳಕೆದಾರರಿಗೆ ಈ ಫೀಚರ್ಸ್ ನೀಡಲಾಗುತ್ತದೆ ಎಂದು ಮೆಟಾ ಹೇಳಿಕೊಂಡಿದೆ. ಈ ಮೂಲಕ ಅವರು ಖಾಸಗಿ ಸೆಟ್ಟಿಂಗ್‌ಗಳಿಗೆ ಡೀಫಾಲ್ಟ್ ಆಗಬಹುದಾಗಿದೆ.ಹದಿಹರೆಯದವರ ಫೋಟೋಗಳನ್ನು ಶೇರ್‌ ಮಾಡುವುದನ್ನು ತಡೆಯಲು, ಹಾಗೂ ನಿಕಟ ಚಿತ್ರಗಳನ್ನು ಸಾರ್ವಜನಿಕ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾಗುತ್ತದೆ ಎಂದು ಚಿಂತಿಸುವ ಹದಿಹರೆಯದವರಿಗೆ ಇದು ಸಹಾಯಕವಾಗಲಿದೆ.

 ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರ

ಕಾಣೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರ (NCMEC) ನೊಂದಿಗೆ ಮೆಟಾ ಕೆಲಸ ಮಾಡುತ್ತಿದೆ ಎಂದು ಹೇಳಿಕೊಂಡಿದೆ. ಈ ಮೂಲಕ ಹದಿಹರೆಯದವರ ನಿಕಟ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಶೇರ್‌‌ ಮಾಡುವುದನ್ನು ತಡೆಯಲು ಇದು ಸಹಾಯಕ ಹಾಗೂ ಟೆಕ್ ಉದ್ಯಮದಾದ್ಯಂತ ಇತರ ಕಂಪೆನಿಗಳು ಈ ಫೀಚರ್ಸ್‌ ಅನ್ನು ಬಳಕೆ ಮಾಡಬಹುದು ಎಂದು ತಿಳಿಸಿದೆ.

Best Mobiles in India

English summary
How to use 3D Avatar Features on Instagram Reel.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X